ಇಂಧನ ಸಚಿವಾಲಯ

ಕಲ್ಲಿದ್ದಲು ಆಧರಿತ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಬಯೋಮಾಸ್ ಬಳಕೆಗಾಗಿ ರಾಷ್ಟ್ರೀಯ ಅಭಿಯಾನ ಆರಂಭಿಸಲು ಇಂಧನ ಸಚಿವಾಲಯ ತೀರ್ಮಾನ

Posted On: 25 MAY 2021 11:30AM by PIB Bengaluru

ಕೃಷಿ ಉರುವಲು ಸುಡುವುದರಿಂದ ಉಂಟಾಗುವ ವಾಯು ಮಾಲಿನ್ಯ ಸಮಸ್ಯೆಯನ್ನು ನಿವಾರಿಸಲು ಮತ್ತು ಉಷ್ಣ ವಿದ್ಯುತ್ ಉತ್ಪಾದನೆಯಲ್ಲಿ ಇಂಗಾಲ ಹೊರಸೂಸುವಿಕೆ ಕಡಿಮೆ ಮಾಡಲು ಕಲ್ಲಿದ್ದಲು ಆಧರಿತ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಬಯೋಮಾಸ್ ಬಳಕೆ ಕುರಿತ ರಾಷ್ಟ್ರೀಯ ಅಭಿಯಾನ ಪ್ರಾರಂಭಿಸಲು ಇಂಧನ ಸಚಿವಾಲಯ ತೀರ್ಮಾನಿಸಿದೆ. ಇದರಿಂದ ದೇಶದ ಇಂಧನ ಕ್ಷೇತ್ರದಲ್ಲಿ ಪರಿವರ್ತನೆ ತರಲು ಮತ್ತು ಶುದ್ಧ ಇಂಧನ ಮೂಲಗಳ ಗುರಿ ಸಾಧನೆಯತ್ತ ಮುನ್ನಡೆಯಲು ಸಹಕಾರಿಯಾಗಲಿದೆ.

ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಬಯೋಮಾಸ್ ಬಳಕೆ ಕುರಿತ ರಾಷ್ಟ್ರೀಯ ಅಭಿಯಾನ ಕೆಳಕಂಡ ಉದ್ದೇಶಗಳನ್ನು ಒಳಗೊಂಡಿದೆ.

[] ಉಷ್ಣ ವಿದ್ಯುತ್ ಸ್ಥಾವರಗಳಿಂದ ಉರುವಲಿನ ಬಳಕೆ ಪ್ರಮಾಣ ಶೇ 5 ರಷ್ಟಿದ್ದು, ನೈಸರ್ಗಿಕ ವಿದ್ಯುತ್ ಉತ್ಪಾದನೆ ಹೆಚ್ಚಿಸಲು ಕ್ರಮ ಕೈಗೊಳ್ಳುವುದು.

[ಬಿ] ಬಯೋಮಾಸ್ ಪೆಲ್ಲೆಟ್ ಗಳಲ್ಲಿ ಹೆಚ್ಚಿನ ಪ್ರಮಾಣದ ಸಿಲಿಕಾ, ಕ್ಷಾರಗಳನ್ನು ನಿರ್ವಹಿಸಲು ಬಾಯ್ಲರ್ ವಿನ್ಯಾಸದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆ ಕೈಗೊಳ್ಳುವುದು.

[ಸಿ] ಬಯೋಮಾಸ್ ಜೈವಿಕ ದ್ರವ್ಯರಾಶಿ ಮತ್ತು ಕೃಷಿ ಅವಶೇಷಗಳ ಪೂರೈಕೆ ಸರಪಳಿಯಲ್ಲಿನ ಅಡೆತಡೆಗಳನ್ನು ನಿವಾರಿಸಲು ಮತ್ತು ವಿದ್ಯುತ್ ಸ್ಥಾವರಗಳಿಗೆ ಅವುಗಳ ಸಾಗಣೆಗೆ ಅನುಕೂಲವಾಗುವಂತೆ ಮಾಡುವುದು.

[ಡಿ] ಬಯೋಮಾಸ್  ಕೋ ಫೈರಿಂಗ್ ನಲ್ಲಿ ನಿಯಂತ್ರಣ ಸಮಸ್ಯೆಗಳ ಪರಿಗಣನೆ

ರಾಷ್ಟ್ರೀಯ ಅಭಿಯಾನದ ಕಾರ್ಯಾಚರಣೆಯ ಮಾದರಿ ಚೌಕಟ್ಟು ಅಂತಿಮ ಹಂತದಲ್ಲಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ [ಎಂ..ಪಿ.ಎನ್.ಜಿ] ಪ್ರತಿನಿಧಿಗಳು, ನವ ಮತ್ತು ನವೀಕೃತ ಇಂಧನ [ಎಂ.ಎನ್.ಆರ್.] ಇಲಾಖೆ ಒಳಗೊಂಡ ಕಾರ್ಯದರ್ಶಿ [ಇಂಧನ] ನೇತೃತ್ವದ ಪರಿಶೀಲನಾ ಸಮಿತಿಯನ್ನು ಅಭಿಯಾನ ಹೊಂದಿರುತ್ತದೆಸಿಎಎ [ ಉಷ್ಣ ವಿದ್ಯುತ್] ಸದಸ್ಯರು ಕಾರ್ಯಕಾರಿ ಸಮಿತಿ ನೇತೃತ್ವ ವಹಿಸಲಿದ್ದಾರೆ. ಉದ್ದೇಶಿತ ರಾಷ್ಟ್ರೀಯ ಅಭಿಯಾನದಲ್ಲಿ ಎನ್.ಟಿ.ಪಿ.ಸಿ ಪ್ರಮುಖ ಪಾತ್ರವಹಿಸಲಿದ್ದು, ಮೂಲ ಸೌಕರ್ಯ ಮತ್ತು ಸಂಚಾಲನಾ ವ್ಯವಸ್ಥೆಯನ್ನು ಕಲ್ಪಿಸಲಿದೆ. ಸಿಇಎ, ಎನ್.ಟಿ.ಪಿ.ಸಿ, ಡಿ.ವಿ.ಸಿ ಮತ್ತು ಎನ್.ಎಲ್.ಸಿ ಅಥವಾ ಇತರೆ ಭಾಗೀದಾರ ಸಂಘಟನೆಗಳಿಂದ ಪೂರ್ಣ ಪ್ರಮಾಣದ ಅಧಿಕಾರಿಗಳು ಅಭಿಯಾನದಲ್ಲಿ ಇರಲಿದ್ದಾರೆಉದ್ದೇಶಿತ ರಾಷ್ಟ್ರೀಯ ಅಭಿಯಾನದ ಅವಧಿ ಗರಿಷ್ಠ ಐದು ವರ್ಷದ್ದಾಗಿರಲಿದೆ. ಅಭಿಯಾನದಡಿ ಸಹ ಗುಂಪುಗಳನ್ನು ರಚಿಸಲು ಉದ್ದೇಶಿಸಲಾಗಿದೆ.

  1. ಉಪ-ಗುಂಪು 1 : ಬಯೋಮಾಸ್  ಲಕ್ಷಣಗಳು. ಗುಣಲಕ್ಷಣಗಳ ಬಗ್ಗೆ ಸಂಶೋಧನೆ ನಡೆಸುವ  ಜವಾಬ್ದಾರಿ
  2. ಉಪ-ಗುಂಪು 2  ; ಬಾಯ್ಲರ್ ವಿನ್ಯಾಸದಲ್ಲಿ ಸಂಶೋಧನೆ ಸೇರಿದಂತೆ ತಾಂತ್ರಿಕ ನಿರ್ದಿಷ್ಟತೆ ಮತ್ತು ಸುರಕ್ಷತಾ ಅಂಶಗಳನ್ನು ನಿರ್ವಹಿಸಬೇಕು. ಕಲ್ಲಿದ್ದಲು ದಹಿಸಿದ ಬಾಯ್ಲರ್ ಗಳಲ್ಲಿ ಕಲ್ಲಿದ್ದಲಿನೊಂದಿಗೆ ಹೆಚ್ಚಿನ ಪ್ರಮಾಣದಲ್ಲಿ ಬಯೋಮಾಸ್  ಬಳಕೆಯನ್ನು ಸಹ ನಿರ್ವಹಿಸಬೇಕು.
  3.  ಉಪ- ಗುಂಪು 3: ಅಭಿಯಾನದ ಸಮಯದಲ್ಲಿ ಮತ್ತು ಸಂವೇದನಾ ಕಾರ್ಯಕ್ರಮದಲ್ಲಿ ಪೂರೈಕೆ ಸರಪಳಿಯನ್ನು ಪರಿಹರಿಸಬೇಕು.
  4.  ಉಪ ಗುಂಪು 4 : ಕೃಷಿ ಆಧರಿತ ಬಯೋಮಾಸ್ ಮತ್ತು ಪೌರ ಸಂಸ್ಥೆಗಳ ತ್ಯಾಜ್ಯ [ಎಂ.ಎಸ್.ಡಬ್ಲ್ಯೂ]ಕ್ಕೆ ಅನುಮತಿ ನೀಡುವ ಕುರಿತ ನಿಯೋಜಿತ ಪ್ರಯೋಗಾಲಯಗಳ ಆಯ್ಕೆ ಮತ್ತು  ಹಾಗೂ ಪ್ರಾಮಾಣೀಕರಣ  ಸಂಸ್ಥೆಗಳನ್ನು ಗುರುತಿಸುವುದು.
  5. ಉಪ ಗುಂಪು 5: ಕಲ್ಲಿದ್ದಲು ಆಧರಿತ ಸ್ಥಾವರಗಳಲ್ಲಿ ಬಯೋಮಾಸ್ ಸಹ ದಹನ ವಲಯದಲ್ಲಿನ ಆರ್ಥಿಕತೆ ಮತ್ತು ನಿಯಂತ್ರಣ ಚೌಕಟ್ಟು ರೂಪಿಸುವುದು.

ಬಯೋಮಾಸ್ ಕುರಿತ ಉದ್ದೇಶಿತ ರಾಷ್ಟ್ರೀಯ ಅಭಿಯಾನ ರಾಷ್ಟ್ರೀಯ ಶುದ್ಧ ವಾಯು ಕಾರ್ಯಕ್ರಮಕ್ಕೆ [ಎನ್.ಸಿ..ಪಿ]ಗೆ ಕೊಡುಗೆ ನೀಡಲಿದೆ.

***



(Release ID: 1721525) Visitor Counter : 281