ನಾಗರೀಕ ವಿಮಾನಯಾನ ಸಚಿವಾಲಯ
ಡ್ರೋನ್ ಕಾರ್ಯಾಚರಣೆಗಳಿಗೆ ಎನ್ ಪಿಎನ್ ಟಿ (ನೋ ಪರ್ಮಿಷನ್ ಮತ್ತು ನೋ ಟೇಕ್ ಆಫ್ ) ಯಡಿ 166 ಹೆಚ್ಚುವರಿ ಹಸಿರು ವಲಯ ತಾಣಗಳಿಗೆ ಅನುಮೋದನೆ
Posted On:
29 MAY 2021 4:01PM by PIB Bengaluru
ನಾಗರಿಕ ವಿಮಾನಯಾನ ಸಚಿವಾಲಯ ದೇಶದಲ್ಲಿ ಡ್ರೋನ್ ಕಾರ್ಯಾಚರಣೆಗಳನ್ನು ಉತ್ತೇಜಿಸಲು ಮತ್ತು ಅದಕ್ಕೆ ಸಹಕಾರ ಮತ್ತು ಸುಗಮಗೊಳಿಸಲು 166 ಹೆಚ್ಚುವರಿ ಹಸಿರು ವಲಯ ತಾಣಗಳಿಗೆ “ನೋ ಪರ್ಮಿಷನ್ – ನೋ ಟೇಕ್ ಆಫ್ ’’ (ಎನ್ ಪಿಎನ್ ಟಿ) ಅಡಿ ಅನುಮೋದನೆ ನೀಡಿದೆ. ಅನುಮೋದಿತ ಸ್ಥಳಗಳಲ್ಲಿ ನೆಲದ ಮಟ್ಟದಿಂದ(ಎಜಿಎಲ್) 400 ಅಡಿ ಎತ್ತರದವರೆಗೆ ಡ್ರೋನ್ ಬಳಕೆಗೆ ಅವಕಾಶವಿದೆ. ಈ ಮೊದಲು ಅನುಮೋದನೆ ನೀಡಲಾಗಿದ್ದ 66 ಹಸಿರು ವಲಯಗಳಿಗೆ ಹೆಚ್ಚುವರಿಯಾಗಿ ಈ ವಲಯಗಳಿಗೆ ಅನುಮೋದನೆ ನೀಡಲಾಗಿದೆ. ಅನುಮೋದನೆ ನೀಡಲಾಗಿರುವ ಹಸಿರು ವಲಯ ಘಟಕಗಳ ಮಾಹಿತಿ ಡಿಜಿಟಲ್ ಸ್ಕೈ ಫ್ಲಾಟ್ ಫಾರಂ (https://digitalsky.dgca.gov.in). ನಲ್ಲಿ ಲಭ್ಯವಿದೆ.
ಡಿಜಿಸಿಎ ಪ್ರಕಾರ “ಎನ್ ಪಿಎನ್ ಟಿ ಅಥವಾ ನೋ ಪರ್ಮಿಶನ್ – ನೋ ಟೇಕ್ ಆಫ್ ಅನುಸರಣೆಯಲ್ಲಿ, ಪ್ರತಿ ರಿಮೋಟ್ ಪೈಲೆಟ್ ಏರ್ ಕ್ರಾಫ್ಟ್(ನ್ಯಾನೊ ಹೊರತುಪಡಿಸಿ) ಭಾರತದಲ್ಲಿ ಕಾರ್ಯಾಚಾರಣೆ ಆರಂಭಿಸುವ ಮುನ್ನ ಡಿಜಿಟಲ್ ಸ್ಕೈ ಫ್ಲಾಟ್ ಫಾರಂ ಮೂಲಕ ಅಧಿಕೃತ ಅನುಮತಿಯನ್ನು ಪಡೆದುಕೊಳ್ಳಬೇಕಾಗುತ್ತದೆ. ನೀತಿಯ ಪ್ರಕಾರ ಆನ್ಲೈನ್ ಪೋರ್ಟಲ್ ನಲ್ಲಿ ಬಳಕೆದಾರರು ನೋಂದಣಿ ಮಾಡಿಕೊಳ್ಳಬೇಕು. ದೂರದಿಂದಲೇ ಪೈಲಟ್ ಮಾಡಿದ ವಿಮಾನಗಳಿಗೆ ರಾಷ್ಟ್ರೀಯ ಮಾನವ ರಹಿತ ಸಂಚಾರಿ ನಿರ್ವಹಣಾ ವ್ಯವಸ್ಥೆಯಾಗಿ ಕಾರ್ಯನಿರ್ಹಿಸುವ ಆನ್ ಲೈನ್ ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂಬುದನ್ನು ಈ ನೀತಿಯು ಕಡ್ಡಾಯಗೊಳಿಸುತ್ತದೆ. ಈ ಅನುಮೋದಿತ ವಲಯಗಳಲ್ಲಿ ಹಾರಾಟ ನಡೆಸಲು ವಿಮಾನಗಳ ಹಾರಾಟಕ್ಕೆ ಸಮಯ ಹಾಗೂ ಸ್ಥಳದ ಮಾಹಿತಿ ಅಗತ್ಯವಿದ್ದು, ಅದನ್ನು ಡಿಜಿಟಲ್ ಸ್ಕೈ ಪೋರ್ಟಲ್ ಅಥವಾ ಆಪ್ ಮೂಲಕ ನೀಡಬಹುದು. ಹಸಿರು ವಲಯದ ತಾಣಗಳಲ್ಲಿನ ಡ್ರೋನ್ ವಿಮಾನಗಳು 2021ರ ಮಾರ್ಚ್ 12ರ ಮಾನವರಹಿತ ವಿಮಾನ ವ್ಯವಸ್ಥೆ(ಯುಎಎಸ್) ನಿಯಮಗಳು 2021 ಮತ್ತು ನಾಗರಿಕ ವಿಮಾನಯಾನ ಸಚಿವಾಲಯ ಹೊರಡಿಸಿದ ಇತರೆ ಸಂಬಂಧಿಸಿದ ಆದೇಶಗಳು/ಮಾರ್ಗಸೂಚಿಗಳಿಗೆ ಅನುಗುಣವಾಗಿರಬೇಕು.
ಅನುಮೋದಿತ ವಲಯಗಳ ವಿವರ ರಾಜ್ಯವಾರು ಪಟ್ಟಿ ಹೀಗಿಗೆ
ರಾಜ್ಯ
|
ಸ್ಥಳಗಳ ಸಂಖ್ಯೆ
|
ಆಂಧ್ರಪ್ರದೇಶ
|
04
|
ಛತ್ತೀಸ್ ಗಢ
|
17
|
ಗುಜರಾತ್
|
02
|
ಜಾರ್ಖಂಡ್
|
30
|
ಕರ್ನಾಟಕ
|
06
|
ಮಧ್ಯಪ್ರದೇಶ
|
24
|
ಮಹಾರಾಷ್ಟ್ರ
|
22
|
ಒಡಿಶಾ
|
30
|
ಪಂಜಾಬ್
|
01
|
ರಾಜಸ್ಥಾನ
|
06
|
ತಮಿಳುನಾಡು
|
07
|
ತೆಲಂಗಾಣ
|
09
|
ಉತ್ತರ ಪ್ರದೇಶ
|
08
|
Click here for the list of approved green zone sites with location names
***
(Release ID: 1722733)
Visitor Counter : 269