ಪ್ರಧಾನ ಮಂತ್ರಿಯವರ ಕಛೇರಿ

ಚಂಡಮಾರುತ ಯಾಸ್ ಪರಿಣಾಮ ಪರಿಶೀಲನೆಗೆ ಸಭೆ ನಡೆಸಿದ ಪ್ರಧಾನ ಮಂತ್ರಿ


ಚಂಡಮಾರುತ ಯಾಸ್ ನಿಭಾವಣೆಗೆ ಎನ್.ಡಿ.ಆರ್.ಎಫ್. ನ 106 ತಂಡಗಳ ನಿಯೋಜನೆ

ಸಾಧ್ಯವಾದಷ್ಟು ಬೇಗ ಸಾಮಾನ್ಯ ಜನಜೀವನ ಮರುಸ್ಥಾಪನೆಯಾಗುವಂತೆ ಖಾತ್ರಿಪಡಿಸಿ: ಪ್ರಧಾನ ಮಂತ್ರಿ

Posted On: 27 MAY 2021 3:50PM by PIB Bengaluru

ಚಂಡಮಾರುತ ಯಾಸ್ ಪರಿಣಾಮವನ್ನು ಪರಾಮರ್ಶಿಸಲು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಭೆ ನಡೆಸಿದರು. ಸಿದ್ಧತೆ, ಹಾನಿಯ ಮೌಲ್ಯಮಾಪನ ಮತ್ತು ಸಂಬಂಧಿ ವಿವಿಧ ವಿಷಯಗಳ ಬಗ್ಗೆ ಅಧಿಕಾರಿಗಳು ವಿವರಗಳನ್ನು ಒದಗಿಸಿದರು.

ಪಶ್ಚಿಮ ಬಂಗಾಳ / ಒಡಿಶಾಗಳಲ್ಲಿ ತಲಾ 46 ತಂಡಗಳು ಸಹಿತ  ಒಟ್ಟು 106 ಎನ್.ಡಿ.ಆರ್.ಎಫ್. ತಂಡಗಳನ್ನು ನಿಯೋಜಿಸಲಾಗಿದ್ದು ಅವುಗಳು 1000 ಕ್ಕೂ ಅಧಿಕ ಮಂದಿಯನ್ನು ರಕ್ಷಿಸಿರುವ ಬಗ್ಗೆ ಮತ್ತು ರಸ್ತೆಗೆ ಬಿದ್ದ 2500 ಕ್ಕೂ ಅಧಿಕ ಮರಗಳು, ತಂತಿ ಕಂಭಗಳನ್ನು ತೆರವು ಮಾಡಿರುವ ಬಗ್ಗೆ ಚರ್ಚಿಸಲಾಯಿತು. ರಕ್ಷಣಾ ಪಡೆಗಳಾದ ಭೂ ಸೇನೆ ಮತ್ತು ಕೋಸ್ಟ್ ಗಾರ್ಡ್ ಗಳು ನೀರಿನಿಂದಾವೃತವಾಗಿದ್ದ ಪ್ರದೇಶಗಳಿಂದ ಜನರನ್ನು ಪಾರು ಮಾಡಿದರೆ, ನೌಕಾದಳ ಮತ್ತು ವಾಯು ಪಡೆಗಳು ಸನ್ನಧ ಸ್ಥಿತಿಯಲ್ಲಿದ್ದವು.

ಚಂಡಮಾರುತ ಯಾಸ್ ನಿಂದಾದ ಹಾನಿಯ ಮೌಲ್ಯಮಾಪನದಲ್ಲಿ ರಾಜ್ಯಗಳು ತೊಡಗಿರುವ ನಡುವೆಯೇ ಖಚಿತವಾದ ಮುನ್ಸೂಚನೆ, ಜನತೆಗೆ ಸಮರ್ಪಕವಾದ ಸಂವಹನ ತಿಳುವಳಿಕೆಯ ಮಾಹಿತಿ ರವಾನೆ , ಮತ್ತು ರಾಜ್ಯಗಳು ಹಾಗು ಕೇಂದ್ರೀಯ ಏಜೆನ್ಸಿಗಳಿಂದ ಚಂಡಮಾರುತ ಪೀಡಿತ ಪ್ರದೇಶಗಳ ಜನರ ಸಕಾಲಿಕ ಸ್ಥಳಾಂತರ ಕಾರ್ಯಾಚರಣೆಯಿಂದಾಗಿ ಮಾನವ ಜೀವಹಾನಿ ಪ್ರಮಾಣ ಅತ್ಯಂತ ಕಡಿಮೆಯಾಗಿದ ಎಂದು ಲಭ್ಯ ಪ್ರಾಥಮಿಕ ವರದಿಗಳು ಹೇಳಿವೆ. ಇದೇ ವೇಲೆ ಜಲಾವ್ರತಗೊಂಡ ಪ್ರದೇಶಗಳಲ್ಲಿ ಹಾನಿ ಸಂಭವಿಸಿದ್ದು, ಅದನ್ನು ಅಂದಾಜು ಮಾಡಲಾಗುತ್ತಿದೆ. ಚಂಡಮಾರುತ ಪೀಡಿತ ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್ ಮತ್ತು ಟೆಲಿಕಾಂ ಸೇವೆಯನ್ನು ಮರುಸ್ಥಾಪಿಸಲಾಗಿದೆ.

ಚಂಡಮಾರುತ ಒಡ್ಡಿದ ಸವಾಲುಗಳಿಗೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸುವಲ್ಲಿ ಕೇಂದ್ರೀಯ ಮತ್ತು ರಾಜ್ಯಗಳ ಏಜೆನ್ಸಿಗಳು ಅನುಷ್ಟಾನಿಸಿದ  ಸಮರ್ಪಕ ಮತ್ತು ಮುಂಜಾಗರೂಕತಾ ಕ್ರಮಗಳ ಬಗ್ಗೆ ಗಮನ ಹರಿಸಿದ ಪ್ರಧಾನ ಮಂತ್ರಿ ಅವರು ಸಾಧ್ಯ ಇರುವಷ್ಟು ತ್ವರಿತವಾಗಿ ಸಂತ್ರಸ್ತ ಪ್ರದೇಶಗಳಲ್ಲಿ ಸಾಮಾನ್ಯ ಜನಜೀವನ ಮರುಸ್ಥಾಪನೆಯಾಗುವುದನ್ನು ಖಾತ್ರಿಪಡಿಸುವಂತೆ ಸಲಹೆ ಮಾಡಿದರು. ಹಾಗು ಚಂಡಮಾರುತದಿಂದ ಸಂತ್ರಸ್ತರಾದವರಿಗೆ ಸೂಕ್ತ ಪರಿಹಾರ ಕೂಡಾ ವಿತರಣೆಯಾಗುವಂತೆ ನೋಡಿಕೊಳ್ಳಬೇಕು ಎಂದರು.

ಪ್ರಧಾನ ಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ, ಸಂಪುಟ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಇಂಧನ ಕಾರ್ಯದರ್ಶಿ, ಟೆಲಿಕಾಂ ಕಾರ್ಯದರ್ಶಿ, ಮತ್ತು .ಎಂ.ಡಿ. ಡಿ.ಜಿ. ಹಾಗು ಇತರ ಪ್ರಮುಖ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

***



(Release ID: 1722217) Visitor Counter : 194