ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ದೇಶೀಯ ಲಸಿಕೆ ಉತ್ಪಾದನೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರದಿಂದ ಕ್ರಮ


ಭಾರತ್ ಬಯೋಟೆಕ್ ನೊಂದಿಗೆ ತಂತ್ರಜ್ಞಾನ ವರ್ಗಾವಣೆ ವ್ಯವಸ್ಥೆಯಡಿ ಪ್ರತಿ ವರ್ಷ 22.8 ಕೋಟಿ ಡೋಸ್ ಕೊವ್ಯಾಕ್ಸಿನ್ ಉತ್ಪಾದಿಸಲಿರುವ ಹಾಫ್ಕಿನ್ ಬಯೋಫಾರ್ಮಾ

Posted On: 02 JUN 2021 11:10AM by PIB Bengaluru

ಅರ್ಹ ಜನಸಂಖ್ಯೆಗೆ ಆದಷ್ಟು ಶೀಘ್ರ ಲಸಿಕೆ ಹಾಕಬೇಕೆಂಬ ಗುರಿಯೊಂದಿಗೆ ದೇಶದಲ್ಲಿ ಕೇಂದ್ರ ಸರ್ಕಾರದ ನೆರವಿನಿಂದ ದೇಶೀಯ ಲಸಿಕೆ ಉತ್ಪಾದನೆ ಸಾಮರ್ಥ್ಯವನ್ನು ಕ್ರಮೇಣ ವೃದ್ಧಿಸಲಾಗುತ್ತಿದೆ.

ಉಪಕ್ರಮದ ಭಾಗವಾಗಿ ಜೈವಿಕ ತಂತ್ರಜ್ಞಾನ ಇಲಾಖೆಯ ನೆರವಿನೊಂದಿಗೆ ಆತ್ಮನಿರ್ಭರ ಭಾರತ್ 3.0 ಮಿಷನ್ ಕೋವಿಡ್ ಸುರಕ್ಷಾ ಅಡಿಯಲ್ಲಿ ಮೂರು ಸಾರ್ವಜನಿಕ ವಲಯದ ಉದ್ದಿಮೆಗಳಿಗೆ ನೆರವು ನೀಡಲಾಗುತ್ತಿದೆ. ಉದ್ಯಮಗಳೆಂದರೆ

  1. ಹಾಫ್ಕಿನ್ ಬಯೋಫಾರ್ಮಾಸಿಟಿಕಲ್ ಕಾರ್ಪೊರೇಷನ್ ಲಿಮಿಟೆಡ್, ಮುಂಬೈ
  2. ಇಂಡಿಯನ್ ಇಮ್ಯುನೊಲಾಜಿಕಲ್ಸ್ ಲಿಮಿಟೆಡ್, ಹೈದ್ರಾಬಾದ್ ಮತ್ತು
  3. ಭಾರತ್ ಇಮ್ಯುನೊಲಾಜಿಕಲ್ಸ್ ಮತ್ತು ಬಯೋಲಾಜಿಕಲ್ಸ್ ಲಿಮಿಟೆಡ್, ಬುಲಂದಶಹರ್, ಉತ್ತರ ಪ್ರದೇಶ

ಹಾಫ್ಕಿನ್ ಬಯೋಫಾರ್ಮಾ, ಮಹಾರಾಷ್ಟ್ರ ರಾಜ್ಯದ ಪಿಎಸ್ ಯು ಆಗಿದ್ದು, ಇದು ಹೈದ್ರಾಬಾದ್ ಭಾರತ್ ಬಯೋಟೆಕ್ ಲಿಮಿಟೆಡ್ ನೊಂದಿಗೆ ತಂತ್ರಜ್ಞಾನ ವರ್ಗಾವಣೆ ವ್ಯವಸ್ಥೆಯಡಿ ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆಗೆ ಸಿದ್ಧವಾಗುತ್ತಿದೆ. ಕಂಪನಿಯ ಪಾರೆಲ್ ಸಂಕೀರ್ಣದಲ್ಲಿ ಲಸಿಕೆ ಉತ್ಪಾದನೆ ಆಗಲಿದೆ.

 

ಹಾಫ್ಕಿನ್ ಬಯೋಫಾರ್ಮಾದ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಸಂದೀಪ್ ರಾಥೋಡ್, ಕಂಪನಿ ಒಂದು ವರ್ಷದಲ್ಲಿ 22.8 ಕೋಟಿ ಡೋಸ್ ಕೊವ್ಯಾಕ್ಸಿನ್ ಲಸಿಕೆಯನ್ನು ಉತ್ಪಾದಿಸಲು ಉದ್ದೇಶಿಸಿದೆ ಎಂದು ಹೇಳಿದ್ದಾರೆ. ಕೊವ್ಯಾಕ್ಸಿನ್ ಉತ್ಪಾದನೆ ಕೈಗೊಳ್ಳಲು ಹಾಫ್ಕಿನ್ ಬಯೋಫಾರ್ಮಾಗೆ ಕೇಂದ್ರ ಸರ್ಕಾರ 65 ಕೋಟಿ ಮತ್ತು ಮಹಾರಾಷ್ಟ್ರ ಸರ್ಕಾರ 94 ಕೋಟಿ ರೂ. ಅನುದಾನ ಒದಗಿಸಿದೆ’’ ಎಂದು ಅವರು ಹೇಳಿದರು.

ನಮಗೆ 8 ತಿಂಗಳ ಕಾಲಮಿತಿ ನೀಡಲಾಗಿದ್ದು, ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ಲಸಿಕೆ ಉತ್ಪಾದನೆ ಎರಡು ಹಂತಗಳ ಪ್ರಕ್ರಿಯೆಯನ್ನು ಒಳಗೊಂಡಿದೆ ಔಷಧ ವಸ್ತು ಮತ್ತು ಅಂತಿಮ ಔಷಧ ಉತ್ಪನ್ನ. ಔಷಧ ವಸ್ತು ಉತ್ಪಾದನೆಗೆ ನಾವು ಜೈವಿಕ ಸುರಕ್ಷತಾ ಪ್ರಮಾಣ – 3(ಬಿಎಸ್ಎಲ್ 3) ಸೌಕರ್ಯವನ್ನು ನಿರ್ಮಾಣ ಮಾಡುವ ಅಗತ್ಯವಿದೆ. ಹಾಫ್ಕಿನ್ ಈಗಾಗಲೇ ಫಿಲ್ ಫಿನಿಷ್ ಸೌಕರ್ಯವನ್ನು ಹೊಂದಿದೆಎಂದು ಮೂಲತಃ ವೈದ್ಯರಾಗಿ ನಂತರ ಐಎಎಸ್ ಅಧಿಕಾರಿಯಾಗಿ ಪರಿವರ್ತನೆಗೊಂಡಿರುವ ರಾಥೋಡ್ ಹೇಳಿದರು. ಬಿಎಸ್ಎಲ್ 3 ನಂತಹ ಸೌಲಭ್ಯಗಳಿಗೆ ಅನ್ವಯವಾಗುವ ಸುರಕ್ಷತಾ ಮಾನದಂಡವಾಗಿದ್ದು, ಅಲ್ಲಿನ ಕೆಲಸವು ಸೂಕ್ಷ್ಮ ಜೀವಿಗಳನ್ನು ಒಳಗೊಂಡಿರುತ್ತದೆ, ಹಾಗಾಗಿ ಇನ್ಹಾಲೇಷನ್ ಮೂಲಕ ಗಂಭೀರ ಕಾಯಿಲೆಗಳು ಉಂಟಾಗುವ ಸಾಧ್ಯತೆ ಇರುತ್ತದೆ.

ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಬಳಸಿಕೊಂಡು ಲಸಿಕೆ ಉತ್ಪಾದನೆ ಸಾಮರ್ಥ್ಯ ವೃದ್ಧಿಸುವುದರಿಂದ ದೇಶದಲ್ಲಿ ಲಸಿಕೆ ಉತ್ಪಾದನಾ ಸಾಮರ್ಥ್ಯ ದೀರ್ಘಾವಧಿಯವರೆಗೆ ಮುಂದುವರಿಯುವುದಲ್ಲದೆ ಬೃಹತ್ ಪ್ರಮಾಣದಲ್ಲಿ ಲಸಿಕೆ ಆಂದೋಲನಕ್ಕೆ ನೆರವಾಗಲಿದೆ’’ ಎಂದು ಜೈವಿಕ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಮತ್ತು ಬಿರಾಕ್(ಜೈವಿಕ ತಂತ್ರಜ್ಞಾನ ಕೈಗಾರಿಕಾ ಸಂಶೋಧನಾ ನೆರವು ಮಂಡಳಿ) ಅಧ್ಯಕ್ಷರಾದ ಡಾ. ರೇಣು ಸ್ವರೂಪ್ ಹೇಳಿದ್ದಾರೆ.

ಹಾಫ್ಕಿನ್ ಬಯೋಫಾರ್ಮಾಸಿಟಿಕಲ್ ಕಾರ್ಪೊರೇಷನ್ ಲಿಮಿಟೆಡ್ 122 ವರ್ಷಗಳ ಹಿಂದಿನ ಹಾಫ್ಕಿನ್ ಸಂಸ್ಥೆಯ ಒಂದು ವಿಭಜಿತ ಅಂಗ ಸಂಸ್ಥೆಯಾಗಿದೆ. ಹಾಫ್ಕಿನ್ ಸಂಸ್ಥೆ ದೇಶದ ಅತ್ಯಂತ ಹಳೆಯ ಜೈವಿಕ ವೈದ್ಯಕೀಯ ಸಂಶೋಧನಾ ಸಂಸ್ಥೆಯಾಗಿದ್ದು, ಇದಕ್ಕೆ ಪ್ಲೇಗ್ ಗೆ ಲಸಿಕೆ ಕಂಡು ಹಿಡಿದ ರಷ್ಯಾದ ವೈರಾಣು ತಜ್ಞ ಡಾ. ವಾಲ್ಡೆಮರ್ ಹಾಫ್ಕಿನ್ ಅವರ ಹೆಸರನ್ನು ಇಡಲಾಗಿದೆ.

ಮೂಲಗಳು:

  • ಜೈವಿಕ ತಂತ್ರಜ್ಞಾನ ಇಲಾಖೆಯ ಹಿನ್ನೆಲೆಯ ಟಿಪ್ಪಣಿ
  • ಮುಂಬೈನ ಹಾಫ್ಕಿನ್ ಬಯೋಫಾರ್ಮಾದ ವ್ಯವಸ್ಥಾಪಕ ನಿರ್ದೇಶಕ ಡಾ. ಸಂದೀಪ್ ರಾಥೋಡ್ ಅವರ ಸಂದರ್ಶನ

Message for TV News Channels / YouTube channels.

Haffkine Biopharma video feed available through ANI

***



(Release ID: 1723684) Visitor Counter : 215