ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಚಿಕಿತ್ಸೆಯ ನಿರ್ವಹಣೆ ಕುರಿತ ಹೊಸ ಮಾಹಿತಿ


ರೋಗಿಗಳ ಬಗ್ಗೆ ಹೆಚ್ಚು ಗಮನ ಹರಿಸಲು, ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳ ದಾಖಲಾತಿ ಬಗ್ಗೆ ರಾಷ್ಟ್ರೀಯ ನೀತಿಯನ್ನು ಪರಿಷ್ಕರಿಸಲಾಗಿದೆ

ಕೋವಿಡ್-19 ವೈರಸ್ಸಿನ ಪಾಸಿಟಿವ್ ಪರೀಕ್ಷೆಯು ಕೋವಿಡ್ ಆರೋಗ್ಯ ಸೌಲಭ್ಯಕ್ಕೆ ದಾಖಲಾಗಲು ಈಗ ಕಡ್ಡಾಯವಿಲ್ಲ.

ಯಾವುದೇ ರೋಗಿಗೂ ಸೇವೆಯನ್ನು ಯಾವುದೇ ಕಾರಣಕ್ಕೂ ನಿರಾಕರಿಸಲಾಗುವುದಿಲ್ಲ

Posted On: 08 MAY 2021 2:31PM by PIB Bengaluru

ರಾಜ್ಯಗಳಿಗೆ ನೀಡಿದ ಮಹತ್ವದ ನಿರ್ದೇಶನದಲ್ಲಿ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕೋವಿಡ್ ರೋಗಿಗಳನ್ನು ವಿವಿಧ ವರ್ಗದ ಕೋವಿಡ್ ಸೌಲಭ್ಯಗಳಿಗೆ ದಾಖಲು ಮಾಡುವ ರಾಷ್ಟ್ರೀಯ ನೀತಿಯನ್ನು ಪರಿಷ್ಕರಿಸಿದೆ. ರೋಗಿಗಳ ಕೇಂದ್ರಿತ ಕಾರ್ಯವು ಕೋವಿಡ್ 19 ರಿಂದ ಬಳಲುತ್ತಿರುವ ರೋಗಿಗಳ ತ್ವರಿತ, ಪರಿಣಾಮಕಾರಿ ಮತ್ತು ಸಮಗ್ರ ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ.

ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು  ಕೇಂದ್ರ ಸರ್ಕಾರದ ನಿರ್ದೇಶನದಂತೆ, ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರದ ಆಡಳಿತವು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕೋವಿಡ್ ರೋಗಿಗಳನ್ನು ನಿರ್ವಹಿಸುವ ಆಸ್ಪತ್ರೆಗಳುಖಾಸಗಿ ಆಸ್ಪತ್ರೆಗಳು (ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ) ಸೇರಿದಂತೆ ಕೆಳಗಿನವುಗಳನ್ನು ಖಚಿತಪಡಿಸುತ್ತದೆ:

. ಕೋವಿಡ್ 19 ವೈರಸ್ಗೆ ಪಾಸಿಟಿವ್ ಪರೀಕ್ಷೆಯ ಅವಶ್ಯಕತೆಯು ಕೋವಿಡ್ ಆರೋಗ್ಯ ಕೇಂದ್ರಕ್ಕೆ ದಾಖಲಾಗಲು ಕಡ್ಡಾಯವಲ್ಲಸಿಸಿಸಿ, ಡಿಸಿಎಚ್ಸಿ ಅಥವಾ ಡಿಎಚ್ಸಿನ ಶಂಕಿತ ವಾರ್ಡ್ಗೆ ಪ್ರಕರಣಕ್ಕನುಸಾರವಾಗಿ ಶಂಕಿತ ಪ್ರಕರಣವನ್ನು ದಾಖಲಿಸಲಾಗುವುದು.

ಬಿ. ಯಾವುದೇ ರೋಗಿಗೆ ಯಾವುದೇ ಕಾರಣಕ್ಕೂ ಸೇವೆಗಳನ್ನು ನಿರಾಕರಿಸಲಾಗುವುದಿಲ್ಲ. ರೋಗಿಯು ಬೇರೆ ನಗರಕ್ಕೆ ಸೇರಿದ್ದರೂ ಸಹ ಆಮ್ಲಜನಕ ಅಥವಾ ಅಗತ್ಯ ಔಷಧಿಗಳಂತಹ  ಸೌಲಭ್ಯಗಳನ್ನು ಇದು ಒಳಗೊಂಡಿದೆ.

ಸಿ. ಆಸ್ಪತ್ರೆ ಇರುವ ನಗರಕ್ಕೆ ಸೇರದ ಮಾನ್ಯ ಗುರುತಿನ ಚೀಟಿಯನ್ನು ತೋರಿಸಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಯಾವುದೇ ರೋಗಿಗೆ ದಾಖಲಾತಿಯನ್ನು ನಿರಾಕರಿಸಲಾಗುವುದಿಲ್ಲ.

ಡಿ. ಆಸ್ಪತ್ರೆಗೆ ದಾಖಲಾತಿಯು ಅಗತ್ಯವನ್ನು ಆಧರಿಸಿರಬೇಕು. ಆಸ್ಪತ್ರೆಯ ಅಗತ್ಯವಿಲ್ಲದ ವ್ಯಕ್ತಿಗಳು ಹಾಸಿಗೆಗಳಲ್ಲಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಇದಲ್ಲದೆ, ಆಸ್ಪತ್ರೆಯಿಂದ ಬಿಡುಗಡೆಯಾಗುವುದು https://www.mohfw.gov.in/pdf/ReviseddischargePolicyforCOVID19.pdf ನಲ್ಲಿ ಲಭ್ಯವಿರುವ ಪರಿಷ್ಕೃತ ಡಿಸ್ಚಾರ್ಜ್ ನೀತಿಗೆ ಅನುಗುಣವಾಗಿರಬೇಕು.

ಮೇಲಿನ ಆದೇಶಗಳನ್ನು ಮೂರು ದಿನಗಳೊಳಗೆ ಅಗತ್ಯ ಆದೇಶಗಳು ಮತ್ತು ಸುತ್ತೋಲೆಗಳನ್ನು ಹೊರಡಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯಗಳು / ಕೇಂದ್ರ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದೆ, ಇದನ್ನು ಸೂಕ್ತವಾದ ಏಕರೂಪದ ನೀತಿಯಿಂದ ಬದಲಾಯಿಸುವವರೆಗೆ ಜಾರಿಗೊಳಿಸಲಾಗುತ್ತದೆ.

ಶಂಕಿತ / ದೃಢಪಡಿಸಿದ ಕೋವಿಡ್-19 ಪ್ರಕರಣಗಳ ಸೂಕ್ತ ನಿರ್ವಹಣೆಗಾಗಿ ಮೂರು ಹಂತದ ಆರೋಗ್ಯ ಮೂಲಸೌಕರ್ಯಗಳನ್ನು ಸ್ಥಾಪಿಸುವ ನೀತಿಯನ್ನು ಆರೋಗ್ಯ ಸಚಿವಾಲಯ ಹಿಂದೆ ತಿಳಿಸಿದೆ. 7 ಏಪ್ರಿಲ್ 2020 ರಂದು ನಿಟ್ಟಿನಲ್ಲಿ ನೀಡಲಾದ ಮಾರ್ಗದರ್ಶನ ದಸ್ತಾವೇಜು, ಇವುಗಳನ್ನು ಸ್ಥಾಪಿಸಲು ಉದ್ದೇಶಿಸಿದೆ:

. ಕೋವಿಡ್ ಕೇರ್ ಸೆಂಟರ್ (ಸಿಸಿಸಿ) ಇದು ಸೌಮ್ಯ ಪ್ರಕರಣಗಳಿಗೆ ಆರೈಕೆ ನೀಡುತ್ತದೆ. ಸಾರ್ವಜನಿಕ ಮತ್ತು ಖಾಸಗಿ ವಸತಿ ನಿಲಯಗಳು, ಹೋಟೆಲ್ಗಳು, ಶಾಲೆಗಳು, ಕ್ರೀಡಾಂಗಣಗಳು, ವಸತಿಗೃಹಗಳಲ್ಲಿ ಇವುಗಳನ್ನು ಸ್ಥಾಪಿಸಲಾಗಿದೆಸಿಎಚ್ಸಿಗಳಂತಹ ಆಸ್ಪತ್ರೆಗಳು ನಿಯಮಿತ, ಕೋವಿಡ್ ಅಲ್ಲದ ಪ್ರಕರಣಗಳನ್ನು ನಿರ್ವಹಿಸುತ್ತಿರಬಹುದು, ಇದನ್ನು ಕೊನೆಯ ಉಪಾಯವಾಗಿ ಕೋವಿಡ್ ಆರೈಕೆ ಕೇಂದ್ರಗಳೆಂದು ಗೊತ್ತುಪಡಿಸಬಹುದು.

ಬಿ. ಮೀಸಲಾದ ಕೋವಿಡ್ ಆರೋಗ್ಯ ಕೇಂದ್ರ (ಡಿಸಿಹಚ್.ಸಿ), ಇದು ಪ್ರಾಯೋಗಿಕವಾಗಿ ಮಧ್ಯಮ ಎಂದು ನಿಯೋಜಿಸಲಾದ ಎಲ್ಲಾ ಪ್ರಕರಣಗಳಿಗೆ ಸೇವೆನ್ನು ನೀಡುತ್ತದೆ. ಇವುಗಳು ಪೂರ್ಣ ಆಸ್ಪತ್ರೆ ಅಥವಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಪ್ರವೇಶ / ನಿರ್ಗಮನ / ವಲಯ ಹೊಂದಿರುವ ಪ್ರತ್ಯೇಕ ಬ್ಲಾಕ್ ಆಗಿರಬೇಕುಖಾಸಗಿ ಆಸ್ಪತ್ರೆಗಳನ್ನು ಕೋವಿಡ್ ಆರೋಗ್ಯ ಕೇಂದ್ರಗಳೆಂದು ಗೊತ್ತುಪಡಿಸಬಹುದು. ಆಸ್ಪತ್ರೆಗಳು ಆಕ್ಸಿಜನ್ ಸೌಲಭ್ಯ ಹೊಂದಿರುವ  ಹಾಸಿಗೆಗಳನ್ನು ಹೊಂದಿರುತ್ತವೆ.

ಸಿ. ಮೀಸಲಾದ ಕೋವಿಡ್ ಆಸ್ಪತ್ರೆ (ಡಿಸಿಎಚ್) ಪ್ರಾಥಮಿಕವಾಗಿ ತೀವ್ರವಾಗಿ ನಿಯೋಜಿಸಲ್ಪಟ್ಟವರಿಗೆ ಸಮಗ್ರ ಆರೈಕೆಯನ್ನು ನೀಡುತ್ತದೆ ಆಸ್ಪತ್ರೆಗಳು ಪೂರ್ಣ ಆಸ್ಪತ್ರೆ ಅಥವಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಬ್ಲಾಕ್ / ಮೇಲಾಗಿ ಪ್ರತ್ಯೇಕ ಪ್ರವೇಶ / ನಿರ್ಗಮನವನ್ನು ಹೊಂದಿರಬೇಕು. ಖಾಸಗಿ ಆಸ್ಪತ್ರೆಗಳನ್ನು ಕೋವಿಡ್ ಡೆಡಿಕೇಟೆಡ್ ಆಸ್ಪತ್ರೆಗಳೆಂದು ಗೊತ್ತುಪಡಿಸಬಹುದು. ಆಸ್ಪತ್ರೆಗಳು ಐಸಿಯುಗಳು, ವೆಂಟಿಲೇಟರ್ಗಳು ಮತ್ತು ಹಾಸಿಗೆಗಳನ್ನು ಸಂಪೂರ್ಣ ಆಕ್ಸಿಜನ್ ಸೌಲಭ್ಯಗಳೊಂದಿಗೆ ಹೊಂದಿರುವವು.

ಮೇಲೆ ತಿಳಿಸಿದ ಕೋವಿಡ್ ಆರೋಗ್ಯ ಮೂಲಸೌಕರ್ಯವನ್ನು ಸಿ.ಸಿ.ಸಿ.ಗೆ ಸೌಮ್ಯ ಪ್ರಕರಣಗಳನ್ನು ದಾಖಲಿಸಲು  ಚಿಕಿತ್ಸೆಯ ನಿರ್ವಹಣೆ ಶಿಷ್ಟಾಚಾರ ನಿಯಮಾವಳಿಗೆ ಜೋಡಿಸಲಾಗಿದೆ, ಮಧ್ಯಮ ಪ್ರಕರಣಗಳನ್ನು ಡಿಸಿಎಚ್ ಸಿಗೆ ಮತ್ತು ತೀವ್ರತರವಾದ ಪ್ರಕರಣಗಳನ್ನು ಡಿಸಿಎಚ್ ಗೆ ಸೇರಿಸಲಾಗಿದೆ.

***


(Release ID: 1717332) Visitor Counter : 308