ನೌಕಾ ಸಚಿವಾಲಯ

ಕೋವಿಡ್ ಆರೈಕೆ ನಿರ್ವಹಣೆಗಾಗಿ ಪ್ರಮುಖ ಬಂದರುಗಳ ಆಸ್ಪತ್ರೆಗಳ ಸನ್ನದ್ಧತೆಯನ್ನು ಮನ್ಸುಖ್ ಮಾಂಡವಿಯಾ ಪರಿಶೀಲಿಸಿದರು


ಬಂದರುಗಳ ಆಸ್ಪತ್ರೆಗಳಲ್ಲಿ 422 ಪ್ರತ್ಯೇಕ ಹಾಸಿಗೆಗಳು, 305 ಆಮ್ಲಜನಕ ಸೌಲಭ್ಯ ಹೊಂದಿರುವ ಹಾಸಿಗೆಗಳು ಕಾರ್ಯನಿರ್ವಹಿಸುತ್ತಿವೆ

Posted On: 29 APR 2021 4:35PM by PIB Bengaluru

ಕೋವಿಡ್ -19 ಎರಡನೇ ಅಲೆಯ ಹಿನ್ನೆಲೆಯಲ್ಲಿ ಬಂದರುಗಳ ಆಸ್ಪತ್ರೆಗಳ ಸನ್ನದ್ಧತೆಯ ವಿವರಗಳನ್ನು ಸಂಗ್ರಹಿಸಲು ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ (ಸ್ವಂತಂತ್ರ ನಿರ್ವಹಣೆ) ಶ್ರೀ ಮನ್ಸುಖ್ ಮಾಂಡವಿಯಾ ವಹಿಸಿದ್ದರುಎಲ್ಲಾ ಪ್ರಮುಖ ಬಂದರುಗಳ ಅಧ್ಯಕ್ಷರು ಸಭೆಯಲ್ಲಿ ಮೀಸಲಾದ  ಕೋವಿಡ್ ಆರೈಕೆಯ ನಿರ್ವಹಣೆಗಾಗಿ  ಇರುವ ಆಸ್ಪತ್ರೆಗಳ ಸ್ಥಿತಿಯನ್ನು ವಿವರಿಸಿದರು.

ಈಗ, 12 ಪ್ರಮುಖ ಬಂದರುಗಳು ದೇಶಾದ್ಯಂತ ಕೋವಿಡ್ ಆರೈಕೆಗಾಗಿ ಮೀಸಲಾಗಿರುವ 9 ಆಸ್ಪತ್ರೆಗಳನ್ನು ನಿರ್ವಹಿಸುತ್ತಿವೆ. ವಿಶಾಖಪಟ್ಟಣಂ ಪೋರ್ಟ್ ಟ್ರಸ್ಟ್, ಕೋಲ್ಕತಾ ಪೋರ್ಟ್ ಟ್ರಸ್ಟ್, ಮುಂಬೈ ಪೋರ್ಟ್ ಟ್ರಸ್ಟ್, ಮರ್ಮುಗಾವೊ ಪೋರ್ಟ್ ಟ್ರಸ್ಟ್, ಚೆನ್ನೈ ಪೋರ್ಟ್ ಟ್ರಸ್ಟ್, ಮುಂಬೈ ಪೋರ್ಟ್ ಟ್ರಸ್ಟ್, ಜೆಎನ್ ಪೋರ್ಟ್ ಟ್ರಸ್ಟ್, ದೀನ್ ದಯಾಲ್ ಪೋರ್ಟ್ ಟ್ರಸ್ಟ್ (ಹಿಂದಿನ ಕಾಂದ್ಲಾ ಪೋರ್ಟ್) ಆಸ್ಪತ್ರೆಗಳನ್ನು ನಿರ್ವಹಿಸುತ್ತಿದ್ದು, ಒಟ್ಟು 422 ಪ್ರತ್ಯೇಕ ಹಾಸಿಗೆಗಳು, 305 ಆಮ್ಲಜನಕ ಸೌಲಭ್ಯವಿರುವ ಹಾಸಿಗೆಗಳು, 28 ಐಸಿಯು ಹಾಸಿಗೆಗಳು ಮತ್ತು ವೆಂಟಿಲೇಟರ್ಗಳು ಕೋವಿಡ್-19 ರೋಗಿಗಳ ಆರೈಕೆಗೆ  ಸಹಾಯ ಮಾಡುತ್ತವೆ.

ಸಿಎಸ್ಆರ್ ಹಣವನ್ನು ಬಳಸಿಕೊಳ್ಳುವ ಮೂಲಕ ತಮ್ಮ ಸಾಮರ್ಥ್ಯ ಮತ್ತು ಸೌಲಭ್ಯಗಳನ್ನು ಹೆಚ್ಚಿಸಲು ಮತ್ತು ಮುಂಬರುವ ದಿನಗಳಲ್ಲಿ ಅವುಗಳನ್ನು ಸಾಧ್ಯವಾದಷ್ಟು ವೇಗವಾಗಿ ಕಾರ್ಯರೂಪಕ್ಕೆ ತರಲು ಪ್ರಮುಖ ಬಂದರುಗಳ ಎಲ್ಲಾ ಅಧ್ಯಕ್ಷರಿಗೆ ಸಚಿವರು ನಿರ್ದೇಶನ ನೀಡಿದರು. ಎಲ್ಲಾ ಪ್ರಮುಖ ಬಂದರುಗಳಲ್ಲಿ ವೈದ್ಯಕೀಯ ಆಮ್ಲಜನಕ ಸಂಬಂಧಿತ ಸರಕುಗಳನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸಲು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುವಂತೆ ಸಚಿವರು ಅಧ್ಯಕ್ಷರಿಗೆ ಪುನರುಚ್ಚರಿಸಿದರು.

ತಮ್ಮ ಮುಕ್ತಾಯದ ಮಾತುಗಳಲ್ಲಿ, ಶ್ರೀ ಮಾಂಡವಿಯಾರವರು, “ಭಾರತ ಪ್ರಸ್ತುತ ಅಭೂತಪೂರ್ವ ಪರಿಸ್ಥಿತಿಯನ್ನು ಎದುರಿಸುತ್ತಿದೆ ಮತ್ತು ನಮ್ಮ ಬಂದರುಗಳ ಆಸ್ಪತ್ರೆಗಳ ಸಾಮರ್ಥ್ಯವನ್ನು ಬಳಸಿಕೊಳ್ಳುವ ಮೂಲಕ ಮತ್ತು ಹೆಚ್ಚಿಸುವ ಮೂಲಕ ಅಪಾರ ಕೊಡುಗೆ ನೀಡಲು ನಾವು ನಮ್ಮ  ಕೆಲಸಗಳಲ್ಲಿ ಮತ್ತಷ್ಟು ಸುಧಾರಣೆ ತರಬೇಕು. ಎಲ್ಲಾ ಪ್ರಮುಖ ಬಂದರುಗಳ ನಿರಂತರ ಮತ್ತು ಒಗ್ಗಟ್ಟಿನ ಪ್ರಯತ್ನಗಳಿಂದ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ನಾವು  ಸರ್ವ ಪ್ರಯತ್ನವನ್ನು ಮಾಡಬೇಕು. ಎಂದು ಹೇಳಿದರು.

***



(Release ID: 1714948) Visitor Counter : 157