ಹಣಕಾಸು ಸಚಿವಾಲಯ
ಹೊಸ ದಾಖಲೆ ಬರೆದ ಮಾರ್ಚ್-21ರ ಜಿಎಸ್‌ಟಿ ಆದಾಯ ಸಂಗ್ರಹ
2021ರ ಮಾರ್ಚ್ ತಿಂಗಳಲ್ಲಿ ₹ 1,23,902 ಕೋಟಿ ರೂ. ಸಮಗ್ರ ಜಿಎಸ್‌ಟಿ ಆದಾಯ ಸಂಗ್ರಹವಾಗಿದೆ
Posted On:
01 APR 2021 2:01PM by PIB Bengaluru
2021ರ ಮಾರ್ಚ್‌ನಲ್ಲಿ 1,23,902 ಕೋಟಿ ರೂ.ಗಳ ಸಮಗ್ರ ಜಿಎಸ್‌ಟಿ ಆದಾಯ ಸಂಗ್ರಹದ ಮೂಲಕ ಹೊಸ ದಾಖಲೆ ಸೃಷ್ಟಿಯಾಗಿದೆ. ಇದರಲ್ಲಿ, ಸಿಜಿಎಸ್‌ಟಿ (ಕೇಂದ್ರ ಜಿಎಸ್‌ಟಿ) 22,973 ಕೋಟಿ ರೂ., ಎಸ್‌ಜಿಎಸ್‌ಟಿ (ರಾಜ್ಯ ಜಿಎಸ್‌ಟಿ) 29,329 ಕೋಟಿ ರೂ., ಐಜಿಎಸ್‌ಟಿ (ಸಂಯೋಜಿತ ಜಿಎಸ್‌ಟಿ) 62,842 ಕೋಟಿ ರೂ. (ಸರಕುಗಳ ಆಮದಿಗೆ ಸಂಗ್ರಹಿಸಿದ 31,097 ಕೋಟಿ ರೂ.ಗಳು ಸೇರಿದಂತೆ) ಹಾಗೂ ಉಪ ತೆರೆಗೆ (ಸೆಸ್) 8,757 ಕೋಟಿ ರೂ. (ಸರಕುಗಳ ಆಮದಿಗೆ ಸಂಗ್ರಹಿಸಿದ 935 ಕೋಟಿ ರೂ.) ಸೇರಿದೆ.
ನಿಯಮಿತ ಪಾವತಿಯ ಭಾಗವಾಗಿ ಸರಕಾರವು ʻಎಸ್‌ಜಿಎಸ್‌ಟಿʼಗೆ 21,879 ಕೋಟಿ ರೂ. ಮತ್ತು ʻಸಿಜಿಎಸ್‌ಟಿʼಗೆ 17,230 ಕೋಟಿ ರೂ.ಗಳನ್ನು ʻಐಜಿಎಸ್‌ಟಿʼಯಿಂದ ಪಾವತಿಸಿದೆ. ಇದರ ಜೊತೆಗೆ, ಕೇಂದ್ರ ಸರಕಾರವು ʻಐಜಿಎಸ್‌ಟಿʼ ತಾತ್ಕಾಲಿಕ ಇತ್ಯರ್ಥದ ಭಾಗವಾಗಿ ಕೇಂದ್ರ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ನಡುವೆ 50:50 ಅನುಪಾತದಲ್ಲಿ 28,000 ಕೋಟಿ ರೂ.ಗಳನ್ನು ಪಾವತಿಸಿದೆ. 2021ರ ಮಾರ್ಚ್ ತಿಂಗಳಲ್ಲಿ ನಿಯಮತಿ ಮತ್ತು ತಾತ್ಕಾಲಿಕ ಇತ್ಯರ್ಥದ ಬಳಿಕ ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯವು ಸಿಜಿಎಸ್‌ಟಿ 58,852 ಕೋಟಿ ರೂ. ಮತ್ತು ಎಸ್‌ಜಿಎಸ್‌ಟಿ 60,559 ಕೋಟಿ ರೂ. ಆಗಿದೆ. ಅಲ್ಲದೆ, 2021ರ ಮಾರ್ಚ್ ತಿಂಗಳಲ್ಲಿ 30,000 ಕೋಟಿ ರೂ.ಗಳ ಪರಿಹಾರವನ್ನೂ ಕೇಂದ್ರ ಸರಕಾರವು ಬಿಡುಗಡೆ ಮಾಡಿದೆ.
2021ರ ಮಾರ್ಚ್‌ನಲ್ಲಿ ಸಂಗ್ರಹವಾದ ಜಿಎಸ್‌ಟಿ ಆದಾಯವು, ಜಿಎಸ್‌ಟಿ ವ್ಯವಸ್ಥೆ ಜಾರಿಯಾದ ನಂತರ ಇದುವರೆಗಿನ ಅತ್ಯಂತ ಗರಿಷ್ಠವೆನಿಸಿದೆ. ಕಳೆದ ಐದು ತಿಂಗಳಿನಿಂದ ಜಿಎಸ್‌ಟಿ ಆದಾಯದಲ್ಲಿ ಕಂಡು ಬರುತ್ತಿರುವ ಚೇತರಿಕೆ ಪ್ರವೃತ್ತಿಗೆ ಅನುಗುಣವಾಗಿ, 2021ರ ಮಾರ್ಚ್ ತಿಂಗಳ ಆದಾಯವೂ ಕಳೆದ ವರ್ಷದ ಇದೇ ತಿಂಗಳ ಜಿಎಸ್‌ಟಿ ಆದಾಯಕ್ಕಿಂತಲೂ 27% ಹೆಚ್ಚಳವಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಆಮದು ಮತ್ತು ದೇಶಿಯ ವಹಿವಾಟಿನ ಮೂಲಗಳಿಂದ ಬಂದ ಆದಾಯಕ್ಕೆ ಹೋಲಿಸಿದರೆ, ಈ ಬಾರಿಯ ಮಾರ್ಚ್‌ನಲ್ಲಿ ಸರಕುಗಳ ಆಮದಿನ ಆದಾಯವು 70% ಹೆಚ್ಚಾಗಿದೆ ಮತ್ತು ದೇಶೀಯ ವಹಿವಾಟಿನ (ಸೇವೆಗಳ ಆಮದು ಸೇರಿದಂತೆ) ಆದಾಯವು 17% ಅಧಿಕವಾಗಿವೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಪ್ರಸಕ್ತ ಹಣಕಾಸು ವರ್ಷದ ಪ್ರಥಮ, ದ್ವಿತೀಯ, ತೃತೀಯ ಮತ್ತು ನಾಲ್ಕನೇ ತ್ರೈಮಾಸಿಕ ಅವಧಿಗಳಲ್ಲಿ ಜಿಎಸ್‌ಟಿ ಆದಾಯದ ಪ್ರಗತಿ ದರವು ಕ್ರಮವಾಗಿ (-)41%, (-)8%, 8% ಮತ್ತು 14% ರಷ್ಟಿದೆ. ಇದು ಜಿಎಸ್‌ಟಿ ಆದಾಯ ಮತ್ತು ಒಟ್ಟಾರೆ ಅರ್ಥವ್ಯವಸ್ಥೆಯ ಚೇತರಿಕೆಯ ಪ್ರವೃತ್ತಿಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ.
ಕಳೆದ ಆರು ತಿಂಗಳಿನಿಂದ ಸತತವಾಗಿ ರೂ.1 ಲಕ್ಷ ಕೋಟಿ ದಾಟುತ್ತಿರುವ ಜಿಎಸ್ಟಿ ಆದಾಯ ಮತ್ತು ಆದಾಯ ಸಂಗ್ರಹದಲ್ಲಿ ತೀವ್ರ ಏರಿಕೆ - ಇವೆರಡೂ ಕೋವಿಡ್ ಸಾಂಕ್ರಾಮಿಕದ ಬಳಿಕ ಆರ್ಥಿಕತೆಯ ಕ್ಷಿಪ್ರ ಚೇತರಿಕೆಗೆ ಸ್ಪಷ್ಟ ಸೂಚ್ಯಂಕಗಳಾಗಿವೆ. ನಕಲಿ ಬಿಲ್ಲಿಂಗ್ ವಿರುದ್ಧ ನಿಕಟ ನಿಗಾ; ಜಿಎಸ್‌ಟಿ, ಆದಾಯ ತೆರಿಗೆ ಮತ್ತು ಅಬಕಾರಿ ಐಟಿ ವ್ಯವಸ್ಥೆಗಳು ಸೇರಿದಂತೆ ವಿವಿಧ ಮೂಲಗಳ ದತ್ತಾಂಶಗ ಆಳವಾದ ವಿಶ್ಲೇಷಣೆ, ಪರಿಣಾಮಕಾರಿ ತೆರಿಗೆ ಆಡಳಿತ ಇವುಗಳೂ ಸಹ ಕಳೆದ ಕೆಲವು ತಿಂಗಳುಗಳಿಂದ ತೆರಿಗೆ ಆದಾಯದಲ್ಲಿ ಗಣನೀಯ ಏರಿಕೆಗೆ ಕೊಡುಗೆ ನೀಡಿವೆ.
- ಈ ಕೆಳಗಿನ ಕೋಷ್ಟಕವು ಪ್ರಸಕ್ತ ವರ್ಷದ ಮಾಸಿಕ ಸಮಗ್ರ ಜಿಎಸ್‌ಟಿ ಆದಾಯಗಳ ಪ್ರವೃತ್ತಿಗಳನ್ನು ತೋರಿಸುತ್ತದೆ. 2020ರ ಮಾರ್ಚ್‌ಗೆ ಹೋಲಿಸಿದರೆ, 2021ರ ಮಾರ್ಚ್ ತಿಂಗಳಲ್ಲಿ ಪ್ರತಿ ರಾಜ್ಯದಲ್ಲಿ ಸಂಗ್ರಹವಾಗಿರುವ ಜಿಎಸ್‌ಟಿಯ ರಾಜ್ಯವಾರು ಅಂಕಿ ಅಂಶಗಳನ್ನು ಈ ಕೋಷ್ಟಕದಲ್ಲಿ ತೋರಿಸಲಾಗಿದೆ.
ಜಿಎಸ್‌ಟಿ ಸಂಗ್ರಹ ಪ್ರವೃತ್ತಿ ಕೋಟಿ ರೂ.ಗಳಲ್ಲಿ
2021ರ ಮಾರ್ಚ್‌ನಲ್ಲಿ ಜಿಎಸ್‌ಟಿ ಆದಾಯಗಳ ರಾಜ್ಯವಾರು ಪ್ರಗತಿ [1]
|
ರಾಜ್ಯ
|
ಮಾರ್ಚ್-20
|
ಮಾರ್ಚ್-21
|
ಪ್ರಗತಿ
|
1
|
ಜಮ್ಮು ಮತ್ತು ಕಾಶ್ಮೀರ
|
276.17
|
351.61
|
27%
|
2
|
ಹಿಮಾಚಲ ಪ್ರದೇಶ
|
595.89
|
686.88
|
15%
|
3
|
ಪಂಜಾಬ್
|
1,180.81
|
1,361.85
|
15%
|
4
|
ಚಂಡೀಗಢ
|
153.26
|
165.27
|
8%
|
5
|
ಉತ್ತರಾಖಂಡ
|
1,194.74
|
1,303.57
|
9%
|
6
|
ಹರಿಯಾಣ
|
4,874.29
|
5,709.60
|
17%
|
7
|
ದೆಹಲಿ
|
3,272.99
|
3,925.97
|
20%
|
8
|
ರಾಜಸ್ಥಾನ
|
2,820.44
|
3,351.79
|
19%
|
9
|
ಉತ್ತರ ಪ್ರದೇಶ
|
5,293.72
|
6,265.01
|
18%
|
10
|
ಬಿಹಾರ
|
1,055.94
|
1,195.75
|
13%
|
11
|
ಸಿಕ್ಕಿಂ
|
189.33
|
213.66
|
13%
|
12
|
ಅರುಣಾಚಲ ಪ್ರದೇಶ
|
66.71
|
92.03
|
38%
|
13
|
ನಾಗಾಲ್ಯಾಂಡ್
|
38.75
|
45.48
|
17%
|
14
|
ಮಣಿಪುರ
|
35.89
|
50.36
|
40%
|
15
|
ಮಿಜೋರಾಂ
|
33.19
|
34.93
|
5%
|
16
|
ತ್ರಿಪುರಾ
|
67.1
|
87.9
|
31%
|
17
|
ಮೇಘಾಲಯ
|
132.72
|
151.97
|
15%
|
18
|
ಅಸ್ಸಾಂ
|
931.72
|
1,004.65
|
8%
|
19
|
ಪಶ್ಚಿಮ ಬಂಗಾಳ
|
3,582.26
|
4,386.79
|
22%
|
20
|
ಜಾರ್ಖಂಡ್
|
2,049.43
|
2,416.13
|
18%
|
21
|
ಒಡಿಶಾ
|
2,632.88
|
3,285.29
|
25%
|
22
|
ಛತ್ತೀಸ್‌ಗಢ
|
2,093.17
|
2,544.13
|
22%
|
23
|
ಮಧ್ಯ ಪ್ರದೇಶ
|
2,407.40
|
2,728.49
|
13%
|
24
|
ಗುಜರಾತ್
|
6,820.46
|
8,197.04
|
20%
|
25
|
ದಮನ್ ಮತ್ತು ಡಿಯು
|
94.91
|
3.29
|
-97%
|
26
|
ದಾದ್ರಾ ಮತ್ತು ನಗರ್ ಹವೇಲಿ
|
168.89
|
288.49
|
71%
|
27
|
ಮಹಾರಾಷ್ಟ್ರ
|
15,002.11
|
17,038.49
|
14%
|
29
|
ಕರ್ನಾಟಕ
|
7,144.30
|
7,914.98
|
11%
|
30
|
ಗೋವಾ
|
316.47
|
344.28
|
9%
|
31
|
ಲಕ್ಷದ್ವೀಪ
|
1.34
|
1.54
|
15%
|
32
|
ಕೇರಳ
|
1,475.25
|
1,827.94
|
24%
|
33
|
ತಮಿಳುನಾಡು
|
6,177.82
|
7,579.18
|
23%
|
34
|
ಪುದುಚೆರಿ
|
149.32
|
161.04
|
8%
|
35
|
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
|
38.58
|
25.66
|
-33%
|
36
|
ತೆಲಂಗಾಣ
|
3,562.56
|
4,166.42
|
17%
|
37
|
ಆಂಧ್ರಪ್ರದೇಶ
|
2,548.13
|
2,685.09
|
5%
|
38
|
ಲಡಾಕ್
|
0.84
|
13.67
|
1527%
|
97
|
ಇತರ ಪ್ರದೇಶ
|
132.49
|
122.39
|
-8%
|
99
|
ಕೇಂದ್ರದ ಅಧಿಕಾರ ವ್ಯಾಪ್ತಿ
|
81.48
|
141.12
|
73%
|
|
ಒಟ್ಟು ಮೊತ್ತ
|
78693.75
|
91869.7
|
17%
|
[1] ಸರಕುಗಳ ಆಮದಿನ ಮೇಲಿನ ಜಿಎಸ್‌ಟಿಯನ್ನು ಒಳಗೊಂಡಿಲ್ಲ
***
(Release ID: 1708996)
Visitor Counter : 377