ಪ್ರಧಾನ ಮಂತ್ರಿಯವರ ಕಛೇರಿ

ಬುದ್ಧ ಪೌರ್ಣಿಮೆ ಕುರಿತ ವರ್ಚುವಲ್ ವೈಶಾಖ ಜಾಗತಿಕ ಆಚರಣೆಯಲ್ಲಿ ಪ್ರಧಾನ ಭಾಷಣ ಮಾಡಲಿರುವ ಪ್ರಧಾನಮಂತ್ರಿ

प्रविष्टि तिथि: 25 MAY 2021 6:48PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬುದ್ಧ ಪೌರ್ಣಿಮೆ ಕುರಿತ ವರ್ಚುವಲ್ ವೈಶಾಖ ಜಾಗತಿಕ ಆಚರಣೆಯ ವೇಳೆ ಅಂದರೆ 2021ರ ಮೇ 26ರಂದು ಸುಮಾರು ಬೆಳಗ್ಗೆ 09.45ಕ್ಕೆ  ಪ್ರಧಾನ ಭಾಷಣ ಮಾಡಲಿದ್ದಾರೆ.

ಸಂಸ್ಕೃತಿ ಸಚಿವಾಲಯವು ಅಂತಾರಾಷ್ಟ್ರೀಯ ಬೌದ್ಧ ಒಕ್ಕೂಟ (ಐ.ಬಿ.ಸಿ.) ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದು, ಇದರಲ್ಲಿ ವಿಶ್ವಾದ್ಯಂತದ ಎಲ್ಲ ಬೌದ್ಧ ಸಂಘಗಳ ಸರ್ವೋನ್ನತ ಮುಖ್ಯಸ್ಥರು ಭಾಗಿಯಾಗಲಿದ್ದಾರೆ. ವಿಶ್ವದ 50 ಪ್ರಮುಖ ಬೌದ್ಧ ಧಾರ್ಮಿಕ ನಾಯಕರು ಈ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.  

***


(रिलीज़ आईडी: 1721720) आगंतुक पटल : 238
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Assamese , Manipuri , Punjabi , Gujarati , Odia , Tamil , Telugu , Malayalam