ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಲಸಿಕೆ ಕುರಿತ ಮಿಥ್ಯೆಗಳು ದೂರ


20214 ಜೂನ್ 2ರ ವರೆಗೆ ತಮಿಳುನಾಡಿಗೆ ಒಂದು ಕೋಟಿಗೂ ಅಧಿಕ ಕೋವಿಡ್ ಲಸಿಕೆ ವಿತರಣೆ

ರಾಜ್ಯದಲ್ಲಿ ಸದ್ಯ 7.24 ಲಕ್ಷ ಬಳಕೆ ಮಾಡಲಾಗದ ಡೋಸ್ ಲಸಿಕೆ ಲಭ್ಯ

2021ರ ಜೂನ್ 15 ರಿಂದ 30ರ ವರೆಗೆ ಭಾರತ ಸರ್ಕಾರದ ಮೂಲಕ ತಮಿಳುನಾಡಿಗೆ 18.36 ಲಕ್ಷ ಉಚಿತ ಕೋವಿಡ್ ಲಸಿಕೆ ಲಭ್ಯ

ಜೂನ್ 2021ರಲ್ಲಿ 18-44 ವರ್ಷದೊಳಗಿನ ಜನಸಂಖ್ಯೆಗೆ ಲಸಿಕೆ ನೀಡಲು ಹೆಚ್ಚುವರಿಯಾಗಿ 16.83 ಲಕ್ಷ ಡೋಸ್ ಲಸಿಕೆ ನೇರ ಖರೀದಿಗೆ ಲಭ್ಯ

Posted On: 03 JUN 2021 5:51PM by PIB Bengaluru

ಭಾರತ ಸರ್ಕಾರ ವರ್ಷದ ಜನವರಿ 16ರಿಂದೀಚೆಗೆ ಒಟ್ಟು ಸರ್ಕಾರಮನೋಭಾವದಡಿ ಪರಿಣಾಮಕಾರಿ ಲಸಿಕಾ ಆಂದೋಲನವನ್ನು ಕೈಗೊಳ್ಳಲು ರಾಜ್ಯಗಳು ಮತ್ತು ಕೇಂದ್ರಾಡಳಿತಗಳ ಪ್ರಯತ್ನಗಳಿಗೆ ಸಂಪೂರ್ಣ ಬೆಂಬಲ ನೀಡುತ್ತಿದೆ. ಲಸಿಕೆಗಳ ಲಭ್ಯತೆಯನ್ನು ಇನ್ನಷ್ಟು ವ್ಯವಸ್ಥಿತಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರ ಲಸಿಕೆ ಉತ್ಪಾದಕರೊಂದಿಗೆ ನಿರಂತರ ಸಂಪರ್ಕದಲ್ಲಿದೆ ಮತ್ತು 2021 ಮೇ 1 ರಿಂದೀಚೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಲವು ವಿಧದಲ್ಲಿ ನೇರ ಲಸಿಕೆ ಖರೀದಿ ಆಯ್ಕೆಯನ್ನು ನೀಡಿದೆ.

ಕೆಲವು ಮಾಧ್ಯಮಗಳಲ್ಲಿ ತಮಿಳುನಾಡಿನಲ್ಲಿ ಲಸಿಕೆಗಳ ಕೊರತೆ ಇದೆ ಎಂದು ವರದಿಯಾಗಿದೆ. ವರದಿಗಳೆಲ್ಲಾ ಸತ್ಯಕ್ಕೆ ದೂರವಾದವು ಮತ್ತು ಅವುಗಳಿಗೆ ಯಾವುದೇ ಆಧಾರವಿಲ್ಲ.

2021 ಜೂನ್ 2ರವರೆಗೆ ತಮಿಳುನಾಡಿಗೆ ಒಂದು ಕೋಟಿಗೂ ಅಧಿಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದ್ದು, ಪೈಕಿ 93.3 ಲಕ್ಷ ಡೋಸ್ ಅನ್ನು ಬಳಕೆ ಮಾಡಲಾಗಿದೆ. ಸದ್ಯ ರಾಜ್ಯದಲ್ಲಿ ಒಟ್ಟು 7.24 ಲಕ್ಷ ಡೋಸ್ ಲಸಿಕೆ ಲಭ್ಯವಿದೆ. ತಮಿಳುನಾಡು ಸರ್ಕಾರಕ್ಕೆ  ಭಾರತ ಸರ್ಕಾರದ ಮೂಲಕ ಜೂನ್ 2021 ತ್ರೈಮಾಸಿಕದ ಮೊದಲ ಮತ್ತು ಎರಡನೇ ತ್ರೈಮಾಸಿಕದಲ್ಲಿ ಎಷ್ಟು ಡೋಸ್ ಲಸಿಕೆ ಉಚಿತವಾಗಿ  ರಾಜ್ಯದ ಜನರಿಗೆ ನೀಡಲು ಲಭ್ಯವಾಗಿದೆ ಎಂಬ ಕುರಿತು ಮಾಹಿತಿಯನ್ನು ನೀಡಡಲಾಗಿದೆ. ಭಾರತ ಸರ್ಕಾರದ ಮೂಲಕ ಜೂನ್ 1 ರಿಂದ 15 ವರೆಗೆ ತಮಿಳುನಾಡಿಗೆ 7.48 ಲಕ್ಷ ಡೋಸ್ ಲಸಿಕೆ ಲಭ್ಯವಿದೆ. ಅಲ್ಲದೆ ಜೂನ್ 15 ರಿಂದ 30 ವರೆಗೆ ಭಾರತ ಸರ್ಕಾರದ ಮೂಲಕ ತಮಿಳುನಾಡಿಗೆ ಹೆಚ್ಚುವರಿಯಾಗಿ 18.36 ಲಕ್ಷ ಡೋಸ್ ಲಸಿಕೆ ಲಭ್ಯವಿದೆ

ಕೋವಿಡ್ ಲಸಿಕೆಯ ಒಟ್ಟಾರೆ ಲಭ್ಯತೆ ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರಾಸರಿ ಬಳಕೆ ಆಧರಿಸಿ ಲಸಿಕೆ ಹಂಚಿಕೆ ಮಾಡಲಾಗುತ್ತಿದೆ. ತಮಿಳುನಾಡಿಗೆ ಹೊಸ ಉದಾರೀಕೃತ ಬೆಲೆ ಮತ್ತು ರಾಷ್ಟ್ರೀಯ ಕೋವಿಡ್-19 ಲಸಿಕಾ ಕಾರ್ಯತಂತ್ರದಡಿ 18 ರಿಂದ 44 ವಯೋಮಾನದವರಿಗೆ ಲಸಿಕೆ ನೀಡಲು ಎಷ್ಟು ಡೋಸ್ ಲಸಿಕೆ ಇದೆ ಎಂಬ ಕುರಿತು ತಮಿಳುನಾಡಿಗೆ ಮಾಹಿತಿ ನೀಡಲಾಗಿದೆ. 2021 ಜೂನ್ ತಿಂಗಳಲ್ಲಿ ಮೂರನೇ ಹಂತದ ಲಸಿಕೆನೀಡಿಕೆಯಲ್ಲಿ 18 ರಿಂದ 44 ವರ್ಷದೊಳಗಿನ ಜನಸಂಖ್ಯೆಗೆ ಒಟ್ಟು 16.83 ಲಕ್ಷ ಡೋಸ್ ಲಸಿಕೆ ಲಭ್ಯವಿದೆ.

***


(Release ID: 1724154) Visitor Counter : 265