ಹಣಕಾಸು ಸಚಿವಾಲಯ

ಪ್ರಮುಖ ಬಂದರುಗಳಲ್ಲಿ ಕಾರ್ಯಾಚರಣೆ ಸೇವೆಗಾಗಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮಾದರಿ


ಭಾರತದಲ್ಲಿ ವ್ಯಾಪಾರಿ ಹಡಗುಗಳ  ಫ್ಲಾಗಿಂಗ್  ಉತ್ತೇಜನಕ್ಕಾಗಿ ಭಾರತೀಯ ಹಡಗು ಕಂಪನಿಗಳಿಗೆ ರೂ.1,624 ಕೋಟಿ ಸಬ್ಸಿಡಿ ಬೆಂಬಲ

ಹೆಚ್ಚುವರಿ 1.5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲು 2024 ರ ವೇಳೆಗೆ ಸುಮಾರು 4.5 ದಶಲಕ್ಷ ಎಲ್ಡಿಟಿ ಮರುಬಳಕೆ ಸಾಮರ್ಥ್ಯ ದುಪ್ಪಟ್ಟು

Posted On: 01 FEB 2021 1:34PM by PIB Bengaluru

2021-22ರ ಹಣಕಾಸು ವರ್ಷದಲ್ಲಿ 2,000 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಏಳು ಪ್ರಮುಖ ಬಂದರುಗಳ ಯೋಜನೆಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ನೀಡಲಾಗುತ್ತಿದೆ ಎಂದು ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಂದು ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2021-22 ಮಂಡನೆ ವೇಳೆ ತಿಳಿಸಿದ್ದಾರೆ. ಪ್ರಮುಖ ಬಂದರುಗಳು ತಮ್ಮ ಕಾರ್ಯಾಚರಣೆಯ ಸೇವೆಗಳನ್ನು ಸ್ವಯಂ ನಿರ್ವಹಿಸುವ ಬದಲು ಖಾಸಗಿ ಪಾಲುದಾರರು ಅದನ್ನು ನಿರ್ವಹಿಸುವ ಮಾದರಿಯತ್ತ ಸಾಗಲಿದ್ದಾರೆ ಎಂದು ಅವರು ಹೇಳಿದರು.

ಭಾರತದಲ್ಲಿ ವ್ಯಾಪಾರಿ ಹಡಗುಗಳ ಪ್ಲಾಗಿಂಗ್ ಉತ್ತೇಜಿಸಲು ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು, ಭಾರತೀಯ ಹಡಗು ಕಂಪನಿಗಳಿಗೆ ಸಚಿವಾಲಯಗಳು ಮತ್ತು ಸಿಪಿಎಸ್.ಇ. ಆರಂಭಿಸುವ  ಜಾಗತಿಕ ಟೆಂಡರ್ ಗಳಲ್ಲಿ 5 ವರ್ಷಗಳ ಕಾಲ  1624 ಕೋಟಿ ರೂ. ಸಬ್ಸಿಡಿ ಬೆಂಬಲ ಯೋಜನೆಯನ್ನು ತಮ್ಮ ಬಜೆಟ್ ಭಾಷಣದಲ್ಲಿ ಪ್ರಕಟಿಸಿದರು. ಈ ಉಪಕ್ರಮವು ಭಾರತೀಯ ಹಡಗು ಸಿಬ್ಬಂದಿಗೆ ದೊಡ್ಡ ತರಬೇತಿ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ ಜೊತೆಗೆ ಜಾಗತಿಕ ಹಡಗು ಕ್ಷೇತ್ರದಲ್ಲಿ ಭಾರತೀಯ ಕಂಪನಿಗಳ ಪಾಲನ್ನು ಹೆಚ್ಚಿಸುತ್ತದೆ.

ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು, 2024ರ ವೇಳೆಗೆ ಹಡಗಿನ ಮರುಬಳಕೆ ಸಾಮರ್ಥ್ಯವನ್ನು ಸುಮಾರು 4.5 ದಶಲಕ್ಷ ಲೈಟ್ ಡಿಸ್ಪ್ಲೇಸ್‌ಮೆಂಟ್ ಟೋನ್ (ಎಲ್‌.ಡಿ.ಟಿ)ಗೆ ದ್ವಿಗುಣಗೊಳಿಸಲು ಪ್ರಸ್ತಾಪಿಸಿದರು. ಗುಜರಾತ್‌ ನ ಅಲಾಂಗ್‌ ನಲ್ಲಿ ಸುಮಾರು 90 ಹಡಗು ಮರುಬಳಕೆ ಯಾರ್ಡ್‌ ಗಳು ಈಗಾಗಲೇ ಎಚ್‌.ಕೆ.ಸಿ (ಹಾಂಗ್ ಕಾಂಗ್ ಅಂತಾರಾಷ್ಟ್ರೀಯ ಸಮಾವೇಶ) ಅನುಸರಣೆ ಪ್ರಮಾಣಪತ್ರಗಳನ್ನು ಸಾಧಿಸಿರುವುದರಿಂದ ಯುರೋಪ್ ಮತ್ತು ಜಪಾನ್‌ ನಿಂದ ಭಾರತಕ್ಕೆ ಹೆಚ್ಚಿನ ಹಡಗುಗಳನ್ನು ತರಲು ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು. ಇದರಿಂದ ದೇಶದ ಯುವಕರಿಗೆ ಹೆಚ್ಚುವರಿಯಾಗಿ 1.5 ಲಕ್ಷ ಉದ್ಯೋಗಗಳು ದೊರೆಯುವ ನಿರೀಕ್ಷೆಯಿದೆ ಎಂದು ತಿಳಿಸಿದರು.

***



(Release ID: 1693952) Visitor Counter : 249