ಪ್ರಧಾನ ಮಂತ್ರಿಯವರ ಕಛೇರಿ

ಕೋವಿಡ್-19 ವಿರುದ್ಧದ ಸಮರದಲ್ಲಿ ಸೇನಾ ಪಡೆಗಳ ಪಾತ್ರ ಶ್ಲಾಘಿಸಿದ ಪ್ರಧಾನಮಂತ್ರಿ

Posted On: 06 MAY 2021 6:00PM by PIB Bengaluru

 ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೋವಿಡ್-19 ವಿರುದ್ಧದ ಸಮರದಲ್ಲಿ ಸೇನಾಪಡೆಗಳು ವಹಿಸುತ್ತಿರುವ ಪಾತ್ರವನ್ನು ಶ್ಲಾಘಿಸಿದ್ದಾರೆ.

ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಅವರು ಬರೆದಿರುವ “ಅಗೋಚರ ಶತೃವಿನ ವಿರುದ್ಧ ಹೋರಾಟ; ಕೋವಿಡ್-19 ಬಿಕ್ಕಟ್ಟಿಗೆ ರಕ್ಷಣಾ ಸಚಿವಾಲಯದ ಪ್ರತಿ ಸ್ಪಂದನೆ” ಎಂಬ ಲೇಖನವನ್ನು ಉಲ್ಲೇಖಿಸಿ ಪ್ರಧಾನಮಂತ್ರಿ ಅವರು  ಟ್ವೀಟ್ ಮಾಡಿದ್ದಾರೆ.

ಅವರು ‘ಜಲ್’(ನೀರು), ‘ಥಲ್’(ನೆಲ), ಮತ್ತು ‘ನಭ’(ಆಗಸ)  ಇಲ್ಲಿ ನಮ್ಮ ಸೇನಾ ಪಡೆಗಳು ಕೋವಿಡ್-19 ವಿರುದ್ಧದ ಹೋರಾಟ ಬಲವರ್ಧನೆಯಲ್ಲಿ ಯಾವುದೇ ಅವಕಾಶಗಳನ್ನು ಬಿಡದೆ ಶ್ರಮಿಸುತ್ತಿವೆ ಎಂದು ಹೇಳಿದ್ದಾರೆ.  

 


 

*****(Release ID: 1716660) Visitor Counter : 31