ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಸರ್ಕಾರದ ಪ್ರಯತ್ನವು ಕೋವಿಡ್ 19 ಔಷಧಿಗಳ ಪೂರೈಕೆ - ಬೇಡಿಕೆಯ ಸಮತೋಲನವನ್ನು ಖಾತ್ರಿಪಡಿಸಿತು


ರೆಮ್ ಡಿಸಿವಿರ್ ನ  98.87 ಲಕ್ಷ ಬಾಟಲುಗಳನ್ನು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸಂಸ್ಥೆಗಳಿಗೆ ಏಪ್ರಿಲ್ 21 ರಿಂದ ಮೇ 30 ರವರೆಗೆ ಹಂಚಿಕೆ ಮಾಡಲಾಗಿದೆ

ರೆಮ್ ಡಿಸಿವಿರ್ ಉತ್ಪಾದನೆಯು ಹತ್ತು ಪಟ್ಟು ಹೆಚ್ಚಾಗಿದೆ

ಆಂಫೊಟೆರಿಸಿನ್ ಬಿ ಯ 2,70,060 ಬಾಟಲುಗಳನ್ನು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸಂಸ್ಥೆಗಳಿಗೆ 11 ಮೇ 20 ರಿಂದ 30 ಮೇ 2021 ರವರೆಗೆ ಹಂಚಿಕೆ ಮಾಡಲಾಗಿದೆ

ಕೋವಿಡ್ 19 ಸಂಬಂಧಿತ ಔಷಧಿಗಳ ಲಭ್ಯತೆಯನ್ನು ನಿರಂತರವಾಗಿ ಪರಿಶೀಲಿಸಲಾಗುತ್ತಿದೆ

Posted On: 01 JUN 2021 4:48PM by PIB Bengaluru

ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಸರಕಾರದ ಸತತ ಪ್ರಯತ್ನದಿಂದಾಗಿ ದೇಶಾದ್ಯಂತ ಕೋವಿಡ್ 19 ಔಷಧಿಗಳ ಪೂರೈಕೆ - ಬೇಡಿಕೆಯ ಸಮತೋಲನ ಸ್ಥಿರವಾಗಿದೆ ಎಂದು ಕೇಂದ್ರ ಸಚಿವರಾದ ಶ್ರೀ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

ರೆಮ್ ಡಿಸಿವಿರ್ ಒಟ್ಟು 98.87 ಲಕ್ಷ ಬಾಟಲುಗಳನ್ನು (ವೈಯಲ್) ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸಂಸ್ಥೆಗಳಿಗೆ  ಏಪ್ರಿಲ್ 21 ರಿಂದ ಮೇ 30 ರವರೆಗೆ ಹಂಚಿಕೆ ಮಾಡಲಾಗಿದೆರೆಮ್ ಡಿಸಿವಿರ್ ಉತ್ಪಾದನೆಯು ಹತ್ತು ಪಟ್ಟು ಹೆಚ್ಚಾಗಿದೆ ಮತ್ತು ಬೇಡಿಕೆಗಿಂತ ಹೆಚ್ಚು ಪೂರೈಕೆಗೆ ಕಾರಣವಾಗಿದೆ. ತೀವ್ರ ಗತಿಯ ಉತ್ಪಾದನೆಯೊಂದಿಗೆ, ಜೂನ್ ಅಂತ್ಯದವರೆಗೆ 91 ಲಕ್ಷ ಬಾಟಲುಗಳನ್ನು ಪೂರೈಸಲು ನಾವು ಯೋಜಿಸುತ್ತಿದ್ದೇವೆ ಎಂದು ಅವರು ಹೇಳಿದರು. 2021 ಏಪ್ರಿಲ್ 25 ರಿಂದ ಮೇ 30 ರವರೆಗೆ ಸಿಪ್ಲಾ 400 ಮಿ.ಗ್ರಾಂನ 11,000 ಬಾಟಲುಗಳು ಮತ್ತು 80 ಮಿಗ್ರಾಂ ಟೋಸಿಲಿಜುಮಾಬ್ನ 50,000 ಬಾಟಲುಗಳನ್ನು ಆಮದು ಮಾಡಿಕೊಂಡಿದೆ ಎಂದು ಅವರು ಮಾಹಿತಿ ನೀಡಿದರು. ಇದಲ್ಲದೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 400 ಮಿ.ಗ್ರಾಂನ 1002 ಬಾಟಲುಗಳು ಮತ್ತು 80 ಮಿ.ಗ್ರಾಂನ 50,024 ಬಾಟಲುಗಳನ್ನು ಮೇ ತಿಂಗಳಲ್ಲಿ ದೇಣಿಗೆ ಮೂಲಕ ಸ್ವೀಕರಿಸಿದೆ. ಇದಲ್ಲದೆ, 80 ಮಿ.ಗ್ರಾಂನ 20,000 ಬಾಟಲುಗಳು ಮತ್ತು 200 ಮಿ.ಗ್ರಾಂನ 1000 ಬಾಟಲುಗಳು ಜೂನ್ನಲ್ಲಿ ಬರುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.

2021 ಮೇ 11 ರಿಂದ ಮೇ 30 ರವರೆಗೆ ಆಂಫೊಟೆರಿಸಿನ್ ಬಿ ಸುಮಾರು 2,70,060 ಬಾಟಲುಗಳನ್ನು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಮತ್ತು ಕೇಂದ್ರ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಶ್ರೀ ಗೌಡ ಮಾಹಿತಿ ನೀಡಿದರು. ಇದಲ್ಲದೆ ಮೇ ಮೊದಲ ವಾರದಂದು ತಯಾರಕರು ರಾಜ್ಯಗಳಿಗೆಂದು ತಯಾರಿಸಿದ 81651 ಬಾಟಲುಗಳ ಹೆಚ್ಚುವರಿ ಸರಬರಾಜಾಗಿದೆ

ಕೋವಿಡ್ ಚಿಕಿತ್ಸೆಯಲ್ಲಿ ಬಳಸುವ ಇತರ ಔಷಧಿಗಳ ಉತ್ಪಾದನೆ, ಪೂರೈಕೆ ಮತ್ತು  ದಾಸ್ತಾನಿನ ಪರಿಸ್ಥಿತಿ ಅಂದರೆ  ಡೆಕ್ಸಮೆಥಾಸೊನ್, ಮೀಥೈಲ್ಪ್ರೆಡ್ನಿಸೋಲೋನ್, ಎನೋಕ್ಸಪರಿನ್, ಫಾವಿಪಿರವಿರ್, ಐವರ್ಮೆಕ್ಟಿನ್, ಡೆಕ್ಸಮೆಥಾಸೊನ್ ಮಾತ್ರೆಗಳನ್ನು ಸಹ ವಾರಕ್ಕೊಮ್ಮೆ ಪರಿಶೀಲಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಉತ್ಪಾದನೆಯನ್ನು ಹೆಚ್ಚಿಸಲಾಗಿದೆ ಮತ್ತು ಬೇಡಿಕೆಯನ್ನು ಪೂರೈಸಲು ಲಭ್ಯವಿದೆ ಎಂದು ಅವರು ಹೇಳಿದರು.

ಔಷಧದ ಬೇಡಿಕೆಯನ್ನು ಈಡೇರಿಸಲು ಸಾಧ್ಯವಾಗುವಂತೆ ಅಸ್ತಿತ್ವದಲ್ಲಿರುವ ಮತ್ತು ಹೊಸ ತಯಾರಕರೊಂದಿಗೆ ಕೋವಿಡ್ 19 ಔಷಧಿಗಳ ಲಭ್ಯತೆಯನ್ನು ಸರ್ಕಾರ ನಿರಂತರವಾಗಿ ಪರಿಶೀಲಿಸುತ್ತಿದೆ ಎಂದು ಶ್ರೀ ಗೌಡ ಭರವಸೆ ನೀಡಿದರು.

***



(Release ID: 1723503) Visitor Counter : 195