ಹಣಕಾಸು ಸಚಿವಾಲಯ
ಹಣಕಾಸು ಮಸೂದೆ, 2021ರ ತಿದ್ದುಪಡಿಗಳಿಗೆ ಸಂಪುಟದ ಅನುಮೋದನೆ
प्रविष्टि तिथि:
20 APR 2021 3:43PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಹಣಕಾಸು ಮಸೂದೆ, 2021 (2021ರ ಮಾರ್ಚ್ 28ರಂದು ಹಣಕಾಸು ಕಾಯಿದೆ, 2021 ಆಗಿ ಜಾರಿಗೆ ಬಂದ)ಕ್ಕೆ ಸರ್ಕಾರ ಮಾಡಿರುವ ತಿದ್ದುಪಡಿಗಳಿಗೆ ತನ್ನ ಅನುಮೋದನೆ ನೀಡಿದೆ.
ಪ್ರಸ್ತಾವನೆಗಳನ್ನು ಮತ್ತಷ್ಟು ಸ್ಪಷ್ಟಪಡಿಸಲು, ತರ್ಕಬದ್ಧಗೊಳಿಸಲು ಮತ್ತು ಹಣಕಾಸು ಮಸೂದೆಯಲ್ಲಿ ಪ್ರಸ್ತಾಪಿಸಲಾದ ತಿದ್ದುಪಡಿಗಳಿಂದ ಉಂಟಾಗುವ ಬಾಧ್ಯಸ್ಥರುಗಳ ಕಳವಳಗಳನ್ನು ನಿವಾರಿಸಲು ಈ ತಿದ್ದುಪಡಿಗಳು ಅತ್ಯಾವಶ್ಯಕವಾಗಿದೆ.
ಉದ್ದೇಶಗಳು
ಹಣಕಾಸು ಮಸೂದೆ, 2021ಕ್ಕೆ ಸರ್ಕಾರದ ತಿದ್ದುಪಡಿಗಳು, ಮಸೂದೆಯಲ್ಲಿ ಪ್ರಸ್ತಾಪಿಸಲಾದ ತಿದ್ದುಪಡಿಗಳಿಂದ ಉದ್ಭವಿಸಿರುವ ಬಾಧ್ಯಸ್ಥರುಗಳ ಕಳವಳವನ್ನು ನಿವಾರಿಸಲು ಎಲ್ಲ ತೆರಿಗೆದಾರರಿಗೆ ಸಮಾನ ಮತ್ತು ಸಮಗ್ರತೆ ಒದಗಿಸುತ್ತದೆ.
ಹಣಕಾಸು ಮಸೂದೆ, 2021ಕ್ಕೆ ಸರ್ಕಾರದ ತಿದ್ದುಪಡಿಗಳು, ತೆರಿಗೆ ಪ್ರಸ್ತಾಪಗಳಾಗಿದ್ದು, ಅದು ಸರ್ಕಾರಕ್ಕೆ ಸಕಾಲದಲ್ಲಿ ಆದಾಯವನ್ನು ಸೃಷ್ಟಿಸಲಿದೆ ಮತ್ತು ತೆರಿಗೆದಾರರ ಕುಂದುಕೊರತೆಗಳನ್ನು ನಿವಾರಿಸುವ ಮೂಲಕ ಹಾಲಿ ಇರುವ ನಿಬಂಧನೆಗಳನ್ನು ಸುಗಮಗೊಳಿಸುತ್ತದೆ.
***
(रिलीज़ आईडी: 1712972)
आगंतुक पटल : 276