ಪ್ರಧಾನ ಮಂತ್ರಿಯವರ ಕಛೇರಿ
ಬಾಂಗ್ಲಾದೇಶಕ್ಕೆ ಭಾರತದ ಪ್ರಧಾನಿ ಭೇಟಿ
Posted On:
16 MAR 2021 8:54PM by PIB Bengaluru
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾ ಅವರ ಆಹ್ವಾನದ ಮೇರೆಗೆ ಮಾರ್ಚ್ 26 ಮತ್ತು 27, 2021ರಂದು ಬಾಂಗ್ಲಾದೇಶಕ್ಕೆ ಭೇಟಿ ನೀಡಲಿದ್ದಾರೆ. ಈ ಭೇಟಿಯು - ʻಮುಜಿಬ್ ಬೊರ್ಶೋʼ ಹೆಸರಿನಲ್ಲಿ ಆಚರಿಸಲಾಗುವ ಶೇಖ್ ಮುಜೀಬುರ್ ರಹಮಾನ್ ಅವರ ಜನ್ಮ ಶತಮಾನೋತ್ಸವ, ಭಾರತ ಮತ್ತು ಬಾಂಗ್ಲಾದೇಶದ ನಡುವೆ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ ಅರ್ಧ ಶತಮಾನೋತ್ಸವ ಹಾಗೂ ಬಾಂಗ್ಲಾ ವಿಮೋಚನಾ ಹೋರಾಟದ 50ನೇ ವರ್ಷಾಚರಣೆ – ಈ ಮೂರು ಚರಿತ್ರಾರ್ಹ ಘಟನೆಗಳ ಸ್ಮರಣಾರ್ಥವಾಗಿದೆ. ಪ್ರಧಾನಿ 2015ರಲ್ಲಿ ಕೊನೆಯ ಬಾರಿ ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದರು.
ಈ ಬಾರಿಯ ಭೇಟಿ ವೇಳೆ, ಮಾರ್ಚ್ 26ರಂದು ಬಾಂಗ್ಲಾದೇಶದ ರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪ್ರಧಾನಿ ಭಾಗವಹಿಸಲಿದ್ದಾರೆ. ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವುದರ ಜೊತೆಗೆ, ಬಾಂಗ್ಲಾದೇಶದ ಅಧ್ಯಕ್ಷ ಅಬ್ದುಲ್ ಹಮೀದ್ ಅವರನ್ನು ಭೇಟಿ ಮಾಡುವ ಕಾರ್ಯಕ್ರಮವೂ ಇದೆ. ಬಾಂಗ್ಲಾದೇಶದ ವಿದೇಶಾಂಗ ಸಚಿವ ಡಾ.ಎ.ಕೆ.ಅಬ್ದುಲ್ ಮೊಮೆನ್ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ.
ಬಾಂಗ್ಲಾ ಭೇಟಿಯು, ಕೊರೊನಾ ಸಾಂಕ್ರಾಮಿಕದ ಬಳಿಕ ಪ್ರಧಾನಿಯವರ ಮೊದಲ ವಿದೇಶ ಪ್ರವಾಸವಾಗಿದೆ. ಇದು ಬಾಂಗ್ಲಾದೇಶಕ್ಕೆ ಭಾರತವು ನೀಡುತ್ತಿರುವ ಆದ್ಯತೆಯನ್ನು ಸೂಚಿಸುತ್ತದೆ.
***
(Release ID: 1705379)
Read this release in:
English
,
Urdu
,
Marathi
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam