ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಭಾರತ ಸರಕಾರ ಇದುವರೆಗೆ ಸುಮಾರು 16 ಕೋಟಿ ಲಸಿಕೆ ಡೋಸ್ ಗಳನ್ನು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಒದಗಿಸಿದೆ
ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ 1ಕೋಟಿಗೂ ಅಧಿಕ ಡೋಸ್ ಗಳು ವಿತರಣೆಗೆ ಲಭ್ಯ ಇವೆ
ಮುಂದಿನ ಮೂರು ದಿನಗಳಲ್ಲಿ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ 57 ಲಕ್ಷಕ್ಕೂ ಅಧಿಕ ಡೋಸ್ ಗಳು ಹೆಚ್ಚುವರಿಯಾಗಿ ಲಭಿಸಲಿವೆ
Posted On:
28 APR 2021 11:49AM by PIB Bengaluru
ಭಾರತ ಸರಕಾರವು ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ವಿರುದ್ಧ ಸಮರ ನಿರತವಾಗಿದೆ. ಈ ಜಾಗತಿಕ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಭಾರತ ಸರಕಾರದ ಐದು ಅಂಶಗಳ ತಂತ್ರದಲ್ಲಿ (ಪರೀಕ್ಷೆ, ಪತ್ತೆ, ಚಿಕಿತ್ಸೆ ಮತ್ತು ಕೋವಿಡ್ ಸೂಕ್ತ ವರ್ತನೆ ಒಳಗೊಂಡು) ಲಸಿಕೆ ಹಾಕುವಿಕೆಯು ಒಂದು ಪ್ರಮುಖ ಸ್ಥಂಭವಾಗಿದೆ.
ಕೋವಿಡ್-19 ಲಸಿಕಾ ಕಾರ್ಯಕ್ರಮದ ಮುಕ್ತ ಮತ್ತು ತ್ವರಿತಗತಿಯ ಹಂತ 3 - 2021ರ ಮೇ1 ರಿಂದ ಅನುಷ್ಠಾನಕ್ಕೆ ಬರಲಿದೆ. ಹೊಸ ಅರ್ಹ ಜನಸಂಖ್ಯಾ ಗುಂಪುಗಳ ನೋಂದಣೆ ಇಂದು (ಏಪ್ರಿಲ್ 28) ಸಂಜೆ 4 ಗಂಟೆಯಿಂದ ಆರಂಭಗೊಳ್ಳಲಿದೆ. ಅರ್ಹ ಫಲಾನುಭವಿಗಳು ಕೋವಿನ್ ಪೋರ್ಟಲ್ ನಲ್ಲಿ ನೇರವಾಗಿ ನೊಂದಾಯಿಸಿ ಕೊಳ್ಳಬಹುದು(cowin.gov.in) ಅಥವಾ ಆರೋಗ್ಯ ಸೇತು ಆಪ್ ಮೂಲಕವೂ ನೊಂದಾಯಿಸಿ ಕೊಳ್ಳಬಹುದು.
ಭಾರತ ಸರಕಾರವು ಇದುವರೆಗೆ 16 ಕೋಟಿ ಲಸಿಕೆ ಡೋಸ್ ಗಳನ್ನು (15,95,96,140) ಇದುವರೆಗೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಒದಗಿಸಿದೆ. ಇದರಲ್ಲಿ, ಒಟ್ಟು ಬಳಕೆಯು ವ್ಯರ್ಥ ಅಥವಾ ನಷ್ಟವಾದ ಪ್ರಮಾಣ ಸೇರಿದಂತೆ 14,89,76,248 ಡೋಸ್ ಗಳಷ್ಟಾಗಿದೆ.
ಒಂದು ಕೋಟಿಗೂ ಅಧಿಕ (1,06,19,892) ಕೋವಿಡ್ ಲಸಿಕೆ ಡೋಸ್ ಗಳು ಈಗಲೂ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಬಳಿ ವಿತರಣೆಗೆ ಲಭ್ಯ ಇವೆ.
57 ಲಕ್ಷಕ್ಕೂ ಅಧಿಕ (57,70,000) ಲಸಿಕೆ ಡೋಸ್ ಗಳನ್ನು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮುಂದಿನ ಮೂರು ದಿನಗಳಲ್ಲಿ ಪಡೆಯಲಿವೆ.
ರಾಜ್ಯದಲ್ಲಿ ಲಸಿಕೆಗಳು ಮುಗಿದಿವೆ, ಇದು ರಾಜ್ಯದ ಲಸಿಕಾ ಕಾರ್ಯಕ್ರಮದ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡುತ್ತಿದೆ ಎಂದು ಮಹಾರಾಷ್ಟ್ರ ರಾಜ್ಯ ಸರಕಾರದ ಅಧಿಕಾರಿಗಳನ್ನು ಉಲ್ಲೇಖಿಸಿ ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿದ್ದವು.
ಮಹಾರಾಷ್ಟ್ರವು 2021ರ ಏಪ್ರಿಲ್ 28ರವರೆಗೆ (ಬೆಳಿಗ್ಗೆ 8 ಗಂಟೆಯವರೆಗೆ ) 1,58,62,470 ಲಸಿಕೆ ಡೋಸ್ ಗಳನ್ನು ಪಡೆದಿದೆ. ಇದರಲ್ಲಿ ನಷ್ಟ (0.22%) ಸಹಿತ ಒಟ್ಟು ಬಳಕೆ 1,53,56,151. ಉಳಿಕೆ 5,06,319 ಡೋಸ್ ಲಸಿಕೆ ರಾಜ್ಯದಲ್ಲಿಯ ಅರ್ಹ ಜನಸಂಖ್ಯಾ ಗುಂಪಿಗೆ ವಿತರಿಸಲು ಇನ್ನೂ ಲಭ್ಯ ಇದೆ.
ಇದಲ್ಲದೆ, 5,00,000 ಡೋಸ್ ಕೋವಿಡ್ ಲಸಿಕೆ ಮುಂದಿನ ಮೂರು ದಿನಗಳಲ್ಲಿ ವಿತರಣೆಯಾಗಲಿದೆ.
***
(Release ID: 1714570)
Visitor Counter : 230
Read this release in:
English
,
Urdu
,
Hindi
,
Marathi
,
Bengali
,
Punjabi
,
Gujarati
,
Odia
,
Tamil
,
Telugu
,
Malayalam