ಪ್ರಧಾನ ಮಂತ್ರಿಯವರ ಕಛೇರಿ

ಬಾಂಗ್ಲಾದೇಶದ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಪ್ರಧಾನಮಂತ್ರಿ ಭೇಟಿ

Posted On: 26 MAR 2021 2:17PM by PIB Bengaluru

https://static.pib.gov.in/WriteReadData/Gallery/PhotoGallery/2021/Mar/H2021032697223.JPG

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಎರಡು ದಿನಗಳ ಪ್ರವಾಸಕ್ಕೆ ಬಾಂಗ್ಲಾದೇಶಕ್ಕೆ ಆಗಮಿಸಿದ ಕೂಡಲೇ ಅವರು ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ(ಜತಿಯೋ ಶ್ರಿತಿ ಸೌಧೋ) ಭೇಟಿ ನೀಡಿದರು. 1971 ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಬಲಿದಾನಗೈಯ್ದ ಯೋಧರ ಶೌರ್ಯ ಮತ್ತು ತ್ಯಾಗದ ಪ್ರತೀಕವಾಗಿ ನಿರ್ಮಿಸಿರುವ ಬಾಂಗ್ಲಾದೇಶದ ರಾಷ್ಟ್ರೀಯ ಸ್ಮಾರಕಕ್ಕೆ ಅವರು ಗೌರವ ನಮನ ಸಲ್ಲಿಸಿದರು. ಸ್ಮಾರಕ ಢಾಕಾದಿಂದ ವಾಯುವ್ಯಕ್ಕೆ 35 ಕಿ.ಮೀ. ದೂರದಲ್ಲಿರುವ ಸಾವರ್ ನಲ್ಲಿದ್ದು, ಇದನ್ನು ಸೈಯದ್ ಮೈನುಲ್ ಹೊಸೈನ್ ವಿನ್ಯಾಸಗೊಳಿಸಿದ್ದಾರೆ.

ಪ್ರಧಾನಮಂತ್ರಿ ಅವರು ಸ್ಮಾರಕ ಸ್ಥಳದಲ್ಲಿ ಅರ್ಜುನ್ ಮರದ ಸಸಿಯನ್ನು ನೆಟ್ಟರು ಮತ್ತು ಸ್ಮಾರಕದ ಅತಿಥಿಗಳ ಪುಸ್ತಕದಲ್ಲಿ ಸಹಿ ಹಾಕಿದರು. ಅವರುವಂಚನೆ ಮತ್ತು ದಬ್ಬಾಳಿಕೆಯ ಮೇಲಿನ ಸತ್ಯ ಮತ್ತು ಶೌರ್ಯದ ಮೇಲಿನ ಉದಾತ್ತ ಗೆಲುವಿನ ಸಂಕೇತವಾಗಿ  ಸಾವರ್ ನಲ್ಲಿನ ಜ್ಯೋತಿ ಸದಾ ಉರಿಯುತ್ತಿರಲೆಂದು ಆಶಿಸುತ್ತೇನೆ’’ ಎಂದು ಪುಸ್ತಕದಲ್ಲಿ ಬರೆದಿದ್ದಾರೆ.

***


(Release ID: 1707771) Visitor Counter : 269