ಪ್ರಧಾನ ಮಂತ್ರಿಯವರ ಕಛೇರಿ

ಕೋವಿಡ್ -19 ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಜೊತೆ ನಡೆಸಿದ ಸಭೆಯಲ್ಲಿ ಪ್ರಧಾನ ಮಂತ್ರಿ ಅವರ ಪ್ರತಿಕ್ರಿಯೆ

Posted On: 08 APR 2021 11:00PM by PIB Bengaluru

ಈಗಿನ ಪರಿಸ್ಥಿತಿಯ ಗಂಭೀರತೆಯ  ಬಗ್ಗೆ ಮೌಲ್ಯಮಾಪನ ಮಾಡುವಾಗ ನೀವೆಲ್ಲರೂ ಹಲವಾರು ಮುಖ್ಯ ಅಂಶಗಳನ್ನು ಪ್ರಸ್ತಾಪಿಸಿದ್ದೀರಿ, ಮತ್ತು ಹಲವಾರು ಅವಶ್ಯ ಸಲಹೆಗಳನ್ನು ನೀಡಿದ್ದೀರಿ. ಕೊರೊನಾ ಹರಡುವಿಕೆಯ ಪ್ರಮಾಣ ಹೆಚ್ಚು ಇರುವ ಮತ್ತು ಸಾವಿನ ಪ್ರಮಾಣ ಹೆಚ್ಚು ಇರುವ ರಾಜ್ಯಗಳ ಜೊತೆ ವಿಶೇಷ ಸಮಾಲೋಚನೆ ನಡೆಸುವುದು ಸಹಜ. ಆದರೆ ಉಳಿದ ರಾಜ್ಯಗಳೂ ಬಹಳ ಉತ್ತಮ ಸಲಹೆಗಳನ್ನು ಹೊಂದಿರಬಹುದು. ಆದುದರಿಂದ ನಾನು ನಿಮ್ಮಲ್ಲಿ ಕೋರಿಕೊಳ್ಳುತ್ತೇನೆ ಏನೆಂದರೆ ಅವಶ್ಯ ಇರುವಂತಹ ಧನಾತ್ಮಕ ಸಲಹೆಗಳನ್ನು ನನಗೆ ತಿಳಿಸಿ, ಇದರಿಂದ ಒಂದು ಸಮರ್ಪಕ ತಂತ್ರ ರೂಪಿಸುವುದಕ್ಕೆ ಸಹಾಯವಾಗುತ್ತದೆ.

ಭಾರತ ಸರಕಾರದ ಪರವಾಗಿ ಆರೋಗ್ಯ ಕಾರ್ಯದರ್ಶಿಗಳು ಮಂಡಿಸಿರುವ ಪ್ರದರ್ಶಿಕೆಯಿಂದ ಸ್ಪಷ್ಟವಾದ ಸಂಗತಿ ಎಂದರೆ ಮತ್ತೆ ಸವಾಲಿನ ಪರಿಸ್ಥಿತಿ ಉದ್ಭವಿಸುತ್ತಿದೆ. ಕೆಲವು ರಾಜ್ಯಗಳಲ್ಲಿ ಪರಿಸ್ಥಿತಿ ಬಹಳ ಗಂಭೀರವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಆಡಳಿತ ವ್ಯವಸ್ಥೆಯನ್ನು ಸುಧಾರಿಸುವುದು ಬಹಳ ಮುಖ್ಯ. ವರ್ಷವಿಡೀ ಹೋರಾಟ ವ್ಯವಸ್ಥೆಯಲ್ಲಿ ಬಳಲಿಕೆಗೆ ಕಾರಣವಾಗಬಹುದು ಎಂಬುದನ್ನು ನಾನು ಬಲ್ಲೆ. ಆದರೆ ನಾವು ಮುಂದಿನ ಎರಡು ಮೂರು ವಾರ ನಮ್ಮ ಆಡಳಿತ ವ್ಯವಸ್ಥೆಯನ್ನು ಬಲಪಡಿಸುವುದಕ್ಕೆ ಒತ್ತು ನೀಡಬೇಕು.

ಸ್ನೇಹಿತರೇ,

ಇಂದು ಪರಿಸ್ಥಿತಿಯನ್ನು ಅವಲೋಕಿಸುವಾಗ, ಅಲ್ಲಿ ಕೆಲವು ಸಂಗತಿಗಳು ಬಹಳ ಪ್ರಮುಖವಾಗಿ ಕಂಡುಬಂದವು ಮತ್ತು ನಾವು ಅವುಗಳತ್ತ ವಿಶೇಷ ಗಮನ ಕೊಡಬೇಕಾಗಿರುತ್ತದೆ.

ಮೊದಲನೆಯದಾಗಿ, ದೇಶವು ಮೊದಲ ಹಂತದಲ್ಲಿ ಗರಿಷ್ಠ ಪ್ರಮಾಣವನ್ನು ದಾಟಿದೆ ಮತ್ತು ಬಾರಿ ಬೆಳವಣಿಗೆ ದರ ಹಿಂದಿಗಿಂತ ಹೆಚ್ಚಾಗಿದೆ.

ಎರಡನೆಯದಾಗಿ, ಮಹಾರಾಷ್ಟ್ರ, ಛತ್ತೀಸ್ ಗಢ, ಪಂಜಾಬ್, ಮಧ್ಯ ಪ್ರದೇಶ ಮತ್ತು ಗುಜರಾತ್ ಸಹಿತ ಹಲವಾರು ರಾಜ್ಯಗಳು ಮೊದಲ ಅಲೆಯಲ್ಲಿ ಗರಿಷ್ಠ ಮಟ್ಟವನ್ನು ತಲುಪಿದ್ದವು. ಇನ್ನು ಕೆಲವು ರಾಜ್ಯಗಳಲ್ಲಿ ಸಂಖ್ಯೆ ಹೆಚ್ಚುತ್ತಲೇ ಇದೆ. ನನಗನಿಸುತ್ತದೆ ಇದು ನಮ್ಮೆಲ್ಲರಿಗೂ ಕಳವಳದ ಸಂಗತಿ.

ಮತ್ತು ಮೂರನೇಯದಾಗಿ, ಬಾರಿ ಜನರು ಹಿಂದಿಗಿಂತಲೂ ಉದಾಸಭಾವ ತಾಳಿದ್ದಾರೆ. ಆಡಳಿತವು ಕೂಡಾ ಹಲವಾರು ರಾಜ್ಯಗಳಲ್ಲಿ ನಿಷ್ಕ್ರಿಯ ಸ್ಥಿತಿಯಲ್ಲಿರುವಂತೆ ಕಾಣುತ್ತಿದೆ. ಇಂತಹ ಸ್ಥಿತಿಯಲ್ಲಿ, ಕೊರೊನಾ ಸಂಖ್ಯೆಯಲ್ಲಿ ಹೆಚ್ಚಳ ನಮ್ಮ ಆತಂಕವನ್ನು ಹೆಚ್ಚಿಸಿದೆ. ಕೊರೊನಾ ಹರಡುವಿಕೆಯನ್ನು ತಡೆಯಲು ಯುದ್ದೋಪಾದಿಯಲ್ಲಿ ಕೆಲಸ ಮಾಡುವುದು ಈಗ ಅವಶ್ಯವಿದೆ.

ಸ್ನೇಹಿತರೇ,

ಎಲ್ಲಾ ಸವಾಲುಗಳ ನಡುವೆಯೂ, ನಾವು ಉತ್ತಮ ಅನುಭವ ಹೊಂದಿದ್ದೇವೆ ಮತ್ತು ಹಿಂದೆಂದಿಗಿಂತಲೂ ಸಂಪನ್ಮೂಲಗಳು ಹೆಚ್ಚಿವೆ. ಮತ್ತು ನಾವೀಗ ವ್ಯಾಕ್ಸಿನ್ ಹೊಂದಿದ್ದೇವೆ. ಸಾರ್ವಜನಿಕ ಸಹಭಾಗಿತ್ವದ ಜೊತೆ ನಮ್ಮ ಕಠಿಣ ಪರಿಶ್ರಮಿ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು, ಆರೋಗ್ಯ ರಕ್ಷಣಾ ಸಿಬ್ಬಂದಿ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸಹಾಯ ಮಾಡಿದರು ಮತ್ತು ಅವರದನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ನೀವೆಲ್ಲರೂ ನಿಮ್ಮ ಮೊದಲಿನ ಅನುಭವವನ್ನು ಸಮರ್ಪಕವಾಗಿ ಬಳಸುತ್ತೀರಿ ಎಂಬುದನ್ನು ನಿರೀಕ್ಷಿಸಲಾಗಿದೆ.

ಸುಮ್ಮನೆ ಕಲ್ಪಿಸಿಕೊಳ್ಳಿ, ಕಳೆದ ವರ್ಷ ಪರಿಸ್ಥಿತಿ ಏನಿತ್ತು. ನಾವು ಪರೀಕ್ಷಾ ಪ್ರಯೋಗಾಲಯಗಳನ್ನು ಹೊಂದಿರಲಿಲ್ಲ. ಮುಖಗವಸುಗಳ ಲಭ್ಯತೆ ಕಳವಳದ ಸಂಗತಿಯಾಗಿತ್ತು ಮತ್ತು ಅಲ್ಲಿ ಪಿ.ಪಿ.. ಕಿಟ್ ಗಳಿರಲಿಲ್ಲ. ಮತ್ತು ನಾವು ಪಾರಾಗಬಹುದಾದ ದಾರಿ ಆಗ ಇದ್ದುದೆಂದರೆ ಲಾಕ್ ಡೌನ್. ಅದರಿಂದಾಗಿ ನಾವು ವ್ಯವಸ್ಥೆಗಳನ್ನು ಸಾಧ್ಯವಿರುವಷ್ಟು ತ್ವರಿತವಾಗಿ ರೂಢಿಸಿಕೊಳ್ಳಬೇಕಾಯಿತು ಮತ್ತು ತಂತ್ರ ಬಹಳ ಪ್ರಯೋಜನಕಾರಿಯಾಯಿತು. ನಾವು ವ್ಯವಸ್ಥೆಗಳನ್ನು ರೂಪಿಸಿದೆವು ಮತ್ತು ಸಂಪನ್ಮೂಲಗಳನ್ನು ಹಾಗು ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿದೆವು. ನಾವು ಆಗ ಜಗತ್ತಿನಲ್ಲಿ ಏನೆಲ್ಲ ಲಭ್ಯ ಇರುವುದೋ ಅದೆಲ್ಲವನ್ನೂ ಪಡೆದೆವು ಮತ್ತು ಲಾಕ್ ಡೌನ್ ಅವಧಿಯಲ್ಲಿ ಬಳಸಿದೆವು.

ಆದರೆ, ಇಂದು ನಾವು ಎಲ್ಲಾ ಸಂಪನ್ಮೂಲಗಳನ್ನು ಹೊಂದಿರುವಾಗಲೂ, ಇದು ನಮ್ಮ ಆಡಳಿತಕ್ಕೆ ಪರೀಕ್ಷೆಯಾಗಿದೆ ಮತ್ತು ನಮ್ಮ ಒತ್ತು ಕಿರು ಕಂಟೈನ್ಮೆಂಟ್ ವಲಯಗಳತ್ತ ಇರಬೇಕಾಗಿದೆ. ನಮ್ಮ ಗರಿಷ್ಠ ಒತ್ತು ಕಿರು ಕಂಟೈನ್ಮೆಂಟ್ ವಲಯಗಳತ್ತ ಇರಬೇಕು. ರಾತ್ರಿ ಕರ್ಫ್ಯೂ ಜಾರಿಯಲ್ಲಿ ಇರುವಲ್ಲೆಲ್ಲಾ, ಕೊರೊನಾ ಕರ್ಫ್ಯೂ ಎಂಬ ಪದಗಳನ್ನು ಬಳಸಬೇಕು, ಇದರಿಂದ ಕೊರೊನಾವೈರಸ್ ಕುರಿತ ಜಾಗೃತಿ ಜಾರಿಯಲ್ಲಿರುತ್ತದೆ.

ಕೆಲವರು ಕೊರೊನಾ ರಾತ್ರಿ ಮಾತ್ರ ದಾಳಿ ಇಡುತ್ತದೆಯೇ ಎಂಬ ಬುದ್ಧಿಜೀವಿ ಚರ್ಚೆಯನ್ನು ಮುಂದಿಡಬಹುದು. ವಾಸ್ತವವಾಗಿ, ರಾತ್ರಿ ಕರ್ಫ್ಯೂ ಜಾಗತಿಕವಾಗಿ ಅಂಗೀಕರಿಸಲ್ಪಟ್ಟ ಪ್ರಯೋಗವಾಗಿದೆ ಯಾಕೆಂದರೆ ಇದು ಪ್ರತಿಯೊಬ್ಬ ಮನುಷ್ಯನಿಗೂ ಆತ ಕೊರೊನಾ ಕಾಲದಲ್ಲಿ ಬದುಕುತ್ತಿದ್ದಾನೆ ಎಂಬುದನ್ನು ನೆನಪು ಮಾಡಿಕೊಡುತ್ತಿರುತ್ತದೆ ಮತ್ತು ಜೀವನ ವಿಧಾನ ಕೂಡಾ ದೊಡ್ಡ ಪ್ರಮಾಣದಲ್ಲಿ ಬಾಧಿತವಾಗುವುದಿಲ್ಲ.

ಕೊರೊನಾ ಕರ್ಫ್ಯೂ ರಾತ್ರಿ 9 ಗಂಟೆಯಿಂದ ಅಥವಾ ರಾತ್ರಿ ಹತ್ತು ಗಂಟೆಯಿಂದ ಆರಂಭಗೊಂಡು ಬೆಳಿಗ್ಗೆ 5 ಅಥವಾ 6 ಗಂಟೆಯವರೆಗೆ ಚಾಲ್ತಿಯಲ್ಲಿರುವಂತಾಗಬೇಕು. ಇದರಿಂದ ಇತರ ಕಾರ್ಯಚಟುವಟಿಕೆಗಳು ಬಾಧಿತವಾಗುವುದಿಲ್ಲ. ಮತ್ತು ಆದುದರಿಂದ ಇದನ್ನುಕೊರೊನಾ ಕರ್ಫ್ಯೂಎಂದು ಜನಪ್ರಿಯಗೊಳಿಸಬೇಕು. ಕೊರೊನಾ ಕರ್ಫ್ಯೂ ಜನತೆಗೆ ( ವೈರಸ್ಸಿನ ಬಗ್ಗೆ) ಅರಿವು ಮೂಡಿಸಲು ಸಹಾಯ ಮಾಡುತ್ತದೆ. ಆದುದರಿಂದ ನಾವು ನಿಟ್ಟಿನಲ್ಲಿ ಗಮನ ಕೊಡಬೇಕು. ನಾನು ಮೊದಲು ಹೇಳಿದಂತೆ, ನಾವು ಈಗ ಹಲವು ಸಂಪನ್ಮೂಲಗಳನ್ನು ಅಭಿವೃದ್ಧಿ ಮಾಡಿದ್ದೇವೆ. ಕಂಟೈನ್ಮೆಂಟ್ ವಲಯಗಳ ಬಗ್ಗೆ ಗಮನ ಕೊಡಬೇಕಾದ ಅಗತ್ಯವಿದೆ. ಮತ್ತು ನಾವು ಅದರಿಂದ ಉತ್ತಮ ಫಲಿತಾಂಶಗಳನ್ನು ಪಡೆಯಬಹುದಾಗಿದೆ. ಹೌದು, ಸರಕಾರ ಸ್ವಲ್ಪ ಹೆಚ್ಚುವರಿ ಪ್ರಯತ್ನಗಳನ್ನು ಮಾಡಬೇಕು. ಆಡಳಿತವನ್ನು ಬಿಗಿ ಮಾಡಬೇಕು. ಮತ್ತು ಬಹಳ ಸೂಕ್ಷ್ಮವಾಗಿ ಪ್ರತಿಯೊಂದನ್ನೂ ಗಮನಿಸಬೇಕು. ನನ್ನನ್ನು ನಂಬಿ, ಅದು ಫಲ ನೀಡುತ್ತದೆ.

ಎರಡನೆಯದಾಗಿ, ನಾವು ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು ಕಳೆದ ಬಾರಿ 10 ಲಕ್ಷದಿಂದ 1.25 ಲಕ್ಷಕ್ಕೆ ಇಳಿಸಲು ಸಫಲರಾಗಿದ್ದೆವು. ಇದನ್ನು ಸಾಧ್ಯ ಮಾಡಿದ ಅದೇ ತಂತ್ರ ಈಗಲೂ ಅಷ್ಟೇ ಪರಿಣಾಮಕಾರಿಯಾಗಿದೆ. ನಾವು ಬಹಳಷ್ಟು ಸಂಪನ್ಮೂಲಗಳಿಲ್ಲದ ಕಾಲದಲ್ಲಿ ಯಶಸ್ಸನ್ನು ಸಾಧಿಸಿದ್ದೇವೆ. ಇಂದು, ಉತ್ತಮ ಸಂಪನ್ಮೂಲಗಳನ್ನು ಹೊಂದಿದ್ದೇವೆ. ಮತ್ತು ಅನುಭವವೂ ಇದೆ. ಆದುದರಿಂದ, ನಾವು ಗರಿಷ್ಠ ಪ್ರಮಾಣವನ್ನು ಬಹಳ ತ್ವರಿತವಾಗಿ ಕೆಳಗೆ ತರಬಹುದು ಮತ್ತು ಅದು ಮತ್ತೆ ಮೇಲೇರದಂತೆ ತಡೆಯಬಹುದು.

ಮತ್ತು ಅನುಭವ ಹೇಳುತ್ತದೆ ನಾವುಪರೀಕ್ಷೆ, ಪತ್ತೆ ಮತ್ತು ಚಿಕಿತ್ಸೆಗೆ ಒತ್ತು ನೀಡಬೇಕು ಎಂಬುದಾಗಿ. ಕೋವಿಡ್ ಸೂಕ್ತ ವರ್ತನೆ ಮತ್ತು ಕೋವಿಡ್ ನಿರ್ವಹಣೆಗೂ ನಾವು ಒತ್ತು ನೀಡಬೇಕು. ಈಗ ನೀವು ನೋಡಿ ಅಲ್ಲಿ ಒಂದು ವಿಷಯ ಶೀರ್ಷಿಕೆ ಇದೆ ಮತ್ತು ನಾನು ಎಲ್ಲಾ ಮುಖ್ಯ ಮಂತ್ರಿಗಳಿಗೆ ಮನವಿ ಮಾಡುತ್ತೇನೆ, ವಿಶ್ಲೇಷಣೆ ಮಾಡಿ ಅಥವಾ ನಿಮ್ಮ ರಾಜ್ಯದ ಯಂತ್ರದ ಮೂಲಕ ಸಮೀಕ್ಷೆ ಮಾಡಿ. ಮೊದಲು ಕೊರೊನಾ ನಿಭಾಯಿಸುವಾಗ ಏನಾಗುತ್ತಿತ್ತು, ಜನರು ಸಣ್ಣ ರೋಗ ಲಕ್ಷಣ ಇದ್ದರೂ ಗಾಬರಿಯಾಗುತ್ತಿದ್ದರು ಮತ್ತು ತಕ್ಷಣ ಕಾರ್ಯಪ್ರವೃತ್ತರಾಗುತ್ತಿದ್ದರು. ಎರಡನೆಯದಾಗಿ ಬಾರಿ ಅಲ್ಲಿ ಅನೇಕ ರೋಗಲಕ್ಷಣರಹಿತ ರೋಗಿಗಳಿದ್ದಾರೆ ಮತ್ತು ಇದರಿಂದಾಗಿ ಅವರು ತಾವು ಬರೇ ಶೀತದಿಂದ ಬಳಲುತ್ತಿದ್ದೇವೆ ಎಂದು ಭಾವಿಸುತ್ತಿದ್ದಾರೆ.

ರೋಗ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸದಿರುವುದರಿಂದ, ಕುಟುಂಬದಲ್ಲಿ ಜನರು ಹಿಂದಿದ್ದಂತೆ ಜೀವನ ಮಾಡುವುದನ್ನು ಮುಂದುವರೆಸುತ್ತಾರೆ. ಮತ್ತು ಇದರ ಪರಿಣಾಮವಾಗಿ ಇಡೀ ಕುಟುಂಬ ರೋಗದಿಂದ ಬಾಧಿತವಾಗುತ್ತದೆ. ನಾವು ತೀವ್ರತೆ ಹೆಚ್ಚಿದಾಗಲಷ್ಟೇ ಗಮನ ಕೊಡಲಾರಂಭಿಸುತ್ತೇವೆ. ಕುಟುಂಬದಲ್ಲಿ ಸದಸ್ಯರು ಖಾಯಿಲೆಯಿಂದ ಪೀಡಿತರಾಗುತ್ತಿರುವುದಕ್ಕೆ ಮೂಲ ಕಾರಣ ಅವರಲ್ಲಿ ರೋಗಲಕ್ಷಣ ಕಾಣಿಸದೇ ಇರುವುದುಮತ್ತು ಅವರು ಜಾಗ್ರತೆ ವಹಿಸದೇ ಇರುವುದು. ಇದಕ್ಕೆ ಪರಿಹಾರವೇನು?. ಪರಿಹಾರವೆಂದರೆ ಮುಂಜಾಗರೂಕತಾವಾಗಿ ಪರೀಕ್ಷೆಗೆ ಒಳಗಾಗುವುದು. ನಾವು ಪರೀಕ್ಷೆಗಳನ್ನು ಹೆಚ್ಚು ಹೆಚ್ಚು ಮಾಡಿದಷ್ಟೂ, ರೋಗಲಕ್ಷಣ ಇಲ್ಲದ ರೋಗಿಗಳು ಪತ್ತೆಯಾಗುತ್ತಾರೆ. ಮತ್ತು ಅವರನ್ನು ಗೃಹ ಕ್ವಾರಂಟೈನ್ ನಲ್ಲಿರಿಸಬಹುದು. ಅವರು ಮೊದಲಿನಂತೆ ತಮ್ಮ ಕುಟುಂಬದ ಜೊತೆ ಜೀವನ ಮಾಡಬಾರದು. ಇದರಿಂದ ನಾವು ಇಡೀ ಕುಟುಂಬ ರೋಗದಿಂದ ಬಾಧಿತವಾಗಬಹುದಾದ ಸಾಧ್ಯತೆಯನ್ನು ತಪ್ಪಿಸಬಹುದು.

ಮತ್ತು ಆದುದರಿಂದ ನಾವು ಲಸಿಕೆ ಹಾಕುವುದಕ್ಕಿಂತ ಹೆಚ್ಚು ಪರೀಕ್ಷೆ ಮಾಡುವ ಬಗ್ಗೆ ಚರ್ಚಿಸಬೇಕು. ನಾವು ಪರೀಕ್ಷೆಗೆ ಹೆಚ್ಚು ಒತ್ತು ಕೊಡಬೇಕು. ನಾವು ಪರೀಕ್ಷೆ ಮಾಡುವ ರೀತಿಯನ್ನು ಬದಲಿಸಬೇಕಾದ ಅಗತ್ಯವಿದೆ.

ವೈರಸನ್ನು ನಿರ್ಬಂಧಿಸಲು ಇರುವ ಪ್ರಮುಖವಾದ ಹಾದಿ ಎಂದರೆ ನಾವು ರೋಗ ವಾಹಕರಾಗಿರುವವರನ್ನು ನಿರ್ಬಂಧಿಸುವುದು. ನಾನು ಇದನ್ನು ಮೊದಲು ಕೂಡಾ ಹೇಳಿದ್ದೆನೀವು ಕೊರೊನಾವನ್ನು ಮನೆಗೆ ತಾರದೇ ಇದ್ದರೆ ಅದು ಮನೆಯೊಳಗೆ ಬರುವುದಿಲ್ಲ. ನಾವು ಜನರನ್ನು ಜಾಗೃತರನ್ನಾಗಿಸಬೇಕಾಗಿದೆ ಮತ್ತು ಅವರು ನಿಯಮಗಳನ್ನು ಪಾಲಿಸಬೇಕಾಗಿದೆ. ಮತ್ತು ಪರೀಕ್ಷೆ ಹಾಗು ಪತ್ತೆಗಳು ಬಹಳ ಪ್ರಮುಖವಾದ ಪಾತ್ರವನ್ನು ಹೊಂದಿವೆ. ನಾವು ಪರೀಕ್ಷೆಯನ್ನು ಹಗುರವಾಗಿ ತೆಗೆದುಕೊಳ್ಳಬಾರದು.

ನಾವು ಪ್ರತೀ ರಾಜ್ಯದಲ್ಲಿಯೂ ಪರೀಕ್ಷೆಯನ್ನು ತೀವ್ರಗೊಳಿಸಬೇಕು. ಯಾವ ರೀತಿಯಲ್ಲಾದರೂ ನಾವು ಪಾಸಿಟಿವಿಟಿ ದರವನ್ನು 5 ಶೇಕಡಾಕ್ಕಿಂತ ಕೆಳಗಿಳಿಸಬೇಕು. ಮತ್ತು ನಿಮಗೆ ನೆನಪಿರಬಹುದು ಆರಂಭದಲ್ಲಿ ಕೊರೊನಾ ವರದಿಗಳು ಬರಲಾರಂಭಿಸಿದಾಗ, ನಿರ್ದಿಷ್ಟ ರಾಜ್ಯವು ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಲಾಗುತ್ತಿತ್ತು. ಮತ್ತು ಕೆಲವು ರಾಜ್ಯಗಳು ಹಿಂದುಳಿದಿವೆ ಎಂದು ಹೇಳಲಾಗುತ್ತಿತ್ತು. ಅಲ್ಲಿ ಪ್ರಕರಣಗಳು ತ್ವರಿತವಾಗಿ ಹೆಚ್ಚುತ್ತಿದ್ದವು. ರಾಜ್ಯಗಳನ್ನು ಟೀಕಿಸುವುದು ಒಂದು ಫ್ಯಾಶನ್ ಆಗಿದೆ. ಮೊದಲ ಸಭೆಯಲ್ಲಿಯೇ, ನಾನು ನಿಮಗೆ ಹೇಳಿದ್ದೆ, ಹೆಚ್ಚುತ್ತಿರುವ ಪ್ರಕರಣಗಳ ಬಗ್ಗೆ ನೀವು ಚಿಂತಿತರಾಗಬೇಡಿ ಎಂದು. ನಿಮ್ಮ ಸಾಧನೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲವೆಂದು ಉದ್ವಿಗ್ನರಾಗಬೇಡಿ ಎಂದೂ ಹೇಳಿದ್ದೆ. ಬದಲು ಪರೀಕ್ಷೆಗಳತ್ತ ಗಮನ ಕೇಂದ್ರೀಕರಿಸಿ ಎಂದು ಹೇಳಿದ್ದೆ. ಮತ್ತು ನಾನದನ್ನು ಇಂದೂ ಪುನರುಚ್ಚರಿಸುತ್ತಿದ್ದೇನೆ. ಸಂಖ್ಯೆಗಳು ಹೆಚ್ಚುತ್ತಿವೆ ಎಂದ ಮಾತ್ರಕ್ಕೆ ನೀವು ತಪ್ಪು ಮಾಡುತ್ತಿದ್ದೀರಿ ಎಂದರ್ಥವಲ್ಲ. ಪರೀಕ್ಷೆಗಳು ಹೆಚ್ಚಿದಂತೆ ಹೆಚ್ಚು ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತವೆ. ಮತ್ತು ಅದೊಂದೇ ದಾರಿ ಇರುವುದು. ಮತ್ತು ಅಲ್ಲಿ ಟೀಕಿಸುವ ಜನರೂ ಇರುತ್ತಾರೆ, ಅವರಿರಲಿ ಬಿಡಿ. ನಾವು ಟೀಕೆಗಳನ್ನು ಸಹಿಸಬೇಕು.

ಆದರೆ ನಮಗಿರುವ ದಾರಿ ಒಂದೇ-ಅದು ಪರೀಕ್ಷೆ. ಪರೀಕ್ಷೆಗಳಿಂದ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತದೆ ಎಂದಾದರೆ, ಅದೂ ಆಗಲಿ. ರಾಜ್ಯಗಳನ್ನು ಬರೇ ಸಂಖ್ಯೆಯ ಆಧಾರದಲ್ಲಿ ಮೌಲ್ಯಮಾಪನ ಮಾಡಲಾಗದು. ಆದುದರಿಂದ ನಿಮ್ಮಲ್ಲಿ ನನ್ನ ಕೋರಿಕೆ ಏನೆಂದರೆ ಒತ್ತಡದಿಂದ ಹೊರ ಬನ್ನಿ ಮತ್ತು ಪರೀಕ್ಷೆ ಮೇಲೆ ಗಮನ ಕೇಂದ್ರೀಕರಿಸಿ. ಅಲ್ಲಿ ಹೆಚ್ಚು ಪಾಸಿಟಿವ್ ಪ್ರಕರಣಗಳು ಕಂಡು ಬಂದರೂ, ಇರಲಿ ಬಿಡಿ. ಆಗ ಮಾತ್ರ ನಮಗೆ ಪರಿಹಾರ ಕಂಡು ಹುಡುಕಲು ಸಾಧ್ಯವಾಗುತ್ತದೆ.

ನಮ್ಮ ಗುರಿ 70% ನಷ್ಟು ಆರ್.ಟಿ-ಪಿ.ಸಿ.ಆರ್. ಪರೀಕ್ಷೆಗಳು. ಅಲ್ಲಿ ಕೆಲವು ವರದಿಗಳಿವೆ, ಅವುಗಳನ್ನು ನಾನು ಪರಿಶೀಲಿಸಿಲ್ಲ. ಅದೇನೆಂದರೆ ಆರ್.ಟಿ.-ಪಿ.ಸಿ.ಆರ್. ಮೂಲಕ ಸ್ಯಾಂಪಲ್ ಸಂಗ್ರಹಣೆಯಲ್ಲಿ ಆಲಸ್ಯ ಮಾಡಲಾಗುತ್ತಿದೆ ಎಂಬುದಾಗಿ. ಅವರು ಪರೀಕ್ಷೆಗಳನ್ನು ಸರಿಯಾಗಿ ಮಾಡುತ್ತಿಲ್ಲ. ಸರಿಯಾಗಿ ಮಾಡದಿದ್ದರೆ, ಪರೀಕ್ಷೆಗಳು ನೆಗೆಟಿವ್ ಫಲಿತಾಂಶವನ್ನು ಕೊಡುತ್ತವೆ. ಆದುದರಿಂದ ಇದನ್ನು ತಡೆಯಬೇಕು. ಒಂದು ವೇಳೆ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾದರೂ ತೊಂದರೆ ಇಲ್ಲ. ಅಲ್ಲಿ ಪಾಸಿಟಿವ್ ಪ್ರಕರಣಗಳಿದ್ದರೆ ಮಾತ್ರ ಚಿಕಿತ್ಸೆ ನೀಡಲಾಗುತ್ತದೆ. ಪರೀಕ್ಷೆಗಳನ್ನು ಸರಿಯಾಗಿ ಮಾಡದಿದ್ದರೆ, ಅದು ಕುಟುಂಬದೊಳಗೆ ಹರಡುತ್ತದೆ ಮತ್ತು ಅಂತಿಮವಾಗಿ ಇಡೀ ಸುತ್ತಮುತ್ತಲಿನವರಿಗೂ ತೊಂದರೆ ಕೊಡುತ್ತದೆ.

ಹಿಂದಿನ ಸಭೆಯಲ್ಲಿ ಕೂಡಾ, ನಾವು ಆರ್.ಟಿ-ಪಿ.ಸಿ.ಆರ್. ಪರೀಕ್ಷೆಗಳನ್ನು ಹೆಚ್ಚಿಸುವ ಅಗತ್ಯವನ್ನು ಚರ್ಚಿಸಿದ್ದೆವು. ಆದುದರಿಂದ, ನಾನು ಮತ್ತೆ ಹೇಳುತ್ತೇನೆ, ಅಲ್ಲಿ ಸೂಕ್ತ ಪರೀಕ್ಷೆಗಳು ಇರಬೇಕು. ನೀವು ಗಮನಿಸಿರಬಹುದು, ಅಲ್ಲಿ ಕೆಲವು ಪ್ರಯೋಗಾಲಯಗಳು ಪ್ರತಿಯೊಬ್ಬರಿಗೂ ನೆಗೆಟಿವ್ ವರದಿ ಕೊಡುತ್ತಿವೆ ಮತ್ತು ಇತರ ಕೆಲವು ಪಾಸಿಟಿವ್ ವರದಿ ಕೊಡುತ್ತಿವೆ. ಇದು ಸರಿಯಾದ ಚಿತ್ರಣ ಅಲ್ಲ. ಅಲ್ಲಿ ಯಾವುದೋ ಹಂತದಲ್ಲಿ ತೊಂದರೆ ಇದೆ, ಅದನ್ನು ಪರಿಶೀಲಿಸಬೇಕು. ಕೆಲವು ರಾಜ್ಯಗಳು ತಮ್ಮ ಮೂಲಸೌಕರ್ಯವನ್ನು ಹೆಚ್ಚಿಸಬೇಕಾದ ಅಗತ್ಯವಿದೆ. ಅದನ್ನು ನಾವು ತ್ವರಿತವಾಗಿ ಮಾಡಿದಷ್ಟೂ, ಪರಿಸ್ಥಿತಿ ಉತ್ತಮಗೊಳ್ಳುತ್ತದೆ.

ಪ್ರಯೋಗಾಲಯಗಳಲ್ಲಿ ಪಾಳಿಯ ಸಂಖ್ಯೆಯನ್ನು ಹೆಚ್ಚಿಸಬೇಕಾದ ಅವಶ್ಯಕತೆ ಇದ್ದರೆ, ಅದನ್ನೂ ಮಾಡಬೇಕು ಎಂದು ನಾನು ಭಾವಿಸುತ್ತೇನೆ. ಮೊದಲೇ ಹೇಳಿದಂತೆ ನಾವು ಕಂಟೈನ್ಮೆಂಟ್ ವಲಯಗಳಲ್ಲಿ ಪರೀಕ್ಷೆಗೆ ಹೆಚ್ಚಿನ ಒತ್ತು ನೀಡಬೇಕು. ಕಂಟೈನ್ಮೆಂಟ್ ವಲಯದಲ್ಲಿ ಯಾರೊಬ್ಬರೂ ಪರೀಕ್ಷೆಯಿಂದ ಹೊರಗುಳಿಯಬಾರದು. ಆಗ ನಿಮಗೆ ಫಲಿತಾಂಶಗಳು ಬಹಳ ಬೇಗ ಲಭಿಸುತ್ತವೆ.

ಸ್ನೇಹಿತರೇ,

ನಾವು ಪತ್ತೆ ಮಾಡುವುದನ್ನು ಹೆಚ್ಚಿಸಬೇಕು. ಆಡಳಿತಾತ್ಮಕ ಮಟ್ಟದಲ್ಲಿ ಪರೀಕ್ಷೆ ಮತ್ತು ಕಂಟೈನ್ಮೆಂಟ್ ವಲಯಗಳನ್ನು ಮಾಡುವುದನ್ನು ಹೆಚ್ಚಿಸಬೇಕು. ನಾವು ಕನಿಷ್ಠ 30 ಸಂಪರ್ಕಗಳನ್ನು 72 ಗಂಟೆಗಳಲ್ಲಿ ಪತ್ತೆ ಹಚ್ಚುವಂತಹ ಗುರಿಯನ್ನು ನಿಗದಿ ಮಾಡಬೇಕು. ಓರ್ವ ವ್ಯಕ್ತಿ ಪಾಸಿಟಿವ್ ಎಂದು ತಿಳಿದುಬಂದರೆ, ನಾವು ವ್ಯಕ್ತಿಯನ್ನು ಭೇಟಿ ಮಾಡಿದ ಕನಿಷ್ಠ 30 ಜನರನ್ನಾದರೂ ಪತ್ತೆ ಮಾಡಬೇಕು. ಕಂಟೈನ್ಮೆಂಟ್ ವಲಯಗಳ ಬಗ್ಗೆ ಸ್ಪಷ್ಟವಾದ ಗುರುತಿಸುವಿಕೆ ಇರಬೇಕು. ಅದರಲ್ಲಿ ಗೊಂದಲ ಇರಬಾರದು. ಆರು ಮಹಡಿಗಳ ಕಟ್ಟಡದಲ್ಲಿ ಎರಡು ಫ್ಲ್ಯಾಟ್ ಗಳಲ್ಲಿ ಪಾಸಿಟಿವ್ ಪ್ರಕರಣಗಳು ಕಂಡುಬಂದರೆ ಇಡೀ ಪ್ರದೇಶವನ್ನು ಕಂಟೈನ್ಮೆಂಟ್ ವಲಯವನ್ನಾಗಿಸಬೇಡಿ. ಹತ್ತಿರದ ಕಟ್ಟಡವನ್ನು ಸೀಲ್ ಡೌನ್ ಮಾಡಬೇಡಿ. ಅದಿಲ್ಲದಿದ್ದರೆ, ಏನಾಗುತ್ತದೆ?. ಇಡೀ ಕಟ್ಟಡವನ್ನು ಅಥವಾ ಪ್ರದೇಶವನ್ನು ಸೀಲ್ ಡೌನ್ ಮಾಡುವುದು ಬಹಳ ಸುಲಭ, ಯಾಕೆಂದರೆ ಇದಕ್ಕೆ ಬಹಳ ಕೆಲಸ ಇಲ್ಲ. ದಿಕ್ಕಿನಲ್ಲಿ ಸಾಗಬೇಡಿ

ನೀವೆಲ್ಲರೂ ಪರಿಸ್ಥಿತಿಯ ಬಗ್ಗೆ ಜಾಗರೂಕರಾಗಿರಿ. ನಮ್ಮ ಜಾಗೃತಿಯಲ್ಲಿ ಯಾವುದೇ ಲೋಪ ಇರಬಾರದು ಎಂದು ನಾನು ನಿಮ್ಮನ್ನು ಕೋರಿಕೊಳ್ಳುತ್ತೇನೆ. ಕೋವಿಡ್ ಆಯಾಸದಿಂದಾಗಿ ನಮ್ಮ ಪ್ರಯತ್ನಗಳಲ್ಲಿ ಯಾವುದೇ ಲೋಪವಾಗದಂತೆ ಖಾತ್ರಿಪಡಿಸಿಕೊಳ್ಳಬೇಕು. ಕೆಲವು ರಾಜ್ಯಗಳು ಕಾಲಬದ್ಧವಾಗಿ ತಂಡಗಳನ್ನು ರಚಿಸಿ ಸಂಪರ್ಕ ಪತ್ತೆಯನ್ನು ಮರು ತಪಾಸಣೆ ಮಾಡಲು ಕ್ರಮ ಕೈಗೊಂಡಿರುವುದರಿಂದ ಉತ್ತಮ ಫಲಿತಾಂಶಗಳು ಬಂದಿವೆ.

ಕಂಟೈನ್ಮೆಂಟ್ ವಲಯಗಳಿಗೆ ಸಂಬಂಧಿಸಿದ ಆರೋಗ್ಯ ಸಚಿವಾಲಯದ ಎಸ್..ಪಿ.ಗಳು ಬಹಳಷ್ಟು ಅನುಭವ ಮತ್ತು ಪರಿಣತಿಯ ಮೂಲಕ ತಯಾರಿಸಲ್ಪಟ್ಟಿವೆ ಮತ್ತು ಎಸ್..ಪಿ.ಗಳು ಕಾಲಕಾಲಕ್ಕೆ ನವೀಕರಣಗೊಂಡಿವೆ. ಎಸ್..ಪಿ.ಗಳನ್ನು ಎಲ್ಲೆಲ್ಲಿ ಅನುಸರಿಸಲಾಗಿದೆಯೋ, ಅಲ್ಲಿ ನಾವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಿದ್ದೇವೆ. ಆದುದರಿಂದ, ನನ್ನ ಸಲಹೆ ಏನೆಂದರೆ ಇವುಗಳಿಗೆ ಸೂಕ್ತ ಗಮನ ಕೊಡಿ ಎಂಬುದಾಗಿದೆ.

ಸ್ನೇಹಿತರೇ,

ನಮ್ಮ ಚರ್ಚೆಯಲ್ಲಿ ನಾವೆಲ್ಲರೂ ಮರಣ ದರದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದೇವೆ. ನಾವದನ್ನು ಕನಿಷ್ಟ ಪ್ರಮಾಣಕ್ಕೆ ಇಳಿಸಬೇಕು. ಸಮಸ್ಯೆಯ ಮೂಲ ಬೇರು ಇರುವುದು ಸಾಮಾನ್ಯ ಜೀವನ ನಡೆಸುತ್ತಿರುವ ಯಾರೇ ಆದರೂ ಅದನ್ನು ಸಣ್ಣ ಖಾಯಿಲೆ ಎಂದು ಭಾವಿಸುತ್ತಾರೆ ಎಂಬುದರಲ್ಲಿ. ಇಡೀ ಕುಟುಂಬಕ್ಕೆ ಹರಡಿದಾಗಲೂ ಇದೇ ಮನಸ್ಥಿತಿಯಲ್ಲಿರುತ್ತಾರೆ. ಪರಿಸ್ಥಿತಿ ಕೈಮೀರಿದಾಗ ಅವರು ಆಸ್ಪತ್ರೆಗಳಿಗೆ ಹೋಗುತ್ತಾರೆ. ಪರೀಕ್ಷೆ ಮಾಡುವ ಹೊತ್ತಿಗೆ ಸಾಕಷ್ಟು ಸಮಯ ಕಳೆದು ಹೋಗಿರುತ್ತದೆ. ಪ್ರತೀ ಆಸ್ಪತ್ರೆಯಿಂದಲೂ ಮರಣದ ಬಗ್ಗೆ ಮಾಹಿತಿ ಇರಬೇಕು. ಯಾವ ಹಂತದಲ್ಲಿ ಅದರ ಪತ್ತೆಯಾಯಿತು, ರೋಗಿಯನ್ನು ಯಾವಾಗ ಸೇರಿಸಿಕೊಳ್ಳಲಾಯಿತು, ರೋಗಿಯು ಇತರ ಖಾಯಿಲೆಗಳನ್ನು ಹೊಂದಿದ್ದರೆ, ಸಾವಿಗೆ ಕಾರಣಗಳು ಇತ್ಯಾದಿ ವಿವರಗಳು ಬೇಕು. ನಮ್ಮಲ್ಲಿ ಸಮಗ್ರ ದತ್ತಾಂಶಗಳಿದ್ದರೆ, ಜೀವವನ್ನು ಉಳಿಸಲು ಅದರಿಂದ ಸುಲಭವಾಗುತ್ತದೆ.

ಸ್ನೇಹಿತರೇ,

...ಎಂ.ಎಸ್. ದಿಲ್ಲಿ ಪ್ರತೀ ಮಂಗಳವಾರ ಮತ್ತು ಶುಕ್ರವಾರ ವಿಷಯ ಕುರಿತು ವೆಬಿನಾರ್ ಗಳನ್ನು ಆಯೋಜಿಸುತ್ತದೆ. ಮತ್ತು ದೇಶಾದ್ಯಂತದಿಂದ ವೈದ್ಯರು ಭಾಗವಹಿಸುತ್ತಾರೆ. ಇದು ಮುಂದುವರಿಯಬೇಕು. ರಾಜ್ಯಗಳ ಎಲ್ಲಾ ಆಸ್ಪತ್ರೆಗಳು ಇದರಲ್ಲಿ ಸೇರಿಕೊಳ್ಳಬೇಕು. ಇದರಿಂದ ಅವರಿಗೆ ರಾಷ್ಟ್ರೀಯ ಕ್ಲಿನಿಕಲ್ ನಿರ್ವಹಣಾ ಶಿಷ್ಟಾಚಾರಗಳ ಬಗ್ಗೆ ಅರಿವು, ಜಾಗೃತಿ ಮೂಡುತ್ತದೆ. ಪ್ರಕ್ರಿಯೆಗಳನ್ನು ವೈದ್ಯಕೀಯ ಸಿಬ್ಬಂದಿಗಳಿಗೆ ವಿವರಿಸಬೇಕು. ಅದೇ ರೀತಿ ಅಲ್ಲಿ ಕಾಲಬದ್ಧವಾಗಿ ಅಂಬುಲೆನ್ಸ್ ಗಳು, ವೆಂಟಿಲೇಟರುಗಳು ಮತ್ತು ಆಮ್ಲಜನಕ ಲಭ್ಯತೆಯ ಬಗ್ಗೆ ಪರಾಮರ್ಶೆ ನಡೆಯಬೇಕು. ಹಿಂದೆ ಪ್ರಕರಣಗಳು ಗರಿಷ್ಠ ಪ್ರಮಾಣಕ್ಕೆ ತಲುಪಿದ್ದಾಗ ಹೋಲಿಸಿದರೆ, ಬಾರಿ ಆಮ್ಲಜನಕವನ್ನು ಅಷ್ಟೊಂದು ವ್ಯಾಪಕವಾಗಿ ಬಳಸಲಾಗುತ್ತಿಲ್ಲ. ಆದುದರಿಂದ, ನಾವು ಪ್ರತಿಯೊಂದನ್ನೂ ವಿಶ್ಲೇಷಣೆ ಮಾಡಬೇಕು ಮತ್ತು ವರದಿಗಳನ್ನು ಪರಿಶೀಲಿಸಬೇಕು.

ಸ್ನೇಹಿತರೇ,

ನಾವು ದಿನಕ್ಕೆ 40 ಲಕ್ಷ ಲಸಿಕೆಯ ಅಂಕಿ ಅಂಶಗಳನ್ನು ದಾಟಿದ್ದೇವೆ. ಚರ್ಚೆಯಲ್ಲಿ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಸಂಬಂಧಿಸಿ ಹಲವು ಪ್ರಮುಖ ಅಂಶಗಳು ನಮ್ಮೆದುರು ಬಂದಿವೆ. ನಿಮ್ಮ ಅಧಿಕಾರಿಗಳನ್ನು ಲಸಿಕೀಕರಣ ಆಂದೋಲನದಲ್ಲಿ ಭಾಗಿಯಾಗಿಸಿರಿ. ಲಸಿಕೀಕರಣಕ್ಕೆ ಸಂಬಂಧಿಸಿದ ಸೌಲಭ್ಯಗಳ ಮಾನದಂಡಗಳ ಬಗ್ಗೆ ಹೇಳುವುದಾದರೆ ಶ್ರೀಮಂತ ರಾಷ್ಟ್ರಗಳಲ್ಲಿ ಲಭ್ಯ ಇರುವ ಸೌಲಭ್ಯಗಳೆಲ್ಲವೂ ಭಾರತದಲ್ಲಿವೆ. ನೀವು ಅವುಗಳನ್ನು ಅಧ್ಯಯನ ಮಾಡಬೇಕಿದೆ. ಎಲ್ಲಾ ಸುಶಿಕ್ಷಿತ ಜನರು, ಇದನ್ನು ಅವಲೋಕಿಸಬೇಕು.

ಲಸಿಕೆ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಪ್ರಯತ್ನಗಳು ಜಾರಿಯಲ್ಲಿವೆ. ಹೊಸ ಲಸಿಕೆಗಳೂ ಅಭಿವೃದ್ಧಿಯಾಗುತ್ತಿವೆ. ಲಸಿಕೆಗಳ ದಾಸ್ತಾನು ಮತ್ತು ಲಸಿಕೆ ಪೋಲು ಆಗುತ್ತಿರುವ ಬಗ್ಗೆಯೂ ಚರ್ಚೆಗಳು ನಡೆದಿವೆ. ಎಷ್ಟು ಲಸಿಕೆಗಳನ್ನು ಅಭಿವೃದ್ಧಿ ಮಾಡಬಹುದು ಎಂಬ ಬಗ್ಗೆ ನಿಮಗೆಲ್ಲಾ ತಿಳಿದಿದೆ. ಅತ್ಯಲ್ಪ ಕಾಲದಲ್ಲಿ ಅಂತಹ ಬೃಹತ್ ಪ್ರಯೋಗಾಲಯಗಳನ್ನು ಸ್ಥಾಪಿಸುವುದು ಸಾಧ್ಯವಿಲ್ಲ. ಬಳಕೆಗೆ ಯಾವುದೆಲ್ಲಾ ಲಭ್ಯ ಇದೆಯೋ, ಅದಕ್ಕೆ ನಾವು ಆದ್ಯತೆ ನೀಡಬೇಕು. ನಾವು ಇಡೀ ದಾಸ್ತಾನನ್ನು ನಿರ್ದಿಷ್ಟ ರಾಜ್ಯದಲ್ಲಿಟ್ಟು, ಉತ್ತಮ ಫಲಿತಾಂಶ ನಿರೀಕ್ಷೆ ಮಾಡಿದರೆ, ಅದು ಸರಿಯಾದ ಧೋರಣೆ ಅಲ್ಲ. ನಾವು ಇಡೀ ದೇಶದ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ನಿರ್ವಹಣೆ ಮಾಡಬೇಕಾಗುತ್ತದೆ. ಕೋವಿಡ್ ನಿರ್ವಹಣೆಯ ಬಹಳ ದೊಡ್ಡ ಭಾಗ ಎಂದರೆ ಲಸಿಕೆ ಪೋಲಾಗುವಿಕೆಯನ್ನು ತಡೆಯುವುದು.

ಸ್ನೇಹಿತರೇ,

ರಾಷ್ಟ್ರವ್ಯಾಪೀ ವ್ಯೂಹವನ್ನು ರಾಜ್ಯ ಸರಕಾರಗಳ ಜೊತೆ ಚರ್ಚೆ ಮತ್ತು ಒಪ್ಪಿಗೆಯ ಮೂಲಕವೇ ಮಾಡಲಾಗಿದೆ. ಅತಿ ಗಮನ ಕೊಡಬೇಕಾದ ಜಿಲ್ಲೆಗಳಲ್ಲಿ 45 ವರ್ಷ ದಾಟಿದ ಎಲ್ಲರಿಗೂ ಲಸಿಕೆ ಹಾಕಿಸುವ ಬಗ್ಗೆ ಗಮನ ಹರಿಸಬೇಕು ಎಂದು ನಾನು ನಿಮ್ಮನ್ನು ಕೋರುತ್ತೇನೆ. ನೀವು ಕನಿಷ್ಠ ಇದನ್ನಾದರೂ ಸಾಧಿಸಿ. ನಾನು ನಿಮಗೆ ಸಲಹೆ ಕೊಡುತ್ತೇನೆ. ಕೆಲವೊಮ್ಮೆ ಇದು ಪರಿಸ್ಥಿತಿಯನ್ನು ಬದಲಾಯಿಸಲು ಸಹಾಯ ಮಾಡುತ್ತದೆ. ಜ್ಯೋತಿಭಾ ಫುಲೆ ಅವರ ಜನ್ಮದಿನ ಏಪ್ರಿಲ್ 11 ರಂದು ಇದೆ ಮತ್ತು ಏಪ್ರಿಲ್ 14 ರಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನವಿದೆ. ನಾವುಟಿಕಾ ಉತ್ಸವಅಥವಾ ಲಸಿಕಾ ಉತ್ಸವ ಸಂಘಟಿಸಿಟಿಕಾ ಉತ್ಸವ ವಾತಾವರಣವನ್ನು ನಿರ್ಮಾಣ ಮಾಡಬಹುದೇ?.

ನಾವು ಅರ್ಹ ಜನರನ್ನು ವಿಶೇಷ ಆಂದೋಲನದ ಮೂಲಕ ಲಸಿಕಾ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಬೇಕು. ಅವರಿಗೆ ಲಸಿಕೆ ಹಾಕಿಸಬೇಕು. ಮತ್ತು ಶೂನ್ಯ ನಷ್ಟವನ್ನು ನಿರ್ಧರಿಸಬೇಕು. “ಟಿಕಾ ಉತ್ಸವ ನಾಲ್ಕು ದಿನಗಳಲ್ಲಿ ಶೂನ್ಯ ಪೋಲು ಗುರಿ ಸಾಧನೆಯಾದರೆ ಅದು ನಮ್ಮ ಲಸಿಕಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ನಾವು ಲಸಿಕಾ ಸಾಮರ್ಥ್ಯವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು. ಮತ್ತು ಇದಕ್ಕಾಗಿ, ನಾವು ಲಸಿಕಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಏಪ್ರಿಲ್ 11 ರಿಂದ ಏಪ್ರಿಲ್ 14 ನಡುವೆ ನಾವು ವ್ಯವಸ್ಥೆಗಳನ್ನು ಹೇಗೆ ಒಗ್ಗೂಡಿಸುತ್ತೇವೆ ಎಂಬುದನ್ನು ನೋಡೋಣ ಮತ್ತು ಅಲ್ಲಿ ಸಾಧನೆಯ ತೃಪ್ತಿ ಇರಲಿದೆ. ಇದು ಪರಿಸ್ಥಿತಿಯನ್ನು ಬದಲಾಯಿಸುವಲ್ಲಿ ಬಹಳ ದೊಡ್ಡ ಸಹಾಯ ಮಾಡಲಿದೆ. ನಾನು ಭಾರತ ಸರಕಾರಕ್ಕೆ ಸಾಧ್ಯವಾದಷ್ಟು ಹೆಚ್ಚು ಲಸಿಕೆ ಡೋಸ್ ಗಳನ್ನು ಒದಗಿಸಲು ತಿಳಿಸಿದ್ದೇನೆ. “ಲಸಿಕಾ ಉತ್ಸವದಲ್ಲಿ ಅರ್ಹ ಜನರಿಗೆ ಗರಿಷ್ಠ ಪ್ರಮಾಣದಲ್ಲಿ ಲಸಿಕೆ ಹಾಕುವುದು ನಮ್ಮ ಇರಾದೆಯಾಗಬೇಕು.

ತಮ್ಮ ಸುತ್ತಲಿರುವ 45 ವರ್ಷ ಮೀರಿದವರು ಲಸಿಕೆ ಪ್ರಯೋಜನ ಪಡೆಯುವಂತೆ ಯುವಕರು ಸಹಾಯ ಮಾಡಬೇಕು ಎಂದು ನಾನು ದೇಶದ ಯುವಕರಲ್ಲಿ ಮನವಿ ಮಾಡುತ್ತೇನೆ. ಯುವಜನತೆಗೆ ಇದು ನನ್ನ ವಿಶೇಷ ಮನವಿ. ನೀವು ಆರೋಗ್ಯವಂತರಾಗಿದ್ದೀರಿ, ಸಂಪನ್ಮೂಲಭರಿತರಾಗಿರುವಿರಿ ಮತ್ತು ನೀವು ಬಹಳಷ್ಟು ಕೆಲಸಗಳನ್ನು ಮಾಡಬಲ್ಲಿರಿ. ದೇಶದ ಯುವಜನತೆ ಕೊರೊನಾದ ಶಿಷ್ಟಾಚಾರಗಳಾದ ಅಂತರ ಕಾಯ್ದುಕೊಳ್ಳುವಿಕೆ, ಮುಖಗವಸುಗಳನ್ನು ಧರಿಸುವಿಕೆ ಇತ್ಯಾದಿಗಳನ್ನು ಅನುಸರಿಸಿದರೆ, ಆಗ ಕೊರೊನಾ ಅವರ ಹತ್ತಿರ ಸುಳಿಯಲಾರದು.

ನಾವು ಯುವ ಜನತೆಯಲ್ಲಿ ಮುಂಜಾಗರೂಕತಾ ಕ್ರಮಗಳಿಗೆ ಒತ್ತು ನೀಡುವ ಬಗ್ಗೆ ಅರಿವು ಮೂಡಿಸಬೇಕುಯುವಜನತೆಯನ್ನು ಲಸಿಕಾ ಕಾರ್ಯಕ್ರಮಕ್ಕೆ ಒತ್ತಾಯ ಮಾಡುವುದಕ್ಕೆ ಬದಲು, ನಾವು ಅವರು ಶಿಷ್ಟಾಚಾರ ಅನುಸರಿಸುವಂತೆ ಪ್ರೇರೇಪಿಸಬೇಕು. ಯುವಕರು ಇದನ್ನೊಂದು ಸವಾಲು ಎಂದು ಪರಿಗಣಿಸಿದರೆ ಅವರು ಶಿಷ್ಟಾಚಾರ ಪಾಲಿಸುವುದು ಮಾತ್ರವಲ್ಲ, ಇತರರು ಕೂಡಾ ಅದನ್ನು ಪಾಲಿಸುವಂತೆ ಮಾಡಬಲ್ಲರು. ಪಾಸಿಟಿವ್ ಪ್ರಕರಣಗಳು ಗರಿಷ್ಠ ಪ್ರಮಾಣಕ್ಕೆ ತಲುಪಿ  ಬಳಿಕ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾದಂತಹ ಸ್ಥಿತಿಗೆ ನಾವು ಮರಳಬಲ್ಲೆವು. ನಾವು ನಂಬಿಕೆಯೊಂದಿಗೆ ಮುಂದೆ ಸಾಗೋಣ.

ಸರಕಾರವು ಜನರಿಗೆ ಲಸಿಕೆ ಹಾಕಲು ಸಹಾಯ ಮಾಡುವುದಕ್ಕಾಗಿ ಡಿಜಿಟಲ್ ವ್ಯವಸ್ಥೆಯನ್ನು ಅಭಿವೃದ್ಧಿ ಮಾಡಿದೆ. ಜನರು ಕೂಡಾ ಅದನ್ನು ಶ್ಲಾಘಿಸುತ್ತಿದ್ದಾರೆ. ಆದರೂ ಅಲ್ಲಿ ಕೆಲವು ಜನರಿಗೆ, ಬಡ ಕುಟುಂಬಗಳಿಗೆ, ತಂತ್ರಜ್ಞಾನದ ಬಗ್ಗೆ ಗೊತ್ತಿಲ್ಲದವರಿಗೆ ಇದರ ಬಳಕೆ ಸಾಧ್ಯವಾಗುತ್ತಿಲ್ಲ. ನಾನು ಯುವಕರಿಗೆ ಇಂತಹ ಕುಟುಂಬಗಳ ಜನರಿಗೆ ಸಹಾಯ ಮಾಡಿರೆಂದು ಮನವಿ ಮಾಡುತ್ತೇನೆ. ನಾವು ಎನ್.ಸಿ.ಸಿ, ಎನ್.ಎಸ್.ಎಸ್., ಸರಕಾರಿ ವ್ಯವಸ್ಥೆಗಳನ್ನು ಬಳಸಿ ಜನರಿಗೆ ನೆರವಾಗಬೇಕು. ನಾವು ನಿಟ್ಟಿನಲ್ಲಿ ಚಿಂತನೆ ಮಾಡಬೇಕು.

ನಗರಗಳಲ್ಲಿ ಬಡವರ ಸಂಖ್ಯೆ ಬಹಳ ದೊಡ್ಡದಿದೆ. ಕೊಳೆಗೇರಿಯಲ್ಲಿ ಬದುಕುತ್ತಿರುವ ಬಡವರು, ಹಿರಿಯರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ವಿಷಯಗಳನ್ನು ಅವರಿಗೆ ತಿಳಿಸಬೇಕು. ನಿಟ್ಟಿನಲ್ಲಿ ನಮ್ಮ ಸರಕಾರಗಳು ಸ್ವಯಂಸೇವಕರನ್ನು ನಾಗರಿಕ ಸಮಾಜ ಮತ್ತು ನಮ್ಮ ಯುವಜನತೆಯನ್ನು ಒಗ್ಗೂಡಿಸಿಕೊಳ್ಳಬೇಕು. ನಾವು ಅವರನ್ನು ಆದ್ಯತೆಯಾಧಾರದಲ್ಲಿ ಲಸಿಕಾ ಕಾರ್ಯಕ್ರಮಕ್ಕೊಳಪಡಿಸಬೇಕುಮತ್ತು ಕಾರ್ಯದಿಂದಾಗಿ ನಮಗೆ ತೃಪ್ತಿ ಲಭಿಸಲಿದೆ. ಲಸಿಕೆಯ ಜೊತೆಗೆ ನಾವು ಲಸಿಕೆ ಹಾಕಿಸಿದ ಬಳಿಕ ಯಾವುದೇ ನಿರ್ಲಕ್ಷ್ಯ ಆಗದಂತೆ ಖಾತ್ರಿಪಡಿಸಬೇಕು. ದೊಡ್ಡ ಸಂಕಷ್ಟ ಎಂದರೆ ಈಗ ನಮಗೇನೂ ಆಗುವುದಿಲ್ಲ ಎಂದು ಜನ ಭಾವಿಸತೊಡಗುವುದು. ಮೊದಲ ದಿನದಿಂದಲೂ ನಾನು ಹೇಳುತ್ತಲೇ ಬಂದಿದ್ದೇನೆ, ಔಷಧಿಯ ಜೊತೆಗೆ ಶಿಷ್ಟಾಚಾರಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂಬುದಾಗಿ.

ನಾವು ಜನರಿಗೆ ಪದೇ ಪದೇ ಹೇಳಬೇಕಾಗಿದೆ, ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ ಎಂಬುದಾಗಿ. ಲಸಿಕೆ ಪಡೆದ ಬಳಿಕವೂ ಮುಖಗವಸು ಹಾಕಿಕೊಳ್ಳುವುದು ಮತ್ತು ಇತರ ಶಿಷ್ಟಾಚಾರಗಳ ಪಾಲನೆ ಬಹಳ ಮುಖ್ಯ. ಬೇಜವಾಬ್ದಾರಿಯುತವಾಗಿ ವರ್ತಿಸುವ ಜನರಲ್ಲಿ ಮುಖಗವಸು ಧರಿಸುವಿಕೆ ಮತ್ತು ಇತರ ಶಿಷ್ಟಾಚಾರಗಳ ಬಗ್ಗೆ ಮರು ಜಾಗೃತಿ ಮೂಡಿಸುವುದು ಅವಶ್ಯ. ಮತ್ತೊಮ್ಮೆ, ನಾವು ಪ್ರಭಾವಶಾಲೀ ವ್ಯಕ್ತಿಗಳನ್ನು, ಸಾಮಾಜಿಕ ಸಂಘಟನೆಗಳನ್ನು, ಸೆಲೆಬ್ರಿಟಿಗಳನ್ನು, ಮತ್ತು ಸಮಾಜದ ಅಭಿಪ್ರಾಯ ನಿರೂಪಕರನ್ನು ಜಾಗೃತಿ ಮೂಡಿಸುವ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು. ನಾನು ರಾಜ್ಯಪಾಲರೆಂಬ ಸಂಸ್ಥೆಯನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು ಎಂದು ನಿಮ್ಮಲ್ಲಿ ಮನವಿ ಮಾಡುತೇನೆ.

ರಾಜ್ಯಪಾಲರ ನಾಯಕತ್ವದಲ್ಲಿ ಮತ್ತು ಮುಖ್ಯಮಂತ್ರಿಗಳ ಮಾರ್ಗದರ್ಶನದಲ್ಲಿ, ಎಲ್ಲಾ ರಾಜ್ಯಗಳೂ ಕನಿಷ್ಟವೆಂದರೂ ಸರ್ವಪಕ್ಷಗಳ ಸಭೆಯನ್ನು ನಡೆಸಿ, ಕ್ರಮವಹಿಸಬೇಕಾದ ಅಂಶಗಳನ್ನು ದೃಢಪಡಿಸಿಕೊಳ್ಳಬೇಕು. ಎಲ್ಲಾ ಚುನಾಯಿತ ಪ್ರತಿನಿಧಿಗಳೊಂದಿಗೆ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು ಜೊತೆಗೂಡಿ ವರ್ಚುವಲ್ ವೆಬಿನಾರ್ ಗಳನ್ನು ನಡೆಸಬೇಕು ಎಂಬುದು ನನ್ನ ಕೋರಿಕೆ. ಇದು ನಗರ ಸಂಸ್ಥೆಗಳಿಂದ ಅರಂಭವಾಗಲಿ ಮತ್ತು ಬಳಿಕ ಗ್ರಾಮೀಣ ಸಂಸ್ಥೆಗಳ ಜೊತೆ ನಡೆಯಲಿ. ವೆಬಿನಾರ್ ಗಳನ್ನು ಎಲ್ಲಾ ಚುನಾಯಿತ ಜನರೊಂದಿಗೆ ನಡೆಸಬೇಕು. ಇದು ಧನಾತ್ಮಕ ಸಂದೇಶಗಳನ್ನುನೀಡುತ್ತದೆ ಮತ್ತು ಇದನ್ನು ರಾಜಕೀಕರಣಗೊಳಿಸಬಾರದು ಎಂಬ ಅಂಶವನ್ನು ಸಾರುತ್ತದೆ. ಮತ್ತು ಇದನ್ನು ನಾವೆಲ್ಲರೂ ಕೂಡಿ ಮಾಡಬೇಕು. ಪ್ರಯತ್ನವನ್ನು ಮಾಡಲೇಬೇಕು.

ಮುಖ್ಯಮಂತ್ರಿಗಳು ಮೊದಲೇ ನಿರ್ಧರಿತವಾದ ಹಲವಾರು ಕಾರ್ಯಕ್ರಮಗಳಲ್ಲಿ ನಿರತರಾಗಿರುವುದರಿಂದ, ಧಾರ್ಮಿಕ ಮುಖಂಡರ ಜೊತೆ ಮತ್ತು ಇತರರ ಜೊತೆ ಒಂದು ಸಮಾಲೋಚನಾ ಸಭೆ ಅಥವಾ ವೆಬಿನಾರ್ ನ್ನು ರಾಜ್ಯದ ರಾಜ್ಯಪಾಲರ ನಾಯಕತ್ವದಲ್ಲಿ ಆಯೋಜಿಸಬಹುದು. ರೀತಿಯ ಸಮಾಲೋಚನಾ ಸಭೆಯನ್ನು ನಾಗರಿಕ ಸಮಾಜದ ಜೊತೆಗೂ ನಡೆಸಬಹುದು. ಅದೇ ರೀತಿ, ಅದನ್ನು ಸೆಲೆಬ್ರಿಟಿಗಳು, ಬರಹಗಾರರು, ಕಲಾವಿದರು, ಆಟಗಾರರು ಮತ್ತಿತರರ ಜೊತೆ ನಡೆಸಬಹುದು.

ಇಂತಹ ಆಂದೋಲನ ರಾಜ್ಯಪಾಲರ ಮೂಲಕ ನಡೆಯಬೇಕು ಎಂಬುದು ನನ್ನ ಆಲೋಚನೆ. ಬದುಕಿನ ವಿವಿಧ ಮಜಲಿನ ವ್ಯಕ್ತಿಗಳನ್ನು ಒಗ್ಗೂಡಿಸಿಕೊಂಡು ಮತ್ತು ಅವರು ಶಿಷ್ಟಾಚಾರಗಳನ್ನು ಪಾಲಿಸುವಂತೆ ಹಾಗು ಪರೀಕ್ಷೆಗೆ ಒಳಗಾಗುವಂತೆ ಮಾಡುವುದು ಇದರ ಉದ್ದೇಶ. ನಾವು ಪರೀಕ್ಷೆಯನ್ನು ಮರೆತು ಲಸಿಕಾ ಕಾರ್ಯಕ್ರಮಕ್ಕೆ ಸ್ಥಳಾಂತರಗೊಂಡುದರಿಂದ  ಏನಾಗಿದೆ. ಲಸಿಕೆಗಳು  ಲಭ್ಯವಿದ್ದಾಗ ಜನರನ್ನು ತಲುಪುತ್ತವೆ. ಮೊದಲು ನಾವು ಯುದ್ಧವನ್ನು ಲಸಿಕೆ ಇಲ್ಲದೆಯೇ ಗೆದ್ದಿದ್ದೇವೆ. ನಮಗೆ ಲಸಿಕೆ ಲಭಿಸುತ್ತದೆ ಎಂಬುದರ ಬಗ್ಗೆ ಖಾತ್ರಿ ಇರಲಿಲ್ಲ. ಇಂದು ನಮಗೆ ಭಯ ಇಲ್ಲ.

ಯುದ್ಧದಲ್ಲಿ ನಾವು ಹೋರಾಡಿದ ರೀತಿಯಲ್ಲಿ, ನಾವು ಮತ್ತೊಮ್ಮೆ ಯುದ್ಧವನ್ನು ಗೆಲ್ಲಬಹುದು. ನಾನು ಹೇಳಿದಂತೆಇಡೀ ಕುಟುಂಬ ಹೇಗೆ ಇದರಿಂದ ಬಾಧಿತವಾಗುತ್ತದೆ ಎಂಬುದು ಸ್ಪಷ್ಟವಿದೆ. ನೀವು ಕೂಡಾ ಇದನ್ನು ಪರಿಶೀಲಿಸಬಹುದು. ಅದು ಮೊದಲು ರೋಗಲಕ್ಷಣ ರಹಿತವಾಗಿ ಹರಡುತ್ತದೆ ಬಳಿಕ ಅದು ಈಗಾಗಲೇ ಕೆಲವು ಇತರ ಖಾಯಿಲೆಗಳಿಂದ ಬಳಲುತ್ತಿರುವವರನ್ನು ಅಥವಾ ಇತರರನ್ನು ತಿಂದು ಹಾಕುತ್ತದೆ ಎಂಬುದರ ಬಗ್ಗೆ ನಾನು ನಿಮ್ಮ ಗಮನವನ್ನು ಸೆಳೆಯಲು ಇಚ್ಛಿಸುತ್ತೇನೆ. ಬಳಿಕ ಇಡೀ ಕುಟುಂಬವೇ ಸಮಸ್ಯೆಗೆ ಸಿಲುಕುತ್ತದೆ.

ಆದುದರಿಂದ, ಇದು ನನ್ನ ಕೋರಿಕೆ. ನಾವು ಪರೀಕ್ಷೆ ಮತ್ತು ಮುಂಜಾಗರೂಕತಾ ಕ್ರಮಗಳಿಗೆ ಹೆಚ್ಚಿನ ಒತ್ತನ್ನು ನೀಡಬೇಕು.ಇಂದು ನಮ್ಮಲ್ಲಿ ಸಂಪನ್ಮೂಲಗಳಿವೆ. ದೇಶದ ಪ್ರತೀ ಜಿಲ್ಲೆಯಲ್ಲೂ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ನಾವು ಒಂದು ಪ್ರಯೋಗಾಲಯದೊಂದಿಗೆ ಆರಂಭ ಮಾಡಿದ್ದೆವು ಮತ್ತು ಇಂದು ಪ್ರತೀ ಜಿಲ್ಲೆಗಳಲ್ಲಿಯೂ ಪ್ರಯೋಗಾಲಯಗಳಿವೆ. ಪ್ರಯೋಗಾಲಯಗಳನ್ನು ಬಳಸದಿದ್ದರೆ ನಾವದನ್ನು ನಿರ್ಬಂಧಿಸುವುದಾದರೂ ಹೇಗೆ

ವಿಷಯವನ್ನು ರಾಜಕೀಕರಣಗೊಳಿಸುತ್ತಿರುವ ಪ್ರಶ್ನೆಯ ಬಗ್ಗೆ ಹೇಳುವುದಾದರೆ, ನಾನಿದನ್ನು ಮೊದಲ ದಿನದಿಂದ ನೋಡುತ್ತಿದ್ದೇನೆ. ಮತ್ತು ವಿವಿಧ ರೀತಿಯ ಹೇಳಿಕೆಗಳನ್ನು ಎದುರಿಸುತ್ತಿದ್ದೇನೆ. ಆದರೆ ನಾನು ನನ್ನ ಬಾಯಿ ತೆರೆಯುವುದಿಲ್ಲ. ದೇಶದ ಜನರಿಗೆ ಸೇವೆ ಸಲ್ಲಿಸುವುದು ಬಹಳ ಪವಿತ್ರ ಕೆಲಸ ಎಂಬ ದೃಷ್ಟಿ ಕೋನ ನನ್ನದು. ಕಷ್ಟದ ಸಮಯದಲ್ಲಿ ಜನರಿಗೆ ಸೇವೆ ಮಾಡಲು, ದೇವರು ನಮಗೆ ಜವಾಬ್ದಾರಿ ಕೊಟ್ಟಿದ್ದಾರೆ ಮತ್ತು ನಾವದನ್ನು ನೆರವೇರಿಸಬೇಕು. ವಿಷಯವನ್ನು ರಾಜಕೀಕರಣಗೊಳಿಸಲು ಇಚ್ಛಿಸುವವರು, ಅದನ್ನು ಮಾಡುತ್ತಿದ್ದಾರೆ. ಅವರ ವಿಷಯದಲ್ಲಿ ನನ್ನಲ್ಲಿ ಮಾತನಾಡಲು ಶಬ್ದಗಳಿಲ್ಲ. ಆದರೆ ಎಲ್ಲಾ ಮುಖ್ಯಮಂತ್ರಿಗಳೂ ತಮ್ಮ ರಾಜ್ಯಗಳಲ್ಲಿ ಸರ್ವ ಪಕ್ಷ ಸಭೆ ಕರೆದು, ವಿಷಯದ ಬಗ್ಗೆ ಚರ್ಚಿಸಬೇಕು. ಮತ್ತು ಪರಿಸ್ಥಿತಿಯನ್ನು ಬದಲಾಯಿಸಲು ಸಹಾಯ ಪಡೆಯಬೇಕು. ನಾವು ಸಂಕಷ್ಟದ ಸಮಯದಿಂದ ಬಹಳ ಬೇಗ ಹೊರಗೆ ಬರುತ್ತೇವೆ ಎಂಬ ಬಗ್ಗೆ ನಮಗೆ ಭರವಸೆ ಇದೆ.

ಮತ್ತೊಮ್ಮೆ, ಔಷಧಿ ಮತ್ತು ಕಟ್ಟು ನಿಟ್ಟಿನ ಅನುಸರಣೆ-ಇದು ನನ್ನ ಮಂತ್ರ. ವಿಷಯಗಳ ಬಗ್ಗೆ ರಾಜಿ ಮಾಡಿಕೊಳ್ಳಬೇಡಿ. ನಾನಿದನ್ನು ಹಿಂದಿನ ಬಾರಿ ಕೂಡಾ ಹೇಳಿದ್ದೆ. ಯಾರಾದರೊಬ್ಬರಿಗೆ ಶೀತವಿದ್ದರೆ ಮತ್ತು ಅದಕ್ಕೆ ಔಷಧಿ ತೆಗೆದುಕೊಂಡಿದ್ದರೆ, ಹೊರಗೆ ಮಳೆ ಬರುತ್ತಿದ್ದು, ಆತ ಹೊರಗೆ ಬರುವಾಗ ಕೊಡೆ ಬಳಸುವುದಿಲ್ಲ ಎಂದರೆ ಪ್ರಯೋಜನವಾಗದು. ಇದು ಹಾಗಾಗಬಾರದು. ನಿಮಗೆ ಶೀತವಿದ್ದರೆ, ನೆಗಡಿ ಇದ್ದರೆ, ಔಷಧಿ ತೆಗೆದುಕೊಂಡಿದ್ದರೆ, ಹೊರಗೆ ಮಳೆ ಬರುತ್ತಿರುವಾಗ ನೀವು ಕೊಡೆಯನ್ನು ಹಿಡಿದುಕೊಳ್ಳಬೇಕು. ಮತ್ತು ರೈನ್ ಕೋಟ್ ಧರಿಸಿರಬೇಕು. ಅದೇ ರೀತಿ, ಕೊರೊನಾ ಕೂಡಾ. ನಾವು ಎಲ್ಲಾ ಶಿಷ್ಟಾಚಾರಗಳನ್ನು ಅನುಸರಿಸಬೇಕು.

ಕಳೆದ ಬಾರಿ ನಾವು ಕೊರೊನಾವನ್ನು ನಿರ್ಬಂಧಿಸಿದಂತೆ ಬಾರಿಯೂ ಉತ್ತಮವಾಗಿ ನಿರ್ಬಂಧಿಸೋಣ. ನನಗೆ ವಿಶ್ವಾಸವಿದೆ ಮತ್ತು ನಿಮ್ಮಲ್ಲಿ ಸಂಪೂರ್ಣ ನಂಬಿಕೆ ಇದೆ. ನೀವು ಕೆಲಸ ಮಾಡಲು ಉಪಕ್ರಮಿಸಿ, ಪರಿಸ್ಥಿತಿಯ ಬಗ್ಗೆ ಚಿಂತೆ ಮಾಡಿ, ಪರೀಕ್ಷೆಗಳ ಮೇಲೆ ಗಮನ ಕೇಂದ್ರೀಕರಿಸಿ. ( ಬಿಕ್ಕಟ್ಟನ್ನು ನಾವು ಬಹಳ ಬೇಗ ನಿವಾರಿಸಿಕೊಳ್ಳುತ್ತೇವೆ.) ಲಸಿಕಾ ಕಾರ್ಯಕ್ರಮ ಬಹಳ ಧೀರ್ಘ ಕಾಲ ನಡೆಯುತ್ತದೆ. ನಾವು ಈಗಟಿಕಾ ಉತ್ಸವ ಬಗ್ಗೆ ಗಮನ ಹರಿಸೋಣ ಮತ್ತು ಗಮನಾರ್ಹವಾದುದನ್ನು ಸಾಧಿಸುವ ಒಂದು ಸಣ್ಣ ಅವಕಾಶವೂ ಹೊಸ ಭರವಸೆಯನ್ನು ಮೂಡಿಸಬಲ್ಲದು.

ನಾನು ನಿಮ್ಮ ಸಲಹೆಗಳಿಗಾಗಿ ಕಾಯುತ್ತೇನೆ

ಬಹಳ ಧನ್ಯವಾದಗಳು

ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿ ಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

***



(Release ID: 1711926) Visitor Counter : 238