ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಬಿ.1.617 ಸೋಂಕನ್ನು ‘ಭಾರತೀಯ ರೂಪಾಂತರ’ವೆಂದು ಡಬ್ಲ್ಯೂಎಚ್ಒ ಸಂಯೋಜಿಸಿಲ್ಲ; ಇದೀಗ ಆ ರೂಪಾಂತರ ಸೋಂಕು ಕಳವಳಕಾರಿಯೆಂದು ವರ್ಗೀಕರಣ
Posted On:
12 MAY 2021 12:57PM by PIB Bengaluru
ಬಿ.1.617 ರೂಪಾಂತರಿ ವೈರಸ್ ಅನ್ನು ಜಾಗತಿಕ ಆತಂಕಕಾರಿ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ) ವರ್ಗೀಕರಿಸಿದೆ ಎಂಬ ಸುದ್ದಿಗಳನ್ನು ಹಲವು ಸಾಮಾಜಿಕ ಮಾಧ್ಯಮಗಳಲ್ಲಿ ವರದಿ ಮಾಡಿವೆ. ಇಂತಹ ಕೆಲವು ವರದಿಗಳಲ್ಲಿ, ಬಿ.1.617 ರೂಪಾಂತರಿ ಕೊರೊನಾ ಸೋಂಕನ್ನು ‘ಭಾರತೀಯ ರೂಪಾಂತರ’ ಎಂದು ಬಣ್ಣಿಸಿರುವುದಾಗಿ ವರದಿಯಾಗಿದೆ.
ಈ ಮಾಧ್ಯಮ ವರದಿಗಳಿಗೆ ಯಾವುದೇ ಆಧಾರವಿಲ್ಲ ಮತ್ತು ಅದಕ್ಕೆ ಪುರಾವೆ ದೊರೆತಿಲ್ಲ.
ವಿಶ್ವ ಆರೋಗ್ಯ ಸಂಸ್ಥೆ ತನ್ನ 32 ಪುಟಗಳ ದಾಖಲೆಯಲ್ಲಿ, ಬಿ.1.617 ರೂಪಾಂತರಿ ಸೋಂಕನ್ನು ‘ಭಾರತೀಯ ರೂಪಾಂತರ’ ಎಂದು ಸಂಯೋಜಿಸಿರುವುದಕ್ಕೂ ತನಗೂ ಸಂಬಂಧವಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸಿದೆ.
ಆ ವಿಷಯಕ್ಕೆ ಸಂಬಂಧಿಸಿದಂತೆ ತನ್ನ ವರದಿಯಲ್ಲಿ ಎಲ್ಲೂ ‘ಭಾರತೀಯ’ ಎಂಬ ಪದವನ್ನು ಬಳಕೆ ಮಾಡಿಲ್ಲ ಎಂಬುದು ವಾಸ್ತವಾಂಶವಾಗಿದೆ.
***
(Release ID: 1717988)
Visitor Counter : 350