ಗೃಹ ವ್ಯವಹಾರಗಳ ಸಚಿವಾಲಯ

2022ನೇ ಸಾಲಿನ ಪದ್ಮ ಪ್ರಶಸ್ತಿಗಳಿಗೆ ನಾಮ ನಿರ್ದೇಶನ ಸಲ್ಲಿಸಲು 2021ರ ಸೆಪ್ಟಂಬರ್ 15ರ ವರೆಗೆ ಕಾಲಾವಕಾಶ

Posted On: 10 JUN 2021 4:34PM by PIB Bengaluru

2022 ಗಣರಾಜ್ಯೋತ್ಸವದ ವೇಳೆ ಪ್ರಕಟಿಸಲಾಗುವ ಪದ್ಮ ಪ್ರಶಸ್ತಿಗಳಿಗಾಗಿ ನಾಮ ನಿರ್ದೇಶನ/ ಶಿಫಾರಸುಗಳನ್ನು ಆನ್ ಲೈನ್ ಮೂಲಕ ಆಹ್ವಾನಿಸಲಾಗಿದೆ. ಪದ್ಮ ಪ್ರಶಸ್ತಿಗಳಿಗೆ ನಾಮ ನಿರ್ದೇಶನಗಳನ್ನು ಸಲ್ಲಿಸಲು 2021 ಸೆಪ್ಟಂಬರ್ 15 ಕಡೆಯ ದಿನವಾಗಿದೆ. ನಾಮ ನಿರ್ದೇಶನ ಮತ್ತು ಶಿಫಾರಸುಗಳನ್ನು ಪದ್ಮ ಆವಾರ್ಡ್ಸ್ ಪೋರ್ಟಲ್ https://padmaawards.gov.in ಮೂಲಕ ಮಾತ್ರ ಆನ್ ಲೈನ್ ನಲ್ಲಿ ಸ್ವೀಕರಿಸಲಾಗುವುದು.

ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮ ಪ್ರಶಸ್ತಿಗಳು ಅಂದರೆ ಪದ್ಮ ವಿಭೂಷಣ, ಪದ್ಮ ಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳು ಒಳಗೊಂಡಿವೆ. 1954ರಲ್ಲಿ ಸ್ಥಾಪಿಸಲಾದ ಪ್ರಶಸ್ತಿಗಳನ್ನು ಪ್ರತಿ ವರ್ಷ ಗಣರಾಜೋತ್ಸವದ ಸಂದರ್ಭದಲ್ಲಿ ಘೋಷಿಸಲಾಗುವುದು. ಕಲೆ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಮಾಜ ಸೇವೆ, ವಿಜ್ಞಾನ ಮತ್ತು ಎಂಜಿನಿಯರಿಂಗ್, ಸಾರ್ವಜನಿಕ ವ್ಯವಹಾರಗಳು, ನಾಗರಿಕ ಸೇವೆ, ವ್ಯಾಪಾರ ಮತ್ತು ಉದ್ಯಮ ಸೇರಿ ನಾನಾ ವಲಯಗಳು/ಕ್ಷೇತ್ರಗಳಲ್ಲಿ ಅಪ್ರತಿಮ ಮತ್ತು ಅಸಾಧಾರಣ ಸೇವೆ/ಸಾಧನೆ ಮಾಡಿದವರನ್ನು ಗುರುತಿಸಿಅವರ ಕಾರ್ಯಕ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ವರ್ಣ, ಉದ್ಯೋಗಸ್ಥಾನ ಮಾನ ಅಥವಾ ಲಿಂಗ ಯಾವುದೇ ತಾರತಮ್ಯವಿಲ್ಲದೆ ಎಲ್ಲರೂ ಪ್ರಶಸ್ತಿಗೆ ಅರ್ಹರು. ವೈದ್ಯರು ಮತ್ತು ವಿಜ್ಞಾನಿಗಳು ಹೊರತುಪಡಿಸಿ ಕೇಂದ್ರ ಸರ್ಕಾರಿ ನೌಕರರು ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿ ಪ್ರದ್ಮ ಪ್ರಶಸ್ತಿಗೆ ಅರ್ಹರಲ್ಲ.

ಸರ್ಕಾರ ಪದ್ಮ ಪ್ರಶಸ್ತಿಗಳನ್ನು ಜನರ ಪದ್ಮ’’ ಪ್ರಶಸ್ತಿಗಳನ್ನಾಗಿ ಪರಿವರ್ತಿಸಲು ಬದ್ಧವಾಗಿದೆ. ಹಾಗಾಗಿ ಸ್ವಯಂ ನಾಮ ನಿರ್ದೇಶನ ಸೇರಿ ಎಲ್ಲ ನಾಗರಿಕರು ಪ್ರಶಸ್ತಿಗಾಗಿ ನಾಮ ನಿರ್ದೇಶನ/ಶಿಫಾರಸುಗಳನ್ನು ಸಲ್ಲಿಸಬೇಕು ಎಂದು ಮನವಿ ಮಾಡಲಾಗಿದೆ.

ಮೇಲೆ ಉಲ್ಲೇಖಿಸಿರುವಂತೆ ಪದ್ಮ ಪೋರ್ಟಲ್ ನಲ್ಲಿ ಸೂಚಿಸಲಾಗಿರುವ ವಿಧಾನದಲ್ಲಿ ಎಲ್ಲ ನಿರ್ದಿಷ್ಟ ದಾಖಲೆಗಳು ಮತ್ತು ಸೂಕ್ತ ವಿವರಗಳೊಂದಿಗೆ ನಾಮ ನಿರ್ದೇಶನ/ಶಿಫಾರಸು ಸಲ್ಲಿಸಬೇಕು, ಅದರಲ್ಲಿ ನಿರೂಪಣಾ ರೂಪದಲ್ಲಿ ವಿವರಣೆ ಒಳಗೊಂಡಿರಬೇಕು (ಗರಿಷ್ಠ 800 ಪದಗಳು), ಅಯಾ ವಲಯ/ಕ್ಷೇತ್ರದಲ್ಲಿ ಆತ/ಆಕೆಯ ಶಿಫಾರಸು ಮಾಡುವಂತಿದ್ದರೆ ಅದಕ್ಕೆ ಅಸಾಧಾರಣ ಸಾಧನೆ/ಸೇವೆಯ ವಿವರಗಳನ್ನು ಸ್ಪಷ್ಟವಾಗಿ ನಮೂದಿಸಿರಬೇಕು.

ಎಲ್ಲ ಕೇಂದ್ರ ಸರ್ಕಾರಿ ಸಚಿವಾಲಯಗಳು/ಇಲಾಖೆಗಳು, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು, ಭಾರತ ರತ್ನ ಮತ್ತು ಪದ್ಮ ವಿಭೂಷಣ ಪ್ರಶಸ್ತಿ ವಿಜೇತರು, ಶ್ರೇಷ್ಠತಾ ಸಂಸ್ಥೆಗಳು ನಿಜಕ್ಕೂ ಪ್ರತಿಭೆ ಹೊಂದಿರುವ ಉತ್ತಮ ಸಾಧನೆ ಮಾಡಿರುವ ಅರ್ಹ ಮಹಿಳೆಯರು, ಸಮಾಜದ ದುರ್ಬಲ ವರ್ಗದವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು, ದಿವ್ಯಾಂಗ ವ್ಯಕ್ತಿಗಳು ಮತ್ತು ಸಮಾಜಕ್ಕೆ ಸ್ವಾರ್ಥರಹಿತ ಸೇವೆಯನ್ನು ಸಲ್ಲಿಸುತ್ತಿರುವವರನ್ನು ಗುರುತಿಸಿ ನಾಮ ನಿರ್ದೇಶನ ಮಾಡುವಂತೆ ಗೃಹ ವ್ಯವಹಾರಗಳ ಸಚಿವಾಲಯ ಮನವಿ ಮಾಡಿದೆ.

ಅಲ್ಲದೆ, ಬಗ್ಗೆ ಹೆಚ್ಚಿನ ವಿವರಗಳು ಗೃಹ ವ್ಯವಹಾರಗಳ ಸಚಿವಾಲಯದ ವೆಬ್ ಸೈಟ್ (www.mha.gov.in) ಅವಾರ್ಡ್ಸ್  ಮತ್ತು ಮೆಡಲ್ಸ್ ವಿಭಾಗದಲ್ಲಿ ಲಭ್ಯವಿದೆ. ಜೊತೆಗೆ ಪ್ರಶಸ್ತಿಗೆ ಸಂಬಂಧಿಸಿದ ನೀತಿ ನಿಯಮಗಳೂ ಕೂಡ ವೆಬ್ ಸೈಟ್ ಲಿಂಕ್ ನಲ್ಲಿ https://padmaawards.gov.in/AboutAwards.aspx ಲಭ್ಯ.

***


(Release ID: 1726015) Visitor Counter : 598