ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಕೇಂದ್ರ ಶಿಕ್ಷಣ ಸಚಿವರಿಂದ ಐಐಟಿ ಹೈದ್ರಾಬಾದ್ ಸಂಶೋಧಕರು ಅಭಿವೃದ್ಧಿಪಡಿಸಿರುವ ವಿಶ್ವದ ಮೊದಲ ಕೈಗೆಟಕಬಹುದಾದ ಮತ್ತು ದೀರ್ಘಾವಧಿಯವರೆಗೆ ಶುಚಿತ್ವ ಕಾಪಾಡುವ ಡುರೊಕಿಯಾ ಸರಣಿ ಉತ್ಪನ್ನಗಳ ಬಿಡುಗಡೆ


ಮುಂದಿನ ಪೀಳಿಗೆಯ ಈ ಡುರೊಕಿಯಾ ಸೂಕ್ಷ್ಮಾಣು ನಿಗ್ರಹ ತಂತ್ರಜ್ಞಾನ 189 ರೂ.ನಿಂದ ಆರಂಭ, ತಕ್ಷಣವೇ ಶೇ.99.99ರಷ್ಟು ಕೀಟಾಣು ನಾಶ ಮತ್ತು ಮುಂದಿನ ಬಾರಿ ಶುಚಿಗೊಳಿಸುವವರೆಗೆ ಅಥವಾ 35 ದಿನಗಳ ಕಾಲ ದೀರ್ಘಾವಧಿ ರಕ್ಷಣೆ - ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್

Posted On: 16 APR 2021 3:00PM by PIB Bengaluru

ಕೇಂದ್ರ ಶಿಕ್ಷಣ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಇಂದು ವರ್ಚುವಲ್ ರೂಪದಲ್ಲಿ ಹೈದ್ರಾಬಾದ್ ಐಐಟಿ ಸಂಶೋಧಕರು ಅಭಿವೃದ್ಧಿಪಡಿಸಿರುವ ವಿಶ್ವದ ಮೊದಲ ಕೈಗೆಟಕಬಹುದಾದ ಮತ್ತು ದೀರ್ಘಾವಧಿ ಶುಚಿತ್ವ ಕಾಪಾಡುವ ಡುರೊಕಿಯಾ ಸರಣಿ ಉತ್ಪನ್ನಗಳನ್ನು ಬಿಡುಗಡೆ ಮಾಡಿದರು. ಹೈದ್ರಾಬಾದ್ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಸಂಶೋಧಕರಾದ ಬಯೋಮೆಡಿಕಲ್ ಇಂಜಿನಿಯರಿಂಗ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ಜ್ಯೋತ್ಸೆಂದುಗಿರಿ ಮತ್ತು ಐಐಟಿ ಹೈದ್ರಾಬಾದ್ ಸಂಪೋಷಣಾ ಕೇಂದ್ರವಾಗಿರುವ ಇಫೋಕೇರ್ ಇನೋವೇಷನ್ ಪ್ರೈವೆಟ್ ಲಿಮಿಟೆಡ್ ಸಂಸ್ಥಾಪಕರು ಕೋವಿಡ್-19 ಸೋಂಕು ನಿಗ್ರಹಕ್ಕೆ ಡುರೊಕಿಯಾ ದೀರ್ಘಾವಧಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಐಐಟಿ ಹೈದ್ರಾಬಾದ್ ಆಡಳಿತ ಮಂಡಳಿ ಅಧ್ಯಕ್ಷ ಶ್ರೀ ಬಿ.ವಿ.ಆರ್. ಮೋಹನ್ ರೆಡ್ಡಿ; ಹೈದ್ರಾಬಾದ್ ಇಎಸ್ಐಸಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರೊ. ಫೌಂಡರ್ ಡೀನ್, ಎಂ. ಶ್ರೀನಿವಾಸ, ಐಐಟಿ ಹೈದ್ರಾಬಾದ್ ನಿರ್ದೇಶಕ ಪ್ರೊ. ಬಿ.ಎಸ್. ಮೂರ್ತಿ ಹಾಗೂ ಐಐಟಿ ಹೈದ್ರಾಬಾದ್ ಇತರ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

ಸಂದರ್ಭದಲ್ಲಿ ಮಾತನಾಡಿದ ಶ್ರೀ ಪೋಖ್ರಿಯಾಲ್ ಅವರು ಡುರೊಕಿಯಾ ಉತ್ಪನ್ನ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸ್ವಾವಲಂಬನೆ ಕನಸಿಗೆ ಪೂರಕವಾದುದು. ಮುಂದಿನ ಪೀಳಿಗೆಯ ಡುರೊಕಿಯಾ ಸೂಕ್ಷ್ಮಾಣು ನಿಗ್ರಹ ತಂತ್ರಜ್ಞಾನ 189 ರೂ.ಗಳಿಂದ ಆರಂಭವಾಗುತ್ತದೆ. ತಕ್ಷಣವೇ ಶೇ.99.99ರಷ್ಟು ಕೀಟಾಣುಗಳನ್ನು ಕೊಲ್ಲುತ್ತದೆ ಮತ್ತು 35 ದಿನಗಳ ವರೆಗೆ ಅಂದರೆ ಮುಂದಿನ ಬಾರಿ ಶುಚಿಗೊಳಿಸುವವರೆಗೆ ದೀರ್ಘಾವಧಿಯ ನ್ಯಾನೋ ರಕ್ಷಣಾ ತಂತ್ರಜ್ಞಾನ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.

ಡುರೊಕಿಯಾದಲ್ಲಿನ ವಿಭಿನ್ನ ರಾಸಾಯನಿಕಗಳು ತಕ್ಷಣವೇ(60 ಸೆಕೆಂಡ್ ಗಳ ಒಳಗೆ) ಕೀಟಾಣುಗಳನ್ನು ಕೊಲ್ಲುತ್ತದೆ ಮತ್ತು ಸದ್ಯದ ಸಾಂಕ್ರಾಮಿಕ ಸ್ಥಿತಿಗತಿಯ ಸಂದರ್ಭದಲ್ಲಿ ಅತ್ಯಂತ ಅಗತ್ಯವಾದ ದೀರ್ಘಾವಧಿಯ ರಕ್ಷಣೆಯನ್ನು ಒದಗಿಸುತ್ತದೆ ಎಂದು ಸಚಿವರು ಹೇಳಿದರು. ಕ್ರಾಂತಿಕಾರಿ ಸೂಕ್ಷ್ಮಾಣು ನಿಗ್ರಹ ಡುರೊಕಿಯಾ ಉತ್ಪನ್ನಗಳು ಪರೀಕ್ಷೆಗೊಳಪಟ್ಟಿವೆ ಮತ್ತು ಐಐಟಿ ಹೈದ್ರಾಬಾದ್ ಕ್ಯಾಂಪಸ್ ಒಳಗೆ ಪ್ರಾಯೋಗಿಕ ಅಧ್ಯಯನ ನಡೆಸಲಾಗಿದ್ದು, ಭಾರತ ಸರ್ಕಾರದ ಪ್ರಮಾಣೀಕೃತ ಪ್ರಯೋಗಾಲಯಗಳಿಂದ ಪರೀಕ್ಷೆಗೊಳಪಡಿಸಲಾಗಿದೆ ಮತ್ತು ಪ್ರಮಾಣೀಕರಿಸಲಾಗಿದೆ.

ಸಾಧನೆಗಾಗಿ ಡುರೊಕಿಯಾ ತಂತ್ರಜ್ಞಾನ ತಂಡವನ್ನು ಸಚಿವರು ಅಭಿನಂದಿಸಿದ್ದಾರೆ ಮತ್ತು ಐಐಟಿ ಹೈದ್ರಾಬಾದ್ ಸಂಶೋಧಕರು ಮತ್ತು ವಿದ್ಯಾರ್ಥಿಗಳು ಇಂತಹ ಶ್ರೇಷ್ಠ ಕಾರ್ಯಗಳನ್ನು ಮಾಡುವುದನ್ನು ಮುಂದುವರಿಸಬೇಕು ಮತ್ತು ದೇಶಕ್ಕೆ ಒಳ್ಳೆಯ ಹೆಸರು ತರಬೇಕು ಎಂದು ಕರೆ ನೀಡಿದರು.

ಡುರೊಕಿಯಾ ತಂಡವನ್ನು ಅಭಿನಂದಿಸಿದ ಐಐಟಿ ಹೈದ್ರಾಬಾದ್ ನಿರ್ದೇಶಕ ಪ್ರೊ. ಬಿ.ಎಸ್. ಮೂರ್ತಿಐಐಟಿ ಹೈದ್ರಾಬಾದ್ ಅತ್ಯಂತ ಅವಶ್ಯಕ ಸಂಶೋಧನಾ ಕಾರ್ಯದಲ್ಲಿ ಸದಾ ಮುಂದಿರುತ್ತದೆ. ಕಾಲ ಕಾಲಕ್ಕೆ ವಿಶೇಷವಾಗಿ ಸಾಂಕ್ರಾಮಿಕದ ಸಮಯದಲ್ಲಿ ಇದು ತನ್ನ ಸಾಧನೆಯನ್ನು ಸಾಬೀತುಪಡಿಸಿದೆ. ಐಐಟಿಎಚ್ ಕಡಿಮೆ ವೆಚ್ಚದ ವೆಂಟಿಲೇಟರ್, ಪರಿಣಾಮಕಾರಿ ಮಾಸ್ಕ್, ಮೊಬೈಲ್ ಆಪ್ ಮತ್ತು ಫಾಸ್ಟ್ ಕೋವಿಡ್-19 ಟೆಸ್ಟ್ ಕಿಟ್ ಸೇರಿದಂತೆ ಹಲವು ಪರಿಹಾರಗಳನ್ನು ಒದಗಿಸಿದೆ. ಡುರೋಕಿಯಾ ಅಂತಹ ಒಂದು ವಿಭಿನ್ನ ಆವಿಷ್ಕಾರವಾಗಿದ್ದು, ಇದು ಕೋವಿಡ್-19 ವಿರುದ್ಧ ಹೋರಾಟಕ್ಕೆ ಐಐಟಿ ಹೈದ್ರಾಬಾದ್ ರೂಪಿಸಿರುವ ವಿಭಿನ್ನ ತಂತ್ರಜ್ಞಾನವಾಗಿದೆ. ಐಐಟಿಎಚ್ ಮಾನವೀಯತೆಗೆ ಅಗತ್ಯ ತಂತ್ರಜ್ಞಾನದ ಆವಿಷ್ಕಾರ ಮತ್ತು ನಾವಿನ್ಯತೆಗೆ ಹೆಸರಾಗಿದೆ ಮತ್ತು ಐಐಟಿ ಹೈದ್ರಾಬಾದ್ ಅಂತಹ ಹಲವು ನವೀನ ಸಂಶೋಧನೆ ಕೈಗೊಳ್ಳುವುದನ್ನು ಮುಂದುವರಿಸುವ ವಿಶ್ವಾಸವಿದೆಎಂದು ಹೇಳಿದರು.  

ಡುರೊಕಿಯಾ ಎಸ್, ಡುರೊಕಿಯಾ ಎಂ, ಡುರೊಕಿಯಾ ಎಚ್ ಮತ್ತು ಡುರೊಕಿಯಾ ಎಚ್ ಅಕ್ವಾ ಇವು ಡುರೊಕಿಯಾ ತಂತ್ರಜ್ಞಾನದ ನಾವಿನ್ಯ ಉತ್ಪನ್ನಗಳಾಗಿದ್ದು, ಇದು ನ್ಯಾನೋ ಸೂತ್ರೀಕರಣ ಹೊಂದಿದೆ. ಡುರೊಕಿಯಾ ಸರಣಿ ಉತ್ಪನ್ನಗಳು ಕೋವಿಡ್-19 ವೈರಸ್ ಸೇರಿದಂತೆ ನಾನಾ ಬಗೆಯ ಕೀಟಗಳ ವಿರುದ್ಧ ದೀರ್ಘಾವಧಿಯ ವರೆಗೆ ರಕ್ಷಣೆ ನೀಡುವುದಲ್ಲದೆ, ಕೀಟಾಣುಗಳನ್ನು ತಕ್ಷಣವೇ ಕೊಲ್ಲುತ್ತದೆ. ಪ್ರತಿಯೊಂದು ಉತ್ಪನ್ನವನ್ನೂ ಸಹ ಭಾರತ ಸರ್ಕಾರದ ನಾನಾ ಪ್ರಮಾಣೀಕೃತ ಪ್ರಯೋಗಾಲಯಗಳಲ್ಲಿ ಅಧ್ಯಯನ ನಡೆಸಲಾಗಿದೆ ಮತ್ತು ಅವುಗಳಿಗೆ ಮಾನ್ಯತೆ ದೊರಕಿದೆ.

ಪ್ರತಿಯೊಂದು ಉತ್ಪನ್ನಗಳ ಕುರಿತಂತೆ ಹೆಚ್ಚಿನ ವಿವರಗಳನ್ನು ಇಲ್ಲಿ ಓದಬಹುದು ಅಥವಾ visit www.keabiotech.com ಅಥವಾ ಇಲ್ಲಿಗೆ ಭೇಟಿ ನೀಡಬಹುದು.

ಐಐಟಿ ಹೈದ್ರಾಬಾದ್ ಬಯೋಮೆಡಿಕಲ್ ಇಂಜಿನಿಯರಿಂಗ್ ವಿಭಾಗದ ಡಾ. ಜ್ಯೋತ್ಸೆಂದು ಗಿರಿ ನೇತೃತ್ವದ ತಂಡ ಅಭಿವೃದ್ಧಿಪಡಿಸಿರುವ ಅತ್ಯಂತ ಪರಿಣಾಮಕಾರಿ ಮತ್ತು ಕೈಗೆಟಕಬಹುದಾದ ದರದ ನೂತನ ನಾವಿನ್ಯ ಸಂಶೋಧನೆಯಾಗಿದೆ. ಡಾ. ಸುನಿಲ್ ಕುಮಾರ್ ಯಾದವ, ಡಾ. ಖಾಸಿಂ ಎಂ., ಶ್ರೀಮತಿ ಮೀನಾಕ್ಷಿ ಚೌವ್ಹಾಣ್ ಮತ್ತು ಶ್ರೀಮತಿ ರುಬೆ ಸಿಂಗ್, ಶ್ರೀಮತಿ ಸುಪರ್ಣಾಬಸು, ಶ್ರೀಮತಿ ಉಜ್ಮಾ ಹಸನ್, ಶ್ರೀ ಜಯಕುಮಾರ್ ಮತ್ತು ಡಾ. ಪುರಂದಿರೂಪಮಣಿ ಆವಿಷ್ಕಾರದಲ್ಲಿ ಭಾಗಿಯಾಗಿದ್ದಾರೆ.

***



(Release ID: 1712276) Visitor Counter : 204