ಪ್ರಧಾನ ಮಂತ್ರಿಯವರ ಕಛೇರಿ

ಉತ್ತರಾಖಂಡ ಮುಖ್ಯಮಂತ್ರಿಯೊಂದಿಗೆ ಪ್ರಧಾನಮಂತ್ರಿ ಸಮಾಲೋಚನೆ; ಉತ್ತರಾಖಂಡದ ದುರದೃಷ್ಟಕರ ಸ್ಥಿತಿಯ ಕುರಿತು ಪರಾಮರ್ಶೆ

Posted On: 07 FEB 2021 2:33PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಉತ್ತರಾಖಂಡ ಮುಖ್ಯಮಂತ್ರಿ  ಶ್ರೀ ತ್ರಿವೇಂದ್ರ ಸಿಂಗ್ ರಾವತ್ ಅವರೊಂದಿಗೆ ಮಾತಕತೆ ನಡೆಸಿ, ಉತ್ತರಾಖಂಡದ ಪರಿಸ್ಥಿತಿಯ ಬಗ್ಗೆ ಪರಾಮರ್ಶಿಸಿದರು.

ಪ್ರಧಾನಮಂತ್ರಿಗಳ ಕಾರ್ಯಾಲಯದ ಟ್ವೀಟ್ ನಲ್ಲಿ ಉತ್ತರಾಖಂಡದ ಪರಿಸ್ಥಿತಿಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಸ್ಸಾಂನಲ್ಲಿದ್ದಾಗ ಪರಿಶೀಲನೆ ನಡೆಸಿದರು.  ಅವರು ಮುಖ್ಯಮಂತ್ರಿ ಟಿಎಸ್ ರಾವತ್ ಅವರೊಂದಿಗೆ ಮತ್ತು ಇತರೆ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿದರು. ರಕ್ಷಣಾ ಮತ್ತು ಪರಿಹಾರ ಕಾರ್ಯಗಳು ಪ್ರಗತಿಯಲ್ಲಿರುವ ಕುರಿತು ಅವರು ಮಾಹಿತಿಯನ್ನು ಪಡೆದುಕೊಂಡರು. ಸಂತ್ರಸ್ತರಿಗೆ ಎಲ್ಲ ರೀತಿಯ ಸಾಧ್ಯವಾದ ನೆರವು ನೀಡಲು ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದಾರೆಎಂದು ತಿಳಿಸಿದೆ.

ಮತ್ತೊಂದು ಟ್ವೀಟ್ ನಲ್ಲಿ ಪ್ರಧಾನಮಂತ್ರಿ ಅವರು, “ಉತ್ತರಾಖಂಡದ ದುರದೃಷ್ಟಕರ ಸ್ಥಿತಿಯ ಬಗ್ಗೆ ನಿರಂತರವಾಗಿ ನಾನು ನಿಗಾವಹಿಸುತ್ತಿದ್ದೇನೆ. ಭಾರತ, ಉತ್ತರಾಖಂಡದ ಜೊತೆಗೆ ನಿಲ್ಲುತ್ತದೆ ಮತ್ತು ರಾಷ್ಟ್ರ ಪ್ರತಿಯೊಬ್ಬರ ಸುರಕ್ಷತೆಗೆ ಪ್ರಾರ್ಥಿಸುತ್ತದೆ. ನಾನು ನಿರಂತರವಾಗಿ ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚಿಸುತ್ತಿದ್ದೇನೆ ಮತ್ತು ಎನ್ ಡಿಆರ್ ಎಫ್ ನಿಯೋಜನೆ, ರಕ್ಷಣಾ ಕಾರ್ಯ ಮತ್ತು ಪರಿಹಾರ ಕಾರ್ಯಾಚರಣೆಗಳ ಬಗ್ಗೆ ಪ್ರತಿಕ್ಷಣದ ಮಾಹಿತಿಯನ್ನು ಪಡೆಯುತ್ತಿದ್ದೇನೆ.ಎಂದು ಹೇಳಿದ್ದಾರೆ. 

***


(Release ID: 1696047) Visitor Counter : 198