ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್ ಲಸಿಕೆ ಅಭಿಯಾನದ ತಾಜಾ ಮಾಹಿತಿ
ಅಧಿಸೂಚಿತ ರಜೆಗಳು ಸೇರಿದಂತೆ ಏಪ್ರಿಲ್ ತಿಂಗಳಲ್ಲಿ ಎಲ್ಲಾ ದಿನವೂ ಸಾರ್ವಜನಿಕ ಮತ್ತು ಖಾಸಗಿ ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಹಾಕುವ ಅಭಿಯಾನ
Posted On:
01 APR 2021 1:27PM by PIB Bengaluru
ದೇಶಾದ್ಯಂತ ನಡೆಯುತ್ತಿರುವ ಲಸಿಕಾ ಅಭಿಯಾನವನ್ನು ವಿಸ್ತರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದ್ದು, ಕೇಂದ್ರ ಸರ್ಕಾರ ಏಪ್ರಿಲ್ ತಿಂಗಳ(ಇಂದಿನಿಂದ 2021 ಏಪ್ರಿಲ್ 30ರ ವರೆಗೆ) ಎಲ್ಲಾ ದಿನವೂ ಸಾರ್ವಜನಿಕ ಮತ್ತು ಖಾಸಗಿ ಕೋವಿಡ್ ಲಸಿಕಾ ಕೇಂದ್ರಗಳು(ಸಿವಿಸಿಗಳು) ಕಾರ್ಯನಿರ್ವಹಿಸುವ ನಿರ್ಧಾರವನ್ನು ಕೈಗೊಂಡಿದೆ. ಕೇಂದ್ರ ಸರ್ಕಾರ ಇಂದು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರಗಳನ್ನು ಬರೆದಿದ್ದು ಮತ್ತು 2021ರ ಏಪ್ರಿಲ್ ತಿಂಗಳಲ್ಲಿ ಅಧಿಸೂಚಿತ ರಜಾ ದಿನಗಳು ಸೇರಿದಂತೆ ತಿಂಗಳಿಡೀ ಪ್ರತಿಯೊಂದು ದಿನವೂ ಎಲ್ಲ ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಕೋವಿಡ್-19 ಲಸಿಕೆ ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ.
2021ರ ಮಾರ್ಚ್ 31ರಂದು ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಜೊತೆ ವಿಸ್ತೃತ ಸಮಾಲೋಚನೆ ನಂತರ ಈ ಕ್ರಮ ಕೈಗೊಳ್ಳಲಾಗಿದ್ದು, ಕೋವಿಡ್ ಲಸಿಕೆ ನೀಡುವಿಕೆಯ ವ್ಯಾಪ್ತಿ ಮತ್ತು ವೇಗವನ್ನು ಕ್ಷಿಪ್ರವಾಗಿ ಹೆಚ್ಚಿಸುವುದನ್ನು ಖಾತ್ರಿಪಡಿಸಲು ಸಾರ್ವಜನಿಕ ಮತ್ತು ಖಾಸಗಿ ಕೋವಿಡ್ ಲಸಿಕಾ ಕೇಂದ್ರಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಭಾರತ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜೊತೆ ಸೇರಿ ಕೋವಿಡ್-19 ಲಸಿಕೆ ನೀಡುವಿಕೆಗೆ ಅನುಸರಿಸುತ್ತಿರುವ ಕ್ರಿಯಾಶೀಲ ಮತ್ತು ಶ್ರೇಣೀಕೃತ ಕ್ರಮಗಳ ಭಾಗವಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ದೇಶದಲ್ಲಿನ ಅತೀಸೂಕ್ಷ್ಮ ಜನರ ವರ್ಗವನ್ನು ರಕ್ಷಿಸಲು ಲಸಿಕೆ ನೀಡುವಿಕೆ ಪ್ರಕ್ರಿಯೆ ಒಂದು ಸಾಧನವಾಗಿದ್ದು, ಆ ಕುರಿತು ನಿರಂತರವಾಗಿ ಪರಿಶೀಲನೆ ನಡೆಸಲಾಗುತ್ತಿದೆ ಮತ್ತು ಉನ್ನತ ಮಟ್ಟದಲ್ಲಿ ಅದರ ಮೇಲ್ವಿಚಾರಣೆ ನಡೆಯುತ್ತಿದೆ.
ಲಸಿಕೆ ಆಡಳಿತ ಕುರಿತ ರಾಷ್ಟ್ರೀಯ ತಜ್ಞರ ಸಮಿತಿ(ಎನ್ಇಜಿವಿಎಸಿ) ಶಿಫಾರಸ್ಸು ಆಧರಿಸಿ ಕೇಂದ್ರ ಸರ್ಕಾರ ಈಗಾಗಲೇ 2021ರ ಏಪ್ರಿಲ್ 1 ರಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೆ ಕೋವಿಡ್-19 ಲಸಿಕೆ ನೀಡುವ ಅಭಿಯಾನವನ್ನು ಆರಂಭಿಸಲು ನಿರ್ಧರಿಸಿದೆ.
***
(Release ID: 1708964)
Visitor Counter : 378
Read this release in:
English
,
Urdu
,
Hindi
,
Marathi
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam