ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಶ್ರೀ ಮುಖ್ತಾರ್ ಅಬ್ಬಾಸ್ ನಕ್ವಿ ಅವರಿಂದ ಹಜ್ ಸಿದ್ಧತೆಗಳು ಮತ್ತು ಲಸಿಕಾ ಕಾರ್ಯಕ್ರಮದ ಸ್ಥಿತಿ ಗತಿಯ ಪರಾಮರ್ಶೆ


ವದಂತಿಗಳನ್ನು ತಡೆಯಲು ಮತ್ತು ಲಸಿಕೆ ಪಡೆಯುವುದಕ್ಕೆ ಸಂಬಂಧಿಸಿದ ಹಿಂಜರಿಕೆಯನ್ನು ನಿವಾರಿಸಲು ಜಾಗೃತಿ ಆಂದೋಲನ ಆರಂಭಿಸಲಾಗುವುದು: ನಕ್ವಿ

ರಾಜ್ಯ ಹಜ್ ಸಮಿತಿಗಳು, ವಕ್ಫ್ ಮಂಡಳಿಗಳು, ಕೇಂದ್ರೀಯ ವಕ್ಫ್ ಮಂಡಳಿ, ಮೌಲಾನಾ ಅಜಾದ್ ಶಿಕ್ಷಣ ಪ್ರತಿಷ್ಠಾನ, ಮಹಿಳಾ ಸ್ವ ಸಹಾಯ ಗುಂಪುಗಳು ಆಂದೋಲನದ ಭಾಗವಾಗಲಿವೆ

Posted On: 10 JUN 2021 4:17PM by PIB Bengaluru

ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾದ ಶ್ರೀ ಮುಖ್ತಾರ್ ಅಬ್ಬಾಸ್ ನಕ್ವಿ ಅವರಿಂದು ಮುಂಬಯಿಯ ಹಜ್ ಭವನದಲ್ಲಿ 2021 ನೇ ಸಾಲಿನ ಹಜ್ ಕುರಿತಂತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ನಾವು ನಮ್ಮ ಸಿದ್ಧತೆಗಳನ್ನು ಮಾಡಿದ್ದರೂ, ಭಾರತವು ಸೌದಿ ಅರೇಬಿಯಾ ಸರಕಾರದ ನಿರ್ಧಾರವನ್ನು ಅನುಸರಿಸುತ್ತದೆಎಂದವರು ಹೇಳಿದರು. ಕೆಲವು ದೇಶಗಳು ತಮ್ಮ ನಾಗರಿಕರನ್ನು 2021 ಹಜ್ ಗೆ ಕಳುಹಿಸಲು ಸಮರ್ಥವಾಗಿಲ್ಲ. ಭಾರತವು ಸೌದಿ ಅರೇಬಿಯಾದ ಸರಕಾರದ ಜೊತೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಲು ನಿರ್ಧರಿಸಿದೆ. ಸೌದಿ ಅರೇಬಿಯಾ ಸರಕಾರ ಕೈಗೊಳ್ಳುವ ನಿರ್ಧಾರಕ್ಕೆ ಅನುಗುಣವಾಗಿ ನಾವು ಮುಂದುವರಿಯುತ್ತೇವೆ. ಉಭಯ ದೇಶಗಳ ಜನತೆಯ ಆರೋಗ್ಯ ಮತ್ತು ಕ್ಷೇಮ ಹಾಗು ಮಾನವೀಯತೆ ನಮ್ಮ ಆದ್ಯತೆಯಾಗಿರುತ್ತದೆಎಂದು ಶ್ರೀ ನಕ್ವಿ ಅವರು ಪ್ರಗತಿ ಪರಿಶೀಲನಾ ಸಭೆಯ ಬಳಿಕ ನಡೆದ ಮಾದ್ಯಮ ಗೋಷ್ಠಿಯಲ್ಲಿ ತಿಳಿಸಿದರು.

ಭಾರತದಲ್ಲಿ ಚಾಲ್ತಿಯಲ್ಲಿರುವ ಲಸಿಕಾ ಆಂದೋಲನಕ್ಕೆ ಸಂಬಂಧಿಸಿದಂತೆ ಇರುವ ವದಂತಿಗಳು ಮತ್ತು ಕಳವಳಗಳನ್ನು ತಡೆಯಲು ಮತ್ತು ದಮನ ಮಾಡಲುವಿವಿಧ ಸಾಮಾಜಿಕ ಮತ್ತು ಶಿಕ್ಷಣ ಸಂಸ್ಥೆಗಳು ರಾಷ್ಟ್ರವ್ಯಾಪೀ ಆಂದೋಲನವನ್ನು ಆಯೋಜಿಸಲಿವೆ ಎಂದು ಸಚಿವರು ಹೇಳಿದರು. ರಾಜ್ಯ ಹಜ್ ಸಮಿತಿಗಳು, ವಕ್ಫ್ ಮಂಡಳಿಗಳು, ಅವುಗಳ ಸಂಯೋಜಿತ ಸಂಘಟನೆಗಳು, ಕೇಂದ್ರೀಯ ವಕ್ಫ್ ಮಂಡಳಿ, ಮೌಲಾನಾ ಅಜಾದ್ ಶಿಕ್ಷಣ ಪ್ರತಿಷ್ಠಾನ ಮತ್ತು ಇತರ ಸಾಮಾಜಿಕ ಹಾಗು ಶಿಕ್ಷಣ ಸಂಸ್ಥೆಗಳು ಆಂದೋಲನದಲ್ಲಿ ಪಾಲ್ಗೊಳ್ಳುತ್ತವೆಎಂದವರು ಹೇಳಿದರು.

ಪ್ರಚಾರಾಂದೋಲನದಲ್ಲಿ ಮಹಿಳಾ ಸ್ವಸಹಾಯ ಗುಂಪುಗಳನ್ನು ಸೇರಿಸಿಕೊಳ್ಳಲಾಗುವುದು ಎಂದೂ ನಕ್ವಿ ಹೇಳಿದರು. ಸಂಘಟನೆಗಳು ಮತ್ತು ಮಹಿಳಾ ಎಸ್.ಎಚ್.ಜಿ.ಗಳು ಕೊರೊನಾ ಜಾಗತಿಕ ಸಾಂಕ್ರಾಮಿಕ ನಿಭಾಯಿಸಲು ಲಸಿಕೆ ಪಡೆಯುವುದಕ್ಕೆ  ಜನರನ್ನು ಮನವೊಲಿಸಲಿವೆ. ಆಂದೋಲನವನ್ನು ಜಾನ್ ಹೈ ತೋ ಜಹಾನ್ ಹೈಹೆಸರಿನಲ್ಲಿ ವಿಶೇಷವಾಗಿ ದೇಶದ ಗ್ರಾಮಗಳಲ್ಲಿ ಮತ್ತು ದುರ್ಗಮ ಪ್ರದೇಶಗಳಲ್ಲಿ ಆರಂಭಿಸಲಾಗುವುದು ಎಂದರು.

ಕೆಲವು ಗ್ರಾಮಗಳಿಗೆ ತಮ್ಮ ಭೇಟಿಯನ್ನು ಸ್ಮರಿಸಿಕೊಂಡ ಅವರು ಜನರಲ್ಲಿ ಲಸಿಕೆಯ ಬಗ್ಗೆ ಹಿಂಜರಿಕೆ ಇದೆ, ಜಾಗೃತಿಯ ಕೊರತೆಯಿಂದ ಪರಿಸ್ಥಿತಿಯಾಗಿದೆ ಎಂದರು. ದುರದೃಷ್ಟವಶಾತ್ ಕೆಲವು ಸಣ್ಣ ಮನಸ್ಸಿನ ವ್ಯಕ್ತಿಗಳು ಲಸಿಕಾ ಅಭಿಯಾನಕ್ಕೆ ಸಂಬಂಧಿಸಿ ಗೊಂದಲ ಮತ್ತು ಭಯವನ್ನು ಬಿತ್ತುತ್ತಿದ್ದಾರೆ. ಅವರು ಜನತೆಯ ಆರೋಗ್ಯ ಮತ್ತು ಕ್ಷೇಮದ ಶತ್ರುಗಳು ಮಾತ್ರವಲ್ಲ ದೇಶದ ಶತ್ರುಗಳು ಕೂಡಾಎಂದು ಸಚಿವರು ಹೇಳಿದರು.

ಲಸಿಕಾ ಕಾರ್ಯಕ್ರಮ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು ಅದು ಒಂದು ರಾಜ್ಯದಲ್ಲಿರಲಿ ಅಥವಾ ಇನ್ನೊಂದು ರಾಜ್ಯದಲ್ಲಾಗಿರಲಿ, ಸರಕಾರ ಜನತೆಯದ್ದು. ಗೊಂದಲ ಮತ್ತು ಭಯವನ್ನು ನಿವಾರಣೆ ಮಾಡುವುದು ಮತ್ತು ನಮ್ಮನ್ನು ಲಸಿಕೆ ಪಡೆಯುವುದಕ್ಕೆ ಹಾಗು ಇತರರೂ ಅದನ್ನು ಮಾಡುವಂತೆ ಉತ್ತೇಜನ ನೀಡುವುದು ನಮ್ಮ ರಾಷ್ಟ್ರೀಯ ಜವಾಬ್ದಾರಿಎಂದರು.

ದೇಶದಲ್ಲಿ ಲಸಿಕೆಗಳಿಗಾಗಲೀ ಅಥವಾ ಇತರ ಅವಶ್ಯ ಅಗತ್ಯಗಳಿಗಾಗಲೀ ಕೊರತೆ ಇಲ್ಲ ಎಂದು ಶ್ರೀ ನಕ್ವಿ ಹೇಳಿದರು. ಈಗಾಗಲೇ 24.3 ಕೋಟಿ ಜನರಿಗೆ ಲಸಿಕೆ ಹಾಕಲಾಗಿದೆ. ಹಲವಾರು ಮುಂದುವರಿದ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಕಡಿಮೆ ವೈದ್ಯಕೀಯ ಸೌಲಭ್ಯಗಳು ಇದ್ದರೂ, ನಾವು ಆಮ್ಲಜನಕ ಪೂರೈಕೆಗೆ ನಮ್ಮ ಸಾಮರ್ಥ್ಯವನ್ನು ಒಗ್ಗೂಡಿಸಿಕೊಂಡೆವು, ವೆಂಟಿಲೇಟರುಗಳು ಮತ್ತು ಇತರ ಆವಶ್ಯಕತೆಗಳನ್ನು ಜೋಡಿಸಿಕೊಂಡೆವುಎಂದೂ ಸಚಿವರು ಹೇಳಿದರು.

ಹಜ್ 2021ಕ್ಕೆ ಭಾರತದ ಸಿದ್ಧತೆಗಳ ಕುರಿತು ಮಾತನಾಡಿದ ಶ್ರೀ ನಕ್ವಿ ಅವರು  ಭಾರತದ ಹಜ್ ಸಮಿತಿ ನೀಡಿದ ನಿರ್ದೇಶನಗಳ ಅನ್ವಯ ಮತ್ತು ಸೌದಿ ಅರೇಬಿಯಾ ಸರಕಾರದ ಆರೋಗ್ಯ ಇಲಾಖೆ ನೀಡಿದ ಮಾರ್ಗದರ್ಶನಗಳ ಪ್ರಕಾರ  ಲಸಿಕಾಅಭಿಯಾನದ ಈಗಿನ ಪರಿಸ್ಥಿತಿಯ ಬಗ್ಗೆ ಪರಾಮರ್ಶೆ ಮಾಡಲಾಗಿದೆ ಎಂದರು.

2.5 ಮಿಲಿಯನ್ನಿಗೂ ಅಧಿಕ ಜನರು ಪ್ರತೀ ವರ್ಷ ಪವಿತ್ರ ನಗರ ಮೆಕ್ಕಾದಲ್ಲಿ ಹಜ್ ಯಾತ್ರೆ ನಡೆಸುತ್ತಾರೆ. ಕಳೆದ ವರ್ಷ ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಕಾರಣದಿಂದ ಸೌದಿ ಅರೇಬಿಯಾ ಸರಕಾರ ತನ್ನ ದೇಶದಲ್ಲಿ ನೆಲೆಸಿರುವ ವಿವಿಧ ರಾಷ್ಟ್ರಗಳ ಜನರಿಗೆ ಮಾತ್ರ ಸೀಮಿತವಾಗಿ ಸೀಮಿತ ಹಜ್ನಡೆಸುವುದಾಗಿ ಘೋಷಿಸಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಸೌದಿ ಅರೇಬಿಯಾದಲ್ಲಿ ಭಾರತೀಯ ರಾಯಭಾರಿಯಾಗಿರುವ ಡಾ. ಔಸಫ್ ಸಯೀದ್, ಜೆದ್ದಾದಲ್ಲಿ ಭಾರತದ ಕಾನ್ಸುಲ್ ಜನರಲ್ ಆಗಿರುವ ಶ್ರೀ ಶಾಹೀದ್ ಅಲಾಂ ಮತ್ತು ಕೇಂದ್ರ ಅಲ್ಪ ಸಂಖ್ಯಾತ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಗಳು ಇಂದಿನ ಸಭೆಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಂಡಿದ್ದರು. ಭಾರತದ ಹಜ್ ಸಮಿತಿಯ ಸಿ... ಶ್ರೀ ಎಂ..ಖಾನ್ ಮತ್ತು ಇತರ ಅಧಿಕಾರಿಗಳು ಕೂಡಾ ಹಾಜರಿದ್ದರು.

***



(Release ID: 1726011) Visitor Counter : 230