ಪ್ರಧಾನ ಮಂತ್ರಿಯವರ ಕಛೇರಿ
ಸ್ವಾಧೀನ ನಿಯಂತ್ರಣ ನೀತಿಗಳ ಉದಾರೀಕರಣ, ಭೂ ಪ್ರಾದೇಶಿಕ ದತ್ತಾಂಶ ಮಾಹಿತಿ ಮಹತ್ವದ ಹೆಜ್ಜೆ
ಅನಿಯಂತ್ರಿತ ವ್ಯವಸ್ಥೆ ಮೂಲಕ ಸುಲಭೀಕೃತ ವ್ಯವಹಾರ, ಸುಧಾರಣೆಗಳ ಬದ್ಧತೆಯ ಪ್ರತೀಕ: ಪ್ರಧಾನಮಂತ್ರಿ ನರೇಂದ್ರ ಮೋದಿ
Posted On:
15 FEB 2021 1:39PM by PIB Bengaluru
ಸ್ವಾಧೀನ ನಿಯಂತ್ರಣ ನೀತಿಗಳ ಉದಾರೀಕರಣ ಮತ್ತು ಭೂ ದತ್ತಾಂಶ ಮಾಹಿತಿ ಉತ್ಪಾದನೆ ಆತ್ಮ ನಿರ್ಭರ್ ಭಾರತ್ ನಿರ್ಮಾಣದಲ್ಲಿ ನಮ್ಮ ದೃಷ್ಟಿಯಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.
ದೇಶದ ರೈತರು, ನವೋದ್ಯಮಗಳು, ಖಾಸಗಿ ವಲಯ, ಸಾರ್ವಜನಿಕ ಕ್ಷೇತ್ರ ಮತ್ತು ಸಂಶೋಧನಾ ಸಂಸ್ಥೆಗಳಿಗೆ ಅನ್ವೇಷಣೆಗಳನ್ನು ಮಾಡಲು ಮತ್ತು ಪರಿಹಾರಗಳನ್ನು ಕಲ್ಪಿಸಲು ಈ ಸುಧಾರಣೆ ಲಾಭ ತರಲಿದೆ ಎಂದು ಹೇಳಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಪ್ರಧಾನಮಂತ್ರಿಯವರು, “ನಮ್ಮ ಸರ್ಕಾರ ಡಿಜಿಟಲ್ ಇಂಡಿಯಾಗೆ ಭಾರೀ ಉತ್ತೇಜನ ನೀಡುವ ನಿರ್ಧಾರ ತೆಗೆದುಕೊಂಡಿದೆ. ಅನಿಯಂತ್ರಿತ ನೀತಿಗಳ ಉದಾರೀಕರಣ ಮತ್ತು ಭೂ ಪ್ರಾದೇಶಿಕ ದತ್ತಾಂಶ ಮಾಹಿತಿ ಉತ್ಪಾದನೆ ನಮ್ಮ ದೃಷ್ಟಿಯಲ್ಲಿ ಆತ್ಮನಿರ್ಭರ್ ಭಾರತ್ ನಿರ್ಮಿಸುವಲ್ಲಿ ಮಹತ್ವದ ಹೆಜ್ಜೆ ಎಂದು ಹೇಳಿದ್ದಾರೆ.
ಸುಧಾರಣಾ ಕ್ರಮಗಳನ್ನು ಬಂಧಮುಕ್ತಗೊಳಿಸಿದರೆ ನಮ್ಮ ದೇಶದ ನವೋದ್ಯಮಗಳು, ಖಾಸಗಿ ವಲಯ, ಸಾರ್ವಜಿಕ ವಲಯ ಮತ್ತು ಸಂಶೋಧನಾ ಸಂಸ್ಥೆಗಳಿಗೆ ನಾವೀನ್ಯತೆಗಳನ್ನು ಕೈಗೊಳ್ಳಲು ಅತ್ಯಂತ ಉತ್ತಮ ಅವಕಾಶಗಳನ್ನು ಕಲ್ಪಿಸಿದಂತಾಗುತ್ತದೆ ಮತ್ತು ಇದರಿಂದ ಎತ್ತರಕ್ಕೆ ಏರಬಹುದಾದ ಪರಿಹಾರಗಳನ್ನು ಕಲ್ಪಿಸಲು ಸಹಕಾರಿಯಾಗಲಿದೆ. ಜತೆಗೆ ಉದ್ಯೋಗ ಸೃಷ್ಟಿಯಾಗಲಿದೆ ಮತ್ತು ಆರ್ಥಿಕ ಬೆಳಣಿಗೆ ತ್ವರಿತಗೊಳ್ಳಲಿದೆ ಎಂದು ಹೇಳಿದ್ದಾರೆ.
ಭೂ ಪ್ರಾದೇಶಿಕ ಮತ್ತು ದೂರ ಸಂವೇದಿ ದತ್ತಾಂಶ ಮಾಹಿತಿಯ ಸಾಮರ್ಥ್ಯವನ್ನು ವೃದ್ಧಿಸಿದರೆ ಭಾರತದ ರೈತರು ಸಹ ಪ್ರಯೋಜನ ಪಡೆಯಲಿದ್ದಾರೆ. ದತ್ತಾಂಶವನ್ನು ಪ್ರಜಾತಂತ್ರಗೊಳಿಸಿದರೆ ಅದರಿಂದ ಹೊಸ ತಂತ್ರಜ್ಞಾನಗಳನ್ನು ಹೊಂದಲು ಮತ್ತು ವೇದಿಕೆಗಳನ್ನು ಪಡೆಯಲು ಸಹಕಾರಿಯಾಗಲಿದೆ. ಕೃಷಿ ಮತ್ತ ಸಂಬಂಧಿತ ಕ್ಷೇತ್ರದಲ್ಲಿ ದಕ್ಷತೆ ಹೆಚ್ಚಳಕ್ಕೆ ಕಾರಣವಾಗಲಿದೆ ಎಂದಿದ್ದಾರೆ.
ಅನಿಯಂತ್ರಣ ವ್ಯವಸ್ಥೆ ಮೂಲಕ ಭಾರತದಲ್ಲಿ ವ್ಯವಹಾರವನ್ನು ಸುಲಭಗೊಳಿಸುವ, ಈ ರೀತಿಯ ಸುಧಾರಣೆಗಳನ್ನು ತರುವ ನಮ್ಮ ಬದ್ಧತೆಯ ಪ್ರತೀಕ ಇದಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದ್ದಾರೆ.
ಸುಧಾರಣೆಗಳ ವಿವರಗಳನ್ನು ಇಲ್ಲಿ ನೋಡಬಹುದು: https://pib.gov.in/PressReleseDetail.aspx?PRID=1698168
***
(Release ID: 1698138)
Visitor Counter : 232
Read this release in:
English
,
Urdu
,
Hindi
,
Marathi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam