ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
ದೇಶಾದ್ಯಂತ ರೆಮ್ ಡಿಸಿವಿರ್ ಸೂಕ್ತ ಲಭ್ಯತೆ ಖಾತ್ರಿಪಡಿಸಲು 2021ರ ಮೇ 16ರವರೆಗೆ ಔಷಧ ಹಂಚಿಕೆ – ಶ್ರೀ ಡಿ.ವಿ.ಸದಾನಂದ ಗೌಡ
Posted On:
07 MAY 2021 1:48PM by PIB Bengaluru
ಪ್ರತಿಯೊಂದು ರಾಜ್ಯದ ರೆಮ್ ಡಿಸಿವಿರ್ ಅಗತ್ಯವನ್ನು ಪರಿಗಣಿಸಿ ಮತ್ತು ಅದರ ಸೂಕ್ತ ಲಭ್ಯತೆ ಖಾತ್ರಿಪಡಿಸಲು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಶ್ರೀ ಡಿ.ವಿ.ಸದಾನಂದ ಗೌಡ ಇಂದು 2021ರ ಮೇ 16ರವರೆಗೆ ರೆಮ್ ಡಿಸಿವಿರ್ ಹಂಚಿಕೆ ಮಾಡಿರುವುದನ್ನು ಪ್ರಕಟಿಸಿದರು. ಇದರಿಂದಾಗಿ ದೇಶಾದ್ಯಂತ ರೆಮ್ ಡಿಸಿವಿರ್ ಪೂರೈಕೆ ಸುಗಮವಾಗಿ ನಡೆಯುವುದು ಖಾತ್ರಿಯಾಗುವುದಲ್ಲದೆ, ಸಾಂಕ್ರಾಮಿಕದ ಸಂದರ್ಭದಲ್ಲಿ ಯಾವುದೇ ರೋಗಿ ಕಷ್ಟಪಡಬೇಕಾಗಿಲ್ಲ ಎಂದು ಅವರು ಹೇಳಿದರು.
ಫಾರ್ಮಸಿಟಿಕಲ್ಸ್ ಇಲಾಖೆ ಮತ್ತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಎಲ್ಲ ರಾಜ್ಯಗಳಿಗೆ ಪತ್ರ ಬರೆದು, 2021ರ ಏಪ್ರಿಲ್ 21ರಿಂದ ಮೇ 9ರ ವರೆಗೆ ರೆಮ್ ಡಿಸಿವಿರ್ ಔಷಧ ಹಂಚಿಕೆ ಯೋಜನೆಯನ್ನು ಮುಂದುವರಿಸಿರುವುದಾಗಿ ಉಲ್ಲೇಖಿಸಿ 2021ರ ಮೇ 21ರಂದು ರವಾನೆ ಆದೇಶವನ್ನು ಪ್ರಕಟಿಸಲಾಗಿದೆ. 2021ರ ಏಪ್ರಿಲ್ 21ರಿಂದ ಮೇ 16ರ ಅವಧಿಗೆ ಮಾಡಿರುವ ಪರಿಷ್ಕೃತ ಹಂಚಿಕೆ ಯೋಜನೆಯನ್ನು ಫಾರ್ಮಸಿಟಿಕಲ್ಸ್ ಇಲಾಖೆ ಮತ್ತು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಜಂಟಿಯಾಗಿ ಸಿದ್ಧಪಡಿಸಿದೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆಯನ್ನು ಮಾಡಲಾಗಿದೆ ಮತ್ತು ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ತಮ್ಮ ತಮ್ಮ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶದ ವ್ಯಾಪ್ತಿಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಸೂಕ್ತ ಮತ್ತು ನ್ಯಾಯಯುತ ಬಳಕೆಗೆ ವಿತರಣೆ ಮಾಡಿ ಅದರ ಮೇಲೆ ನಿಗಾವಹಿಸುವಂತೆ ಸೂಚಿಸಿದೆ.
ಈಗಾಗಲೇ ಖರೀದಿ ಆದೇಶವನ್ನು ಸಲ್ಲಿಸಿಲ್ಲವಾದರೆ ತಕ್ಷಣವೇ ಮಾರುಕಟ್ಟೆ ಕಂಪನಿಗಳಿಗೆ ಸೂಕ್ತ ಖರೀದಿ ಆದೇಶವನ್ನು ಸಲ್ಲಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ. ಕಂಪನಿಯ ಸಮನ್ವಯ ಅಧಿಕಾರಿಗಳ ಜೊತೆ ನಿಕಟ ಸಮನ್ವಯದೊಂದಿಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪೂರೈಕೆ ಸರಣಿಯ ಮೂಲಕ ತಾವು ಖರೀದಿಸಲು ಬಯಸಿರುವ ಪ್ರಮಾಣವನ್ನು ತಿಳಿಸುವಂತೆ ಸೂಚಿಸಲಾಗಿದೆ. ರಾಜ್ಯದಲ್ಲಿನ ಖಾಸಗಿ ವಿತರಣಾ ಜಾಲದ ಮೂಲಕವೂ ಸಮನ್ವಯ ಸಾಧಿಸಲು ಅವಕಾಶ ಕಲ್ಪಿಸಲಾಗಿದೆ.
****
(Release ID: 1716848)
Visitor Counter : 305