ಪ್ರಧಾನ ಮಂತ್ರಿಯವರ ಕಛೇರಿ
ವಿಶ್ವ ಆರೋಗ್ಯ ದಿನ; ಪ್ರಧಾನ ಮಂತ್ರಿ ಸಂದೇಶ
Posted On:
07 APR 2021 9:51AM by PIB Bengaluru
ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಜನತೆಗೆ ಸಂದೇಶ ನೀಡಿದ್ದಾರೆ.
“ಭಾರತ ಸರ್ಕಾರ ದೇಶದ ಜನತೆಗೆ ಉನ್ನತ ಗುಣಮಟ್ಟದ ಮತ್ತು ಕೈಗೆಟಕುವ ಬೆಲೆಗೆ ಆರೋಗ್ಯ ಸಂರಕ್ಷಣೆ ಲಭ್ಯವಾಗುವುದನ್ನು ಖಚಿತಪಡಿಸಲು, ಆಯುಷ್ಮಾನ್ ಭಾರತ್ ಮತ್ತು ಪ್ರಧಾನ ಮಂತ್ರಿಗಳ ಜನೌಷಧಿ ಯೋಜನೆ ಸೇರಿದಂತೆ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದೆ. ಅಲ್ಲದೆ, ಭಾರತವು ಕೋವಿಡ್-19 ಸೋಂಕಿನ ವಿರುದ್ಧದ ಹೋರಾಟವನ್ನು ಬಲಪಡಿಸಲು ವಿಶ್ವದ ಅತಿದೊಡ್ಡ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ”.
ವಿಶ್ವ ಆರೋಗ್ಯ ದಿನದ ನೆನಪಲ್ಲಿ ನಾವೆಲ್ಲಾ ಮಾಸ್ಕ್(ಮುಖಗವಸು)ಗಳನ್ನು ಧರಿಸುವ ಮೂಲಕ, ನಿಯಮಿತವಾಗಿ ಕೈಗಳನ್ನು ಸ್ವಚ್ಛಗೊಳಿಸುವ ಮೂಲಕ, ಸಾಮಾಜಿಕ ಅಂತರ ಕಾಪಾಡುವ ಮೂಲಕಎಲ್ಲಾ ಕೊರೊನಾ ನಿಯಂತ್ರಣ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಮೂಲಕ ಕೋವಿಡ್-19 ಸೋಂಕಿನ ವಿರುದ್ಧ ಹೋರಾಟವನ್ನು ಮುಂದುವರಿಸಲು ಗಮನ ನೀಡೋಣ.
ಅದೇ ವೇಳೆ, ನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಸದೃಢರಾಗಿರಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳೋಣ.
“ನಮ್ಮ ಸುಂದರ ಪೃಥ್ವಿ ಆರೋಗ್ಯಕರವಾಗಿರಲು ಹಗಲಿರುಳು ಅವಿರತ ಶ್ರಮಿಸುತ್ತಿರುವ ಎಲ್ಲರಿಗೂ ಕೃತಜ್ಞತೆ ಮತ್ತು ಧನ್ಯವಾದ ಸಲ್ಲಿಸಲು ಮತ್ತು ಪುನರುಚ್ಚರಿಸಲು ವಿಶ್ವ ಆರೋಗ್ಯ ದಿನವು ನಮ್ಮೆಲ್ಲರಿಗೂ ವಿಶೇಷ ದಿನವಾಗಿದೆ. ಆರೋಗ್ಯ ಸಂರಕ್ಷಣಾ ವಲಯದಲ್ಲಿ ಸಂಶೋಧನೆ ಮತ್ತು ಆವಿಷ್ಕಾರವನ್ನು ಬೆಂಬಲಿಸುವ ಬದ್ಧತೆಯನ್ನು ಪುನರುಚ್ಚರಿಸಲು ಸಹ ಇದು ವಿಶೇಷ ದಿನವಾಗಿದೆ”.
***
(Release ID: 1710050)
Visitor Counter : 244
Read this release in:
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam