ಸಂಪುಟ

ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ಮತ್ತು ಆಸ್ಟ್ರೇಲಿಯಾದ ಪ್ರಮಾಣೀಕೃತ ವೃತ್ತಿಪರ ಲೆಕ್ಕಪರಿಶೋಧಕರ ನಡುವೆ ಪರಸ್ಪರ ಮಾನ್ಯತೆ ನೀಡುವ ಒಪ್ಪಂದಕ್ಕೆ ಕೇಂದ್ರ ಸಂಪುಟ ಅನುಮೋದನೆ

Posted On: 20 APR 2021 3:47PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ(ಐಸಿಎಐ) ಮತ್ತು ಆಸ್ಟ್ರೇಲಿಯಾದ ಸಿಪಿಎ(ಪ್ರಮಾಣೀಕೃತ ವೃತ್ತಿಪರ ಲೆಕ್ಕಪರಿಶೋಧಕರು) ನಡುವೆ ಪರಸ್ಪರ ಮಾನ್ಯತೆ ನೀಡುವ ಒಪ್ಪಂದ(ಎಂಆರ್ )ಕ್ಕೆ ಅನುಮೋದನೆ ನೀಡಿದೆ.

ಒಪ್ಪಂದದ ವಿವರ:

ಪರಸ್ಪರ ಮಾನ್ಯತೆ ಒಪ್ಪಂದ(ಎಂಆರ್ )ದಿಂದಾಗಿ, ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ(ಐಸಿಎಐ) ಮತ್ತು ಆಸ್ಟ್ರೇಲಿಯಾದ ಸಿಪಿಎ(ಪ್ರಮಾಣೀಕೃತ ವೃತ್ತಿಪರ ಲೆಕ್ಕಪರಿಶೋಧಕರು) ನಡುವೆ ಲೆಕ್ಕ ಪರಿಶೋಧನಾ ಜ್ಞಾನ ಉನ್ನತೀಕರಣ, ವೃತ್ತಿಪರತೆ ಮತ್ತು ಬೌದ್ಧಿಕ ಸಾಮರ್ಥ್ಯವೃದ್ಧಿ, ಆಯಾ ಸಂಸ್ಥೆಗಳ ಸದಸ್ಯರ ಅಭಿವೃದ್ಧಿ ಕುರಿತು ಪರಸ್ಪರ ಸಹಕಾರ ನೀತಿ ರೂಪುಗಳ್ಳಲಿವೆ ಮತ್ತು ಭಾರತ ಹಾಗೂ ಆಸ್ಟ್ರೇಲಿಯಾದಲ್ಲಿ ಲೆಕ್ಕಪರಿಶೋಧನಾ ವೃತ್ತಿಯ ಅಭಿವೃದ್ಧಿಗೆ ಸಕಾರಾತ್ಮಕ ಕೊಡುಗೆಯನ್ನು ದೊರಕಲಿದೆ.

ಪರಿಣಾಮ:

ಎಂಆರ್ ಪ್ರಕಾರ ಕೆಳಗಿನ ಅಂಶಗಳು ಒಳಗೊಂಡಿವೆ:

  1. ಎರಡೂ ಲೆಕ್ಕ ಪರಿಶೋಧನಾ ಸಂಸ್ಥೆಗಳ ನಡುವೆ ತ್ವರಿತ ಕಾರ್ಯಕಾರಿ ಸಂಬಂಧಗಳು ಏರ್ಪಡಲಿವೆ.
  2. ಎರಡೂ ಸಂಸ್ಥೆಗಳು, ಸದಸ್ಯರ ಮತ್ತು ವಿದ್ಯಾರ್ಥಿಗಳ ಹಿತಾಸಕ್ತಿ ದೃಷ್ಟಿಯಿಂದ ಪರಸ್ಪರ ಅನುಕೂಲವಾಗುವ ಸಂಬಂಧ ಅಭಿವೃದ್ಧಿಯಾಗಲಿದೆ.
  • III. ಎರಡೂ ದೇಶಗಳ ನಡುವೆ ಸಣ್ಣ ಹಾಗೂ ಮಧ್ಯಮ ವ್ಯಾಪಾರಕ್ಕೆ ಹೊಸ ಆಯಾಮ ದೊರಕಲಿದೆ ಮತ್ತು ಎರಡೂ ದೇಶಗಳ ನಡುವೆ ವೃತ್ತಿಪರರ ಓಡಾಟ ಹೆಚ್ಚಾಗಲಿದೆ.
  • IV. ಜಾಗತಿಕ ಪರಿಸರದಲ್ಲಿ ಎದುರಾಗುವ ಹೊಸ ಬಗೆಯ ವೃತ್ತಿಪರ ಸವಾಲುಗಳನ್ನು ಎದುರಿಸುವಲ್ಲಿ ಎರಡೂ ದೇಶಗಳ ಲೆಕ್ಕಪರಿಶೋಧನಾ ಸಂಸ್ಥೆಗಳು ನಾಯಕತ್ವ ಪಾತ್ರವನ್ನು ವಹಿಸುವ ಅವಕಾಶ ದೊರಕಲಿದೆ.

ಪ್ರಯೋಜನ:

ಎರಡೂ ಸಂಸ್ಥೆಗಳ ನಡುವಿನ ಸಂಬಂಧದಿಂದಾಗಿ ಭಾರತದ ಲೆಕ್ಕಪರಿಶೋಧಕರಿಗೆ ಇನ್ನೂ ಹೆಚ್ಚಿನ ಅವಕಾಶಗಳು ಸೃಷ್ಟಿಯಾಗುವ ಸಾಧ್ಯತೆ ಇದೆ ಮತ್ತು ಭಾರತಕ್ಕೆ ಇನ್ನೂ ಹೆಚ್ಚಿನ ಹಣದ ಹರಿದು ಬರಲಿದೆ ಎಂದು ನಿರೀಕ್ಷಿಸಲಾಗಿದೆ.

ಅನುಷ್ಠಾನ ಕಾರ್ಯತಂತ್ರ ಮತ್ತು ಗುರಿ:

ಎಂಆರ್ ಎನಿಂದಾಗಿ ಎರಡೂ ಸಂಸ್ಥೆಗಳ ಪರೀಕ್ಷೆ, ತರಬೇತಿ ಮತ್ತು ಪ್ರಾಯೋಗಿಕ ಅನುಭವದ ಅವಶ್ಯಕತೆಗಳನ್ನು ಪೂರೈಸುವ ಜೊತೆ ಜೊತೆಗೆ ಸದಸ್ಯ ಪಡೆದ ಇತರ ಅರ್ಹತೆಗೆ ಎಂಆರ್ ಮಾನ್ಯತೆ ನೀಡುತ್ತದೆಐಸಿಎಐ ಮತ್ತು ಆಸ್ಟ್ರೇಲಿಯಾದ ಸಿಪಿಎ ಎರಡೂ ಸಂಸ್ಥೆಗಳು ಪರಸ್ಪರ ಮಾನ್ಯತಾ ಒಪ್ಪಂದವನ್ನು ಅನುಸರಿಸಿ ಪರಸ್ಪರ ತರಬೇತಿ ಮತ್ತು ಅರ್ಹತೆಗಳನ್ನು ಮಾನ್ಯತೆ ಮಾಡುವುದು ಮತ್ತು ಪರಸ್ಪರ ಸಂಪರ್ಕ ಕಾರ್ಯತಂತ್ರದ ಮೂಲಕ ಉತ್ತಮ ರೀತಿಯಲ್ಲಿ ಸದಸ್ಯರಿಗೆ ನೆರವಾಗುತ್ತವೆ.

ಹಿನ್ನೆಲೆ:

ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ (ಐಸಿಎಐ) ಒಂದು ಸಾಂಸ್ಥಿಕ ಸಂಸ್ಥೆಯಾಗಿದ್ದು, ಅದು 1949 ಲೆಕ್ಕ ಪರಿಶೋಧಕರ ಕಾಯಿದೆ ಅನ್ವಯ ಸ್ಥಾಪನೆಯಾಗಿ ಭಾರತದಲ್ಲಿ ವೃತ್ತಿಪರ ಲೆಕ್ಕಪರಿಶೋಧಕರ ನಿಯಂತ್ರಣ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಆಸ್ಟ್ರೇಲಿಯಾದ ಸಿಪಿಎ, ವಿಶ್ವದ ಅತಿ ದೊಡ್ಡ ಲೆಕ್ಕ ಪರಿಶೋಧನಾ ಸಂಸ್ಥೆಯಾಗಿದ್ದು, ಜಗತ್ತಿನಾದ್ಯಂತ 150ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಹಾಗೂ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ 160,000ಕ್ಕೂ ಅಧಿಕ ಸದಸ್ಯರನ್ನು ಹೊಂದಿದ್ದು, ಶಿಕ್ಷಣ, ತರಬೇತಿ, ತಾಂತ್ರಿಕ ನೆರವು ಮತ್ತು ಅಗತ್ಯ ನೆರವು ನೀಡುವ ಸೇವೆಗಳನ್ನು ಒದಗಿಸುತ್ತಿದೆ.

***


(Release ID: 1712948) Visitor Counter : 350