ಪ್ರಧಾನ ಮಂತ್ರಿಯವರ ಕಛೇರಿ

ಭಾರತೀಯ ನೌಕಾಪಡೆ ಕೈಗೊಂಡಿರುವ ಕೋವಿಡ್ ಸಂಬಂಧಿ ಉಪಕ್ರಮಗಳ ಪರಾಮರ್ಶೆ ನಡೆಸಿದ ಪ್ರಧಾನಮಂತ್ರಿ


ಹಲವು ನಗರಗಳಲ್ಲಿ ನೌಕಾಪಡೆಯ ಆಸ್ಪತ್ರೆಗಳು ಸಾರ್ವಜನಿಕರ ಬಳಕೆಗೆ ಅವಕಾಶ

ಲಕ್ಷದ್ವೀಪ್ ಮತ್ತು ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳಲ್ಲಿ ಆಕ್ಸಿಜನ್ ಲಭ್ಯತೆ ಹೆಚ್ಚಳಕ್ಕೆ ನೌಕಾಪಡೆ ಕ್ರಮ

ವಿದೇಶಗಳಿಂದ ಭಾರತಕ್ಕೆ ಆಕ್ಸಿಜನ್ ಕಂಟೈನರ್ ಹಾಗೂ ಇತರೆ ಸಾಮಗ್ರಿಗಳನ್ನು ಸಾಗಾಣೆ ಮಾಡುತ್ತಿರುವ ನೌಕಾಪಡೆ

ನೌಕಾಪಡೆಯ ವೈದ್ಯಕೀಯ ಸಿಬ್ಬಂದಿಯನ್ನು ದೇಶದ ನಾನಾ ಸ್ಥಳಗಳಲ್ಲಿ ಕೋವಿಡ್ ನಿರ್ವಹಣೆ ಕರ್ತವ್ಯಕ್ಕೆ ನಿಯೋಜನೆ

Posted On: 03 MAY 2021 7:23PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು, ನೌಕಾ ಸಿಬ್ಬಂದಿಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಅವರು ಇಂದು ಭೇಟಿ ಮಾಡಿದ್ದರು.

ಅವರು, ಸಾಂಕ್ರಾಮಿಕದ ಸಮಯದಲ್ಲಿ ದೇಶವಾಸಿಗಳಿಗೆ ನೆರವಾಗಲು ಭಾರತೀಯ ನೌಕಾಪಡೆಯು ಕೈಗೊಂಡರುವ ಹಲವು ಕ್ರಮಗಳ ಕುರಿತು ಪ್ರಧಾನಮಂತ್ರಿ ಅವರಿಗೆ ವಿವರಿಸಿದರು. ಭಾರತೀಯ ನೌಕಾಪಡೆಯು ಎಲ್ಲ ರಾಜ್ಯಗಳ ಆಡಳಿತವನ್ನು ತಲುಪಿದೆ ಮತ್ತು ಆಸ್ಪತ್ರೆ ಹಾಸಿಗೆಗಳು, ಸಾರಿಗೆ ಮತ್ತು ಇತರೆ ಅಗತ್ಯ ಸಾಮಗ್ರಿಗಳ ನೆರವನ್ನು ನೀಡಿದೆ ಎಂದು ಅವರು ಪ್ರಧಾನಮಂತ್ರಿಗೆ ತಿಳಿಸಿದರು. ಹಲವು ನಗರಗಳಲ್ಲಿ ನೌಕಾ ಆಸ್ಪತ್ರೆಗಳನ್ನು ನಾಗರಿಕರ ಬಳಕೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಅವರು ಪ್ರಧಾನಮಂತ್ರಿಗೆ ವಿವರಿಸಿದರು.

ನೌಕಾಪಡೆಯ ವೈದ್ಯಕೀಯ ಸಿಬ್ಬಂದಿಯನ್ನು ದೇಶದ ನಾನಾ ಸ್ಥಳಗಳಲ್ಲಿ ಕೋವಿಡ್ ನಿರ್ವಹಣೆ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ ಎಂದು ಅವರು ಪ್ರಧಾನಮಂತ್ರಿ ಅವರಿಗೆ ತಿಳಿಸಿದರುನೌಕಾ ಸಿಬ್ಬಂದಿಯನ್ನು ಕೋವಿಡ್ ಕರ್ತವ್ಯಕ್ಕೆ ನಿಯೋಜಿಸಲು ಅವರಿಗೆ ಯುದ್ದಭೂಮಿಗಳಲ್ಲಿನ ನರ್ಸಿಂಗ್ ಸಹಾಯಕ ತರಬೇತಿಯನ್ನು ನೀಡಲಾಗುತ್ತಿದೆ.

ಅಲ್ಲದೆ, ನೌಕಾ ಸಿಬ್ಬಂದಿಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಅವರು ಪ್ರಧಾನಮಂತ್ರಿ ಅವರಿಗೆ, ಲಕ್ಷದ್ವೀಪ ಮತ್ತು ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳಲ್ಲಿ ಆಕ್ಸಿಜನ್ ಲಭ್ಯತೆಯನ್ನು ಹೆಚ್ಚಿಸಲು ನೌಕಾಪಡೆಯ ನೆರವು ಕುರಿತು ವಿವರ ನೀಡಿದರು.

ಬಹರೈನ್, ಕತಾರ್, ಕುವೈತ್, ಸಿಂಗಾಪುರ ರಾಷ್ಟ್ರಗಳಿಂದ ಭಾರತಕ್ಕೆ ಆಕ್ಸಿಜನ್ ಕಂಟೈನರ್ ಮತ್ತು ಇತರೆ ಸಾಮಗ್ರಿಗಳ ಸಾಗಾಣೆಗೆ ಭಾರತೀಯ ನೌಕಾಪಡೆ ನೆರವು ನೀಡುತ್ತಿರುವುದ ಕುರಿತು ಪ್ರಧಾನಮಂತ್ರಿ ಅವರಿಗೆ ವಿವರಿಸಲಾಯಿತು.

WhatsApp Image 2021-05-03 at 7.14.03 PM.jpeg

*


(Release ID: 1715780) Visitor Counter : 268