ರೈಲ್ವೇ ಸಚಿವಾಲಯ

ಆಕ್ಸಿಜನ್ ಎಕ್ಸ್ ಪ್ರೆಸ್ ಗಳು 8700 ಮೆ.ಟನ್ ಗಿಂತ ಹೆಚ್ಚಿನ ದ್ರವ ವೈದ್ಯಕೀಯ ಆಮ್ಲಜನಕವನ್ನು ರಾಷ್ಟ್ರದಲ್ಲಿ ತಲುಪಿಸುತ್ತವೆ


ಆಮ್ಲಜನಕ ಪೂರೈಕೆಯನ್ನು ಹೆಚ್ಚಿಸಲು ಒಂದು ಆಕ್ಸಿಜನ್ ಎಕ್ಸ್ ಪ್ರೆಸ್ 118 ಮೆ.ಟನ್ ನೊಂದಿಗೆ ಕೇರಳದತ್ತ ಸಾಗುತ್ತಿದೆ

139 ಆಕ್ಸಿಜನ್ ಎಕ್ಸ್ ಪ್ರೆಸ್ಗಳು ಈವರೆಗೆ ತಮ್ಮ ಪ್ರಯಾಣವನ್ನು ಪೂರ್ಣಗೊಳಿಸಿವೆ

ಆಕ್ಸಿಜನ್ ಎಕ್ಸ್ ಪ್ರೆಸ್ ಗಳು ಪ್ರತಿದಿನ ಸುಮಾರು 800 ಮೆ.ಟನ್ ಎಲ್ಎಂಒಗಳನ್ನು ರಾಷ್ಟ್ರದಲ್ಲಿ ತಲುಪಿಸುತ್ತವೆ

ಆಂಧ್ರಪ್ರದೇಶ 40 ಎಂಟಿ ಎಲ್ಎಂಒ ಹೊಂದಿರುವ ಮೊದಲ ಆಕ್ಸಿಜನ್ ಎಕ್ಸ್ ಪ್ರೆಸ್ ಪಡೆಯುತ್ತದೆ

ಆಮ್ಲಜನಕವನ್ನು ಆಕ್ಸಿಜನ್ ಎಕ್ಸ್ಪ್ರೆಸ್ಗಳು ಉತ್ತರಾಖಂಡ, ಕರ್ನಾಟಕ, ಮಹಾರಾಷ್ಟ್ರ,  ಮಧ್ಯಪ್ರದೇಶ, ಆಂಧ್ರಪ್ರದೇಶ, ರಾಜಸ್ಥಾನ, ತಮಿಳುನಾಡು, ಹರಿಯಾಣ, ತೆಲಂಗಾಣ, ಪಂಜಾಬ್, ಕೇರಳ, ದೆಹಲಿ ಮತ್ತು  ಉತ್ತರ ಪ್ರದೇಶ ರಾಜ್ಯಗಳಿಗೆ  ತಲುಪಿಸುತ್ತಿವೆ.

ಮಹಾರಾಷ್ಟ್ರದಲ್ಲಿ ಇಲ್ಲಿಯವರೆಗೆ 521 ಮೆ.ಟನ್, ಯುಪಿಯಲ್ಲಿ ಸುಮಾರು 2350 ಮೆ.ಟನ್, ಎಂಪಿಯಲ್ಲಿ 430 ಮೆ.ಟನ್, ಹರಿಯಾಣದಲ್ಲಿ 1228 ಮೆ.ಟನ್, ತೆಲಂಗಾಣದಲ್ಲಿ 308 ಮೆ.ಟನ್, ರಾಜಸ್ಥಾನದಲ್ಲಿ 40 ಮೆ.ಟನ್, ಕರ್ನಾಟಕದಲ್ಲಿ 361 ಮೆ.ಟನ್, ಉತ್ತರಾಖಂಡದಲ್ಲಿ 200 ಮೆ.ಟನ್, 111 ಮೆ.ಟನ್ ತಮಿಳುನಾಡಿನಲ್ಲಿ, ಆಂಧ್ರಪ್ರದೇಶದಲ್ಲಿ 40 ಮೆ.ಟನ್ ಮತ್ತು ದೆಹಲಿಯಲ್ಲಿ 3084 ಮೆ.ಟನ್ ಆಮ್ಲಜನಕವನ್ನು ತಲುಪಿಸಲಾಗಿದೆ.

Posted On: 15 MAY 2021 6:05PM by PIB Bengaluru

ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಹೊಸ ಪರಿಹಾರಗಳನ್ನು ಕಂಡುಕೊಳ್ಳುತ್ತಿರುವ ಭಾರತೀಯ ರೈಲ್ವೆಯು ದೇಶಾದ್ಯಂತ ವಿವಿಧ ರಾಜ್ಯಗಳಿಗೆ ದ್ರವ ವೈದ್ಯಕೀಯ ಆಮ್ಲಜನಕವನ್ನು (ಎಲ್ಎಂಒ) ತಲುಪಿಸುವ ಮೂಲಕ ಪರಿಹಾರ ಕಾರ್ಯವನ್ನು ಮುಂದುವರಿಸಿದೆ.  ಇಲ್ಲಿಯವರೆಗೆ, ಭಾರತೀಯ ರೈಲ್ವೆಯು 540 ಕ್ಕೂ ಹೆಚ್ಚು ಟ್ಯಾಂಕರ್ ಗಳಲ್ಲಿ 8700 ಮೆಟ್ರಿಕ್ ಟನ್ಗಿಂತ ಹೆಚ್ಚಿನ ಎಲ್ಎಂಒವನ್ನು ದೇಶದ ವಿವಿಧ ರಾಜ್ಯಗಳಿಗೆ ತಲುಪಿಸಿದೆ.

139 ಆಕ್ಸಿಜನ್ ಎಕ್ಸ್ ಪ್ರೆಸ್ ಗಳು ಈವರೆಗೆ ತಮ್ಮ ಪ್ರಯಾಣವನ್ನು ಪೂರ್ಣಗೊಳಿಸಿವೆ ಮತ್ತು ವಿವಿಧ ರಾಜ್ಯಗಳಿಗೆ ಪರಿಹಾರವನ್ನು ಒದಗಿಸಿವೆ ಎನ್ನುವುದನ್ನು ಗಮನಿಸಬಹುದು.

ಈ ಸುದ್ದಿ ಬಿಡುಗಡೆಯ ಸಮಯದವರೆಗೆ, 6 ಆಕ್ಸಿಜನ್ ಎಕ್ಸ್ ಪ್ರೆಸ್ ಗಳು 35 ಟ್ಯಾಂಕರ್ ಗಳಲ್ಲಿ 475 ಮೆ.ಟನ್ ಗಿಂತ ಹೆಚ್ಚಿನ ದ್ರವ ವೈದ್ಯಕೀಯ ಆಮ್ಲಜನಕವನ್ನು ಹೊತ್ತು ಸಾಗುತ್ತಲಿವೆ.

ಆಕ್ಸಿಜನ್ ಎಕ್ಸ್ ಪ್ರೆಸ್ ಗಳು ಕಳೆದ ಕೆಲವು ದಿನಗಳಿಂದ ಪ್ರತಿದಿನ ಸುಮಾರು 800 ಮೆ.ಟನ್ ಎಲ್ಎಂಒಗಳನ್ನು ರಾಷ್ಟ್ರದಲ್ಲಿ ತಲುಪಿಸುತ್ತಿವೆ.

ಕೋರಿಕೊಂಡಿರುವ ರಾಜ್ಯಗಳಿಗೆ ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ಸಾಧ್ಯವಾದಷ್ಟು ಎಲ್ಎಂಒವನ್ನು ತಲುಪಿಸಲು ಭಾರತೀಯ ರೈಲ್ವೆಯ ಪ್ರಯತ್ನವಾಗಿದೆ.

ಆಂಧ್ರಪ್ರದೇಶವು ನೆಲ್ಲೂರಿನಲ್ಲಿ 40 ಎಂಟಿ ಎಲ್ಎಂಒ ಹೊಂದಿರುವ ಮೊದಲ ಆಕ್ಸಿಜನ್ ಎಕ್ಸ್ ಪ್ರೆಸ್  ಅನ್ನು ಪಡೆದುಕೊಂಡಿದೆ.

ಕೇರಳದಲ್ಲಿ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸಲು ಒಂದು ಆಕ್ಸಿಜನ್ ಎಕ್ಸ್ಪ್ರೆಸ್ 118 ಮೆ.ಟನ್ ಲೋಡಿನೊಂದಿಗೆ ಸಾಗುತ್ತಿದೆ.

ಈ ಸುದ್ದಿ ಬಿಡುಗಡೆಯ ಸಮಯದವರೆಗೆ, ಇದುವರೆಗೆ ಮಹಾರಾಷ್ಟ್ರದಲ್ಲಿ 521 ಮೆ.ಟನ್ ಆಕ್ಸಿಜನ್, ಉತ್ತರ ಪ್ರದೇಶದಲ್ಲಿ ಸುಮಾರು 2350 ಮೆ.ಟನ್, ಮಧ್ಯ ಪ್ರದೇಶದಲ್ಲಿ 430 ಮೆ.ಟನ್, ಹರಿಯಾಣದಲ್ಲಿ 1228 ಮೆ.ಟನ್, ತೆಲಂಗಾಣದಲ್ಲಿ 308 ಮೆ.ಟನ್, ರಾಜಸ್ಥಾನದಲ್ಲಿ 40 ಮೆ.ಟನ್, ಕರ್ನಾಟಕದಲ್ಲಿ 361 ಮೆ.ಟನ್, ಉತ್ತರಾಖಂಡದಲ್ಲಿ 200 ಮೆ.ಟನ್, ತಮಿಳುನಾಡಿನಲ್ಲಿ 111 ಮೆ.ಟನ್, ಆಂಧ್ರಪ್ರದೇಶದಲ್ಲಿ 40 ಮೆ.ಟನ್ ಮತ್ತು ದೆಹಲಿಯಲ್ಲಿ 3084 ಮೆ.ಟನ್ ಆಮ್ಲಜನಕವನ್ನು ತಲುಪಿಸಲಾಗಿದೆ.
 
ಹೊಸ ಆಕ್ಸಿಜನ್ ಎಕ್ಸ್ ಪ್ರೆಸ್  ಅನ್ನು ಚಲಾಯಿಸುವುದು ಬಹಳ ಕ್ರಿಯಾತ್ಮಕ ಕ್ರಿಯೆಯಾಗಿದ್ದು ಮತ್ತು ಅಂಕಿಅಂಶಗಳು ಸಾರ್ವಕಾಲಿಕ ಹೊಸದಾಗಿ ಬದಲಾಗುತ್ತಿರುತ್ತವೆ. ಮತ್ತಷ್ಟು ಆಮ್ಲಜನಕ ತುಂಬಿಕೊಂಡ ಆಕ್ಸಿಜನ್ ಎಕ್ಸ್ ಪ್ರೆಸ್ ಗಳು ರಾತ್ರಿಯ ನಂತರ ತಮ್ಮ ಪ್ರಯಾಣವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ.

ರೈಲ್ವೆಯು ವಿವಿಧ ಮಾರ್ಗಗಳನ್ನು ಆಮ್ಲಜನಕ ಪೂರೈಕೆ ಸ್ಥಳಗಳೊಂದಿಗೆ ಯೋಜಿಸಿಕೊಂಡಿದೆ ಮತ್ತು ರಾಜ್ಯಗಳ ಯಾವುದೇ ಮುಂದಿನ ಅಗತ್ಯತೆಗಳೊಂದಿಗೆ ಸಿದ್ಧವಾಗಿದೆ.  ಎಲ್ಎಂಒ ತರಲು ರಾಜ್ಯಗಳು ಭಾರತೀಯ ರೈಲ್ವೆಗೆ ಟ್ಯಾಂಕರ್ಗಳನ್ನು ಒದಗಿಸುತ್ತವೆ.

****



(Release ID: 1718946) Visitor Counter : 185