ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

2 ರಿಂದ 18 ವರ್ಷ ವಯೋಮಾನದವರ ಮೇಲೆ  ʼಕೋವ್ಯಾಕ್ಸಿನ್‌ʼ 2/3 ನೇ ಹಂತದ ಚಿಕಿತ್ಸಾತ್ಮಕ ಪ್ರಯೋಗ ನಡೆಸಲು ಅನುಮೋದನೆ ನೀಡಿದ ಡಿಸಿಜಿಐ


525 ಆರೋಗ್ಯವಂತ ಸ್ವಯಂಸೇವಕರ ಮೇಲೆ ಪ್ರಯೋಗಗಳನ್ನು ನಡೆಸಲಿರುವ ಮೆಸ್ಸರ್ಸ್‌ ಭಾರತ್ ಬಯೋಟೆಕ್

Posted On: 13 MAY 2021 10:35AM by PIB Bengaluru

ಭಾರತದ ಅತ್ಯುನ್ನತ ಔಷಧ ನಿಯಂತ್ರಣ ಪ್ರಾಧಿಕಾರವಾದ ʻಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾʼ (ಡಿಸಿಜಿಐ), ಅತ್ಯಂತ ಎಚ್ಚರಿಕೆಯಿಂದ ಪರಿಶೀಲಿಸಿದ  ಬಳಿಕ 2ರಿಂದ 18 ವರ್ಷ ವಯೋಮಾನದವರ ಮೇಲೆ ಕೊವಾಕ್ಸಿನ್ (ಕೋವಿಡ್ ಲಸಿಕೆ) 2/3ನೇ ಚಿಕಿತ್ಸಾತ್ಮಕ ಪ್ರಯೋಗ ನಡೆಸುವ ಕುರಿತಾಗಿ ವಿಷಯ ತಜ್ಞರ ಸಮಿತಿಯ (ಎಸ್ಇಸಿ) ಶಿಫಾರಸನ್ನು ಅಂಗೀಕರಿಸಿದ್ದು, ನಿಟ್ಟಿನಲ್ಲಿ ಮುಂದುವರಿಯಲು ಲಸಿಕೆ ತಯಾರಿಕಾ ಸಂಸ್ಥೆ ಭಾರತ್ಬಯೋಟೆಕ್ಗೆ 12.05.2021ರಂದು ಅನುಮತಿ ನೀಡಿದೆ.

ಹೈದರಾಬಾದ್ ಮೆಸ್ಸರ್ಸ್ಭಾರತ್ ಬಯೋಟೆಕ್ ಇಂಟರ್ ನ್ಯಾಷನಲ್ ಲಿಮಿಟೆಡ್ (ಬಿಬಿಐಎಲ್) 2ರಿಂದ 18 ವರ್ಷ ವಯಸ್ಸಿನವರ ಮೇಲೆ ಕೊವಾಕ್ಸಿನ್ 2/3 ನೇ ಹಂತದ ಚಿಕಿತ್ಸಾತ್ಮಕ ಪ್ರಯೋಗವನ್ನು ನಡೆಸಲು ಪ್ರಸ್ತಾಪಿಸಿತ್ತು. ಪ್ರಯೋಗವನ್ನು 525 ಆರೋಗ್ಯವಂತ ಸ್ವಯಂಸೇವಕರ ಮೇಲೆ ನಡೆಸಲಾಗುತ್ತದೆ.

ಪ್ರಯೋಗದಲ್ಲಿ, 0 ನೇ ದಿನ ಮತ್ತು 28 ನೇ ದಿನದಗಳಂದು ತಲಾ ಒಂದು ಡೋಸ್ನಂತೆ ಒಟ್ಟು ಎರಡು ಡೋಸ್ಗಳಲ್ಲಿ ಚರ್ಮದ ಕೆಳಭಾಗಕ್ಕೆ ಚುಚ್ಚುಮದ್ದು ರೂಪದಲ್ಲಿ ಲಸಿಕೆಯನ್ನು ನೀಡಲಾಗುತ್ತದೆ.

ತ್ವರಿತ ನಿಯಂತ್ರಣ ಪ್ರತಿಕ್ರಿಯೆಯ ಭಾಗವಾಗಿ, ಪ್ರಸ್ತಾಪವನ್ನು ವಿಷಯ ತಜ್ಞರ ಸಮಿತಿಗೆ (ಎಸ್ಇಸಿ) (ಕೋವಿಡ್-19) ಸಲ್ಲಿಸಲಾಗಿತ್ತು. ಸಮಿತಿಯು ವಿಸ್ತೃತ ಚರ್ಚೆಯ ಬಳಿಕ 11.05.2021 ರಂದು ಕೆಲವು ಷರತ್ತುಗಳಿಗೆ ಉದ್ದೇಶಿತ 2/3ನೇ ಹಂತದ ಚಿಕಿತ್ಸಾತ್ಮಕ ಪ್ರಯೋಗವನ್ನು ನಡೆಸಲು ಅನುಮತಿ ನೀಡಲು ಶಿಫಾರಸು ಮಾಡಿದೆ.

***


(Release ID: 1718293) Visitor Counter : 287