ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ

ಸುಗಮ ಜೀವನ ಸೂಚ್ಯಂಕ 2020: ಬೆಂಗಳೂರು, ಪುಣೆ, ಅಹ್ಮದಾಬಾದ್ [ಹತ್ತು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ನಗರ ವಿಭಾಗದಲ್ಲಿ]


ಸುಗಮ ಜೀವನ ಸೂಚ್ಯಂಕದಲ್ಲಿ ಶಿಮ್ಲಾಗೆ ಮೊದಲ ಶ್ರೇಸಯಾಂಕ [ಹತ್ತು ಲಕ್ಷಕ್ಕೂ ಕಡಿಮೆ ಜನಸಂಖ್ಯೆ ವಿಭಾಗದಲ್ಲಿ]

ಎಂ.ಪಿ.ಐ 2020 ವಿಭಾಗದಲ್ಲಿ ಇಂದೋರ್ ಮತ್ತು ಎನ್.ಡಿ.ಎಂ.ಸಿ ಪ್ರಮುಖ ಪುರಸಭೆಗಳು

ಎರಡೂ ಸೂಚ್ಯಂಕಗಳು ನಗರಗಳ ಸಮಗ್ರ ಮೌಲ್ಯ ಮಾಪನ ಒದಗಿಸಲಿವೆ

ಸುಗಮ ಜೀವನ ಸೂಚ್ಯಂಕ 2020 ಮತ್ತು ಪುರಸಭೆಗಳ ಸಾಮರ್ಥ್ಯ ಸೂಚ್ಯಂಕ 2020 ರ ಶ್ರೇಯಾಂಕ ಪ್ರಕಟ

Posted On: 04 MAR 2021 1:18PM by PIB Bengaluru

ಸುಗಮ ಜೀವನ ಸೂಚ್ಯಂಕ [ಇ.ಒ.ಎಲ್.ಐ] ಮತ್ತು ಪುರಸಭೆಗಳ ಸಾಮರ್ಥ್ಯ ಸೂಚ್ಯಂಕ [ಎಂ.ಪಿ.ಐ] 2020 ಶ್ರೇಯಾಂಕಗಳನ್ನು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಖಾತೆ ರಾಜ್ಯ ಸಚಿವ [ಸ್ವತಂತ್ರ ಜವಾಬ್ದಾರಿ] ಶ್ರೀ ಹರ್ದೀಪ್ ಸಿಂಗ್ ಪುರಿ ಆನ್ ಲೈನ್ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದರು. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಶ್ರೀ ದುರ್ಗಾ ಶಂಕರ್ ಮಿಶ್ರಾ, ಸಚಿವಾಲಯದ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಹತ್ತು ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯುಳ್ಳ ನಗರಗಳು ಮತ್ತು ಹತ್ತು ಲಕ್ಷಕ್ಕೂ ಕಡಿಮೆ ಜನಸಂಖ್ಯೆಯುಳ್ಳ ನಗರಗಳ ವಿಭಾಗಗಳ ಸುಗಮ ಜೀವನ ಸೂಚ್ಯಂಕವನ್ನು ಪ್ರಕಟಿಸಲಾಗಿದೆ. 2020 ರಲ್ಲಿ ನಡೆಸಿದ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ 111 ನಗರಗಳು ಭಾಗವಹಿಸಿದ್ದವು. ಹತ್ತು ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯುಳ‍್ಳ ನಗರಗಳು ಮತ್ತು ಹತ್ತು ಲಕ್ಷಕ್ಕೂ ಕಡಿಮೆ ಜನಸಂಖ್ಯೆಯುಳ್ಳ ನಗರಗಳ ವಿಭಾಗದ ಎಲ್ಲಾ ನಗರಗಳು ಸ್ಮಾರ್ಟ್ ಸಿಟಿ ಕಾರ್ಯಕ್ರಮದಡಿ ಬರುತ್ತವೆ.

ಹತ್ತು ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯುಳ್ಳ ನಗರಗಳ ವಿಭಾಗದಲ್ಲಿ ಬೆಂಗಳೂರು ಅತ್ಯುತ್ತಮ ಸಾಧಕ ನಗರವಾಗಿ ಹೊರ ಹೊಮ್ಮಿದೆ. ನಂತರದಲ್ಲಿ ಪುಣೆ. ಅಹ್ಮದಾಬಾದ್, ಚೆನ್ನೈ, ಸೂರತ್, ನವಿ ಮುಂಬೈ, ಕೊಯಂಬತ್ತೂರು, ವಡೋದರ, ಇಂದೋರ್ ಮತ್ತು ಗ್ರೇಟರ್ ಮುಂಬೈ ನಗರಗಳು ಬರುತ್ತವೆ. ಹತ್ತು ಲಕ್ಷಕ್ಕೂ ಕಡಿಮೆ ಜನ ಸಂಖ್ಯೆಯುಳ್ಳ ನಗರಗಳ ಪೈಕಿ ಶಿಮ್ಲಾ ಸುಗಮ ಜೀವನ ಸೂಚ್ಯಂಕ ವಿಭಾಗದಲ್ಲಿ ಅತ್ಯುತ್ತಮ ಸ್ಥಾನ ಪಡೆದಿದೆ. ನಂತರ ಭುವನೇಶ‍್ವರ, ಸಿಲ್ವಸ್ಸಾ, ಕಾಕಿನಾಡ, ಸೇಲಂ, ವೆಲ್ಲೂರು, ಗಾಂಧಿನಗರ್, ಗುರುಗ್ರಾಮ್, ದಾವಣಗೆರೆ ಮತ್ತು ತಿರುಚರಾಪಲ್ಲಿ ನಗರಗಳು ಸ್ಥಾನ ಪಡೆದಿವೆ.

ಇದೇ ರೀತಿ ಸುಗಮ ಜೀವನ ನಡೆಸುವ ಪುರಸಭೆ ಆಧರಿತ ಹತ್ತು ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯುಳ್ಳ ವಿಭಾಗದಲ್ಲಿ ಎಂ.ಪಿ.ಐ 2020 ಮೌಲ್ಯಮಾಪನ ಕೈಗೊಳ್ಳಲಾಗಿದೆ. ಹತ್ತು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಪುರಸಭೆಗಳ ವಿಭಾಗದಲ್ಲಿ ಇಂದೋರ್ ಅತ್ಯುತ್ತಮ ಪುರಸಭೆಯಾಗಿ ಹೊರ ಹೊಮ್ಮಿದೆ. ನಂತರದ ಸ್ಥಾನಗಳಲ್ಲಿ ಸೂರತ್ ಮತ್ತು ಭೂಪಾಲ್ ಪುರಸಭೆಗಳು ಸ್ಥಾನ ಪಡೆದಿವೆ. ಹತ್ತು ಲಕ್ಷಕ್ಕೂ ಕಡಿಮೆ ಜನಸಂಖ್ಯೆ ಇರುವ ವಿಭಾಗದಲ್ಲಿ ನ್ಯೂ ಡೆಲ್ಲಿ ನಾಯಕನಾಗಿ ಹೊರ ಹೊಮ್ಮಿದ್ದು, ತಿರುಪತಿ ಮತ್ತು ಗಾಂಧಿನಗರಗಳು ನಂತರದ ಸ್ಥಾನಗಳನ್ನು ಪಡೆದುಕೊಂಡಿವೆ.

111 ಪುರಸಭೆಗಳಲ್ಲಿ ಎಂ.ಪಿ.ಐ ಪರಿಶೀಲನೆ ನಡೆಸಲಾಗಿದೆ [ಎನ್.ಡಿ.ಎಂ.ಸಿಯಡಿ ದೆಹಲಿ ಮತ್ತು ಮೂರು ಪುರಸಭೆಗಳ ಮೌಲ್ಯ ಮಾಪವನ್ನು ಪ್ರತ್ಯೇಕವಾಗಿ ನಡೆಸಲಾಗಿದೆ]. ಐದು ನೇರವಾದ ವಿಭಾಗದ 20 ವಲಯಗಳಲ್ಲಿ ಮತ್ತು 100 ಸೂಚಕಗಳನ್ನು ಇದು ಒಳಗೊಂಡಿದೆ. ಎಂ.ಪಿ.ಐ ನ ಐದು ನೇರ ವಲಯದಲ್ಲಿ ಸೇವೆಗಳು. ಹಣಕಾಸು, ನೀತಿ, ತಂತ್ರಜ್ಞಾನ ಮತ್ತು ಆಡಳಿತ ವ್ಯವಸ್ಥೆಯ ಅಂಶಗಳನ್ನು ಒಳಗೊಂಡಿದೆ.

ಸುಗಮ ಜೀವನ ನಡೆಸುವ ಸೂಚ್ಯಂಕ [ಇ.ಒ.ಎಲ್.ಐ] ಒಂದು ಮೌಲ್ಯ ಮಾಪನ ಸಾಧನವಾಗಿದ್ದು, ಅದು ಜೀವನ ಮಟ್ಟ ಮತ್ತು ನಗರ ಅಭಿವೃದ್ಧಿಗೆ ವಿವಿಧ ಉಪಕ್ರಮಗಳ ಪರಿಣಾಮಗಳನ್ನು ಮೌಲ್ಯ ಮಾಪನ ಮಾಡುತ್ತದೆ. ಇದು ಜೀವನ ಗುಣಮಟ್ಟ, ನಗರದ ಆರ್ಥಿಕ ಸಾಮರ್ಥ್ಯ ಮತ್ತು ಅದರ ಸುಸ್ಥಿರತೆ, ಸ್ಥಿತಿ ಸ್ಥಾಪಕತ್ವದ ಆಧಾರದ ಮೇಲೆ ಭಾರತದಾದ್ಯಂತ ಭಾಗವಹಿಸುವ ನಗರಗಳ ಸಮಗ್ರ ತಿಳುವಳಿಕೆಯನ್ನು ಇದು ನೀಡುತ್ತದೆ. ನಗರ ಆಡಳಿತಗಳು ನೀಡುವ ಸೇವೆಗಳನ್ನು ನಗರದ ಜನತೆಯ ಗ್ರಹಿಕೆಯ ಸಮೀಕ್ಷೆ ಮೂಲಕ ಮೌಲ್ಯಮಾಪನ ಮಾಡಲಾಗಿದೆ.

ಪುರಸಭೆಗಳ ಸಾಧನೆ ಸೂಚ್ಯಂಕ [ಎಂ.ಪಿ.ಐ] ವನ್ನು ಸುಲಭ ಜೀವನ ಸೂಚಕಗಳ ಆಧಾರದ ಮೇಲೆ ಜಾರಿಗೊಳಿಸಲಾಗಿದೆ. ಸ್ಥಳೀಯ ಆಡಳಿತದಲ್ಲಿ ಪೌರ ಸಂಸ್ಥೆಗಳು ನೀಡುವ ಸೇವೆಗಳು, ಹಣಕಾಸು, ನೀತಿ, ತಂತ್ರಜ್ಞಾನ ಮತ್ತು ಆಡಳಿತ ವ್ಯವಸ್ಥೆಯನ್ನು ಪರಿಶೀಸಲಾಗುತ್ತದೆ. ಇದು ಸ್ಥಳೀಯ ಆಡಳಿತ ಅಭ್ಯಾಸಗಳಲ್ಲಿನ ಸಂಕಿರ್ಣತೆಗಳನ್ನು ಸರಳೀಕರಿಸಲು ಮತ್ತು ಮೌಲ್ಯ ಮಾಪನ ಮಾಡಲು, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಉತ್ತೇಜಿಸಲು ಪ್ರಯತ್ನಿಸುತ್ತದೆ.

ಎರಡೂ ಸೂಚ್ಯಂಕಗಳು ಭಾರತದಾದ್ಯಂತ ನಗರಗಳ ಜೀವನ ಮಟ್ಟದ ಕಾರ್ಯಕ್ಷಮತೆಯನ್ನು ಅಳೆಯುವ ಪ್ರಯತ್ನವನ್ನು ಪ್ರತಿನಿಧಿಸುತ್ತವೆ. ಸುಗಮ ಜೀವನ ಸೂಚ್ಯಂಕ ಫಲಿತಾಂಶದ ಸೂಚಕಗಳನ್ನು ಒಳಗೊಂಡಿದೆ ಮತ್ತು ಪುರಸಭೆಗಳ ಸಾಮರ್ಥ್ಯದ ನಿಯತಾಂಕಗಳನ್ನು ಉತ್ತೇಜಿಸುತ್ತದೆ. ಈ ಸೂಚ್ಯಂಕಗಳು ಉತ್ತಮ ಜೀವನಮಟ್ಟ ಬೆಳೆಸಲು, ಮೂಲ ಸೌಕರ್ಯ ಅಭಿವೃದ್ಧಿಪಡಿಸಲು, ನಗರೀಕರಣದ ಸವಾಲುಗಳನ್ನು ಎದುರಿಸಲು ಮಾಡಿದ ಪ್ರಯತ್ನಗಳ ಆಧಾರದ ಮೇಲೆ ನಗರಗಳ ಮೌಲ್ಯ ಮಾಪನವನ್ನು ಮಾಡಲಾಗುತ್ತಿದೆ.

ಸರ್ಕಾರದ ಆಡಳಿತದ ಅಂತರವನ್ನು ಗುರುತಿಸುವ, ಇವುಗಳನ್ನು ಸಂಭವನೀಯ ಅವಕಾಶಗಳನ್ನಾಗಿ ಮಾಡುವ ಮತ್ತು ಸ್ಥಳೀಯ ಆಡಳಿತದ ಸಾಮರ್ಥ್ಯವನ್ನು ಸುಧಾರಿಸಿ ನಗರ ಜನರ ಜೀವನ ಮಟ್ಟ ಸುಧಾರಿಸಲು ಮತ್ತು ವಿಸ್ತಾರವಾದ ಅಭಿವೃದ್ಧಿ ಸಾಧಿಸುವ ಉದ್ದೇಶವನ್ನು ಇದು ಹೊಂದಿದೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಇದರ ಪಾಲುದಾರರಾಗಿದ್ದು, ಸ್ಪರ್ಧಾತ್ಮಕತೆ ತರುವ ಉದ್ದೇಶದಿಂದ ಇದನ್ನು ಸಿದ್ಧಪಡಿಸಲಾಗಿದೆ.

ಸುಗಮ ಜೀವನ ಸೂಚ್ಯಂಕ [ಇ.ಒ.ಎಲ್.ಐ]

ಸುಗಮ ಜೀವನ ಸೂಚ್ಯಂಕ 2020 ದಲ್ಲಿ ನಾಗರಿಕರ ಗ್ರಹಿಕೆಯನ್ನು ಬಲಪಡಿಸುವ ಚೌಕಟ್ಟು ರೂಪಿಸಲಾಗಿದ್ದು, ಈ ಮೂಲಕ ತನ್ನ ವ್ಯಾಪ್ತಿಯನ್ನು ಬಲಪಡಿಸುವ ಮತ್ತು ಶೇ 30 ರಷ್ಟು ಕೃಪಾಂಕವನ್ನು ಇದು ಒಳಗೊಂಡಿದೆ. ಆದ್ದರಿಂದ ಇದು 13 ವರ್ಗಗಳಲ್ಲಿ ವ್ಯಾಪಿಸಿರುವ ಗುಣಮಟ್ಟದ ಜೀವನ, ಆರ್ಥಿಕ ಸಾಮರ್ಥ್ಯ, ಸುಸ್ಥಿರತೆ, ಆಧಾರ ಸ್ತಂಭಗಳ ಮೂಲಕ ಅಸ್ಥಿತ್ವದಲ್ಲಿರುವ ಜೀವನ ಪರಿಸ್ಥಿತಿಗಳಿಗೆ ಕಾರಣವಾಗುವ ಫಲಿತಾಂಶಗಳನ್ನು ಪರಿಶೀಲಿಸುತ್ತದೆ. 13 ವರ್ಗಗಳೆಂದರೆ ಶಿಕ್ಷಣ, ಆರೋಗ್ಯ, ವಸತಿ ಮತ್ತು ಸೂರು, ವಾಶ್ ಅಂಡ್ ಎಸ್.ಡಬ್ಲ್ಯೂ.ಎಂ, ಸಾರಿಗೆ, ಸುರಕ್ಷತೆ ಮತ್ತು ಭದ್ರತೆ, ಮನರಂಜನೆ, ಆರ್ಥಿಕ ಅಭಿವೃದ್ಧಿಯ ಮಟ್ಟ, ಆರ್ಥಿಕತೆಯ ಅವಕಾಶಗಳು, ಪರಿಸರ, ಹಸಿರು ಸ್ಥಳ ಮತ್ತು ಕಟ್ಟಡಗಳು, ಇಂಧನ ಬಳಕೆ ಮತ್ತು ನಗರ ಸ್ಥಿತಿ ಸ್ಥಾಪಕತ್ವ ಮತ್ತು ಒಟ್ಟಾರೆ ಫಲಿತಾಂಶದ ಶೇ 70 ರಷ್ಟಿದೆ.

ನಾಗರಿಕರ ಗ್ರಹಿಕೆಯ ಸಮೀಕ್ಷೆ [ಸಿ.ಪಿ.ಎಸ್.] ಯಡಿ ಸೇವೆಯ ವಿತರಣೆ ದೃಷ್ಟಿಯಿಂದ ನಾಗರಿಕರ ಅನುಭವವನ್ನು ಮೌಲ್ಯಮಾಪನ ಮಾಡಲು ಸಹಕಾರಿಯಾಗಿದೆ. ಈ ಮೌಲ್ಯಮಾಪನವನ್ನು 2020ರ ಜನವರಿ 16 ರಿಂದ 2020ರ ಮಾರ್ಚ್ 20 ರ ವರೆಗೆ ಕೈಗೊಳ್ಳಲಾಯಿತು. 111 ನಗರಗಳಲ್ಲಿ ಒಟ್ಟು 32.2 ಲಕ್ಷ ನಾಗರಿಕರು ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. ಭುವನೇಶ್ವರಕ್ಕೆ ಅತಿ ಹೆಚ್ಚು ಸಿಪಿಎಸ್ ಅಂಕ ದೊರೆತಿದ್ದು, ನಂತರದ ಸ್ಥಾನಗಳಲ್ಲಿ ಸಿಲ್ವಸ್ಸಾ, ದಾವಣಗೆರೆ, ಕಾಕಿನಾಡ, ಬಿಲಾಸ್ಪುರ್ ಮತ್ತು ಭಗಲ್ಪುರ್ ನಗರಗಳಿವೆ.

ಸುಗಮ ಜೀವನ ನಡೆಸುವ ಪರಿಷ್ಕೃತ ಆವೃತ್ತಿಯ ವಿಧಾನ ಎಂ.ಪಿ.ಐ ಅನ್ನು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ 2019 ರ ಫೆಬ್ರವರಿಯಲ್ಲಿ ಬಿಡುಗಡೆ ಮಾಡಿತ್ತು. ಮೂಲಭೂತವಾಗಿ ಇ.ಒ.ಎಲ್.ಐ ವರದಿಯು 111 ನಗರಗಳಲ್ಲಿನ ಭಾರತೀಯ ನಾಗರಿಕರ ಯೋಗಕ್ಷೇಮವನ್ನು ಅಳೆಯುವ ಗುರಿ ಹೊಂದಿದೆ. ಇದು ಜೀವನ ಗುಣಮಟ್ಟ, ಆರ್ಥಿಕ ಸಾಮರ್ಥ್ಯ ಮತ್ತು ಸುಸ್ಥಿರತೆಯ ಆಧಾರ ಸ್ತಂಭಗಳ 13 ವಿಭಾಗಗಳಡಿ 49 ಸೂಚಕಗಳನ್ನು ಹೊಂದಿದೆ. ಇ.ಒ.ಎಲ್.ಐ ನ ಮೂಲ ಉದ್ದೇಶವೆಂದರೆ ಪ್ರಾಥಮಿಕವಾಗಿ ಭಾರತದ ನಗರಾಭಿವೃಧ‍್ದಿಯನ್ನು ತ್ವರಿತಗೊಳಿಸುವುದಾಗಿದ್ದು, ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಸಾಧಿಸುವುದನ್ನು ಸಹ ಒಳಗೊಂಡಿದೆ. ಸೂಚ್ಯಂಕದ ಆಧಾರದ ಮೇಲೆ ಸಾಕ್ಷ್ಯ ಆಧಾರಿತ ನೀತಿ ನಿರೂಪಣೆಗೆ ಮಾರ್ಗದರ್ಶನ ಮಾಡಲು ಸಹಕಾರಿಯಾಗುತ್ತದೆ. ಅಲ್ಲದೇ ನಗರಗಳ ನಡುವೆ ಆರೋಗ್ಯಪೂರ್ಣ ಸ್ಪರ್ಧಾತ್ಮಕತೆ ಹೆಚ್ಚಿಸಲು ಸಾಧ್ಯವಾಗುತ್ತದೆ. ತಮ್ಮ ಸಹವರ್ತಿಗಳಿಂದ ಕಲಿಯಲು ಮತ್ತು ಅಭಿವೃದ‍್ಧಿಯನ್ನು ಅತ್ಯಾಧುನಿಕಗೊಳಿಸಲು ಸಾಧ್ಯವಾಗುತ್ತದೆ.

ಪುರಸಭೆಗಳ ಸಾಮರ್ಥ್ಯ ಸೂಚ್ಯಂಕ 2020 [ಎಂ.ಪಿ.ಐ]

ಇ.ಒ.ಎಲ್.ಐ ಚೌಕಟ್ಟನ್ನು ಹೆಚ್ಚು ದೃಢವಾಗಿ ಮಾಡುವ ಉದ್ದೇಶದಿಂದ ಅದರ ವ್ಯಾಪ್ತಿಯನ್ನು ವಿಸ್ತರಿಸುತ್ತಾ ನಗರದಲ್ಲಿ ಮೊದಲ ಬಾರಿಗೆ ಪುರಸಭೆ ಸೂಚ್ಯಂಕ ಮೌಲ್ಯಮಾಪವನ್ನು ಕೈಗೊಳ್ಳಲಾಯಿತು. ಇದರಿಂದ ಸುಗಮ ಜೀವನ ಸೂಚ್ಯಂಕದ ಸೂಚಕದ ಫಲಿತಾಂಶವನ್ನು ಅಳೆಯಲು ಸಹಕಾರಿಯಾಗಲಿದೆ ಮತ್ತು ಪುರಸಭೆಗಳ ಸಾಮರ್ಥ್ಯದ ಫಲಿತಾಂಶಗಳನ್ನು ನೀಡುವ ಅಂಶಗಳ ಮೇಲೆ ಇದು ಕೇಂದ್ರೀಕೃತಗೊಂಡಿದೆ. ಸೇವೆ ನೀಡುವ ಸ್ಥಳೀಯ ಆಡಳಿತ ಯಂತ್ರವನ್ನು ಪರಿಣಾಮಕಾರಿಗೊಳಿಸುವ, ಯೋಜನೆ, ಹಣಕಾಸು ವ್ಯವಸ್ಥೆ, ಆಡಳಿತದ ಅಭ್ಯಾಸಗಳನ್ನು ಪರಿಣಾಮಕಾರಿಗೊಳಿಸುವ ಉದ್ದೇಶ ಹೊಂದಲಾಗಿದೆ.

ಪುರಸಭೆಗಳ ಸಾಮರ್ಥ್ಯ ಸೂಚ್ಯಂಕದ ಪ್ರಯತ್ನದಿಂದ ಭಾರತೀಯ ಪೌರ ಸಂಸ್ಥೆಗಳ ಸಾಮರ್ಥ್ಯವನ್ನು ಆಧರಿಸಿದ್ದು, ಇವುಗಳ ಕಾರ್ಯಕ್ಷಮತೆಯನ್ನು ನಿರ್ಣಯಿಸಲು ಮತ್ತು ವಿಶ‍್ಲೇಷಿಸಲು ಇದೊಂದು ಪ್ರಮುಖ ಪ್ರಯತ್ನವಾಗಿದೆ. ಪುರಸಭೆಗಳ ಜವಾಬ್ದಾರಿಗಳು ನಗರ ಯೋಜನೆಯಂತಹ ಸಂಕಿರ್ಣ ವಲಯಗಳಲ್ಲಿ ಮೂಲ ಸಾರ್ವಜನಿಕ ಸೇವೆಗಳನ್ನು ಒದಗಿಸಲು ಸಹಕಾರಿಯಾಗಲಿದೆ. ಎಂ.ಪಿ.ಐ ನ ಮೂಲ ಅಂಶಗಳು ಈ ಕೆಳಕಂಡಂತೆ ಇವೆ.

· ಪುರಸಭೆಯ ಕಾರ್ಯಕ್ಷಮತೆ ಸೂಚ್ಯಂಕ ಪುರಸಭೆಯ ಕಾರ್ಯಚಟುವಟಿಕೆಗಳ ಬಗ್ಗೆ ಮತ್ತು ಅವುಗಳ ಅಭಿವೃದ್ಧಿ ಹಾಗೂ ಸಾಮರ್ಥ್ಯಗಳ ವ್ಯಾಪ್ತಿಯನ್ನು ನಿರ್ಧರಿಸುತ್ತದೆ. ಈ ಸೂಚ್ಯಂಕದ ಮೂಲಕ ನಾಗರಿಕರು ತಮ್ಮ ಸ್ಥಳೀಯ ಆಡಳಿತವನ್ನು ಉತ್ತಮ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬಹುದು. ಇದರಿಂದ ಪ್ರಮುಖ ಪಾಲುದಾರರಲ್ಲಿ ನಂಬಿಕೆ ಹುಟ್ಟುವುದಲ್ಲದೇ ಪಾರದರ್ಶಕತೆಯನ್ನು ನಿರ್ಮಿಸಲು ಸಹಕಾರಿಯಾಗಲಿದೆ.

· ಈ ಚೌಕಟ್ಟಿನಲ್ಲಿ 20 ವಿವಿಧ ವಲಯಗಳಿವೆ. ಶಿಕ್ಷಣ, ಆರೋಗ್ಯ, ನೀರು ಮತ್ತು ತ್ಯಾಜ್ಯ ನೀರು, ಎಸ್.ಡಬ್ಲ್ಯೂ.ಎಂ ಮತ್ತು ನೈರ್ಮಲ್ಯ, ನೋಂದಣಿ ಮತ್ತು ಅನುಮತಿಗಳು, ಮೂಲ ಸೌಕರ್ಯ, ಕಂದಾಯ ನಿರ್ವಹಣೆ, ವೆಚ್ಚ ನಿರ್ವಹಣೆ, ವಿತ್ತೀಯ ಶಿಸ್ತು, ವಿತ್ತೀಯ ವಿಕೇಂದ್ರೀಕರಣ, ಡಿಜಿಟಲ್ ಆಡಳಿತ, ಕೈಗೆಟುವ ರೀತಿಯಲ್ಲಿ ಡಿಜಿಟಲ್ ವ್ಯವಸ್ಥೆ, ಡಿಟಿಟಲ್ ಸಾಕ್ಷರತೆ, ಯೋಜನೆಗಳ ಸಿದ್ಧತೆ, ಯೋಜನೆಗಳ ಅನುಷ್ಠಾನ, ಯೋಜನೆಗಳ ಜಾರಿ, ಪಾರದರ್ಶಕತೆ ಮತ್ತು ಜವಾಬ್ದಾರಿತನ, ಮಾನವ ಸಂಪನ್ಮೂಲ, ಪಾಲ್ಗೊಳ್ಳುವಿಕೆ ಮತ್ತು ಪರಿಣಾಮಕಾರಿತನ

ಪ್ರಮುಖ ಹತ್ತು ನಗರಗಳ ಮಾಹಿತಿಯನ್ನು ಈ ಕೆಳಕಂಡಂತೆ ನೀಡಲಾಗಿದೆ. ಅಲ್ಲದೇ ಎರಡೂ ಸೂಚ್ಯಂಕಗಳ ಅಡಿಯಲ್ಲಿರುವ ಶ್ರೇಯಾಂಕಗಳನ್ನು ಆನ್ ಲೈನ್ ನಲ್ಲಿ ವೀಕ್ಷಿಸಬಹುದು. https://eol.smartcities.gov.in.

ಮೊದಲ ಹತ್ತು ಶ್ರೇಯಾಂಕಗಳು

 

ಶ್ರೇಯಾಂಕ

ಸುಗಮ ಜೀವನ ಸೂಚ್ಯಂಕ

ಹತ್ತು ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯುಳ್ಳ ನಗರಗಳು

 

ಹತ್ತು ಲಕ್ಷಕ್ಕೂ ಕಡಿಮೆ ಜನಸಂಖ್ಯೆಯುಳ್ಳ ನಗರಗಳು

ನಗರ

ಅಂಕ

 

ನಗರ

ಅಂಕ

1

ಬೆಂಗಳೂರು

66.70

 

ಶಿಮ್ಲಾ

60.90

2

ಪುಣೆ

66.27

 

ಭುವನೇಶ್ವರ್

59.85

3

ಅಹ್ಮದಾಬಾದ್

64.87

 

ಸಿಲ್ವಾಸಾ

58.43

4

ಚೆನ್ನೈ

62.61

 

ಕಾಕಿನಾಡ

56.84

5

ಸೂರತ್

61.73

 

ಸೇಲಂ

56.40

6

ನವಿ ಮುಂಬೈ

61.60

 

ವೆಲ್ಲೂರು

56.38

7

ಕೊಯಂಬತ್ತೂರು

59.72

 

ಗಾಂಧಿನಗರ

56.25

8

ವಡೋದರ

59.24

 

ಗುರುಗ್ರಾಮ್

56.00

9

ಇಂದೋರ್

58.58

 

ದಾವಣಗೆರೆ

55.25

10

ಗ್ರೇಟರ್ ಮುಂಬೈ

58.23

 

ತಿರುಚರಾಪಲ್ಲಿ

55.24

 

 

 

ಶ್ರೇಯಾಂಕ

ಪುರಸಭೆಗಳ ಸಾಮರ್ಥ್ಯ ಸೂಚ್ಯಂಕ

ಹತ್ತು ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯುಳ್ಳ ನಗರಗಳು

 

ಹತ್ತು ಲಕ್ಷಕ್ಕೂ ಕಡಿಮೆ ಜನಸಂಖ್ಯೆಯುಳ್ಳ ನಗರಗಳು

ನಗರ

ಅಂಕ

 

ನಗರ

ಅಂಕ

1

ಇಂದೋರ್

66.08

 

ನ್ಯೂ ಡೆಲ್ಲಿ ಎಂಸಿ

52.92

2

ಸೂರತ್

60.82

 

ತಿರುಪತಿ

51.69

3

ಭೂಪಾಲ್

59.04

 

ಗಾಂಧಿನಗರ

51.59

4

ಪಿಂಪ್ರಿ ಚಿಂಚ್ವಾಡ್

59.00

 

ಕರ್ನಲ್

51.39

5

ಪುಣೆ

58.79

 

ಸೇಲಂ

49.04

6

ಅಹಮದಾಬಾದ್

57.60

 

ತಿರುಪ್ಪೂರ್

48.92

7

ರಾಯ್ಪುರ್

54.98

 

ಬಿಲಾಸ್ಪುರ್

47.99

8

ಗ್ರೇಟರ್ ಮುಂಬೈ

54.36

 

ಉದಯ್ ಪುರ್

47.77

9

ವಿಶಾಖಪಟ್ಟಣಂ

52.77

 

ಝಾನ್ಸಿ

47.04

10

ವಡೋದರ

52.68

 

ತಿರುನಲ್ವೇಲಿ

47.02

 

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ https://eol.smartcities.gov.in

*****



(Release ID: 1702494) Visitor Counter : 392