ಹಣಕಾಸು ಸಚಿವಾಲಯ

ಕೋವಿಡ್-19 ಸಾಂಕ್ರಾಮಿಕ ಗಂಭೀರತೆ ಹಿನ್ನೆಲೆಯಲ್ಲಿ ಜಿಎಸ್ ಟಿ ಕಾನೂನಿನಡಿಯಲ್ಲಿ ತೆರಿಗೆ ಪಾವತಿದಾರರಿಗೆ ಹಲವು ಪರಿಹಾರಗಳನ್ನು ಪ್ರಕಟಿಸಿದ ಕೇಂದ್ರ ಸರ್ಕಾರ

Posted On: 02 MAY 2021 3:15PM by PIB Bengaluru

ಕೋವಿಡ್-19 ಸಾಂಕ್ರಾಮಿಕದ ಎರಡನೇ ಅಲೆ ಉಲ್ಬಣಗೊಳುತ್ತಿರುವ ಹಿನ್ನೆಲೆಯಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಅಡಿಯಲ್ಲಿ ಗ್ರಾಹಕರು ಶಾಸನಬದ್ಧ ಹಾಗೂ ನಿಯಮಿತವಾಗಿ ಸಲ್ಲಿಸಬೇಕಾದ ತೆರಿಗೆ ಪಾವತಿ ರಿಟರ್ನ್ಸ್ ಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ 2021 ಮೇ 1ರಂದು ಅಧಿಸೂಚನೆ ಹೊರಡಿಸಿ ತೆರಿಗೆ ಪಾವತಿದಾರರಿಗೆ ಹಲವು ಪರಿಹಾರಗಳನ್ನು ಪ್ರಕಟಿಸಿದೆ. ಪರಿಹಾರ ಕ್ರಮಗಳು ಕೆಳಗಿನಂತಿವೆ.

1.       ಬಡ್ಡಿದರದಲ್ಲಿ ಕಡಿತ:

ಕೆಳಗಿನ ಪ್ರಕರಣಗಳಲ್ಲಿ ತೆರಿಗೆ ಪಾವತಿ ವಿಳಂಬವಾದರೆ ವಾರ್ಷಿಕ ಸಾಮಾನ್ಯ ಬಡ್ಡಿ ದರ ಶೇ.18ರಷ್ಟು ಪಾವತಿಯಿಂದ ಸ್ವಲ್ಪ ವಿನಾಯಿತಿ ನೀಡಲಾಗಿದೆ.

.        5 ಕೋಟಿ ರೂಪಾಯಿಗಳಿಗಿಂತಲೂ ಅಧಿಕ ವಹಿವಾಟು ನಡೆಸುವ ನೋಂದಾಯಿತ ವ್ಯಕ್ತಿಗಳಿಗೆ: ತೆರಿಗೆ ಪಾವತಿ ಗಡುವು ಮುಗಿದ ನಂತರ ಮೊದಲ 15 ದಿನಗಳಿಗೆ ಶೇ.9ರಷ್ಟು ಬಡ್ಡಿದರ ಕಡಿಮೆಯಾಗಲಿದೆ. ಇದು ಮಾರ್ಚ್ 2021 ಮತ್ತು ಏಪ್ರಿಲ್ 2021 ತೆರಿಗೆ ಅವಧಿಗೆ ಅನ್ವಯವಾಗಲಿದ್ದು, ಕ್ರಮವಾಗಿ ಏಪ್ರಿಲ್ 2021 ಮತ್ತು ಮೇ 2021ಕ್ಕೆ ಪಾವತಿಸಬೇಕಾಗಿರುತ್ತದೆ. ಕುರಿತು ಅಧಿಸೂಚನೆ ಹೊರಡಿಸಲಾಗಿದೆ.

ಬಿ5 ಕೋಟಿ ರೂಪಾಯಿಗಳವರೆಗೆ ಒಟ್ಟಾರೆ ವಹಿವಾಟು ಹೊಂದಿರುವ ನೋಂದಾಯಿತ ವ್ಯಕ್ತಿಗಳಿಗೆ: ತೆರಿಗೆ ಪಾವತಿಯ ಗಡುವು ಮುಗಿದ ಬಳಿಕ ಮೊದಲ 15 ದಿನಗಳಿಗೆ ಯಾವುದೇ ಬಡ್ಡಿ ಇರುವುದಿಲ್ಲ ಮತ್ತು ಆನಂತರದ 15 ದಿನಗಳವರೆಗೆ ಶೇ.9ರಷ್ಟು ಹಾಗೂ ಆನಂತರದ ಅವಧಿಗೆ ಶೇ.18ರಷ್ಟು ಬಡ್ಡಿ ಪಾವತಿಸಬೇಕಾಗುತ್ತದೆ. ಇದು ಸಾಮಾನ್ಯ ತೆರಿಗೆ ಪಾವತಿದಾರರು ಮತ್ತು ಕ್ಯೂಆರ್ ಎಂಪಿ ಯೋಜನೆಯಡಿ ಇರುವವರಿಗೂ ಅನ್ವಯವಾಗುತ್ತದೆ. ಅಧಿಸೂಚನೆಯಲ್ಲಿ ತಿಳಿಸಿರುವಂತೆ ಮಾರ್ಚ್ 2021 ಮತ್ತು ಏಪ್ರಿಲ್ 2021 ತೆರಿಗೆ ಪಾವತಿ ಅವಧಿಗೆ ಅನ್ವಯವಾಗಲಿದ್ದು ಕ್ರಮವಾಗಿ ಏಪ್ರಿಲ್ 2021 ಮತ್ತು ಮೇ 2021ಕ್ಕೆ ಪಾವತಿಸಬೇಕಾಗುತ್ತದೆ.

ಸಿ.        ಕಾಂಪೋಸಿಷನ್ ಪದ್ಧತಿಯಡಿ ತೆರಿಗೆ ಪಾವತಿ ಆಯ್ಕೆ ಮಾಡಿಕೊಂಡಿರುವ ನೋಂದಾಯಿತ ವ್ಯಕ್ತಿಗಳಿಗೆ: ತೆರಿಗೆ ಪಾವತಿ ಗಡುವಿನ ಅವಧಿ ಮುಗಿದ ಬಳಿಕ ಮೊದಲ 15 ದಿನಗಳಿಗೆ ಯಾವುದೇ ಬಡ್ಡಿ ಇರುವುದಿಲ್ಲ. ನಂತರದ 15 ದಿನಗಳಿಗೆ ಶೇ.9 ಮತ್ತು ಆನಂತರದ ದಿನಗಳಿಗೆ ಶೇ.18ರಷ್ಟು ಬಡ್ಡಿ ಪಾವತಿಸಬೇಕಾಗುತ್ತದೆ. ಇದು 2021 ಮಾರ್ಚ್ 31ಕ್ಕೆ ಮುಕ್ತಾಯವಾದ ತ್ರೈಮಾಸಿಕಕ್ಕೆ ಅನ್ವಯವಾಗಲಿದ್ದು, ಇದನ್ನು ಏಪ್ರಿಲ್ 2021ರಲ್ಲಿ ಪಾವತಿಸಬೇಕಾಗಿರುತ್ತದೆ.

2.     ವಿಳಂಬ ಶುಲ್ಕ ಮನ್ನಾ

5 ಕೋಟಿ ರೂ. ಮೇಲ್ಪಟ್ಟು ವಹಿವಾಟು ಹೊಂದಿರುವ ನೋಂದಾಯಿತ ವ್ಯಕ್ತಿಗಳಿಗೆ: ಮಾರ್ಚ್ 2021 ಮತ್ತು ಏಪ್ರಿಲ್ 2021 ತೆರಿಗೆ ಅವಧಿಯ ಗಡುವಿನೊಳಗೆ ಫಾರಂ ಜಿಎಸ್ ಟಿಆರ್-3ಬಿ ಸಲ್ಲಿಕೆ ವಿಳಂಬವಾದರೆ ಮೊದಲ 15 ದಿನಕ್ಕೆ ವಿಳಂಬ ಶುಲ್ಕವನ್ನು ಮನ್ನಾ ಮಾಡಲಾಗುವುದು. ಇದನ್ನು ಕ್ರಮವಾಗಿ ಏಪ್ರಿಲ್ 2021 ಮತ್ತು ಮೇ 2021ರಲ್ಲಿ ಪಾವತಿಸಬೇಕಾಗುತ್ತದೆ.

ಬಿ. 5 ಕೋಟಿ ರೂಪಾಯಿಗಳವರೆಗೆ ಒಟ್ಟಾರೆ ವಹಿವಾಟು ಹೊಂದಿರುವ ನೋಂದಾಯಿತ ವ್ಯಕ್ತಿಗಳಿಗೆ: ಫಾರಂ ಜಿಎಸ್ ಟಿಆರ್-3ಬಿ ಸಲ್ಲಿಕೆಗೆ ಮೊದಲ 30 ದಿನಗಳ ತಡವಾದರೆ ವಿಳಂಬ ಶುಲ್ಕ ಮನ್ನಾ ಆಗಲಿದೆ. ಇದು ಮಾರ್ಚ್ 2021 ಮತ್ತು ಏಪ್ರಿಲ್ 2021 ತೆರಿಗೆ ಅವಧಿಗೆ ಅನ್ವಯವಾಗಲಿದ್ದು(ಪ್ರತಿ ತಿಂಗಳು ರಿಟರ್ನ್ಸ್ ಸಲ್ಲಿಸುವ ತೆರಿಗೆ ಪಾವತಿದಾರರಿಗೆ) ಅವರು ಕ್ರಮವಾಗಿ ಏಪ್ರಿಲ್ 2021 ಮತ್ತು ಮೇ 2021ರಲ್ಲಿ ಪಾವತಿಸಬೇಕು ಮತ್ತು 2021 ಜನವರಿ ಮಾರ್ಚ್ ಅವಧಿಗೆ(ಕ್ಯೂಆರ್ ಎಂಪಿ ಯೋಜನೆಯಡಿಯಲ್ಲಿ ತ್ರೈಮಾಸಿಕ ತೆರಿಗೆ ರಿಟರ್ನ್ಸ್ ಸಲ್ಲಿಸುವವರಿಗೆ) ಗಡುವು ಏಪ್ರಿಲ್ 2021 ಆಗಿತ್ತು.  

3.      ಜಿಎಸ್ ಟಿಆರ್-1, ಐಎಫ್ಎಫ್, ಜಿಎಸ್ ಟಿಆರ್-4 ಮತ್ತು ಐಟಿಸಿ-04 ಸಲ್ಲಿಕೆಗೆ ಕೊನೆಯ ದಿನಾಂಕ ವಿಸ್ತರಣೆ

. ಏಪ್ರಿಲ್ ತಿಂಗಳಿಗಾಗಿ ಜಿಎಸ್ ಟಿಆರ್-1 ಮತ್ತು ಐಎಫ್ಎಫ್ ಫಾರಂ ಸಲ್ಲಿಕೆಗೆ(ಮೇ ತಿಂಗಳು ಕೊನೆಯಾಗಿತ್ತು) 15 ದಿನಗಳ ಕಾಲ ಗಡುವು ವಿಸ್ತರಿಸಲಾಗಿದೆ

ಬಿ. ಹಣಕಾಸು ವರ್ಷ 2020-21 ಜಿಎಸ್ ಟಿಆರ್-4 ನಮೂನೆ ಸಲ್ಲಿಸಲು 2021 ಏಪ್ರಿಲ್ 30 ಕೊನೆಯ ದಿನವಾಗಿತ್ತು. ಅದನ್ನು 2021 ಮೇ 31 ವರೆಗೆ ವಿಸ್ತರಿಸಲಾಗಿದೆ

ಸಿ. 2021 ಜನವರಿ ಮಾರ್ಚ್ ವರೆಗಿನ ಐಟಿಸಿ-04 ನಮೂನೆ ಸಲ್ಲಿಕೆಗೆ 2021 ಏಪ್ರಿಲ್ 25 ಕೊನೆಯ ದಿನವಾಗಿತ್ತು. ಗಡುವನ್ನು 2021 ಮೇ 31 ವರೆಗೆ ವಿಸ್ತರಿಸಲಾಗಿದೆ.

ಡಿ. ಸಿಜಿಎಸ್ ಟಿ ನಿಯಮದಲ್ಲಿ ಕೆಲವು ತಿದ್ದುಪಡಿಗಳು:

. ಐಟಿಸಿ ಪಡೆಯಲು ಕೆಲವು ನಿಯಮ ಸಡಿಲಿಕೆ: 2021 ಏಪ್ರಿಲ್ ಮತ್ತು ಮೇ ತಿಂಗಳ ಅವಧಿಗೆ ಒಟ್ಟು ಸೇರಿಸಿ ನಿಯಮ 36(4) ಅಂದರೆ ಶೇ.105ರಷ್ಟು ಮಿತಿಯ ಐಟಿಸಿ ಪಡೆಯಲು ಸಲ್ಲಿಸಬೇಕಾದ ಜಿಎಸ್ ಟಿಆರ್-3ಬಿ ನಮೂನೆಯನ್ನು ತೆರಿಗೆ ಅವಧಿ ಮೇ 2021ರಲ್ಲಿ ಸಲ್ಲಿಸಬಹುದು. ಇಲ್ಲವಾದರೆ 36(4) ಪ್ರತಿ ತೆರಿಗೆ ಅವಧಿಗೆ ಅನ್ವಯವಾಗುತ್ತದೆ.

ಎಫ್. ಜಿಎಸ್ ಟಿಆರ್-3ಬಿ ಮತ್ತು ಜಿಎಸ್ ಟಿಆರ್-1/ಐಎಫ್ಎಫ್ ಸಲ್ಲಿಕೆಗೆ ಕಂಪನಿಗಳಿಗೆ ವಿದ್ಯುನ್ಮಾನ ಪರಿಶೀಲನಾ ಕೋಡ್ ಬಳಸಬಹುದಾಗಿದ್ದು, ಅದನ್ನು ಈಗಾಗಲೇ 27.04.2021 ರಿಂದ 31.05.2021 ಸಕ್ರಿಯಗೊಳಿಸಲಾಗಿದೆ.

ಜಿ. ಸಿಜಿಎಸ್ ಟಿ ಕಾಯ್ದೆ ಸೆಕ್ಷನ್ 168 ಅಡಿಯಲ್ಲಿ ನಿಗದಿತ ಕಾಲಾವಧಿ ವಿಸ್ತರಣೆ: ಜಿಎಸ್ ಟಿ ಕಾಯ್ದೆ ಅಡಿಯಲ್ಲಿ ಬರುವ ಯಾವುದೇ ಪ್ರಾಧಿಕಾರ ಅಥವಾ ಯಾವುದೇ ವ್ಯಕ್ತಿ 2021 ಏಪ್ರಿಲ್ 15ರಿಂದ 2021 ಮೇ 30 ಅವಧಿಯಲ್ಲಿ ಕೈಗೊಳ್ಳಬೇಕಿರುವ ಹಲವು ಕ್ರಮ ಕೈಗೊಳ್ಳುವುದನ್ನು ಪೂರ್ಣಗೊಳಿಸುವ ಮಿತಿಯನ್ನು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿರುವಂತೆ ಕೆಲವು ಪ್ರಕರಣಗಳನ್ನು ಹೊರತುಪಡಿಸಿ ಉಳಿದಂತೆ 2021 ಮೇ 31 ವರೆಗೆ ವಿಸ್ತರಿಸಲಾಗಿದೆ.

 ( ಕುರಿತಂತೆ ಹೆಚ್ಚಿನ ವಿವರಗಳಿಗೆ ಹೊರಡಿಸಲಾಗಿರುವ ಅಧಿಸೂಚನೆಗೆ ಇಲ್ಲಿ ಕ್ಲಿಕ್ ಮಾಡಿ)

***


(Release ID: 1715560) Visitor Counter : 338