ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಿ ಶ್ರೀ ನರೇಂದ್ರ ಮೋದಿ ಮತ್ತು ಫಿನ್‌ಲ್ಯಾಂಡ್‌ ಪ್ರಧಾನ ಮಂತ್ರಿ ಶ್ರೀಮತಿ ಸಾನಾ ಮರಿನ್‌ ಅವರ ನಡುವೆ ವರ್ಚ್ಯುಯಲ್‌ ಶೃಂಗಸಭೆ


ಪ್ರಧಾನಿ ನರೇಂದ್ರ ಮೋದಿ ಅವರು ಫಿನ್‌ಲ್ಯಾಂಡ್‌ ಪ್ರಧಾನಿ ಶ್ರೀಮತಿ ಸಾನಾ ಮರಿನ್‌ ಅವರ ಜೊತೆ ಮಾರ್ಚ್ 16, 2021ರಂದು ವರ್ಚ್ಯುಯಲ್‌ ಶೃಂಗಸಭೆ ನಡೆಸಲಿದ್ದಾರೆ

Posted On: 15 MAR 2021 7:37PM by PIB Bengaluru

ಪ್ರಜಾಪ್ರಭುತ್ವ, ಸ್ವಾತಂತ್ರ್ಯ ಮತ್ತು ನಿಯಮಾಧಾರಿತ ಅಂತಾರಾಷ್ಟ್ರೀಯ ಕಟ್ಟಳೆಯ ವಿಚಾರದಲ್ಲಿ ಪರಸ್ಪರ ಹಂಚಿಕೊಂಡ ಮೌಲ್ಯಗಳ ಆಧಾರದ ಮೇಲೆ ಭಾರತ ಮತ್ತು ಫಿನ್ಲ್ಯಾಂಡ್ ನಡುವೆ ಸೌಹಾರ್ದಯುತ ಮತ್ತು ಸ್ನೇಹಯುತ ಸಂಬಂಧ ನೆಲೆಸಿದೆ. ವ್ಯಾಪಾರ ಮತ್ತು ಹೂಡಿಕೆ, ಶಿಕ್ಷಣ, ಅನ್ವೇಷಣೆ, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿ ಎರಡೂ ದೇಶಗಳು ಅತ್ಯಂತ ನಿಕಟ ಸಹಕಾರವನ್ನು ಹೊಂದಿವೆ. ಸಾಮಾಜಿಕ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆ ಬಳಸಿಕೊಂಡು ಕ್ವಾಂಟಮ್ ಕಂಪ್ಯೂಟರ್‌ ಅಭಿವೃದ್ಧಿ ಪಡಿಸುವ ಜಂಟಿ ಯೋಜನೆಯಲ್ಲಿ ಉಭಯ ದೇಶಗಳು ಕೈಜೋಡಿಸಿವೆ. ಟೆಲಿಕಾಂ, ಎಲಿವೇಟರ್, ಯಂತ್ರೋಪಕರಣಗಳು ಮತ್ತು ಇಂಧನ, ನವೀಕರಿಸಬಹುದಾದ ಇಂಧನ ಸೇರಿದಂತೆ ಹಲವು ವಿವಿಧ ಕ್ಷೇತ್ರಗಳಲ್ಲಿ ಸುಮಾರು 100 ಫಿನ್‌ಲ್ಯಾಂಡ್‌ ಕಂಪನಿಗಳು ಭಾರತದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಫಿನ್‌ಲ್ಯಾಂಡ್‌ನಲ್ಲಿ ಸುಮಾರು 30 ಭಾರತೀಯ ಕಂಪನಿಗಳು ಮುಖ್ಯವಾಗಿ ಐಟಿ, ವಾಹನ-ಬಿಡಿಭಾಗಗಳು ಮತ್ತು ಆತಿಥ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿವೆ.

ಶೃಂಗಸಭೆಯಲ್ಲಿ ಉಭಯ ನಾಯಕರು ದ್ವಿಪಕ್ಷೀಯ ಸಂಬಂಧಗಳ ಎಲ್ಲಾ ಆಯಾಮಗಳನ್ನು ಚರ್ಚಿಸಲಿದ್ದು, ಪರಸ್ಪರ ಹಿತಾಸಕ್ತಿ ಹೊಂದಿರುವ ಪ್ರಾದೇಶಿಕ ಹಾಗೂ ಜಾಗತಿಕ ವಿಷಯಗಳ ಬಗ್ಗೆಯೂ ಅಭಿಪ್ರಾಯ ವಿನಿಮಯ ಮಾಡಿಕೊಳ್ಳಿದ್ದಾರೆ. ಈ ಶೃಂಗಸಭೆಯು ಭಾರತ-ಫಿನ್‌ಲ್ಯಾಂಡ್‌ ನಡುವೆ ಮುಂದಿನ ಸಹಭಾಗಿತ್ವ ವಿಸ್ತರಣೆ ಮತ್ತು ವೈವಿಧ್ಯೀಕರಣಕ್ಕೆ ನೀಲನಕ್ಷೆಯನ್ನು ಒದಗಿಸಲಿದೆ.

***


(Release ID: 1704980) Visitor Counter : 203