ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಆಧುನೀಕರಿಸಿದ ಕೋವಿಡ್-19 ಮಾಹಿತಿ
ಪ್ರಕಟಣಾ ದಿನಾಂಕ:
31 MAY 2021 9:30AM by PIB Bengaluru
ಕೋವಿಡ್-19 ದೈನಂದಿನ ಸಂಖ್ಯೆಯಲ್ಲಿ ಕಳೆದ 50 ದಿನಗಳಲ್ಲಿ ಅತಿ ಕಡಿಮೆ 1.52 ಲಕ್ಷ ಪ್ರಕರಣಗಳು ದಾಖಲು: ಹೊಸ ಪ್ರಕರಣಗಳಲ್ಲಿ ಇಳಿಕೆ ಪ್ರವೃತ್ತಿ.
ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತಷ್ಟು ಇಳಿಕೆಯಾಗಿದ್ದು, 20,26,092 ರಷ್ಟಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ 88,416 ರಷ್ಟು ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ.
ಈವರೆಗೆ ಒಟ್ಟು 2,56,92,342 ಮಂದಿ ಚೇತರಿಸಿಕೊಂಡಿದ್ದು, ಕಳೆದ 24 ಗಂಟೆಗಳಲ್ಲಿ 2,38,022 ಮಂದಿ ಗುಣಮುಖರಾಗಿದ್ದಾರೆ.
ಸತತ 18 ನೇ ದಿನವೂ ಸಹ ಚೇತರಿಕೆ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಚೇತರಿಕೆ ಪ್ರಮಾಣ ಶೇ 91.04 ರಷ್ಟಿದೆ.
ವಾರದ ಪಾಸಿಟಿವಿಟಿ ದರ ಶೇ 9.04 ರಷ್ಟಿದೆ.
ದೈನಂದಿನ ಪಾಸಿಟಿವಿಟಿ ದರ ಶೇ 9.07 ರಷ್ಟಿದ್ದು, ಕಳೆದ 7 ದಿನಗಳಲ್ಲಿ ಶೇ 10 ಕ್ಕೂ ಕಡಿಮೆ ಪಾಸಿಟಿವಿಟಿ ದರ ದಾಖಲಾಗಿದೆ.
ಇದೇ ಸಂದರ್ಭದಲ್ಲಿ ಸೋಂಕು ಪತ್ತೆ ಪರೀಕ್ಷೆಯನ್ನೂ ಸಹ ಹೆಚ್ಚಿಸಲಾಗಿದ್ದು, ಒಟ್ಟು ಸೋಂಕು ಪತ್ತೆ ಪರೀಕ್ಷೆ 34.48 ಕೋಟಿ ಗೆ ಹೆಚ್ಚಳವಾಗಿದೆ.
ದೇಶಾದ್ಯಂತ ಲಸಿಕಾ ಅಭಿಯಾನದಡಿ 21.3 ಕೋಟಿ ಡೋಸ್ ಲಸಿಕೆಯನ್ನು ಹಾಕಲಾಗಿದೆ.
***
(ಪ್ರಕಟಣೆ ಐ.ಡಿ.: 1723058)
ವಿಸಿಟರ್ ಕೌಂಟರ್ : 224
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam