ಪ್ರಧಾನ ಮಂತ್ರಿಯವರ ಕಛೇರಿ

ಭಾರತ – ಯುಕೆ ವರ್ಚುವಲ್ ಶೃಂಗಸಭೆ (ಮೇ 04, 2021)

Posted On: 02 MAY 2021 11:00PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಯುನೈಟೆಡ್ ಕಿಂಗ್ಡಮ್ ಪ್ರಧಾನಮಂತ್ರಿ ಗೌರವಾನ್ವಿತ ಬೋರಿಸ್ ಜಾನ್ಸನ್ ಅವರೊಂದಿಗೆ 2021 ಮೇ 4ರಂದು ವರ್ಚುವಲ್ ಶೃಂಗಸಭೆ ನಡೆಸಲಿದ್ದಾರೆ.

ಭಾರತ ಮತ್ತು ಯುಕೆ 2004ರಿಂದ ವ್ಯೂಹಾತ್ಮಕ ಪಾಲುದಾರಿಕೆಯನ್ನು ಹೊಂದಿದೆ. ಇದನ್ನು ನಿಯಮಿತ ಉನ್ನತಮಟ್ಟದ ವಿನಿಮಯ ಮತ್ತು ವೈವಿಧ್ಯಮಯ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಸಮಾನ ಲಕ್ಷಣಗಳ ಮೂಲಕ  ಇದನ್ನು ಗುರುತಿಸಲಾಗಿದೆ. ನಮ್ಮ ಬಹುಮುಖಿ ವ್ಯೂಹಾತ್ಮಕ ಬಾಂಧವ್ಯವನ್ನು ಉನ್ನತೀಕರಿಸಲು ಮತ್ತು ಪ್ರಾದೇಶಿಕ ಹಾಗೂ ಪರಸ್ಪರ ಹಿತಾಸಕ್ತಿಯ ಜಾಗತಿಕ ವಿಚಾರಗಳಲ್ಲಿ ಸಹಕಾರ ಹೆಚ್ಚಿಸಲು ಶೃಂಗಸಭೆ ಮಹತ್ವದ ಅವಕಾಶವಾಗಿದೆಇಬ್ಬರೂ ನಾಯಕರು ಕೋವಿಡ್ 19 ಸಹಕಾರ ಮತ್ತು ಸಾಂಕ್ರಾಮಿಕದ ವಿರುದ್ಧ ಹೋರಾಟದ ಜಾಗತಿಕ ಪ್ರಯತ್ನಗಳ ಕುರಿತಂತೆಯೂ ಚರ್ಚಿಸಲಿದ್ದಾರೆ.

ಶೃಂಗಸಭೆಯ ವೇಳೆ ಸಮಗ್ರ ಮಾರ್ಗಸೂಚಿ 2030ಕ್ಕೂ ಚಾಲನೆ ನೀಡಲಾಗುತ್ತದೆ, ಇದು ಭಾರತ- ಯುಕೆ ಸಹಕಾರವನ್ನು ಮುಂದಿನ ದಶಕದಲ್ಲಿ ಐದು ಪ್ರಮುಖ ಕ್ಷೇತ್ರಗಳಲ್ಲಿ ಅಂದರೆ, ಜನರೊಂದಿಗಿನ ಬಾಂಧವ್ಯ, ವಾಣಿಜ್ಯ ಮತ್ತು ಪ್ರಗತಿ, ರಕ್ಷಣೆ ಮತ್ತು ಭದ್ರತೆ, ಹವಾಮಾನ ಕ್ರಮ ಮತ್ತು ಆರೋಗ್ಯ ರಕ್ಷಣೆಯಲ್ಲಿ ಮತ್ತಷ್ಟು ವಿಸ್ತರಿಸಲು  ಮತ್ತು ಆಳಗೊಳಿಸಲು ಹಾದಿ ಸುಗಮಗೊಳಿಸುತ್ತದೆ.

***



(Release ID: 1716288) Visitor Counter : 196