ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಭಾರತದಲ್ಲಿ ಒಟ್ಟು 20 ಕೋಟಿ ವ್ಯಾಪ್ತಿ ದಾಟಿದ ಕೋವಿಡ್ 19 ಲಸಿಕೆ ನೀಡಿಕೆ


ಕೋವಿಡ್-19 ಲಸಿಕಾ ಅಭಿಯಾನ ಆರಂಭವಾದ 130 ದಿನಗಳಲ್ಲೇ ಭಾರತದಿಂದ ಈ ಮಹತ್ವದ ಮೈಲಿಗಲ್ಲು ಸಾಧನೆ

ಅಮೆರಿಕ ನಂತರ ಈ ಸಾಧನೆ ಮಾಡಿದ ಎರಡನೇ ದೇಶ ಭಾರತ

60 ವರ್ಷ ಮೇಲ್ಪಟ್ಟ ಶೇ. 42ರಷ್ಟು ಜನಸಂಖ್ಯೆಗೆ ಕನಿಷ್ಠ ಮೊದಲ ಡೋಸ್  ಕೋವಿಡ್-19 ಲಸಿಕೆ

Posted On: 26 MAY 2021 3:41PM by PIB Bengaluru

ಭಾರತ ದೇಶಾದ್ಯಂತ ಸದ್ಯ ನಡೆಯುತ್ತಿರುವ ಕೋವಿಡ್-19 ಲಸಿಕಾ ಅಭಿಯಾನದಲ್ಲಿ ಇಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ. ಲಸಿಕೆ ನೀಡಿಕೆ ಆರಂಭವಾದ 130ನೇ ದಿನವಾದ ಇಂದು ಬೆಳಗ್ಗೆ 7 ಗಂಟೆಯವರೆಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಲಸಿಕೆ ನೀಡಿಕೆಯು  20 ಕೋಟಿ ಗಡಿದಾಟಿದೆ (20,06,62,456 ಡೋಸ್ ಗಳ ಪೈಕಿ 15,71,49,593 ಮೊದಲ ಡೋಸ್ ಮತ್ತು 4,35,12,863 ಎರಡನೇ ಡೋಸ್ ಕೋವಿಡ್-19 ಲಸಿಕೆ ನೀಡಲಾಗಿದೆ)

ಭಾರತದ ಕೋವಿಡ್-19 ಲಸಿಕಾ ಅಭಿಯಾನ ಈವರೆಗಿನ ವಿಶ್ವದ ಅತಿ ದೊಡ್ಡ ಲಸಿಕಾ ಅಭಿಯಾನವಾಗಿದ್ದು, ಇದಕ್ಕೆ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021 ಜನವರಿ 16ರಂದು ಚಾಲನೆ ನೀಡಿದ್ದರು

ಕೇವಲ 130 ದಿನದಲ್ಲಿ ಅಮೆರಿಕ ನಂತರ ಸಾಧನೆ ಮಾಡಿದ ಎರಡನೇ ದೇಶ ಭಾರತವಾಗಿದೆ. ಅಮೆರಿಕ 124 ದಿನಗಳಲ್ಲಿ 20 ಕೋಟಿ ಗಡಿದಾಟಿತ್ತು.

ಜಗತ್ತಿನ ಹಲವು ರಾಷ್ಟ್ರಗಳ ಲಭ್ಯವಿರುವ ಅಂಕಿ-ಅಂಶಗಳು ಮತ್ತು ಹಲವು ಸುದ್ದಿ ಲೇಖನಗಳಲ್ಲಿ ಪ್ರಸ್ತಾಪಿಸಿರುವಂತೆ ಕೋವಿಡ್-19 ಲಸಿಕಾ ಅಭಿಯಾನದಲ್ಲಿ ಮುಂಚೂಣಿಯಲ್ಲಿರುವ ಇತರೆ ದೇಶಗಳಲ್ಲಿ, ಬ್ರಿಟನ್ 168 ದಿನದಲ್ಲಿ 5.1 ಕೋಟಿ, ಬ್ರೆಜಿಲ್ 128 ದಿನದಲ್ಲಿ 5.9 ಕೋಟಿ ಮತ್ತು ಜರ್ಮನಿ 149 ದಿನದಲ್ಲಿ 4.5 ಕೋಟಿ ಲಸಿಕೆ ವ್ಯಾಪ್ತಿಯನ್ನು ತಲುಪಿವೆ.

ಕೇಂದ್ರ ಆರೋಗ್ಯ ಸಚಿವಾಲಯದ ಇತ್ತೀಚಿನ ತಾಜಾ ಮಾಹಿತಿಯ ಪ್ರಕಾರ ಭಾರತದಲ್ಲಿ ಈವರೆಗೆ 45 ವರ್ಷ ಮೇಲ್ಪಟ್ಟ ಶೇ.34ರಷ್ಟು ಜನಸಂಖ್ಯೆಗೆ ಕನಿಷ್ಠ ಒಂದು ಡೋಸ್ ಕೋವಿಡ್-19 ಲಸಿಕೆ ನೀಡಲಾಗಿದೆ. ಅಂತೆಯೇ ಭಾರತದಲ್ಲಿ 60 ವರ್ಷಕ್ಕೂ ಮೇಲ್ಪಟ್ಟ ಜನಸಂಖ್ಯೆಯಲ್ಲಿ ಶೇ.42ರಷ್ಟು ಜನರಿಗೆ ಕನಿಷ್ಠ ಒಂದು ಡೋಸ್ ಕೋವಿಡ್-19 ಲಸಿಕೆ ನೀಡಲಾಗಿದೆ.

ದಿನದವರೆಗೆ ಭಾರತ ತನ್ನ ಲಸಿಕೀಕರಣ ಅಭಿಯಾನದಲ್ಲಿ ಮೂರು ಬಗೆಯ ಲಸಿಕೆಗಳನ್ನು ಬಳಸುತ್ತಿದೆ; ಇದರಲ್ಲಿ ಎರಡು ಲಸಿಕೆಗಳು ಭಾರತದಲ್ಲೇ ತಯಾರಾದವು ಸೆರಂ ಇನ್ಸ್ ಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ಕೊವ್ಯಾಕ್ಸಿನ್, ರಷ್ಯಾದ ಸ್ಪೂಟ್ನಿಕ್ ವಿ ಅನ್ನು ಮೂರನೇ ಲಸಿಕೆಯನ್ನಾಗಿ ತುರ್ತು ಬಳಕೆಗೆ ಭಾರತೀಯ ಔಷಧ ಮಹಾನಿಯಂತ್ರಕರು (ಡಿಸಿಜಿಐ) ಅನುಮೋದನೆ ನೀಡಿದೆ ಮತ್ತು ಅದನ್ನು ಕೆಲವು ಖಾಸಗಿ ಆಸ್ಪತ್ರೆಗಳು ಬಳಕೆ ಮಾಡುತ್ತಿದ್ದು, ಬಳಕೆ ಪ್ರಮಾಣ ಮುಂದಿನ ದಿನಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ.

ಲಸಿಕೀಕರಣ ಅಭಿಯಾನದ ಮೊದಲ ಯಂತ್ರ 130 ದಿನಗಳ ಹಿಂದೆ ಜನವರಿ 16ರಂದು ಆರಂಭವಾಯಿತು. ಕೋವಿಡ್-19 ಲಸಿಕೆ ಆಡಳಿತ ಕುರಿತ ರಾಷ್ಟ್ರೀಯ ತಜ್ಞರ ಸಮಿತಿ (ಎನ್ಇಜಿವಿಎಸಿ) ಆರೋಗ್ಯ ರಕ್ಷಣಾ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು (ಸರ್ಕಾರಿ ಮತ್ತು ಖಾಸಗಿ ವಲಯದ ಇಬ್ಬರೂ) ಆದ್ಯತೆ ನೀಡಿತ್ತು. ಎರಡನೇ ಹಂತದ ಲಸಿಕೀಕರಣ ಅಭಿಯಾನ ಮಾರ್ಚ್ 1 ರಿಂದ ಆರಂಭವಾಗಿದ್ದು, ಅದರಲ್ಲಿ ಅತ್ಯಂತ ಸೂಕ್ಷ್ಮ ವಯೋಮಾನದವರ ರಕ್ಷಣೆಗೆ ಆದ್ಯತೆ ನೀಡಲಾಯಿತು. ಇದರಲ್ಲಿ 60 ವರ್ಷ ಮೇಲ್ಪಟ್ಟ ಜನರು ಮತ್ತು ಕೆಲವು ಅನಾರೋಗ್ಯ ಹೊಂದಿದ 45 ವರ್ಷ ಮೇಲ್ಪಟ್ಟ ಜನರಿಗೆ ಆದ್ಯತೆ ನೀಡಲಾಯಿತು. ಇದು 2021 ಏಪ್ರಿಲ್ 1 ರಿಂದ ಮತ್ತಷ್ಟು ಸರಳೀಕರಣಗೊಂಡು 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವುದು ಆರಂಭವಾಯಿತು. ಮೂರನೇ ಹಂತದಲ್ಲಿ 2021 ಮೇ 1 ರಿಂದ ಉದಾರೀಕೃತ ಬೆಲೆ ಮತ್ತು ವೇಗವರ್ಧಕ ರಾಷ್ಟ್ರೀಯ ಕೋವಿಡ್-19 ಲಸಿಕಾ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳಲಾಯಿತು. ಕಾರ್ಯತಂತ್ರದಡಿ 18 ವರ್ಷ ಮೇಲ್ಪಟ್ಟ ಎಲ್ಲರೂ ಕೋವಿಡ್-19 ಲಸಿಕೆಗೆ ಅರ್ಹರು ಎಂದು ಪರಿಗಣಿಸಲಾಗಿದೆ

***



(Release ID: 1721958) Visitor Counter : 281