ಪ್ರಧಾನ ಮಂತ್ರಿಯವರ ಕಛೇರಿ
ನಾಲ್ವರು (ಕ್ವಾಡ್ರಿಲ್ಯಾಟರಲ್) ನಾಯಕರ ಚೊಚ್ಚಲ ವರ್ಚುವಲ್ ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿಗಳ ಆರಂಭಿಕ ನುಡಿ(ಭಾಷಣ)
प्रविष्टि तिथि:
12 MAR 2021 8:39PM by PIB Bengaluru
ಗೌರವಾನ್ವಿತರಾದ
ಅಧ್ಯಕ್ಷ ಜೊ ಬೈಡೆನ್,
ಪ್ರಧಾನ ಮಂತ್ರಿಗಳಾದ ಮಾರಿಸನ್, ಮತ್ತು
ಪ್ರಧಾನ ಮಂತ್ರಿಗಳಾಧ ಸುಗಾ,
ನಿಮ್ಮೆಲ್ಲಾ ಸ್ನೇಹಿತರೊಂದಿಗೆ ನಾನಿಲ್ಲಿ ಉಪಸ್ಥಿತನಿರುವುದು ಸಂತೋಷವೆನಿಸಿದೆ!
ಈ ವರ್ಚುವಲ್ ಸಮಾವೇಶ ಆಯೋಜಿಸಿರುವ ಅಧ್ಯಕ್ಷ ಜೊ ಬೈಡೆನ್ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಗೌರವಾನ್ವಿತ ಅತಿಥಿಗಳೆ,
ನಮ್ಮ ಪ್ರಜಾಸತ್ತೆಯ ಮೌಲ್ಯಗಳಿಂದಾಗಿ, ನಾವೆಲ್ಲಾ ಇಲ್ಲಿ ಒಂದುಗೂಡಿದ್ದೇವೆ. ಇಂಡೊ-ಪೆಸಿಫಿಕ್ ವಲಯದ ಮುಕ್ತ, ತೆರೆದ ಮತ್ತು ಎಲ್ಲರನ್ನೂ ಒಳಗೊಂಡ ಪ್ರಗತಿಗೆ ನಾವೆಲ್ಲಾ ಬದ್ಧರಾಗಿದ್ದೇವೆ.
ನಮ್ಮ ಇಂದಿನ ಕಾರ್ಯಸೂಚಿಯು ಲಸಿಕೆ, ಹವಾಮಾನ ಬದಲಾವಣೆ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಬಳಕೆ ಮತ್ತಿತರ ಕ್ಷೇತ್ರಗಳನ್ನು ಒಳಗೊಂಡಿದ್ದು, ಈ ಕ್ಷೇತ್ರಗಳ ಪ್ರಗತಿಯ ವಿಸ್ತೃತ ಸಮಾಲೋಚನೆಗೆ ಮೀಸಲಾಗಿದೆ. ಇದು ಇಂಡೊ-ಪೆಸಿಫಿಕ್ ವಲಯದ ನಾಲ್ಕು ದಿಕ್ಕುಗಳಿಗೂ ಪ್ರಬಲ ಶಕ್ತಿಯಾಗಿ ರೂಪುಗೊಂಡು, ಜಾಗತಿಕ ಒಳಿತಿಗೆ ಕಾರಣವಾಗಲಿದೆ.
‘ಇಡೀ ವಿಶ್ವವೇ ಒಂದು ಕುಟುಂಬವಿದ್ದಂತೆ’ ಎಂದು ಭಾರತದ ಪ್ರಾಚೀನ ತತ್ವಶಾಸ್ತ್ರದಲ್ಲಿ ಪ್ರಸ್ತಾಪಿಸಿರುವ ‘ವಸುದೈವ ಕುಟುಂಬಕಂ’ ನಾಣ್ಣುಡಿಯ ಮುಂದುವರಿದ ಭಾಗವಾಗಿ, ಸಕಾರಾತ್ಮಕ ದೃಷ್ಟಿಕೋನವನ್ನು ನಾನಿಲ್ಲಿ ನೋಡುತ್ತಿದ್ದೇನೆ.
ನಮ್ಮ ಹಂಚಿತ ಮೌಲ್ಯಗಳನ್ನು ಮುನ್ನಡೆಸಲು, ಸುಭದ್ರ, ಸ್ಥಿರ ಮತ್ತು ಸಮೃದ್ಧ ಇಂಡೊ-ಪೆಸಿಫಿಕ್ ವಲಯವನ್ನು ಉತ್ತೇಜಿಸಲು ನಾವುಗಳು ಹಿಂದೆಂದಿಗಿಂತಲೂ ಹೆಚ್ಚಾಗಿ ಜತೆಗೂಡಿ ಕೆಲಸ ಮಾಡೋಣ.
ಇಂದಿನ ಶೃಂಗಸಭೆಯು ಚತುಷ್ಕೋನ ನಾಯಕರ ಅಗತ್ಯ ಮತ್ತು ಕಾಲಘಟ್ಟವನ್ನು ಪ್ರತಿಪಾದಿಸಿದೆ ಮತ್ತು ತೋರುತ್ತಿದೆ.
ಇಂಡೊ-ಪೆಸಿಫಿಕ್ ವಲಯದ ಸ್ಥಿರತೆಗೆ ಈ ಶೃಂಗಸಭೆಯು ಪ್ರಮುಖ ಆಧಾರಸ್ತಂಭವಾಗಲಿದೆ.
ಧನ್ಯವಾದಗಳು.
***
(रिलीज़ आईडी: 1704772)
आगंतुक पटल : 236
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam