ರೈಲ್ವೇ ಸಚಿವಾಲಯ

ಶೂನ್ಯ ಇಂಗಾಲ ಹೊರಹಾಕುವ ಮೂಲಕ ವಿಶ್ವದಲ್ಲೇ ಅತಿ ದೊಡ್ಡ ಹಸಿರು ರೈಲ್ವೆಯಾಗುವತ್ತ ಸಾಗುತ್ತಿರುವ ಭಾರತೀಯ ರೈಲ್ವೆ


ಬೃಹತ್ ಪ್ರಮಾಣದ ವಿದ್ಯುದೀಕರಣ, ನೀರು ಮತ್ತು ಕಾಗದ ಸಂರಕ್ಷಣೆ, ರೈಲ್ವೆ ಹಳಿಗಳಲ್ಲಿ ಪ್ರಾಣಿಗಳು ಗಾಯಗೊಳ್ಳದಂತೆ ಉಳಿಸುವುದು ಸೇರಿ ಪರಿಸರಕ್ಕೆ ಸಹಾಯಕವಾಗುವ ಹಲವು ಕ್ರಮ ಕೈಗೊಳ್ಳುತ್ತಿರುವ ರೈಲ್ವೆ

39 ಕಾರ್ಯಾಗಾರ, 7 ಉತ್ಪಾದನಾ ಘಟಕ, 8 ಲೋಕೋ ಶೆಡ್  ಮತ್ತು ಒಂದು ಉಗ್ರಾಣ ನಿಗಮಗಳು ‘ಗ್ರೀನ್ ಕೊ’ ಪ್ರಮಾಣೀಕೃತ; ಇವುಗಳಲ್ಲಿ ಎರಡು ಪ್ಲಾಟಿನಂ, 15 ಚಿನ್ನ ಮತ್ತು 18 ಬೆಳ್ಳಿ ರೇಟಿಂಗ್ಸ್ ಸೇರಿವೆ

3 ಪ್ಲಾಟಿನಂ, 6 ಚಿನ್ನ ಮತ್ತು 6 ಬೆಳ್ಳಿ ಶ್ರೇಯಾಂಕದೊಂದಿಗೆ 19 ರೈಲು ನಿಲ್ದಾಣಗಳಿಗೆ ಹಸಿರು ಪ್ರಮಾಣೀಕರಣ

27 ರೈಲ್ವೆ ಕಟ್ಟಡ, ಕಚೇರಿ ಮತ್ತು ಕ್ಯಾಂಪಸ್ ಗಳು ಹಾಗೂ ಇತರೆ ಸಂಸ್ಥೆಗಳು ಕೂಡ ಹಸಿರು ಪ್ರಮಾಣೀಕರಣಗೊಂಡಿದ್ದು, ಅವುಗಳಲ್ಲಿ 15  ಪ್ಲಾಟಿನಂ, 9 ಚಿನ್ನ ಮತ್ತು 2 ಬೆಳ್ಳಿ ಶ್ರೇಯಾಂಕ

ಕಳೆದ ಎರಡು ವರ್ಷಗಳಿಂದೀಚೆಗೆ ಪರಿಸರ ನಿರ್ವಹಣಾ ವ್ಯವಸ್ಥೆ ಜಾರಿಗಾಗಿ 600 ರೈಲ್ವೆ ನಿಲ್ದಾಣಗಳು ಐಎಸ್ಒ: 14001 ಪ್ರಮಾಣೀಕೃತ

Posted On: 04 JUN 2021 3:59PM by PIB Bengaluru

ಭಾರತೀಯ ರೈಲ್ವೆ(ಐಆರ್) ವಿಶ್ವದ ಅತಿದೊಡ್ಡ ಹಸಿರು ರೈಲ್ವೆಯಾಗಿ ಪರಿವರ್ತನೆ ಹೊಂದಲು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು ಅದು 2030ಕ್ಕೂ ಮುನ್ನ ಶೂನ್ಯ ಇಂಗಾಲ ಹೊರ ಹಾಕುವಸಂಸ್ಥೆಯಾಗುವ ನಿಟ್ಟಿನಲ್ಲಿ ಮುನ್ನಡೆದಿದೆ. ನವ ಭಾರತದ ಹೆಚ್ಚುತ್ತಿರುವ ಅಗತ್ಯಗಳನ್ನು ಪೂರೈಸುವ ಸಲುವಾಗಿ  ಪರಿಸರಸ್ನೇಹಿ, ದಕ್ಷ, ಕಡಿಮೆ ವೆಚ್ಚದ, ಸಮಯ ಪ್ರಜ್ಞೆ ಮತ್ತು ಪ್ರಯಾಣಿಕರಿಗೆ ಆಧುನಿಕ ಸೇವೆಗಳನ್ನು ಒದಗಿಸುವ ಮೂಲಕ ಸಮಗ್ರ ಮಾರ್ಗದರ್ಶನ ನೀಡುತ್ತಿದೆ. ಭಾರತೀಯ ರೈಲ್ವೆ ಬೃಹತ್ ಪ್ರಮಾಣದ ವಿದ್ಯುದೀಕರಣ, ನೀರು ಮತ್ತು ಕಾಗದ ಸಂರಕ್ಷಣೆ, ರೈಲು ಮಾರ್ಗದಲ್ಲಿ ಪ್ರಾಣಿಗಳು ಗಾಯಗೊಳ್ಳುವುದನ್ನು ತಡೆಯುವುದು ಸೇರಿದಂತೆ ಪರಿಸರಕ್ಕೆ ಸಹಾಯಕವಾಗುವ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ.

ರೈಲ್ವೆ ವಿದ್ಯುದೀಕರಣ ಪರಿಸರಸ್ನೇಹಿಯಾಗಿದೆ ಮತ್ತು ಇಂಗಾಲವನ್ನು ತಗ್ಗಿಸುತ್ತದೆ. ಪ್ರಮಾಣ 2014ರಿಂದೀಚೆಗೆ ಸುಮಾರು 10 ಪಟ್ಟು ಹೆಚ್ಚಾಗಿದೆ. ವ್ಯವಸ್ಥಿತ ರೀತಿಯಲ್ಲಿ ವಿದ್ಯುತ್ ಮಾರ್ಗದ ಆರ್ಥಿಕ ಲಾಭಗಳನ್ನು ಪಡೆದುಕೊಳ್ಳುತ್ತಿರುವ ರೈಲ್ವೆ, ಉಳಿದ ಬ್ರಾಡ್ ಗೇಜ್(ಬಿಜಿ) ಮಾರ್ಗಗಳಲ್ಲಿ 2023 ಡಿಸೆಂಬರ್ ನೊಳಗೆ ವಿದ್ಯುದೀಕರಣ ಕಾರ್ಯ ಪೂರ್ಣಗೊಳಿಸುವ ಮೂಲಕ ಎಲ್ಲ ಬ್ರಾಡ್ ಗೇಜ್ ಮಾರ್ಗಗಳ ವಿದ್ಯುದೀಕರಣದಲ್ಲಿ ಶೇ.100ರಷ್ಟು ಸಾಧನೆ ಮಾಡಲು ಯೋಜನೆ ಹಾಕಿಕೊಂಡಿದೆ. ಇನ್ನೂ ಮುಂದುವರಿದು, ಮುಂದಿನ ಪೀಳಿಗೆಗೆ ಬೇಕಾದ ವ್ಯವಸ್ಥೆಗಳು, ಜೈವಿಕ ಶೌಚಾಲಯಗಳು ಮತ್ತು ಎಲ್ಇಡಿ ದೀಪಗಳನ್ನು ಅಳವಡಿಸುವ ಮೂಲಕ ಪ್ರಯಾಣವನ್ನು ಇತರೆ ಪ್ರಯಾಣಗಳಿಗೆ ಹೋಲಿಸಿದರೆ ಅತ್ಯಂತ ಆನಂದದಾಯಕವಾಗಿರುವ ಪರಿಸರ ಸೃಷ್ಟಿಸಲಾಗುತ್ತದೆ.

ಭಾರತೀಯ ರೈಲ್ವೆ ನಿರ್ದಿಷ್ಟ ಸರಕು ಕಾರಿಡಾರ್ ಗಳನ್ನು ಅಭಿವೃದ್ಧಿಪಡಿಸಿದ್ದು, ಅವು ಕಡಿಮೆ ಇಂಗಾಲ ಹಸಿರು ಸಾಗಾಣೆ ಜಾಲವಾಗಿದ್ದು, ದೀರ್ಘಾವಧಿಯಲ್ಲಿ ಕಡಿಮೆ ಇಂಗಾಲ ನೀಲನಕ್ಷೆಯನ್ನು ಹೊಂದಲಾಗಿದ್ದು, ಇದರಿಂದಾಗಿ ಹೆಚ್ಚಿನ ಇಂಧನ ಕ್ಷಮತೆ ಮತ್ತು ಇಂಗಾಲಸ್ನೇಹಿ ತಂತ್ರಜ್ಞಾನಗಳು ಸಂಸ್ಕರಣೆ ಮತ್ತು ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಭಾರತೀಯ ರೈಲ್ವೆ ಎರಡು ನಿರ್ದಿಷ್ಟ ಸರಕು ಕಾರಿಡಾರ್ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಅವುಗಳೆಂದರೆ ಲೂಧಿಯಾನದಿಂದ ಡಂಕುನಿ(1,875 ಕಿ.ಮೀ.) ಉದ್ದದ ಪೂರ್ವ ಕಾರಿಡಾರ್(ಇಡಿಎಫ್ ಸಿ) ಮತ್ತು ದಾದ್ರಿಯಿಂದ ಜವಾಹರಲಾಲ್ ನೆಹರು ಪೋರ್ಟ್ ಟ್ರಸ್ಟ್(1,506 ಕಿ.ಮೀ.) ಉದ್ದದ ಪಶ್ಚಿಮ ಕಾರಿಡಾರ್(ಡಬ್ಲ್ಯೂಡಿಎಫ್ ಸಿ) ಸೇರಿದೆ. ಅಲ್ಲದೆ, ಹೆಚ್ಚುವರಿಯಾಗಿ ಸಾರ್ವಜನಿಕ ಖಾಸಗಿ ಪಾಲುದಾರಿಕೆ(ಪಿಪಿಪಿ) ವಿಧಾನದಲ್ಲಿ ಇಡಿಎಫ್ ಸಿಯ ಭಾಗವಾಗಿ ಸೊನ್ನಗರ್-ಡಂಕುನಿ(538 ಕಿ.ಮೀ.) ಮಾರ್ಗವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಭಾರತೀಯ ರೈಲ್ವೆಯ ಜಾಲ ಮತ್ತು ವೇಗದಿಂದಾಗಿ ಸರಕು ಸಾಗಣೆ ಸುಲಭವಾಗಿದ್ದು, ಸಾಂಕ್ರಾಮಿಕ ಸಮಯದಲ್ಲಿ ಹಸಿರು ತರಕಾರಿಗಳು ಮತ್ತು ಆಕ್ಸಿಜನ್ ಪೂರೈಸಲಾಗುತ್ತಿದ್ದು, ಇದು ರಸ್ತೆ ಸಾರಿಗೆಗೆ ಹೋಲಿಸಿದರೆ ಅತ್ಯಂತ ಹೆಚ್ಚು ಪರಿಸರಸ್ನೇಹಿಯಾಗಿದೆ. 2021 ಏಪ್ರಿಲ್ ನಿಂದ 2021 ಮೇ ವರೆಗೆ ಭಾರತೀಯ ರೈಲ್ವೆ 73 ಲಕ್ಷ ಆಹಾರಧಾನ್ಯಗಳನ್ನು ಸಾಗಣೆ ಮಾಡಿದೆ ಮತ್ತು 241 ಭರ್ತಿಯಾದ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲುಗಳ ಮೂಲಕ 922 ಟ್ಯಾಂಕರ್ ಗಳಲ್ಲಿ 15,046 ಆಕ್ಸಿಜನ್ ಅನ್ನು ದೇಶದ ನಾನಾ ಭಾಗಗಳಿಗೆ ತಲುಪಿಸಿದೆ.

ಹಸಿರು ಪ್ರಮಾಣೀಕರಣ ಮತ್ತು ಪರಿಸರ ನಿರ್ವಹಣಾ ವ್ಯವಸ್ಥೆ ಜಾರಿ:

ಭಾರತೀಯ ರೈಲ್ವೆ ಮತ್ತು ಭಾರತೀಯ ಕೈಗಾರಿಕಾ ಒಕ್ಕೂಟದ ನಡುವೆ ಭಾರತೀಯ ರೈಲ್ವೆಯಲ್ಲಿ ಕೈಗೊಳ್ಳುವ ಹಸಿರು ಉಪಕ್ರಮಗಳಿಗೆ ಪೂರಕ ಬೆಂಬಲ ನೀಡಲು ಒಡಂಬಡಿಕೆಗೆ ಸಹಿ ಹಾಕಲಾಗಿದೆ. 39 ಕಾರ್ಯಾಗಾರಗಳು, 7 ಉತ್ಪಾದನಾ ಘಟಕಗಳು, 8 ಲೋಕೋ ಶೆಡ್ ಗಳು ಮತ್ತು ಒಂದು ಉಗ್ರಾಣ ನಿಗಮಕ್ಕೆ ಗ್ರೀನ್ ಕೊಪ್ರಮಾಣೀಕರಣ ನೀಡಲಾಗಿದೆ. ಇದರಲ್ಲಿ ಎರಡು ಪ್ಲಾಟಿನಂ, 15 ಚಿನ್ನ ಮತ್ತು 18 ಬೆಳ್ಳಿ ರೇಟಿಂಗ್ ಒಳಗೊಂಡಿವೆ.  

ಹಸಿರು ಪ್ರಮಾಣೀಕರಣ ಮುಖ್ಯವಾಗಿ ಪರಿಸರದ ಮೇಲೆ ನೇರ ಪರಿಣಾಮ ಬೀರುವಂತಹ ಮಾನದಂಡಗಳ ಮೌಲ್ಯಮಾಪನವನ್ನು ಒಳಗೊಂಡಿದೆ. ಅಂದರೆ ಇಂಧನ ಸಂರಕ್ಷಣಾ ವಿಧಾನಗಳು, ನವೀಕರಿಸಬಹುದಾದ ಇಂಧನ ಬಳಕೆ, ಹಸಿರು ಮನೆ ಅನಿಲ ಹೊರ ಸೂಸುವುದನ್ನು ತಗ್ಗಿಸುವುದು, ಜಲ ಸಂರಕ್ಷಣೆ, ತ್ಯಾಜ್ಯ ನಿರ್ವಹಣೆ ಹಾಗೂ ಸಾಮಗ್ರಿಗಳ ಸಂರಕ್ಷಣೆ,ಪುನರಾವರ್ತನ ಇತ್ಯಾದಿ. 19 ರೈಲ್ವೆ ನಿಲ್ದಾಣಗಳು ಹಸಿರು ಪ್ರಮಾಣೀಕರಣ ಸಾಧಿಸಿದ್ದು, ಅವುಗಳಲ್ಲಿ 3 ಪ್ಲಾಟಿನಂ, 6 ಚಿನ್ನ ಮತ್ತು 6 ಬೆಳ್ಳಿ ರೇಟಿಂಗ್ ಗಳು ಸೇರಿವೆ. 27ಕ್ಕೂ ಅಧಿಕ ರೈಲ್ವೆ ಕಟ್ಟಡಗಳು, ಕಚೇರಿಗಳು, ಕ್ಯಾಂಪಸ್ ಗಳು ಮತ್ತು ಇತರೆ ಸಂಸ್ಥೆಗಳಲ್ಲಿ 15 ಪ್ಲಾಟಿನಂ, 9 ಚಿನ್ನ ಮತ್ತು ಎರಡು ಬೆಳ್ಳಿ ರೇಟಿಂಗ್ ಗಳು ಒಳಗೊಂಡಿವೆ. ಅಲ್ಲದೆ ಹೆಚ್ಚುವರಿಯಾಗಿ ಕಳೆದ ಎರಡು ವರ್ಷಗಳಲ್ಲಿ ಪರಿಸರ ನಿರ್ವಹಣಾ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವ ಮೂಲಕ 600 ರೈಲು ನಿಲ್ದಾಣಗಳು ಐಎಸ್ಒ: 14001 ಪ್ರಮಾಣೀಕರಣವನ್ನು ಗಳಿಸಿವೆಇದರಿಂದಾಗಿ ಒಟ್ಟಾರೆ 718 ನಿಲ್ದಾಣಗಳಿಗೆ ಐಎಸ್ಒ: 14001 ಪ್ರಮಾಣೀಕರಣದಿಂದ ಗುರುತಿಸುವಂತಾಗಿದೆ.

ಭಾರತೀಯ ರೈಲ್ವೆ ತನ್ನದೇ ಆದ ಅಪಾಯದ ಮೌಲ್ಯಮಾಪನ ಮತ್ತು ವಿಪತ್ತು ನಿರ್ವಹಣಾ ಶಿಷ್ಟಾಚಾರಗಳಲ್ಲಿ ಹವಾಮಾನ ವೈಪರಿತ್ಯದ ಅಂಶಗಳನ್ನು ಸಹ ಸೇರಿಸಿದೆ. ಒಂದು ಸಂಸ್ಥೆಯಾಗಿ ಅದು ಅಪಾಯಗಳನ್ನು ನಿರ್ವಹಿಸಲು ಸನ್ನದ್ಧವಾಗಿರುವ ಸಂಸ್ಥೆಯಾಗಿ   ಅದು ಆಸ್ತಿಗಳು, ಮಾರ್ಗಗಳು ಮತ್ತು ಹೂಡಿಕೆಗೆ ಸಂಬಂಧಿಸಿದಂತೆ ಸೂಕ್ತ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಭಾರತೀಯ ರೈಲ್ವೆಯ ಸಾರ್ವಜನಿಕ  ವಲಯದ ಅಗ್ರ ಮಂಡಳಿಗಳು ಹಂಚಿಕೆಯ ತಿಳುವಳಿಕೆ ಅರ್ಥಮಾಡಿಕೊಳ್ಳಲು ಭಾಗಿದಾರರೊಂದಿಗೆ ಸಂವಹನ ನಡೆಸುತ್ತಿದೆ. ಇದು ದೀರ್ಘಕಾಲೀನ ಆರೋಗ್ಯ ಮತ್ತು ಅವರು ನಡೆಸುತ್ತಿರುವ ಸಂಸ್ಥೆಗಳ ಸುಸ್ಥಿರತೆಗೆ ಅಗತ್ಯವಿದೆ.

ಭಾರತೀಯ ರೈಲ್ವೆ ಮತ್ತು ಅದರ ಉಪ ಸಂಸ್ಥೆಗಳು ಪ್ರತಿ ವರ್ಷ ಪ್ರಕಟಿಸುವ ಪರಿಸರ ಸುಸ್ಥಿರ ವರದಿಗಳು  ಹವಾಮಾನ ಬದಲಾವಣೆ ಸಂದರ್ಭದಲ್ಲಿ ಕಾರ್ಯತಂತ್ರಗಳು ಮತ್ತು ಗಮನಿಸಬೇಕಾದ ಅಂಶಗಳನ್ನು ವ್ಯಾಖ್ಯಾಯಿನಿಸುವ ಚೌಕಟ್ಟಿನ ದಾಖಲೆಯನ್ನು ಸಿದ್ಧಪಡಿಸುತ್ತದೆ, ಮತ್ತು ಅದನ್ನು ನಿರ್ವಹಿಸುವ ಕ್ರಮಗಳನ್ನು ಸೂಚಿಸುತ್ತದೆ. ಇದರಿಂದ ಹವಾಮಾನ ಬದಲಾವಣೆ ಕುರಿತ ಪ್ಯಾರಿಸ್ ಒಪ್ಪಂದ, ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಯೋಜನೆಗಳಿಗೆ ಸರ್ಕಾರ ತನ್ನ ಬದ್ಧತೆಯನ್ನು ಬೆಂಬಲಿಸಲು ರೈಲ್ವೆಗೆ ಸಹಕಾರಿಯಾಗಿದೆ.

ಭಾರತೀಯ ರೈಲ್ವೆಯ ವಿವಿಧ ವಲಯಗಳು ಮತ್ತು ನಿರ್ಮಾಣ ಘಟಕಗಳಲ್ಲಿನ  ಇಂಜಿನಿಯರ್ ಗಳು, ನಿರ್ವಾಹಕರು ಮತ್ತು ಯೋಜಕರ ವ್ಯಾಪಕ ಅನುಭವಗಳು ನಿರಂತರವಾಗಿ ವಿಭಿನ್ನ ಸವಾಲುಗಳನ್ನು ಎದುರಿಸುತ್ತವೆ. ಕೆಲವು ಅಂತಾರಾಷ್ಟ್ರೀಯ ಸ್ವತ್ತು ನಿರ್ವಾಹಕರು, ರೈಲ್ವೆ ಆಪರೇಟರ್ ಗಳು, ರೋಲಿಂಗ್ ಸ್ಟಾಕ್ ಇಂಜಿನಿಯರ್ ಗಳು, ಸನ್ನಿವೇಶದ ಯೋಜಕರು ಮತ್ತು ಇತರರು ಕೆಲವು ಅತ್ಯಾಧುನಿಕ ವಿಧಾನಗಳನ್ನು ಸಮಾಲೋಚನಾ ವರದಿಗಳ ಮೂಲಕ ಅಧ್ಯಯನ ಮಾಡಲಾಗುತ್ತದೆಭಾರತೀಯ ರೈಲ್ವೆಯ ವಾಸ್ತವತೆಗಳು ಮತ್ತು ವಸ್ತುಸ್ಥಿತಿಗೆ ಅನುಗುಣವಾಗಿ ಸೂಕ್ತ ಮಧ್ಯಪ್ರವೇಶಗಳನ್ನು ಸೂಕ್ತವಾಗಿ ಅಳವಡಿಸಿಕೊಳ್ಳಬೇಕಾಗಿದ್ದು, ವಿಭಾಗೀಯ ನಿರ್ವಾಹಕರ ಪ್ರಯತ್ನಗಳು ಮತ್ತು ಅವುಗಳನ್ನು ಅಂದಾಜಿಸಿ ಸವಾಲುಗಳನ್ನು ಎದುರಿಸಬೇಕಾಗಿದೆ.

ಪರಿಸರ ಸುಸ್ಥಿರತೆ ವರದಿ ಕೈಪಿಡಿಗಾಗಿ ಲಿಂಕ್ ಬಳಸಬಹುದು

***



(Release ID: 1724503) Visitor Counter : 284