ಸಂಪುಟ

ಶೈಕ್ಷಣಿಕ ಮತ್ತು ಸಂಶೋಧನಾ ಸಹಕಾರ ಹಾಗೂ ವಿನಿಮಯಕ್ಕಾಗಿ ಭಾರತ  -ಜಪಾನ್ ನಡುವೆ ತಿಳಿವಳಿಕೆ ಒಪ್ಪಂದ

Posted On: 07 APR 2021 3:54PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ, ಭಾರತ ಸರ್ಕಾರದ ಬಾಹ್ಯಾಕಾಶ ಇಲಾಖೆಯ ರಾಷ್ಟ್ರೀಯ ವಾತಾವರಣ ಸಂಶೋಧನಾ ಪ್ರಯೋಗಾಲಯ (ಎನ್..ಆರ್.ಎಲ್.) ಮತ್ತು ಜಪಾನ್ ಕ್ಯೋಟೋದ ಕ್ಯೋಟೋ ವಿಶ್ವವಿದ್ಯಾಲಯದ  ಸುಸ್ಥಿರ ಮಾನವಗೋಳ ಸಂಶೋಧನಾ ಸಂಸ್ಥೆ (ಆರ್..ಎಸ್.ಎಚ್) ನಡುವೆ ಶೈಕ್ಷಣಿಕ ಮತ್ತು ಸಂಶೋಧನಾ ಸಹಕಾರ ಹಾಗೂ ವಿನಿಮಯಕ್ಕಾಗಿ ಎರಡೂ ಸಂಸ್ಥೆಗಳ ನಡುವೆ  2020 ನವೆಂಬರ್ 4 ಮತ್ತು 2020 ನವೆಂಬರ್ 11ರಂದು ಅಂಕಿತ ಹಾಕಲಾಗಿರುವ ಮತ್ತು ಅಂಚೆಯ ಮೂಲಕ ವಿನಿಮಯ ಮಾಡಿಕೊಳ್ಳಲಾಗಿರುವ ತಿಳಿವಳಿಕೆ ಒಪ್ಪಂದದ ಬಗ್ಗೆ ವಿವರ ನೀಡಲಾಯಿತು.

ಉದ್ದೇಶಗಳು

  • ತಿಳಿವಳಿಕೆ ಒಪ್ಪಂದವು ಎನ್..ಆರ್.ಎಲ್. ಮತ್ತು ಆರ್..ಎಸ್.ಎಚ್.ಗಳಿಗೆ ವಾಯುಮಂಡಲದ ವಿಜ್ಞಾನ ಮತ್ತು ತಂತ್ರಜ್ಞಾನ, ಸಹಯೋಗಿ ವೈಜ್ಞಾನಿಕ ಪ್ರಯೋಗಗಳು/ ಅಭಿಯಾನಗಳು ಮತ್ತು ಎನ್..ಆರ್.ಎಲ್. ಮತ್ತು ಆರ್..ಎಸ್.ಎಚ್. ಸಂಶೋಧನಾ ಸೌಲಭ್ಯಗಳನ್ನು ಬಳಸಿಕೊಂಡು ಸಂಬಂಧಿತ ಮಾದರಿ ಅಧ್ಯಯನಗಳು, ವೈಜ್ಞಾನಿಕ ಸಾಮಗ್ರಿಗಳ ವಿನಿಮಯ, ಪ್ರಕಟಣೆಗಳು ಮತ್ತು ಮಾಹಿತಿಯ ವಿನಿಮಯ, ಜಂಟಿ ಸಂಶೋಧನಾ ಸಭೆಗಳು ಮತ್ತು ಕಾರ್ಯಾಗಾರಗಳು, ಬೋಧಕವರ್ಗದ ಸದಸ್ಯರು, ವಿದ್ಯಾರ್ಥಿಗಳು ಮತ್ತು ಸಂಶೋಧಕರ ವಿನಿಮಯದೊಂದಿಗೆ  ಸಹಕಾರವನ್ನು ಮುಂದುವರಿಸಲು ಅನುವು ಮಾಡಿಕೊಡುತ್ತದೆ.
  • ತಿಳಿವಳಿಕೆ ಒಪ್ಪಂದವು ಸೌಲಭ್ಯಗಳು ಅಂದರೆ ಜಪಾನ್ ಶಿಗರ್ಕಿಯಲ್ಲಿ ಮಾಧ್ಯಮಿಕ ಮತ್ತು ಉನ್ನತ ವಾತಾವರಣ (ಎಂ.ಯು.) ರಡಾರ್, ಇಂಡೋನೇಷಿಯಾದ ಕೊಟೋಟಬಾಂಗ್ ನಲ್ಲಿ  ಸಮಭಾಜಕ ವಾತಾವರಣ ರಡಾರ್ (..ಆರ್ತ) ಮತ್ತು ಆರ್..ಎಸ್.ಎಚ್.ನಲ್ಲಿ ಲಭ್ಯವಿರುವ ಪೂರಕ ಸಾಧನಗಳು ಮತ್ತು ಮಧ್ಯಗೋಳದವಾಯು ಮಂಡಲ - ಟ್ರೋಪೋಸ್ಪಿಯರ್ (ಎಂಎಸ್ಟಿ) ರೆಡಾರ್  ಪರಸ್ಪರ ಬಳಕೆಗೆ ಅವಕಾಶ ನೀಡುತ್ತದೆ.

ಹಿನ್ನೆಲೆ

ಎನ್..ಆರ್.ಎಲ್ ಮತ್ತು ಆರ್..ಎಸ್.ಎಚ್.ಗಳು ವಾಯುಮಂಡಲ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತು ವಿಜ್ಞಾನಿಗಳ ವಿನಿಮಯಕ್ಕೆ ಸಹಕರಿಸುತ್ತಿವೆ. ವ್ಯವಸ್ಥೆಯನ್ನು 2008ರಲ್ಲಿ ತಿಳಿವಳಿಕೆ ಒಪ್ಪಂದದ ಮೂಲಕ ಜಾರಿಗೊಳಿಸಲಾಯಿತು. ಮೇಲಿನ ಒಪ್ಪಂದವನ್ನು 2013ರಲ್ಲಿ ನವೀಕರಿಸಲಾಯಿತು. ಹೊಸ ಮಾರ್ಗಸೂಚಿಗಳ ಪ್ರಕಾರ ಸಹಕಾರಿ ಸಂಶೋಧನೆಯನ್ನು ಉತ್ತೇಜಿಸುವ ಹೊಸ ತಿಳಿವಳಿಕೆ ಒಪ್ಪಂದವನ್ನು 2020 ನವೆಂಬರ್ ನಲ್ಲಿ ಎರಡೂ ಕಡೆಯವರು ಸಹಿ ಮಾಡಿ ವಿನಿಮಯ ಮಾಡಿಕೊಂಡರು.

ಎನ್..ಆರ್.ಎಲ್. ವಿಜ್ಞಾನಿಗಳು ಆರ್..ಎಸ್.ಎಚ್. ನಡೆಸಿದ ವಾತಾವರಣದ ರೇಡಾರ್ ಕುರಿತು ಅಂತಾರಾಷ್ಟ್ರೀಯ ಶಾಲೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯ ನಿರ್ವಹಿದರು. ಕ್ಯೋಟೋ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಮತ್ತು ಸಂಶೋಧಕರ ತಂಡ ಎನ್..ಆರ್.ಎಲ್.ಗೆ ಭೇಟಿ ನೀಡಿ, ಎರಡೂ ಸಂಸ್ಥೆಗಳು ನಡೆಸುತ್ತಿರುವ ಸಹಕಾರಿ ಸಂಶೋಧನೆಯನ್ನು ಬಲಪಡಿಸಲು ಕೇಂದ್ರೀಕೃತ ಕಾರ್ಯಾಗಾರವನ್ನು ನಡೆಸಿದವು.

***


(Release ID: 1710367) Visitor Counter : 249