ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ದುರ್ಬಲ ಮತ್ತು ಆರ್ಥಿಕ ದುರ್ಬಲ ವರ್ಗಗಳ ಜನಸಂಖ್ಯೆಗೆ ಎನ್.ಎಫ್.ಎಸ್.ಎ. ಪಡಿತರ ಚೀಟಿ ನೀಡಲು ವಿಶೇಷ ಅಭಿಯಾನ ಆರಂಭಿಸಲು ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರದ ಸಲಹೆ
Posted On:
03 JUN 2021 10:35AM by PIB Bengaluru
ಪ್ರಸಕ್ತ ಕೋವಿಡ್ -19 ಸನ್ನಿವೇಶದಲ್ಲಿ, ರಾಷ್ಟ್ರೀಯ ಆಹಾರ ಭದ್ರತೆ ಕಾಯಿದೆ ಅಡಿಯಲ್ಲಿ ಅತಿ ದುರ್ಬಲ ಜನಸಂಖ್ಯೆಯ ಎಲ್ಲ ಗುರುತಿಸಲಾದ ಅರ್ಹ ಆರ್ಥಿಕ ದುರ್ಬಲರು ಮತ್ತು ದುರ್ಬಲ ವರ್ಗದವರು ಬಂದಿದ್ದಾರೆ ಎಂಬುದನ್ನು ಖಾತ್ರಿ ಪಡಿಸುವುದು ಅತ್ಯಂತ ಮಹತ್ವದ್ದೆನಿಸುತ್ತದೆ.
ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆಯು 2021ರ ಜೂನ್ 2ರಂದು ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಈ ಸಂಬಂಧ ಸಲಹೆ ನೀಡಿದ್ದು, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅವರವರ ಎನ್.ಎಫ್.ಎಸ್.ಎ. ಮಿತಿಯ ವ್ಯಾಪ್ತಿಯಲ್ಲಿ ಲಭ್ಯತೆಯನ್ನು ಬಳಸಿಕೊಂಡು ತೀರಾ ದುರ್ಬಲ ಮತ್ತು ಆರ್ಥಿಕವಾಗಿ ಹಿಂದುಳಿದವರನ್ನು ಗುರುತಿಸಿ ಅವರಿಗೆ, ಎನ್.ಎಫ್.ಎಸ್.ಎ. ಪಡಿತರ ಚೀಟಿ ನೀಡಲು ವಿಶೇಷ ಅಭಿಯಾನ ಆರಂಭಿಸುವಂತೆ ಸೂಚಿಸಿದೆ.
ಸಮಾಜದ ದುರ್ಬಲ ಮತ್ತು ಅತ್ಯಂತ ದುರ್ಬಲ ವರ್ಗಗಳನ್ನು ಅಂದರೆ ಬೀದಿಯಲ್ಲೇ ಬದುಕು ನಡೆಸುವವರು, ಚಿಂದಿ ಆಯುವವರು, ರಿಕ್ಷಾ ಎಳೆಯುವವರು ಮೊದಲಾದವರನ್ನು ತಲುಪಲು ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಇಲಾಖೆ ಕರೆ ನೀಡಿದೆ. ಎನ್.ಎಫ್.ಎಸ್.ಎ. ಅಡಿಯಲ್ಲಿ ಅರ್ಹ ವ್ಯಕ್ತಿಗಳು/ಮನೆಗಳನ್ನು ಗುರುತಿಸುವ ಮತ್ತು ಅವರಿಗೆ ಪಡಿತರ ಚೀಟಿಗಳನ್ನು ನೀಡುವ ಕಾರ್ಯ ನಿರ್ವಹಣಾ ಜವಾಬ್ದಾರಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಳೊಂದಿಗೆ ಇರುತ್ತದೆ.
ಸಲಹೆಗಾಗಿ ಇಲ್ಲಿ ಕ್ಲಿಕ್ ಮಾಡಿ
***
(Release ID: 1724055)
Visitor Counter : 310