ರೈಲ್ವೇ ಸಚಿವಾಲಯ

ಆಕ್ಸಿಜನ್ ಎಕ್ಸ್ ಪ್ರೆಸ್ ರೈಲುಗಳ ಮೂಲಕ ಒಂದೇ ದಿನ ಅತ್ಯಧಿಕ 1142 ಎಂಟಿ ಆಕ್ಸಿಜನ್ ಪೂರೈಕೆ


2021ರ ಮೇ 20ರಂದು 1118 ಎಂಟಿ ಅತ್ಯುತ್ತಮ ಸಾಧನೆ

ದೇಶಾದ್ಯಂತ 14 ರಾಜ್ಯಗಳಿಗೆ ಒಂದು ತಿಂಗಳಲ್ಲಿ 16000 ಎಂಟಿಗೂ ಅಧಿಕ ಎಲ್ ಎಂಒ ಸಾಗಾಣೆ ಪೂರ್ಣಗೊಳಿಸಿದ ಭಾರತೀಯ ರೈಲ್ವೆ

ದಕ್ಷಿಣದ ರಾಜ್ಯಗಳ ಪೈಕಿ ತಮಿಳುನಾಡು ಮತ್ತು ಕರ್ನಾಟಕಕ್ಕೆ ತಲಾ 1000 ಎಂಟಿಗೂ ಅಧಿಕ  ಎಲ್ ಎಂಒ ಸರಬರಾಜು

ಈವರೆಗೆ 977 ಟ್ಯಾಂಕರ್ ಗಳನ್ನು ಹೊತ್ತ 247 ಆಕ್ಸಿಜನ್ ಎಕ್ಸ್ ಪ್ರೆಸ್ ರೈಲುಗಳ ಪ್ರಯಾಣ ಪೂರ್ಣ ಮತ್ತು 14 ರಾಜ್ಯಗಳಿಗೆ ನೆರವು

50 ಟ್ಯಾಂಕರ್ ಗಳಲ್ಲಿ 920 ಎಂಟಿಗೂ ಅಧಿಕ ಎಲ್ ಎಂಒ ಹೊತ್ತ 12 ಆಕ್ಸಿಜನ್ ಎಕ್ಸ್ ಪ್ರೆಸ್ ರೈಲುಗಳ ಸಂಚಾರ ಪ್ರಗತಿಯಲ್ಲಿ

ಉತ್ತರಾಖಂಡ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ, ರಾಜಸ್ಥಾನ, ತಮಿಳುನಾಡು, ಹರಿಯಾಣ, ತೆಲಂಗಾಣ, ಪಂಜಾಬ್, ಕೇರಳ, ದೆಹಲಿ, ಉತ್ತರ ಪ್ರದೇಶ ಮತ್ತು ಅಸ್ಸಾಂ ಸೇರಿ 14 ರಾಜ್ಯಗಳಿಗೆ ಆಕ್ಸಿಜನ್ ಎಕ್ಸ್ ಪ್ರೆಸ್ ಮೂಲಕ ಆಮ್ಲಜನಕದ ನೆರವು

ಮಹಾರಾಷ್ಟ್ರಕ್ಕೆ 614 ಎಂಟಿ ಆಕ್ಸಿಜನ್, ಉತ್ತರ ಪ್ರದೇಶಕ್ಕೆಸುಮಾರು 3649 ಎಂಟಿ, ಮಧ್ಯಪ್ರದೇಶಕ್ಕೆ  633, ದೆಹಲಿಗೆ 4600 ಎಂಟಿ, ಹರಿಯಾಣಕ್ಕೆ 1759, ರಾಜಸ್ಥಾನಕ್ಕೆ 98, ಕರ್ನಾಟಕಕ್ಕೆ 1063, ಉತ್ತರಾಖಂಡಕ್ಕೆ 320, ತಮಿಳುನಾಡಿಗೆ 1024, ಆಂಧ್ರಪ್ರದೇಶಕ್ಕೆ 730, ಪಂಜಾಬ್ ಗೆ 225, ಕೇರಳಕ್ಕೆ 246, ತೆಲಂಗಾಣಕ್ಕೆ  976 ಮತ್ತು ಅಸ್ಸಾಂಗೆ 80 ಎಂಟಿ ಪೂರೈಕೆ

Posted On: 24 MAY 2021 2:13PM by PIB Bengaluru

ಎಲ್ಲಾ ಅಡೆತಡೆಗಳನ್ನು ನಿವಾರಿಸಿಕೊಂಡು ಹೊಸ ಪರಿಹಾರಗಳನ್ನು ಕಂಡುಕೊಳ್ಳುವ ಮೂಲಕ ಭಾರತೀಯ ರೈಲ್ವೆ ದೇಶಾದ್ಯಂತ ಹಲವು ರಾಜ್ಯಗಳಿಗೆ ದ್ರವೀಕೃತ ವೈದ್ಯಕೀಯ ಆಕ್ಸಿಜನ್ (ಎಲ್ಎಂಒ) ಸರಬರಾಜಿನಲ್ಲಿ ತನ್ನ ಪ್ರಯಾಣವನ್ನು ಮುಂದುವರಿಸಿ ಪರಿಹಾರವನ್ನು ಒದಗಿಸುತ್ತಿದೆ. ಈವರೆಗೆ ಭಾರತೀಯ ರೈಲ್ವೆ ದೇಶಾದ್ಯಂತ ಹಲವು ರಾಜ್ಯಗಳಿಗೆ 977ಕ್ಕೂ ಅಧಿಕ ಟ್ಯಾಂಕರ್ ಗಳ ಮೂಲಕ 16023 ಎಂಟಿ ಎಲ್ಎಂಒ ಅನ್ನು ಒದಗಿಸಿದೆ.

ಈವರೆಗೆ 227 ಆಕ್ಸಿಜನ್ ಎಕ್ಸ್ ಪ್ರೆಸ್ ರೈಲುಗಳು ತಮ್ಮ ಪ್ರಯಾಣವನ್ನು ಪೂರ್ಣಗೊಳಿಸಿ ಹಲವು ರಾಜ್ಯಗಳಿಗೆ ನೆರವು ನೀಡಿರುವುದನ್ನು ಇಲ್ಲಿ ಗಮನಿಸಬೇಕಾಗಿದೆ

  ಪ್ರಕಟಣೆ ಹೊರಬೀಳುವ ವೇಳೆಗೆ 50 ಟ್ಯಾಂಕರ್ ಗಳನ್ನು ಹೊತ್ತ 12 ಭರ್ತಿಯಾದ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲುಗಳು 920 ಎಂಟಿಗೂ ಅಧಿಕ ಎಲ್ಎಂಒ ಅನ್ನು ಹೊತ್ತು ಸಾಗುತ್ತಿವೆ.

ಆಕ್ಸಿಜನ್ ಎಕ್ಸ್ ಪ್ರೆಸ್ ರೈಲುಗಳು ನಿನ್ನೆ ಒಂದೇ 1142 ಎಂಟಿಗೂ ಅಧಿಕ ಆಕ್ಸಿಜನ್ ನೆರವನ್ನು ಒದಗಿಸಿವೆ. 2021 ಮೇ 20ರಂದು 1118 ಎಂಟಿ ಸಾಗಾಣೆ ಅತ್ಯುತ್ತಮ ಸಾಧನೆಯಾಗಿತ್ತು.

ದಕ್ಷಿಣ ರಾಜ್ಯಗಳ ಪೈಕಿ ತಮಿಳುನಾಡು ಮತ್ತು ಕರ್ನಾಟಕಕ್ಕೆ ತಲಾ 1000ಕ್ಕೂ ಅಧಿಕ ಎಲ್ಎಂಒ ಅನ್ನು ವಿತರಿಸಲಾಗಿದೆ

ಆಕ್ಸಿಜನ್ ಎಕ್ಸ್ ಪ್ರೆಸ್ ರೈಲು 30 ದಿನಗಳ ಹಿಂದೆ ಮೊದಲು ಏಪ್ರಿಲ್ 24ರಂದು ಮಹಾರಾಷ್ಟ್ರಕ್ಕೆ 126 ಎಂಟಿ ಆಮ್ಲಜನಕ ಪೂರೈಸುವ ಮೂಲಕ ಕಾರ್ಯಾರಂಭ ಮಾಡಿದ್ದು ಇಲ್ಲಿ ಉಲ್ಲೇಖ ಮಾಡಬಹುದು. ಒಂದು ತಿಂಗಳ ಅವಧಿಯಲ್ಲಿ ಭಾರತೀಯ ರೈಲ್ವೆ ದೇಶಾದ್ಯಂತ 14 ರಾಜ್ಯಗಳಿಗೆ 16000 ಎಂಟಿ ಎಲ್ಎಂಒ ಅನ್ನು ವಿತರಿಸಿದೆ.

ರಾಜ್ಯಗಳ ಮನವಿ ಮೇರೆಗೆ ಅತ್ಯಲ್ಪ ಅವಧಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಎಲ್ಎಂಒ ಅನ್ನು ಒದಗಿಸಲು ಭಾರತೀಯ ರೈಲ್ವೆ ಅಹರ್ನಿಷಿ ಕಾರ್ಯನಿರ್ವಹಿಸುತ್ತಿದೆ.

ಉತ್ತರಾಖಂಡ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ, ರಾಜಸ್ಥಾನ, ತಮಿಳುನಾಡು, ಹರಿಯಾಣ, ತೆಲಂಗಾಣ, ಪಂಜಾಬ್, ಕೇರಳ, ದೆಹಲಿ, ಉತ್ತರ ಪ್ರದೇಶ ಮತ್ತು ಅಸ್ಸಾಂ ಸೇರಿ 14 ರಾಜ್ಯಗಳಿಗೆ ಆಕ್ಸಿಜನ್ ಎಕ್ಸ್ ಪ್ರೆಸ್ ಮೂಲಕ ಆಮ್ಲಜನಕವನ್ನು ತಲುಪಿಸಲಾಗಿದೆ.

ಪ್ರಕಟಣೆ ಹೊರಬೀಳುವ ವೇಳೆಗೆ ಮಹಾರಾಷ್ಟ್ರಕ್ಕೆ 614 ಎಂಟಿ ಆಕ್ಸಿಜನ್, ಉತ್ತರ ಪ್ರದೇಶಕ್ಕೆ ಸುಮಾರು 3649 ಎಂಟಿ, ಮಧ್ಯಪ್ರದೇಶಕ್ಕೆ  633, ದೆಹಲಿಗೆ 4600 ಎಂಟಿ, ಹರಿಯಾಣಕ್ಕೆ 1759, ರಾಜಸ್ಥಾನಕ್ಕೆ 98, ಕರ್ನಾಟಕಕ್ಕೆ 1063, ಉತ್ತರಾಖಂಡಕ್ಕೆ 320, ತಮಿಳುನಾಡಿಗೆ 1024, ಆಂಧ್ರಪ್ರದೇಶಕ್ಕೆ 730, ಪಂಜಾಬ್ ಗೆ 225, ಕೇರಳಕ್ಕೆ 246, ತೆಲಂಗಾಣಕ್ಕೆ  976 ಮತ್ತು ಅಸ್ಸಾಂಗೆ 80 ಎಂಟಿ ಆಕ್ಸಿಜನ್ ತಲುಪಿಸಿದೆ.

ರೈಲ್ವೆ ಆಮ್ಲಜನಕ ಪೂರೈಕೆ ಸ್ಥಳಗಳಿಗೆ ನಾನಾ ಮಾರ್ಗಗಳನ್ನು ಗುರುತಿಸಿದೆ ಮತ್ತು ರಾಜ್ಯಗಳ ತುರ್ತು ಅಗತ್ಯಗಳಿಗೆ ಅದು ತನ್ನನ್ನು ತಾವು ಸನ್ನದ್ಧವಾಗಿಟ್ಟುಕೊಂಡಿದೆ. ರಾಜ್ಯಗಳು ಭಾರತೀಯ ರೈಲ್ವೆಗೆ ಎಲ್ಎಂಒ ತರಲು ಟ್ಯಾಂಕರ್ ಗಳನ್ನು ಒದಗಿಸುತ್ತಿವೆ.

ದೇಶದಲ್ಲಿ ಬಿಕ್ಕಟ್ಟು ಹೆಚ್ಚಾಗುತ್ತಿದ್ದಂತೆಯೇ ಭಾರತೀಯ ರೈಲ್ವೆ ಆಮ್ಲಜನಕವನ್ನು ಪಶ್ಚಿಮದ ಹಪಾ, ಬರೋಡಾ, ಮುಂದ್ರಾ ಹಾಗೂ ಪೂರ್ವದ ರೂರ್ಕೆಲಾ, ದುರ್ಗಾಪುರ್, ಟಾಟಾನಗರ್, ಅಂಗುಲ್ ನಿಂದ ಭರ್ತಿ ಮಾಡಿಕೊಂಡು ಆನಂತರ ಉತ್ತರಾಖಂಡ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ, ರಾಜಸ್ಥಾನ, ತಮಿಳುನಾಡು, ಹರಿಯಾಣ, ತೆಲಂಗಾಣ, ಪಂಜಾಬ್, ಕೇರಳ, ದೆಹಲಿ, ಉತ್ತರ ಪ್ರದೇಶ ಮತ್ತು ಅಸ್ಸಾಂ ರಾಜ್ಯಗಳಿಗೆ ಸಂಕೀರ್ಣ ಕಾರ್ಯಾಚರಣೆ ಮಾರ್ಗಗಳ ಮೂಲಕ ಸಾಗಣೆ ಮಾಡುತ್ತಿದೆ.

ಎಷ್ಟು ಸಾಧ್ಯವೋ ಅಷ್ಟು ತ್ವರಿತವಾಗಿ ಆಕ್ಸಿಜನ್ ಪರಿಹಾರ ತಲುಪುವುದನ್ನು ಖಾತ್ರಿಪಡಿಸುವ ಉದ್ದೇಶದಿಂದ ಭಾರತೀಯ ರೈಲ್ವೆ ಆಕ್ಸಿಜನ್ ಎಕ್ಸ್ ಪ್ರೆಸ್ ಸರಕು ರೈಲುಗಳ ಸಂಚಾರಕ್ಕೆ ಹೊಸ ಮಾನದಂಡ ಮತ್ತು ಅನಿರೀಕ್ಷಿತ ಹೆಜ್ಜೆ ಗುರುತುಗಳನ್ನು ಸೃಷ್ಟಿಸಿದೆ. ನಿರ್ಣಾಯಕ ಸರಕು ರೈಲುಗಳ ಸರಾಸರಿ ವೇಗ ಹೆಚ್ಚಿನ ಸಂದರ್ಭಗಳಲ್ಲಿ 55ಕ್ಕಿಂತ  ಅಧಿಕವಾಗಿರುತ್ತದೆ. ಗರಿಷ್ಠ ಆದ್ಯತೆಯ ಗ್ರೀನ್ ಕಾರಿಡಾರ್ ನಲ್ಲಿ ಸಂಚರಿಸುವ ರೈಲುಗಳು ಅತ್ಯಂತ ತುರ್ತು ಮತ್ತು ಅತ್ಯಂತ ಕಷ್ಟಕರ ಸಂದರ್ಭಗಳಲ್ಲಿ ನಾನಾ ವಲಯಗಳ ಕಾರ್ಯಾಚರಣೆ ತಂಡಗಳು ಆಕ್ಸಿಜನ್ ಎಕ್ಸ್ ಪ್ರೆಸ್ ರೈಲು ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ತಲುಪುವುದನ್ನು ಖಾತ್ರಿಪಡಿಸಲು ಹಗಲಿರುಳು ಶ್ರಮಿಸುತ್ತಿವೆ. ನಾನಾ ಮಾರ್ಗಗಳಲ್ಲಿ ಸಿಬ್ಬಂದಿಯ ಬದಲಾವಣೆಗಾಗಿ ತಾಂತ್ರಿಕ ನಿಲುಗಡೆಯಾಗುವ ಸಮಯವನ್ನು ಒಂದು ನಿಮಿಷಕ್ಕೆ ಇಳಿಸಲಾಗಿದೆ.

ಆಕ್ಸಿಜನ್ ಎಕ್ಸ್ ಪ್ರೆಸ್ ರೈಲುಗಳಿಗಾಗಿ ಮಾರ್ಗಗಳನ್ನು ಮುಕ್ತವಾಗಿರಿಸಲಾಗಿದೆ ಮತ್ತು  ಅವು ಜಿಪ್ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಗರಿಷ್ಠ ಜಾಗರೂಕತೆಯನ್ನು ಕಾಯ್ದುಕೊಳ್ಳಲಾಗುತ್ತಿದೆ

ಎಲ್ಲ  ಸರಕು ಕಾರ್ಯಾಚರಣೆಯನ್ನು ರೈಲಿನ ವೇಗ ತಗ್ಗದ ರೀತಿಯಲ್ಲಿ ರೂಪಿಸಲಾಗಿದೆ.

ಹೊಸ ಆಕ್ಸಿಜನ್ ರೈಲುಗಳ ಸಂಚಾರ ಕ್ರಿಯಾತ್ಮಕ ಪ್ರಕ್ರಿಯೆಯಾಗಿದ್ದು, ಅವುಗಳ ಅಂಕಿ-ಅಂಶ ಸದಾ ಪರಿಷ್ಕೃತವಾಗುತ್ತಿರುತ್ತದೆ. ಇನ್ನೂ ಹೆಚ್ಚು ಆಕ್ಸಿಜನ್ ಎಕ್ಸ್ ಪ್ರೆಸ್ ರೈಲುಗಳು ರಾತ್ರಿಯ ನಂತರ ಪ್ರಯಾಣ ಆರಂಭಿಸುವ ಸಾಧ್ಯತೆ ಇದೆ.

***



(Release ID: 1721376) Visitor Counter : 221