ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)

2021-22ನೇ ಮಾರುಕಟ್ಟೆ ಋತುವಿನ ಮುಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂ.ಎಸ್.ಪಿ.)ಗೆ ಸಂಪುಟದ ಅನುಮೋದನೆ

Posted On: 09 JUN 2021 3:45PM by PIB Bengaluru

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ  ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಎಲ್ಲ ಕಡ್ಡಾಯ ಮುಂಗಾರು ಬೆಳೆಗಳಿಗೆ 2021-22ನೇ ಮಾರುಕಟ್ಟೆ ಋತುವಿಗಾಗಿ ಕನಿಷ್ಠ ಬೆಂಬಲ ಬೆಲೆ (ಎಂ.ಎಸ್.ಪಿ.) ಹೆಚ್ಚಳ ಮಾಡಲು ತನ್ನ ಅನುಮೋದನೆ ನೀಡಿದೆ.

2021-22ನೇ ಮಾರುಕಟ್ಟೆ ಋತುವಿಗಾಗಿ ಸರ್ಕಾರ ಮುಂಗಾರು ಬೆಳೆಗಳ ಎಂ.ಎಸ್.ಪಿ. ಹೆಚ್ಚಿಸಿ, ರೈತರಿಗೆ ಅವರ ಉತ್ಪನ್ನಗಳಿಗೆ ಲಾಭದಾಯಕ ದರವನ್ನು ಖಾತ್ರಿಪಡಿಸಿದೆ. ಹಿಂದಿನ ವರ್ಷಕ್ಕಿಂತ ಎಂ.ಎಸ್‌.ಪಿ.ಯಲ್ಲಿ ಅಧಿಕ ಹೆಚ್ಚಳ ಸೆಸಮಮ್‌ ಗೆ (ಕ್ವಿಂಟಲ್‌ ಗೆ 452 ರೂ.) ನಂತರ ತೊಗರಿ ಮತ್ತು ಉದ್ದು (ಪ್ರತಿ ಕ್ವಿಂಟಲ್‌ ಗೆ 300 ರೂ.) ಶಿಫಾರಸು ಮಾಡಲಾಗಿದೆ. ನೆಲಗಡಲೆ ಮತ್ತು ಹುಚ್ಚೆಳ್ಳಿಗೆ ಸಂಬಂಧಿಸಿದಂತೆ, ಕಳೆದ ವರ್ಷಕ್ಕೆ ಹೋಲಿಸಿದರೆ ಕ್ವಿಂಟಲ್‌ ಗೆ ಅನುಕ್ರಮವಾಗಿ 275 ರೂ ಮತ್ತು 235 ರೂ. ಹೆಚ್ಚಳ ಮಾಡಲಾಗಿದೆ. ಬೆಳೆ ವೈವಿಧ್ಯವನ್ನು ಉತ್ತೇಜಿಸುವ ಗುರಿಯೊಂದಿಗೆ ಬೆಲೆಗಳಲ್ಲಿ ತಾರತಮ್ಯ ಮಾಡಲಾಗಿದೆ.

2021-22ನೇ ಮಾರುಕಟ್ಟೆ ಋತುವಿನ ಎಲ್ಲ ಮುಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಕೆಳಕಂಡಂತಿದೆ:

ಬೆಳೆ

 

ಎಂ.ಎಸ್.ಪಿ.

2020-21

 

ಎಂ.ಎಸ್.ಪಿ. 2021-22

 

ಉತ್ಪಾದನಾ ವೆಚ್ಚ*

2021-22 (ರೂ/ಕ್ವಿಂಟಾಲ್)

ಎಂ.ಎಸ್.ಪಿ.ಯಲ್ಲಿ ಹೆಚ್ಚಳ

(ಸಂಪೂರ್ಣ)

ವೆಚ್ಚದ ಮೇಲೆ ಲಾಭ

(ಶೇಕಡಾವಾರು)

 

ಭತ್ತ (ಸಾಮಾನ್ಯ)

 

1868

 

1940

 

1293

 

72

 

50

 

ಭತ್ತ (ಶ್ರೇಣಿA)^

 

A)A

 

1888

 

1960

 

-

 

72

 

-

 

ಜೋಳ (ಹೈಬ್ರೀಡ್)

 

2620

 

2738

 

1825

 

118

 

50

 

ಜೋಳ (ಮಾಲ್ದಾಂಡಿ)^

 

2640

 

2758

 

-

 

118

 

-

 

ಬಾಜ್ರಾ

 

2150

 

2250

 

1213

 

100

 

85

 

ರಾಗಿ

 

3295

 

3377

 

2251

 

82

 

50

 

ಮೆಕ್ಕೆಜೋಳ

 

1850

 

1870

 

1246

 

20

 

50

 

ತೊಗರಿ (ಆರ್ಹರ್)

 

6000

 

6300

 

3886

 

300

 

62

 

ಹೆಸರು

 

7196

 

7275

 

4850

 

79

 

50

 

ಉದ್ದು

 

6000

 

6300

 

3816

 

300

 

65

 

ಕಡಲೆಕಾಯಿ

 

5275

 

5550

 

3699

 

275

 

50

 

ಸೂರ್ಯಕಾಂತಿ ಬೀಜ

 

5885

 

6015

 

4010

 

130

 

50

 

ಸೋಯಾಬೀನ್ (ಹಳದಿ)

 

3880

 

3950

 

2633

 

70

 

50

 

ಸೆಸಮಮ್ (ಎಳ್ಳು)

 

6855

 

7307

 

4871

 

452

 

50

 

ಹುಚ್ಚೆಳ್ಳು

 

6695

 

6930

 

4620

 

235

 

50

 

ಹತ್ತಿ (ಮಧ್ಯಮ ಸ್ಟೇಪಲ್)

 

5515

 

5726

 

3817

 

211

 

50

 

ಹತ್ತಿ (ಉದ್ದನೆ ಸ್ಟೇಪಲ್)^

 

5825

 

6025

 

-

 

200

 

-

 

* ಸಮಗ್ರ ವೆಚ್ಚವನ್ನು ಸೂಚಿಸುತ್ತದೆ, ಇದರಲ್ಲಿ ಪಾವತಿಸಿದ ಎಲ್ಲ ವೆಚ್ಚಗಳು ಅಂದರೆ ಕಾರ್ಮಿಕರಿಗೆ ಪಾವತಿಸಲಾದ ಕೂಲಿಯ ಲೆಕ್ಕಾಚಾರ, ದುಡಿದ ಎತ್ತುಗಳು, ಯಂತ್ರಗಳ ಬಾಡಿಗೆ, ಗುತ್ತಿಗೆ ಭೂಮಿಗೆ ಪಾವತಿಸಿದ ಬಾಡಿಗೆ, ಬೀಜಗಳು, ರಸಗೊಬ್ಬರಗಳು, ಗೊಬ್ಬರಗಳು, ನೀರಾವರಿ ಶುಲ್ಕಗಳು, ಉಪಕರಣಗಳು ಮತ್ತು ಕೃಷಿ ಕಟ್ಟಡಗಳ ಮೇಲಿನ ಸವಕಳಿ, ಕಾರ್ಯ ಬಂಡವಾಳದ ಮೇಲಿನ ಬಡ್ಡಿ, ಪಂಪ್ ಸೆಟ್ ಗಳ ಕಾರ್ಯಾಚರಣೆಗೆ ಡೀಸೆಲ್/ವಿದ್ಯುತ್ ಇತ್ಯಾದಿ ವೆಚ್ಚ, ವಿವಿಧ ವೆಚ್ಚಗಳು ಮತ್ತು ಕುಟುಂಬದ ಕಾರ್ಮಿಕರ ಕೂಲಿಯ ಮೌಲ್ಯ ಮತ್ತು ಕೃಷಿಕೆ ಬಳಕೆಯಾಗುವ ಇನ್ನಿತರ ವೆಚ್ಚಗಳು ಸೇರಿವೆ.

^ ಭತ್ತ (ಶ್ರೇಣಿ ಎ), ಜೋಳ (ಮಲ್ದಾಂಡಿ) ಮತ್ತು ಹತ್ತು (ಉದ್ದದ ಸ್ಟಾಪಲ್) ವೆಚ್ಚಕ್ಕೆ ಪ್ರತ್ಯೇಕ  ದತ್ತಾಂಶ ಕ್ರೋಡೀಕರಿಸುವುದಿಲ್ಲ. 

2021-22ರ ಮಾರುಕಟ್ಟೆ ಋತುವಿನಲ್ಲಿ ಮುಂಗಾರು ಬೆಳೆಗಳ ಎಂ.ಎಸ್‌.ಪಿ. ಹೆಚ್ಚಳವು, 2018-19ರ ಕೇಂದ್ರ ಬಜೆಟ್ ಪ್ರಕಟಣೆಗೆ ಅನುಗುಣವಾಗಿ ಅಖಿಲ ಭಾರತ ಮಟ್ಟದ ಸರಾಸರಿ ಉತ್ಪಾದನಾ ವೆಚ್ಚದ (ಸಿಓಪಿ) ಕನಿಷ್ಠ 1.5 ಪಟ್ಟು ಹೆಚ್ಚಾಗಿದ್ದು, ರೈತರಿಗೆ ಸಮಂಜಸವಾದ ನ್ಯಾಯಯುತ ಸಂಭಾವನೆ ನೀಡುವ ಗುರಿ ಹೊಂದಿದೆ. ರೈತರಿಗೆ ಉತ್ಪಾದನಾ ವೆಚ್ಚಕ್ಕಿಂತ ಹೆಚ್ಚಿನ ಆದಾಯವು ಬಜ್ರಾ (ಶೇ.85) ಮತ್ತು ನಂತರ ಉದ್ದು (ಶೇ.65) ಮತ್ತು ತೊಗರಿ (ಶೇ.62)ಗೆ ಸಂಬಂಧಿಸಿದಂತೆ ಹೆಚ್ಚು ಎಂದು ಅಂದಾಜಿಸಲಾಗಿದೆ. ಉಳಿದ ಬೆಳೆಗಳಿಗೆ, ರೈತರು ಮಾಡುವ ಉತ್ಪಾದನಾ ವೆಚ್ಚದ ಮೇಲೆ ಕನಿಷ್ಠ ಶೇ. 50ರಷ್ಟು ಆದಾಯ ಬರುತ್ತದೆ ಎಂದು ಅಂದಾಜಿಸಲಾಗಿದೆ.

ಸೂಕ್ತವಾದ ಬೇಡಿಕೆ ಪೂರೈಕೆಯನ್ನು ಸಮತೋಲಿತವಾಗಿಡಲು ಈ ಕೆಳಕಂಡ ಬೆಳೆಗಳಿಗೆ ಸಂಬಂಧಿಸಿದಂತೆ ರೈತರು ದೊಡ್ಡ ಪ್ರದೇಶಕ್ಕೆ ಬದಲಾಗುವಂತೆ ಉತ್ತೇಜಿಸಲು ಎಣ್ಣೆ ಕಾಳುಗಳು, ಬೇಳೆಧಾನ್ಯಗಳು ಮತ್ತು ಒರಟು ಸಿರಿ ಧಾನ್ಯಗಳ ವಿಚಾರದಲ್ಲಿ ಎಂ.ಎಸ್.ಪಿಯನ್ನು ಮರು ಹೊಂದಿಕೆ ಮಾಡಲು ಕಳೆದ ಕೆಲವು ವರ್ಷಗಳಿಂದ ಸಂಘಟಿತ ಪ್ರಯತ್ನ ಮಾಡಲಾಗುತ್ತಿದೆ.  ಅಂತರ್ಜಲ ಮಟ್ಟಕ್ಕೆ ದೀರ್ಘಾವಧಿಯ ಪ್ರತಿಕೂಲ ಪರಿಣಾಮವಾಗದಂತೆ ಭತ್ತ-ಗೋಧಿಯನ್ನು ಬೆಳೆಯಲು ಸಾಧ್ಯವಾಗದ ಪ್ರದೇಶಗಳಲ್ಲಿ ಪೌಷ್ಟಿಕವಾಗಿ ಶ್ರೀಮಂತವಾದ ಪೌಷ್ಟಿಕಯುಕ್ತ ಸಿರಿಧಾನ್ಯಗಳ ಉತ್ಪಾದನೆಯನ್ನು ಪ್ರೋತ್ಸಾಹಿಸಲು ಹೆಚ್ಚಿನ ಗಮನವನ್ನು ನೀಡಲಾಗುತ್ತಿದೆ.

ಜೊತೆಗೆ, ಸರ್ಕಾರವು 2018ರಲ್ಲಿ ಘೋಷಿಸಿದ ಅಂಬ್ರೆಲಾ ಯೋಜನೆಯಾದ "ಪ್ರಧಾನಮಂತ್ರಿ ಅನ್ನದಾತಾ ಆಯ್ ಸಂರಕ್ಷಣ್ ಅಭಿಯಾನ" (ಪಿಎಂ-ಎ.ಎ.ಎಸ್.ಎಚ್.ಎ) ರೈತರು ತಮ್ಮ ಉತ್ಪನ್ನಗಳಿಗೆ ಸೂಕ್ತ ಪ್ರತಿಫಲ ಪಡೆಯುವಲ್ಲಿ ಸಹಾಯ ಮಾಡುತ್ತದೆ. ಈ ಅಂಬ್ರೆಲಾ ಯೋಜನೆ ಮೂರು ಉಪ-ಯೋಜನೆಗಳನ್ನು ಒಳಗೊಂಡಿದೆ, ಅಂದರೆ ಬೆಲೆ ಬೆಂಬಲ ಯೋಜನೆ (ಪಿ.ಎಸ್.ಎಸ್.) , ಬೆಲೆ ಕೊರತೆ ಪಾವತಿ ಯೋಜನೆ (ಪಿಡಿಪಿಎಸ್) ಮತ್ತು ಖಾಸಗಿ ಖರೀದಿ ಮತ್ತು ದಾಸ್ತಾನು ಯೋಜನೆ (ಪಿಪಿಎಸ್.ಎಸ್) ಪ್ರಾಯೋಗಿಕ ಆಧಾರದ ಮೇಲೆ ರೂಪಿಸಲಾಗಿದೆ.

ದ್ವಿದಳ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಗುರಿಯೊಂದಿಗೆ, ಪ್ರಸಕ್ತ ಮುಂಗಾರು 2021ರ ಋತುವಿನಲ್ಲಿಯೇ ಅನುಷ್ಠಾನಕ್ಕೆ ವಿಶೇಷ ಮುಂಗಾರು ಕಾರ್ಯತಂತ್ರವನ್ನು ಸಿದ್ಧಪಡಿಸಲಾಗಿದೆ. ತೊಗರಿ, ಹೆಸರು ಮತ್ತು ಉದ್ದಿಗಾಗಿ ಪ್ರದೇಶ ವಿಸ್ತರಣೆ ಮತ್ತು ಉತ್ಪಾದಕತೆ ವರ್ಧನೆ ಎರಡಕ್ಕೂ ವಿವರವಾದ ಯೋಜನೆಯನ್ನು ರೂಪಿಸಲಾಗಿದೆ. ಕಾರ್ಯತಂತ್ರದಡಿಯಲ್ಲಿ, ಲಭ್ಯವಿರುವ ಹೆಚ್ಚಿನ ಇಳುವರಿ ನೀಡುವ ಎಲ್ಲಾ ಪ್ರಭೇದಗಳ (ಎಚ್‌.ವೈ.ವಿ.ಗಳು) ಬೀಜಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಅದೇರೀತಿ, ಎಣ್ಣೆ ಕಾಳುಗಳಿಗಾಗಿ, 2021ರ ಮುಂಗಾರು ಹಂಗಾಮಿನಲ್ಲಿ ಮಿನಿ-ಕಿಟ್‌ ಗಳ ರೂಪದಲ್ಲಿ ರೈತರಿಗೆ ಹೆಚ್ಚಿನ ಇಳುವರಿ ನೀಡುವ ಬೀಜಗಳನ್ನು ಉಚಿತವಾಗಿ ವಿತರಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ಭಾರತ ಸರ್ಕಾರ ಅನುಮೋದನೆ ನೀಡಿದೆ. ವಿಶೇಷ ಮುಂಗಾರು ಕಾರ್ಯಕ್ರಮವು ಹೆಚ್ಚುವರಿ 6.37 ಲಕ್ಷ ಹೆಕ್ಟೇರ್ ಪ್ರದೇಶವನ್ನು ಎಣ್ಣೆಕಾಳುಗಳ ಅಡಿಯಲ್ಲಿ ತರಲಿದೆ ಮತ್ತು 120.26 ಲಕ್ಷ ಕ್ವಿಂಟಾಲ್ ಎಣ್ಣೆಕಾಳುಗಳು ಮತ್ತು ಖಾದ್ಯ ತೈಲವನ್ನು 24.36 ಲಕ್ಷ ಕ್ವಿಂಟಾಲ್ ಉತ್ಪಾದಿಸುವ ನಿರೀಕ್ಷೆಯಿದೆ.

***(Release ID: 1725705) Visitor Counter : 598