ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಆಂಫೊಟೆರಿಸಿನ್-ಬಿ ಕೊರತೆ ಸದ್ಯದಲ್ಲೇ ನಿವಾರಣೆ- ಶ್ರೀ ಮನ್ಸುಖ್ ಮಾಂಡವಿಯ


ಭಾರತದಲ್ಲಿಯೇ ಮೂರು ದಿನಗಳಲ್ಲಿ ಔಷಧ ಉತ್ಪಾದಿಸಲು ಐದು ಫಾರ್ಮಾ ಕಂಪನಿಗಳಿಗೆ ಅನುಮೋದನೆ

6 ಲಕ್ಷ ವೈಯಲ್ಸ್ ಆಂಫೊಟೆರಿಸಿನ್-ಬಿ ಆಮದಿಗೆ ಭಾರತೀಯ ಕಂಪನಿಗಳಿಂದ ಬೇಡಿಕೆ ಸಲ್ಲಿಕೆ

Posted On: 20 MAY 2021 7:03PM by PIB Bengaluru

ಆಂಫೊಟೆರಿಸಿನ್-ಬಿ ಕೊರತೆಯನ್ನು ಸದ್ಯದಲ್ಲೇ ನಿವಾರಿಸಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಶ್ರೀ ಮನ್ಸುಖ್ ಮಾಂಡವಿಯ ತಿಳಿಸಿದ್ದಾರೆ. ಆಂಫೊಟೆರಿಸಿನ್-ಬಿ ಔಷಧವನ್ನು ಮ್ಯೂಕರ್ ಮೈಕೋಸಿಸ್ ಚಿಕಿತ್ಸೆಗೆ ಬಳಸಲಾಗುವುದು.

https://twitter.com/mansukhmandviya/status/1395366089916260352?s=20

ಹಾಲಿ ಆರು ಫಾರ್ಮಾ ಕಂಪನಿಗಳ ಜೊತೆಗೆ ಇದೀಗ ಹೊಸದಾಗಿ 5 ಫಾರ್ಮಾ ಕಂಪನಿಗಳಿಗೆ ಭಾರತದಲ್ಲಿಯೇ ಔಷಧ ಉತ್ಪಾದನೆಗೆ ಅನುಮೋದನೆ ನೀಡಲಾಗಿದೆ. ಹಾಲಿ ಇರುವ ಕಂಪನಿಗಳೂ ಸಹ ಈಗಾಗಲೇ ತಮ್ಮ ಉತ್ಪಾದನೆಯನ್ನು ಹೆಚ್ಚಿಸಲು ಅಗತ್ಯ ಕ್ರಮಗಳನ್ನು ಆರಂಭಿಸಿವೆ ಎಂದು ಅವರು ಹೇಳಿದರು.

ಅಲ್ಲದೆ, ಭಾರತೀಯ ಕಂಪನಿಗಳು 6 ಲಕ್ಷ ಆಂಫೊಟೆರಿಸಿನ್-ಬಿ ಔಷಧವನ್ನು ಆಮದು ಮಾಡಿಕೊಳ್ಳಲು ಬೇಡಿಕೆಯನ್ನು ಸಲ್ಲಿಸಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಪರಿಸ್ಥಿತಿಯನ್ನು ಸುಗಮಗೊಳಿಸಲು ಸರ್ಕಾರ ಸರ್ವ ಪ್ರಯತ್ನಗಳನ್ನು ನಡೆಸುತ್ತಿದೆ ಎಂದು ಶ್ರೀ ಮಾಂಡವಿಯ ಹೇಳಿದ್ದಾರೆ.

***


(Release ID: 1720397) Visitor Counter : 188