ಪ್ರಧಾನ ಮಂತ್ರಿಯವರ ಕಛೇರಿ

ಪಿಎಂ ಕೇರ್ಸ್ ನಿಧಿಯಿಂದ 1 ಲಕ್ಷ ಪೋರ್ಟಬಲ್ ಆಕ್ಸಿಜನ್ ಕಾನ್ಸಂಟ್ರೇಟರ್ಸ್ ಖರೀದಿ


ಡಿಆರ್‌ಡಿಒ ಅಭಿವೃದ್ಧಿಪಡಿಸಿದ ತಂತ್ರಜ್ಞಾನದಲ್ಲಿ ಇನ್ನೂ 500 ಪಿಎಸ್‌ಎ ಆಮ್ಲಜನಕ ಘಟಕಗಳ ಸ್ಥಾಪನೆಗೆ ಪಿಎಂ ಕೇರ್ಸ್ ನಿಧಿಯಿಂದ ಮಂಜೂರಾತಿ

ಆಕ್ಸಿಜನ್ ಕಾನ್ಸಂಟ್ರೇಟರ್ಸ್ ಮತ್ತು ಪಿಎಸ್ಎ ಘಟಕಗಳು ಬೇಡಿಕೆಯ ಪ್ರದೇಶಗಳಲ್ಲಿ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸುತ್ತವೆ

Posted On: 28 APR 2021 4:32PM by PIB Bengaluru

ಪಿಎಂ ಕೇರ್ಸ್ ನಿಧಿಯಿಂದ 1 ಲಕ್ಷ ಪೋರ್ಟಬಲ್ ಆಕ್ಸಿಜನ್ ಕಾನ್ಸಂಟ್ರೇಟರ್ಸ್ (ಆಮ್ಲಜನಕ ಸಾಂದ್ರಕ) ಗಳನ್ನು ಖರೀದಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಅನುಮೋದನೆ ನೀಡಿದ್ದಾರೆ.

ಕೋವಿಡ್ ನಿರ್ವಹಣೆಗೆ ದ್ರವೀಕೃತ ವೈದ್ಯಕೀಯ ಆಮ್ಲಜನಕ (ಎಲ್‌ಎಂಒ) ಪೂರೈಕೆಯನ್ನು ಸುಧಾರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಆಕ್ಸಿಜನ್ ಕಾನ್ಸಂಟ್ರೇಟರ್ಸ್ ಗಳನ್ನು ಶೀಘ್ರವಾಗಿ ಖರೀದಿಸಬೇಕು ಮತ್ತು ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿರುವ ರಾಜ್ಯಗಳಿಗೆ ಒದಗಿಸಬೇಕು ಎಂದು ಪ್ರಧಾನಿ ಸೂಚನೆ ನೀಡಿದರು.

ಪಿಎಂ ಕೇರ್ಸ್ ನಿಧಿಯಿಂದ ಈಗಾಗಲೇ ಮಂಜೂರಾಗಿರುವ 713 ಪಿಎಸ್ಎ ಘಟಕಗಳ ಜೊತೆಗೆ, 500 ಹೊಸ ಪ್ರೆಶರ್ ಸ್ವಿಂಗ್ ಅಡ್ಸಾರ್ಪ್ಷನ್ (ಪಿಎಸ್ಎ) ಆಮ್ಲಜನಕ ಘಟಕಗಳನ್ನು ಪಿಎಂ ಕೇರ್ಸ್ ನಿಧಿಯ ಅಡಿಯಲ್ಲಿ ಮಂಜೂರು ಮಾಡಲಾಗಿದೆ.

ಪಿಎಸ್ಎ ಘಟಕಗಳು ಜಿಲ್ಲಾ ಕೇಂದ್ರ ಮತ್ತು 2ನೇ ನಗರಗಳ ಆಸ್ಪತ್ರೆಗಳಲ್ಲಿ ದ್ರವೀಕೃತ ವೈದ್ಯಕೀಯ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸಲಿವೆ. ಈ 500 ಪಿಎಸ್‌ಎ ಘಟಕಗಳನ್ನು ಡಿಆರ್‌ಡಿಒ ಮತ್ತು ಸಿಎಸ್‌ಐಆರ್ ಅಭಿವೃದ್ಧಿಪಡಿಸಿರುವ ದೇಶೀಯ ತಂತ್ರಜ್ಞಾನವನ್ನು ದೇಶೀಯ ಉತ್ಪಾದಕರಿಗೆ ವರ್ಗಾಯಿಸುವ ಮೂಲಕ ಸ್ಥಾಪಿಸಲಾಗುವುದು.

ಪಿಎಸ್ಎ ಘಟಕಗಳ ಸ್ಥಾಪನೆ ಮತ್ತು ಪೋರ್ಟಬಲ್ ಆಕ್ಸಿಜನ್ ಕಾನ್ಸಂಟ್ರೇಟರ್ಸ್ ಗಳ ಖರೀದಿಯು ಬೇಡಿಕೆಯ ಪ್ರದೇಶಗಳ ಬಳಿ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸುತ್ತವೆ. ಇದರಿಂದಾಗಿ ಘಟಕಗಳಿಂದ ಆಸ್ಪತ್ರೆಗಳಿಗೆ ಆಮ್ಲಜನಕವನ್ನು ಸಾಗಿಸುವಲ್ಲಿ ಈಗ ಎದುರಾಗುತ್ತಿರುವ ಲಾಜಿಸ್ಟಿಕ್ಸ್ ಸವಾಲುಗಳನ್ನು ಪರಿಹರಿಸಲಾಗುತ್ತದೆ.

***



(Release ID: 1714684) Visitor Counter : 337