ಬಾಹ್ಯಾಕಾಶ ವಿಭಾಗ

ದೇಶದಲ್ಲಿ ಕೋವಿಡ್-19 ಮೂಲ ಸೌಕರ್ಯ ಹೆಚ್ಚಿಸಲು ಬಾಹ್ಯಾಕಾಶ ಇಲಾಖೆ ಮುಂದಾಗಿದೆ: ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್


ತಮಿಳುನಾಡು ಮತ್ತು ಕೇರಳಕ್ಕೆ ನಿರಂತರವಾಗಿ ದ್ರವ ಆಮ್ಲಜನಕ ಪೂರೈಕೆ

Posted On: 06 MAY 2021 6:02PM by PIB Bengaluru

ಕೋವಿಡ್ ಸಂಬಂಧಿತ ಕ್ರಮಗಳಿಗೆ ಬಾಹ್ಯಾಕಾಶ ಇಲಾಖೆ ಬೆಂಬಲ ನೀಡುತ್ತಿದ್ದು, ನಿರ್ದಿಷ್ಟವಾಗಿ ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ಚಂಡಿಘರ್ ರಾಜ್ಯಗಳಿಗೆ ದ್ರವ ಆಮ್ಲಜನಕವನ್ನು ಪೂರೈಸುತ್ತಿದೆ ಎಂದು ಈಶಾನ್ಯ ಪ್ರದೇಶದ ಅಭಿವೃದ್ಧಿ [ಸ್ವತಂತ್ರ್ಯ ಉಸ್ತುವಾರಿ], ಪ್ರಧಾನಮಂತ್ರಿಗಳ ಕಚೇರಿಯ ರಾಜ್ಯ ಸಚಿವರು, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಪಿಂಚಣಿ, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಖಾತೆ ಸಚಿವರಾದ ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಆನ್ ಲೈನ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಇಸ್ರೋ ಅಧ್ಯಕ್ಷ ಡಾ.ಕೆ. ಸಿವನ್, 9.5 ಟನ್ ಆಮ್ಲಜನಕವನ್ನು ತಮಿಳುನಾಡು ಮತ್ತು ಕೇರಳಕ್ಕೆ ಪ್ರತಿದಿನ ಪೂರೈಸುತ್ತಿದ್ದು,  ಆಂಧ್ರಪ್ರದೇಶ ಮತ್ತು ಚಂಡಿಘರ್ ಗೆ ಆಮ್ಲಜನಕ ಪೂರೈಕೆ ಸಾಮರ್ಥ್ಯ ಹೆಚ್ಚಿಸಲಾಗಿದೆ. ಇಸ್ರೋ ಪ್ರೊಪಲ್ಷನ್ ಕಾಂಪ್ಲೆಕ್ಸ್ ತಯಾರಿಸಿದ ಮತ್ತು ಸರಬರಾಜು ಮಾಡಿದ 87 ಟನ್ ಗಳಷ್ಟು ಲಾಕ್ಸ್ ಐ.ಪಿ.ಆರ್.ಸಿ ಅನ್ನು ದಿನದ 24 ಗಂಟೆಗಳ ಕಾಲದ ವೇಳಾಪಟ್ಟಿಯನ್ನು ಖಾತರಿಪಡಿಸಿ ತಮಿಳುನಾಡು ಮತ್ತು ಕೇರಳಕ್ಕೆ ನೀಡಲಾಗಿದೆ. ಇದಕ್ಕಿಂತ ಹೆಚ್ಚಾಗಿ ಆಂಧ್ರಪ್ರದೇಶದಲ್ಲಿ ಆಮ್ಲಜನಕದ ಲಭ್ಯತೆ ಹೆಚ್ಚಿಸಲು 12 ಮೆಟ್ರಿಕ್ ಟನ್ ಎಲ್.ಒ.ಎಕ್ಸ್ ಅನ್ನು  ಕಳುಹಿಸಲಾಗಿದೆ. ಇದಲ್ಲದೇ ಇಲಾಖೆಯಿಂದ ಕೂಡ ಆಂಧ್ರಪ್ರದೇಶ ಮತ್ತು ಕೇರಳದ ಸ್ಥಳೀಯ ಜನರಿಗೆ ಆಮ್ಲಜನಕ ಸಿಲಿಂಡರ್ ಗಳ ಪೂರೈಕೆಯನ್ನು ಖಚಿತಪಡಿಸುತ್ತಿದೆ.  ವೆಂಟಿಲೇಟರ್ ಗಳು, ಪ್ರಾಣ ಮತ್ತು ವಿಎಯುಗಳು ಸೇರಿ ಅತ್ಯಾಧುನಿಕ ವೈದ್ಯಕೀಯ ಸಾಧನಗಳನ್ನು ಕೈಗಾರಿಕೆಗಳು ಆದಷ್ಟು ಶೀಘ್ರ ಉತ್ಪಾದಿಸಲಿವೆ ಎಂದರು.  

ಅಹ್ಮದಾಬಾದ್ ನ ಬಾಹ್ಯಾಕಾಶ ಅಪ್ಲಿಕೇಷನ್ ಸೆಂಟರ್ ನಲ್ಲಿ ಎರಡು ದ್ರವ ನೈಟ್ರೋಜನ್ ಟ್ಯಾಂಕ್ ಗಳನ್ನು ದ್ರವ ಆಮ್ಲಜನಕವನ್ನಾಗಿ ಪರಿವರ್ತಿಸಿ 1.65 ಲಕ್ಷ ಲೀಟರ್ ಆಮ್ಲಜನಕವನ್ನು ಅಹ್ಮದಾಬಾದ್ ಮತ್ತು ಸಮೀಪದ ಆಸ್ಪತ್ರೆಗಳಿಗೆ ಪೂರೈಸಲಾಗುತ್ತಿದೆ. ಅದಲ್ಲದೇ ಅಹ್ಮದಾಬಾದ್ ನ ಆಸ್ಪತ್ರೆಗಳಿಗೆ ಮುಖಗವಸು ಮತ್ತು ಪಿಪಿಇ ಕಿಟ್ ಗಳನ್ನು ಸಹ ಪೂರೈಕೆ ಮಾಡಲಾಗುತ್ತಿದೆ ಎಂದು ಸಚಿವ ಡಾ. ಜಿತೇಂದ್ರ ಸಿಂಗ್ ಅವರಿಗೆ ಮಾಹಿತಿ ನೀಡಿದರು.

ಸಚಿವರು ಮಾತನಾಡಿ, ಅಗತ್ಯವಿರುವ ರೋಗಿಗಳ ಬಳಕೆಗಾಗಿ ಔಷಧಾಲಯಗಳಿಗೆ ಆಮ್ಲಜನಕ ಸಾಂದ್ರತೆಯನ್ನು ಸಂಗ್ರಹಿಸಲಾಗುತ್ತಿದೆ. ಪರಿಕರಗಳು ಮತ್ತು ಹೊಸ ಆಮ್ಲಜನಕ ಸಾಂದ್ರಕಗಳಿಗೆ ಸೋಂಕು ನಿವಾರಕ ಕೊಠಡಿ ನಿರ್ಮಾಣದ ವಿನ್ಯಾಸ ಈಗಾಗಲೇ ಪ್ರಗತಿಯಲ್ಲಿದೆ ಎಂದರು.  

ಬಾಹ್ಯಾಕಾಶ ಸಚಿವಾಲಯ ಇತರೆ ತಂತ್ರಜ್ಞಾನದ ಬೆಂಬಲ ನೀಡುತ್ತಿದ್ದು, ಭಾರತದಾದ್ಯಂತ ಕೋವಿಡ್ ಲಸಿಕಾ ಕೇಂದ್ರಗಳಿಗೆ ನಾಗರಿಕರು ತೆರಳಲು ಅನುಕೂಲವಾಗುವಂತೆ ಕೋವಿನ್ ಆ್ಯಪ್ ಮೂಲಕ ನಕ್ಷೆ ಸಿದ್ಧಪಡಿಸಲಾಗಿದೆ. ಇದಲ್ಲದೇ ಎಸ್.ಎ.ಸಿ ಅಭಿವೃದ್ಧಿಪಡಿಸಿದ ಸಂಪರ್ಕ ರಹಿತ ಉಷ್ಣ ಕ್ಯಾಮರ ಅಳವಡಿಕೆ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜತೆಗೂಡಿ ಕೋವಿಡ್-19 ಡ್ಯಾಶ್ ಬೋರ್ಡ್ ಅಭಿವೃದ್ಧಿ, ದಿಬ್ರುಘರ್ ನಲ್ಲಿ ಐ.ಸಿ.ಎಂ.ಆರ್ ಸಹಯೋಗದಲ್ಲಿ “ ಪೈಟ್ ಕೊರೋನಾ” ಮೊಬೈಲ್ ಆ್ಯಪ್, ತ್ರಿಪುರ ರಾಜ್ಯದಲ್ಲಿ ಕೋವಿಡ್ 19 ಪ್ರಕರಣಗಳ ಜಿಯೋ ಟ್ಯಾಗ್ ಗಾಗಿ ಮಾಹಿತಿ ಸಂಗ್ರಹ ವ್ಯವಸ್ಥೆ ಕಲ್ಪಿಸಲಾಗಿದೆ.

ಬಾಹ್ಯಾಕಾಶ ಇಲಾಖೆಯ ಹಿರಿಯ ಅಧಿಕಾರಿಗಳು ಸಚಿವ ಡಾ. ಜಿತೇಂದ್ರ ಸಿಂಗ್ ಅವರಿಗೆ ಈ ವರ್ಷದ ಡಿಸೆಂಬರ್ ನಲ್ಲಿ ಗಗನಯಾನ ಮಿಷನ್ ನಲ್ಲಿ 10 ಉಪಗ್ರಹ ಉಡಾವಣೆಗೆ ನಡೆಯುತ್ತಿರುವ ಕೆಲಸದ ಬಗ್ಗೆ ಮಾಹಿತಿ ನೀಡಿದರು. ಸಾಂಕ್ರಾಮಿಕ ರೋಗದ ದುರ್ಬಲ ಪರಿಸ್ಥಿತಿ ನಡುವೆಯೂ ಪಿ.ಎಸ್.ಎಲ್.ವಿ -ಸಿ49, ಸಿ50 ಮತ್ತು ಸಿ51 ಉಡಾವಣೆ ಕುರಿತ ವರ್ಚುವಲ್ ನಿಯಂತ್ರಣ ಚಟುವಟಿಕೆಗಳು ಕಳೆದ ಆರು ತಿಂಗಳಲ್ಲಿ ನಡದಿರುವ ಬಗ್ಗೆ ಸಚಿವರು ತೃಪ್ತಿ ವ್ಯಕ್ತಪಡಿಸಿದರು.

ಬೆಂಗಳೂರು, ಶಿಲ್ಲಾಂಗ್ ಮತ್ತು ಶ್ರೀಹರಿಕೋಟಾ ಹೊರತುಪಡಿಸಿ ಹೆಚ್ಚು ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸುವ ಸಾಧ್ಯತೆಗಳನ್ನು ಪರಿಶೋಧಿಸುವಂತೆ ಡಾ. ಜಿತೇಂದ್ರ ಸಿಂಗ್ ಇಲಾಖೆಗೆ ಸೂಚನೆ ನೀಡಿದರು.

ಕೋವಿಡ್-19 ಪಿಡುಗು ನಿಯಂತ್ರಣಕ್ಕೆ ಬಾಹ್ಯಾಕಾಶ ಇಲಾಖೆ ಕೈಗೊಂಡ ಹಲವಾರು ಕ್ರಮಗಳಿಗೆ ಸಚಿವರು ತೃಪ್ತಿ ವ್ಯಕ್ತಪಡಿಸಿದರು ಮತ್ತು ಬಯೋಬಬಲ್ ತಂಡಗಳ ಪರಿಚಯ ಹಾಗೂ ಈವರೆಗೆ ಶೇ 30 ರಷ್ಟು ಸಿಬ್ಬಂದಿಗೆ ಲಸಿಕೆ ನೀಡಲು ನೆರವಾಗಿರುವ ಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

****



(Release ID: 1716655) Visitor Counter : 196