ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಮ್ಯೂಕರ್ ಮೈಕೋಸಿಸ್ ಅನ್ನು ಬಣ್ಣದ ಬದಲು ಅದರ ಹೆಸರಿನಿಂದಲೇ ಗುರುತಿಸುವುದು ಒಳ್ಳೆಯದು : ಏಮ್ಸ್ ನಿರ್ದೇಶಕ ಡಾ|| ರಂದೀಪ್ ಗುಲೇರಿಯಾ


ಕೋವಿಡ್-19 ರೋಗಿಗಳಲ್ಲಿ ಕಂಡುಬಂದಿರುವ ಶಿಲೀಂಧ್ರದ ಸೋಂಕು ಬಹುತೇಕ ಮ್ಯೂಕರ್ ಮೈಕೋಸಿಸ್

ಇದು ಸಾಂಕ್ರಾಮಿಕವಲ್ಲ/ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದಿಲ್ಲ

“ಆಕ್ಸಿಜನ್ ಥೆರಪಿಗೂ ಸೋಂಕು ಹಬ್ಬಿರುವುದಕ್ಕೂ ಯಾವುದೇ ಖಚಿತ ಸಂಬಂಧವಿಲ್ಲ”

ಶೇ.90 ರಿಂದ ಶೇ.95ರಷ್ಟು ಮ್ಯೂಕರ್ ಮೈಕೋಸಿಸ್ ರೋಗಿಗಳು ಮಧುಮೇಹ ಇಲ್ಲವೇ ಅಥವಾ ಸ್ಟಿರಾಯ್ಡ್ ತೆಗೆದುಕೊಂಡವರು

Posted On: 24 MAY 2021 5:39PM by PIB Bengaluru

ಕೋವಿಡ್-19ನಿಂದ ಚೇತರಿಸಿಕೊಳ್ಳುತ್ತಿರುವ ಅಥವಾ ಚೇತರಿಸಿಕೊಂಡಿರುವ ರೋಗಿಗಳಲ್ಲಿ ಕಾಣಿಸಿಕೊಂಡಿರುವ ಒಂದು ಸಾಮಾನ್ಯ ಶಿಲೀಂಧ್ರ ಸೋಂಕು ಮ್ಯೂಕರ್ ಮೈಕೋಸಿಸ್. ಆ ಸೋಂಕಿನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಸಾಂಕ್ರಾಮಿಕ ರೋಗವಲ್ಲ, ಅದರ ಅರ್ಥ ಕೋವಿಡ್-19ನಂತೆ ಅದು ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಹರಡುವುದಿಲ್ಲ. ನವದೆಹಲಿಯ ಏಮ್ಸ್ ನ ನಿರ್ದೇಶಕರಾದ ಡಾ|| ರಂದೀಪ್ ಗುಲೇರಿಯಾ ಅವರು ದೆಹಲಿಯ ಪಿಐಬಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದರು.

ಮ್ಯೂಕರ್ ಮೈಕೋಸಿಸ್ ಎಂದು ಕರೆಯಿರಿ ಮತ್ತು ಕಪ್ಪು ಶಿಲೀಂಧ್ರ ಸೋಂಕೆಂದು ಬೇಡ

ಡಾ|| ಗುಲೇರಿಯಾ ಅವರು ಮ್ಯೂಕರ್ ಮೈಕೋಸಿಸ್ ಬಗ್ಗೆ ಮಾತನಾಡುವಾಗ ಕಪ್ಪು ಶಿಲೀಂಧ್ರ ಸೋಂಕು ಎಂಬ ಪದ ಬಳಸದಿರುವುದು ಉತ್ತಮ, ಏಕೆಂದರೆ ಅದು ಬಹಳಷ್ಟು ತಪ್ಪಿಸಬಹುದಾದ ಗೊಂದಲಗಳಿಗೆ ಕಾರಣವಾಗುತ್ತದೆ ಎಂದರು. “ಕಪ್ಪು ಶಿಲೀಂಧ್ರ ಮತ್ತೊಂದು ಕುಟುಂಬ; ಬಿಳಿ ಶಿಲೀಂಧ್ರ ಸಂಸ್ಕೃತಿಯಲ್ಲಿ ಕಪ್ಪು ಚುಕ್ಕೆಗಳು ಇರುವುದರಿಂದ ಈ ಪದವು ಮ್ಯೂಕರ್ ಮೈಕೋಸಿಸ್ ಜೊತೆ ಬೆಸೆದುಕೊಂಡಿದೆ. ಸಾಮಾನ್ಯವಾಗಿ ಕ್ಯಾಂಡಿಡಾ, ಆಸ್ಪರ್ಜಿಲೋಸಿಸ್, ಕ್ರಿಪ್ಟೋಕೋಕಸ್,

ಹಿಸ್ಟೋಪಾಸ್ಮಾಸಿಸ್ ಮತ್ತು ಕೋಕ್ಸಿಡಿಯೋಆಯ್ಡೋಮೈಕೋಸಿಸ್ ನಂತಹ ವಿವಿಧ ರೀತಿಯ ಶಿಲೀಂಧ್ರ ಸೋಕುಗಳಿವೆ. ಕಡಿಮೆ ರೋಗ ನಿರೋಧಕ ಶಕ್ತಿ ಇರುವಂತವರಲ್ಲಿ ಮ್ಯೂಕರ್ ಮೈಕೋಸಿಸ್, ಕ್ಯಾಂಡಿಡಾ ಮತ್ತು ಆಸ್ಪರ್ಜಿಲೋಸಿಸ್ ಇವುಗಳು ಕಂಡುಬರುತ್ತವೆ” ಎಂದು ಹೇಳಿದರು.

ಸೋಂಕಿನ ಸ್ವರೂಪ, ಲಕ್ಷಣಗಳು ಮತ್ತು ಚಿಕಿತ್ಸೆ

ಸೋಂಕಿನ ಇರುವಿಕೆಯ ಕುರಿತು ಮಾತನಾಡಿದ ಡಾ|| ಗುಲೇರಿಯಾ ಅವರು, “ಕ್ಯಾಂಡಿಡಾ ಶಿಲೀಂಧ್ರ ಸೋಂಕು ಬಾಯಿಯಲ್ಲಿ, ಬಾಯಿಯ ಕುಳಿಗಳು ಮತ್ತು ನಾಲಿಗೆಯಲ್ಲಿ ಬಿಳಿಯ ಮಚ್ಚೆಗಳ ಮೂಲಕ ಕಾಣಿಸುತ್ತದೆ; ಇದು ಇತರೆ ಖಾಸಗಿ ಅಂಗಗಳಿಗೂ ಹರಡಬಹುದು ಮತ್ತು ರಕ್ತದಲ್ಲೂ ಕಾಣಿಸಿಕೊಳ್ಳಬಹುದು.(ಆ ರೀತಿ ಕಂಡುಬಂದರೆ ಅದು ಗಂಭೀರವಾದದು) ಆಸ್ಪರ್ಜಿಲೋಸಿಸ್ ಸಾಮಾನ್ಯವಲ್ಲ, ಅದು ಶ್ವಾಸಕೋಶದಲ್ಲಿ ಕ್ಯಾವಿಟಿ(ಕುಳಿ)ಗಳನ್ನು ಸೃಷ್ಟಿಸುವುದರಿಂದ ಶ್ವಾಸಕೋಶಕ್ಕೆ ಹಾನಿ ಮಾಡುತ್ತದೆ. ಕೋವಿಡ್-19 ರೋಗಿಗಳಲ್ಲಿ ಕಾಣಿಸಿಕೊಂಡಿರುವುದು ಬಹುತೇಕ ಮ್ಯೂಕರ್ ಮೈಕೋಸಿಸ್ ಆಗಿದೆ. ಆಸ್ಪರ್ಜಿಲೋಸಿಸ್ ಆಗಾಗ್ಗೆ ಕಾಣಿಸಿಕೊಂಡಿದೆ ಮತ್ತು ಕೆಲವರಲ್ಲಿ ಕ್ಯಾಂಡಿಡ್ ಕಾಣಿಸಿಕೊಂಡಿದೆ” ಎಂದರು.

ಮ್ಯೂಕರ್ ಮೈಕೋಸಿಸ್ ಸೋಂಕಿಗೆ ತುತ್ತಾಗಿರುವ ಹೆಚ್ಚಿನ ಅಪಾಯವಿರುವ ವರ್ಗದ ಜನರ ಕುರಿತು ಮಾತನಾಡಿದ ಅವರು, ಮ್ಯೂಕರ್ ಮೈಕೋಸಿಸ್ ಸೋಂಕಿಗೆ ತುತ್ತಾಗಿರುವ ಶೇ.90 ರಿಂದ ಶೇ.95ರಷ್ಟು ರೋಗಿಗಳು ಒಂದು ಮಧುಮೇಹಿಗಳಾಗಿರುತ್ತಾರೆ ಅಥವಾ ಸ್ಟಿರಾಯ್ಡ್ ಗಳನ್ನು ತೆಗೆದುಕೊಂಡಿರುತ್ತಾರೆ. ಮಧುಮೇಹಿಗಳಲ್ಲದವರು ಅಥವಾ ಸ್ಟಿರಾಯ್ಡ್ ಗಳನ್ನು ತೆಗೆದುಕೊಳ್ಳದೇ ಇರುವವರಲ್ಲಿ ಈ ಸೋಂಕು ಅಪರೂಪವಾಗಿ ಕಂಡುಬಂದಿದೆ” ಎಂದರು.

ಹೆಚ್ಚಿನ ಅಪಾಯವಿರುವ ವರ್ಗ ಎಂದರೆ ನಿಯಂತ್ರಿಸಲಾಗದಂತಹ ಸ್ಥಿತಿಯಲ್ಲಿರುವ ಮಧುಮೇಹಿಗಳು ಮತ್ತು ಸ್ಟಿರಾಯ್ಡ್ ಗಳನ್ನು ಬಳಕೆ ಮಾಡುವವರು ಮತ್ತು ಕೋವಿಡ್-19 ಪಾಸಿಟಿವ್ ಹೊಂದಿರುವವರಲ್ಲಿ ಈ ಕೆಳಗಿನ ಲಕ್ಷಣಗಳು ಕಂಡುಬಂದರೆ ಅವರ ಬಗ್ಗೆ ತಕ್ಷಣವೇ ವೈದ್ಯರಿಗೆ ಮಾಹಿತಿ ನೀಡಬೇಕು ಎಂದು ಅವರು ಉಲ್ಲೇಖಿಸಿದರು. “ಮ್ಯೂಕರ್ ಮೈಕೋಸಿಸ್ ನ ಕೆಲವು ಲಕ್ಷಣಗಳೆಂದರೆ ತಲೆನೋವು, ಮೂಗಿನಲ್ಲಿ ರಕ್ತ ಸುರಿಯುವುದು ಅಥವಾ ಕಟ್ಟಿಕೊಳ್ಳುವುದು, ಕಣ್ಣಿನ ಕೆಳಗೆ ಊತ, ಮುಖದ ಮೇಲಿನ ಸಂವೇದನೆ ಕಡಿಮೆಯಾಗುವುದು ಈ ಲಕ್ಷಣಗಳು ಹೆಚ್ಚಿನ ಅಪಾಯವಿರುವ ವರ್ಗದ ರೋಗಿಗಳಲ್ಲಿ ಕಂಡುಬಂದರೆ ಅಥವಾ ಸ್ಟಿರಾಯ್ಡ್ ತೆಗೆದುಕೊಳ್ಳುವ ರೋಗಿಗಳಲ್ಲಿ ಕಂಡುಬಂದರೆ ಆ ಕುರಿತು ವೈದ್ಯರಿಗೆ ಮಾಹಿತಿ ನೀಡಬೇಕು. ಆಗ ಮುಂಚಿತವಾಗಿಯೇ ಅದನ್ನು ಪತ್ತೆಹಚ್ಚಿ ಚಿಕಿತ್ಸೆಯನ್ನು ನೀಡಬಹುದಾಗಿದೆ ಎಂದರು.

ಮ್ಯೂಕರ್ ಮೈಕೋಸಿಸ್ ನ ವಿಧಗಳು

ಮ್ಯೂಕರ್ ಮೈಕೋಸಿಸ್ ಸೋಂಕು ಮಾನವನ ದೇಹದ ಯಾವ ಅಂಗದ ಮೇಲೆ ದಾಳಿ ಮಾಡುತ್ತದೆ ಎಂಬುದನ್ನು ಆಧರಿಸಿ ಅದನ್ನು ವರ್ಗೀಕರಿಸಬಹುದು. ಸೋಂಕಿನ ಗುಣ ಮತ್ತು ಲಕ್ಷಣಗಳು ಬಾಧಿತ ದೇಹದ ಅಂಗದ ಮೇಲೆ ಬೇರೆ ಬೇರೆಯಾಗಿರುತ್ತದೆ.

ರೈನೊ ಆರ್ಬಿಟಲ್ ಸೆರೆಬ್ರಲ್ ಮ್ಯೂಕರ್ ಮೈಕೋಸಿಸ್: ಈ ಸೋಂಕು ಮೂಗು, ಕಣ್ಣಿನ ಸುತ್ತ/ಕಣ್ಣಿನ ಕೆಳ ಭಾಗ, ಬಾಯಿಯ ದವಡೆ ಮತ್ತು ಮೆದುಳಿನವರೆಗೂ ಅದು ಹರಡಬಹುದು. ಲಕ್ಷಣಗಳಲ್ಲಿ ತಲೆನೋವು, ಮೂಗು ಕಟ್ಟುವುದು, ಮೂಗಿನಿಂದ ವಿಸರ್ಜನೆ (ಹಸಿರು ಬಣ್ಣ), ಸೈನಸ್ ನಲ್ಲಿ ನೋವು, ಮೂಗಿನಲ್ಲಿ ರಕ್ತಸ್ತ್ರಾವ , ಮುಖ ಊತ, ಮುಖದಲ್ಲಿ ಸಂವೇದನೆ ಇಲ್ಲದಿರುವುದು ಮತ್ತು ಚರ್ಮದ ಬಣ್ಣ ಬದಲಾಗುವುದು.

ಶ್ವಾಸಕೋಶದ ಮ್ಯೂಕರ್ ಮೈಕೋಸಿಸ್: ಈ ಶಿಲೀಂಧ್ರ ಸೋಂಕು ಶ್ವಾಸಕೋಶಗಳಿಗೆ ತಗುಲುತ್ತದೆ. ಇದು ಜ್ವರ, ಎದೆನೋವು, ಕೆಮ್ಮು ಮತ್ತು ಕೆಮ್ಮಿದಾಗ ರಕ್ತ ಬರಬಹುದು..

ಈ ಶಿಲೀಂಧ್ರ ಸೋಂಕು ಜಠರ ಪ್ರದೇಶಕ್ಕೂ ಜೀರ್ಣನಾಳಕ್ಕೂ ತಗುಲಬಹುದು.

ಆಕ್ಸಿಜನ್ ಥೆರಪಿ ಜೊತೆ ಶಿಲೀಂಧ್ರ ಸೋಂಕಿಗೆ ಯಾವುದೇ ಖಚಿತ ಸಂಬಂಧವಿಲ್ಲ

“ಹಲವು ರೋಗಿಗಳು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರು ಆಕ್ಸಿಜನ್ ಥೆರಪಿಯನ್ನು ತೆಗೆದುಕೊಂಡೇ ಇಲ್ಲ, ಅಂತವರಲ್ಲೂ ಕೂಡ ಮ್ಯೂಕರ್ ಮೈಕೋಸಿಸ್ ಸೋಂಕು ಕಂಡುಬಂದಿದೆ. ಹಾಗಾಗಿ ಆಕ್ಸಿಜನ್ ಥೆರಪಿಗೂ ಮತ್ತು ಈ ಸೋಂಕು ಹರಡಿರುವುದಕ್ಕೂ ಯಾವುದೇ ಖಚಿತ ಸಂಬಂಧವಿಲ್ಲ” ಎಂದು ಡಾ|| ಗುಲೇರಿಯಾ ಹೇಳಿದ್ದಾರೆ.

ಚಿಕಿತ್ಸೆ ಸವಾಲುಗಳು:

ಶಿಲೀಂಧ್ರ ನಿಗ್ರಹ ಚಿಕಿತ್ಸೆ ಹಲವು ವಾರಗಳ ಕಾಲ ಹಿಡಿಯುತ್ತದೆ, ಹಾಗಾಗಿ ಆಸ್ಪತ್ರೆಗಳಿಗೆ ಇದು ಸವಾಲಿನ ಕಾರ್ಯವಾಗಿದೆ. ಕೋವಿಡ್ ಪಾಸಿಟಿವ್ ರೋಗಿಗಳಲ್ಲಿ ಮತ್ತು ಕೋವಿಡ್ ನೆಗಿಟಿವ್ ರೋಗಿಗಳಲ್ಲಿ ಮ್ಯೂಕರ್ ಮೈಕೋಸಿಸ್ ಹರಡುವ ಸಾಧ್ಯತೆ ಇದ್ದು ಅವರನ್ನು ಪ್ರತ್ಯೇಕ ಆಸ್ಪತ್ರೆಯ ವಾರ್ಡ್ ಗಳಲ್ಲಿ ಇಡಬೇಕಾಗುತ್ತದೆ. ಕೆಲವೊಮ್ಮೆ ವಿವೇಚನೆಯಿಂದ ಸರ್ಜರಿ(ಶಸ್ತ್ರಚಿಕಿತ್ಸೆ)ಗಳನ್ನು ಮಾಡಬೇಕಾಗುತ್ತದೆ ಹಾಗೂ ಮ್ಯೂಕರ್ ಮೈಕೋಸಿಸ್ ಗೆ ಆಕ್ರಮಣಕಾರಿ ಸರ್ಜರಿಗಳನ್ನು ಮಾಡುವುದರಿಂದ ಕೋವಿಡ್-19 ರೋಗಿಗಳ ಮೇಲೆ ವ್ಯತಿರಿಕ್ತ ಪರಿಣಾಮಗಳು ಬೀರಬಹುದು.

ಮಧುಮೇಹ ರೋಗಿಗಳು ಸೂಕ್ತ ಸ್ವಚ್ಛತೆಯನ್ನು ಕಾಯ್ದುಕೊಳ್ಳುವುದು ಅತ್ಯಂತ ಪ್ರಮುಖವಾದುದು. ಏಕೆಂದರೆ ಅಂತಹ ರೋಗಿಗಳಲ್ಲಿ ಅವಕಾಶವಾದಿ ಸೋಂಕು ತಗುಲುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆಕ್ಸಿಜನ್ ಸಾಂದ್ರಕಗಳನ್ನು ಬಳಸುವಂತಹವರು ನಿಯಮಿತವಾಗಿ ಹ್ಯುಮಿಡಿ ಫೈಯರ್ ಗಳನ್ನು ಆಗಾಗ್ಗೆ ಸ್ವಚ್ಛಪಡಿಸುವುದನ್ನು ಖಾತ್ರಿಪಡಿಸಿಕೊಳ್ಳಬೇಕು.

ನೀವು ಹೆಚ್ಚಿನ ವಿವರಗಳಿಗೆ ಈ ಲೇಖನಗಳನ್ನೂ ಸಹ ಓದಬಹುದು:

1. Stay Safe from Mucormycosis - a Fungal Complication being Detected in COVID-19 Patients

2. Always monitor and control blood sugar level: Advice for Diabetes Patients

***

 


(Release ID: 1721408) Visitor Counter : 591