ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ

ಇ.ಎಸ್.ಐ.ಸಿ. ಆಸ್ಪತ್ರೆಗಳಿಗಾಗಿ ಕೋವಿಡ್-19  ಸೌಲಭ್ಯಗಳ ಡ್ಯಾಶ್ ಬೋರ್ಡ್

Posted On: 29 APR 2021 5:24PM by PIB Bengaluru

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ಬರುವ .ಎಸ್..ಸಿ.ಯು ತನ್ನ ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆಯನ್ನು ಮುಂದಿಟ್ಟಿದ್ದು, ನಾಗರಿಕ ಕೇಂದ್ರಿತ ಸೇವೆಗಳನ್ನು ಹೆಚ್ಚಿಸುವ ಮತ್ತು ಈಗಿನ ಜಾಗತಿಕ ಸಾಂಕ್ರಾಮಿಕದ ಸಂದರ್ಭದಲ್ಲಿ ಮಾಹಿತಿಯನ್ನು ಪ್ರಸಾರ ಮಾಡುವ ಕಾರ್ಯವನ್ನು ಕೈಗೊಂಡಿದೆ. ಕೋವಿಡ್ ಶುಶ್ರೂಷೆಗೆ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸುವುದು ಈಗಿನ ತಕ್ಷಣದ ಆವಶ್ಯಕತೆಯಾಗಿದೆ. .ಎಸ್.. ಆರೋಗ್ಯ ಸವಲತ್ತುಗಳನೇಕವು ಅದರ ಫಲಾನುಭವಿಗಳಿಗೆ ಮೀಸಲಾಗಿದ್ದು, ಅವುಗಳನ್ನು ಈಗ ಕೋವಿಡ್ ಶುಶ್ರೂಷೆಗಾಗಿ ನಮ್ಮ ದೇಶದ ನಾಗರಿಕರ ಪ್ರಯೋಜನಕ್ಕಾಗಿ ಮುಕ್ತ ಮಾಡಲಾಗಿದೆ. ಕೆಲವು .ಎಸ್. . ಸಂಸ್ಥೆಗಳು ತಮ್ಮ ಸೇವೆಯನ್ನು ಕೋವಿಡ್ ರೋಗಿಗಳಿಗಾಗಿಯೇ ವಿಶೇಷವಾಗಿ ಮೀಸಲಿಡಲು ವ್ಯವಸ್ಥೆಗಳನ್ನು ಮಾಡಿಕೊಂಡಿವೆ. ನಮ್ಮ ಧೈರ್ಯಶಾಲೀ ವೈದ್ಯಕೀಯ ವೃತಿಪರರು ಮತ್ತು ಇತರ ಮುಂಚೂಣಿ ಕಾರ್ಯಕರ್ತರು ಕೋವಿಡ್ ಸಮಯದಲ್ಲಿ 24*7 ಅವಧಿಯೂ ಜೀವ ರಕ್ಷಕ ಸೇವೆಯನ್ನು ಒದಗಿಸುತ್ತಿದ್ದಾರೆ.ಎಸ್. . ಸಂಸ್ಥೆಗಳು ಜವಾಬ್ದಾರಿಯುತ ನಾಗರಿಕರಂತೆ ಮಾತ್ರವಲ್ಲ ಮಾನವ ಕುಲಕ್ಕೆ ಮಾಡುವ ಸೇವೆಯು ಭಗವಂತನ ಸೇವೆಎಂಬ ಧ್ಯೇಯ ವಾಕ್ಯದಂತೆ ಕಾರ್ಯ ನಿರ್ವಹಿಸುತ್ತಿವೆ.

ಬೇಡಿಕೆ ಮತ್ತು ಪೂರೈಕೆಯಲ್ಲಿಯ ಅಂತರದಿಂದಾಗಿ ಕೋವಿಡ್ ಶುಶ್ರೂಷೆಗೆ ಹಾಸಿಗೆಗಳು ಲಭ್ಯವಾಗುತ್ತಿಲ್ಲ. ಹಾಸಿಗೆಗಳು ಲಭ್ಯವಿದ್ದರೂ ಕ್ಷಣದ ಸಕಾಲಿಕ ಮಾಹಿತಿ ಅವಶ್ಯಕತೆ ಇರುವವರಿಗೆ ಮತ್ತು ತುರ್ತುಸ್ಥಿತಿ ಎದುರಿಸುತ್ತಿರುವವರಿಗೆ ಲಭ್ಯವಾಗುತ್ತಿಲ್ಲ. .ಎಸ್..ಸಿ. .ಸಿ.ಟಿ. ತಂಡವು ಡ್ಯಾಶ್ ಬೋರ್ಡಿಗೆ ಸಂಬಂಧಿಸಿದ ನೀಲ ನಕಾಶೆ ತಯಾರಿಸಲು, ಅಭಿವೃದ್ಧಿ ಮಾಡಿ ಅದನ್ನು ಸ್ಥಾಪಿಸಲು ಅವಿಶ್ರಾಂತವಾಗಿ ಶ್ರಮಪಟ್ಟಿದೆ. ಇದರಿಂದಾಗಿ ಇದು ದಾಖಲೆ ಅವಧಿಯಲ್ಲಿ ಸಿದ್ದಗೊಂಡಿದೆ. .ಎಸ್..ಸಿ. ನಿರ್ದಿಷ್ಟ ಪಡಿಸಿದ ಮೀಸಲು ಸೌಲಭ್ಯದಲ್ಲಿ ಹಾಸಿಗೆ ಅವಶ್ಯಕತೆ ಇರುವ ನಾಗರಿಕರಿಗೆ ಅನುಕೂಲ ಮಾಡಿಕೊಡಲು ಇದು ನೆರವಾಗಲಿದೆ. ಇದರಲ್ಲಿ ಭಾಗಿಯಾಗುವ .ಎಸ್.. ಆರೋಗ್ಯ ಸಂಸ್ಥೆಗಳು ನಿಯಮಿತವಾಗಿ ದತ್ತಾಂಶವನ್ನು ಅಪ್ಡೇಟ್ (ಸಕಾಲಿಕ) ಮಾಡುತ್ತವೆ. ಡ್ಯಾಶ್ ಬೋರ್ಡ್ ಮೂಲಕ, ನಾಗರಿಕರಿಗೆ ಅದರಲ್ಲಿ ಪ್ರದರ್ಶಿತಗೊಂಡ .ಎಸ್.. ಆರೋಗ್ಯ ಸಂಸ್ಥೆಯಲ್ಲಿ ಲಭ್ಯ ಇರುವ ಹಾಸಿಗೆಗಳನ್ನು ನೋಡಿ ಕೊಂಡು ಅಲ್ಲಿಗೆ  ತೆರಳಲು ಮತ್ತು ಅಲ್ಲಿಯ ಸೌಲಭ್ಯವನ್ನು ಪಡೆಯುವ ಬಗ್ಗೆ ನಿರ್ಧಾರ ತಾಳುವುದಕ್ಕೆ ಸುಲಭ ಸಾಧ್ಯವಾಗುತ್ತದೆ. ಕೋವಿಡ್  ಸೌಲಭ್ಯದ  ಡ್ಯಾಶ್ ಬೋರ್ಡಿಗೆ ಸಂಪರ್ಕವನ್ನು ವಿಳಾಸದಲ್ಲಿ ಒದಗಿಸಲಾಗಿದೆ

ttps://www.esic.in/Dashboard/CovidDashBoard.aspx.

***



(Release ID: 1714951) Visitor Counter : 242