ಪ್ರಧಾನ ಮಂತ್ರಿಯವರ ಕಛೇರಿ

ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಅವರ ಸಮಾಧಿಗೆ ಪ್ರಧಾನಮಂತ್ರಿ ಗೌರವ ನಮನ

Posted On: 27 MAR 2021 12:58PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಾಂಗ್ಲಾದೇಶದ ಎರಡು ದಿನಗಳ ಭೇಟಿಯ ಎರಡನೇ ದಿನ ತುಂಗಿಪುರದಲ್ಲಿ ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಅವರ ಸಮಾಧಿಗೆ ಗೌರವ ನಮನ ಸಲ್ಲಿಸಿದರು. ಇದರೊಂದಿಗೆ ಬಂಗಬಂಧು ಸಮಾಧಿ ಸ್ಥಳದಲ್ಲಿ ಗೌರವನಮನ ಸಲ್ಲಿಸಿದ ಪ್ರಥಮ ವಿದೇಶೀ ಮುಖ್ಯಸ್ಥರು ಅಥವಾ ಸರ್ಕಾರದ ಮುಖ್ಯಸ್ಥರೆನಿಸಿದರು.   ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಐತಿಹಾಸಿಕ ಕ್ಷಣದ ನೆನಪಿಗಾಗಿ ಬಕುಲ ಗಿಡವನ್ನು ನೆಟ್ಟರುಅವರ ಸಹವರ್ತಿ ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಖ್ ಹಸೀನಾ ಮತ್ತು ಅವರ ಸೋದರಿ ಶೇಖ್ ರೆಹನಾ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

ಪ್ರಧಾನಮಂತ್ರಿ ಮೋದಿ ಅವರು, ಸಮಾಧಿ ಸ್ಥಳದಲ್ಲಿ ಸಂದರ್ಶಕರ ಪುಸ್ತಕಕ್ಕೆ ಸಹಿ ಮಾಡಿದರು. "ಬಂಗಬಂಧು ಅವರ ಜೀವನವು ಬಾಂಗ್ಲಾದೇಶದ ಜನರ ಅಸ್ಮಿತೆ ಮತ್ತು ಅವರ ಅಂತರ್ಗತ ಸಂಸ್ಕೃತಿಯ ರಕ್ಷಣೆಗಾಗಿ, ಬಾಂಗ್ಲಾದೇಶದ ಜನರ ಸ್ವಾತಂತ್ರ್ಯದ ಉಳಿವಿನ ಹೋರಾಟವನ್ನು ನಿರೂಪಿಸುತ್ತದೆ. ಎಂದು ಬರೆದರು.

***(Release ID: 1708239) Visitor Counter : 233