ಹಣಕಾಸು ಸಚಿವಾಲಯ
ಬಡತನ ಹೋಗಲಾಡಿಸಲು ಆರ್ಥಿಕ ಬೆಳವಣಿಗೆಯತ್ತ ಭಾರತ ಗಮನ ಹರಿಸುವುದನ್ನು ಮುಂದುವರಿಸಬೇಕು: ಆರ್ಥಿಕ ಸಮೀಕ್ಷೆ 2020-21
ಆರ್ಥಿಕ ಬೆಳವಣಿಗೆ ಮತ್ತು ಅಸಮಾನತೆಯು ಭಾರತದಲ್ಲಿನ ಸಾಮಾಜಿಕ-ಆರ್ಥಿಕ ಸೂಚಕಗಳೊಂದಿಗೆ ಇದೇ ರೀತಿಯ ಸಂಬಂಧವನ್ನು ತೋರಿಸಿದೆ
Posted On:
29 JAN 2021 3:41PM by PIB Bengaluru
"ಭಾರತದ ಅಭಿವೃದ್ಧಿಯ ಹಂತವನ್ನು ಗಮನಿಸಿದರೆ, ಒಟ್ಟಾರೆ ಸೌಲಭ್ಯಗಳನ್ನು ವಿಸ್ತರಿಸುವ ಮೂಲಕ ಬಡವರನ್ನು ಬಡತನದಿಂದ ಮೇಲಕ್ಕೆತ್ತಲು ಭಾರತವು ಆರ್ಥಿಕ ಬೆಳವಣಿಗೆಯತ್ತ ಗಮನ ಹರಿಸುವುದನ್ನು ಮುಂದುವರೆಸಬೇಕು." ಆರ್ಥಿಕ ಬೆಳವಣಿಗೆಗೆ ಸ್ಪಷ್ಟವಾದ ಒತ್ತು ನೀಡಿ, ಆರ್ಥಿಕ ಸಮೀಕ್ಷೆ 2020-21 ಅನ್ನು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ. ನಿರ್ಮಾಲ ಸೀತಾರಾಮನ್ ಇಂದು ಸಂಸತ್ತಿನಲ್ಲಿ ಮಂಡಿಸಿದರು.
ಭಾರತದಲ್ಲಿ ಒಂದು ಕಡೆ ಅಸಮಾನತೆ ಮತ್ತು ಸಾಮಾಜಿಕ-ಆರ್ಥಿಕ ಫಲಿತಾಂಶಗಳ ನಡುವಿನ ಸಂಬಂಧ, ಮತ್ತು ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ-ಆರ್ಥಿಕ ಫಲಿತಾಂಶಗಳು ಮತ್ತೊಂದೆಡೆ, ಮುಂದುವರಿದ ಆರ್ಥಿಕತೆಗಳಲ್ಲಿ ಕಂಡುಬರುವ ವ್ಯತ್ಯಾಸಕ್ಕಿಂತ ಭಿನ್ನವಾಗಿದೆ ಎಂದು ಆರ್ಥಿಕ ಸಮೀಕ್ಷೆಯಲ್ಲಿನ ಹೇಳಿಕೆಯಲ್ಲಿದೆ. ಮುಂದುವರಿದ ಆರ್ಥಿಕತೆಗಳಿಗಿಂತ ಭಿನ್ನವಾಗಿ, ಆರ್ಥಿಕ ಬೆಳವಣಿಗೆ ಮತ್ತು ಅಸಮಾನತೆಯು ಭಾರತದಲ್ಲಿನ ಸಾಮಾಜಿಕ-ಆರ್ಥಿಕ ಸೂಚಕಗಳ ಮೇಲೆ ಅವುಗಳ ಪರಿಣಾಮಗಳಿಗೆ ಅನುಗುಣವಾಗಿ ಒಂದಾಗುತ್ತವೆ.
ಆರೋಗ್ಯ, ಶಿಕ್ಷಣ, ಜೀವಿತಾವಧಿ, ಶಿಶು ಮರಣ, ಜನನ ಮತ್ತು ಮರಣ ಪ್ರಮಾಣ, ಫಲವತ್ತತೆ ದರಗಳು, ಅಪರಾಧ, ಮಾದಕವಸ್ತು ಬಳಕೆ ಸೇರಿದಂತೆ ಹಲವಾರು ಸಾಮಾಜಿಕ-ಆರ್ಥಿಕ ಸೂಚಕಗಳೊಂದಿಗೆ ಅಸಮಾನತೆ ಮತ್ತು ತಲಾ ಆದಾಯದ ಪರಸ್ಪರ ಸಂಬಂಧವನ್ನು ಪರಿಶೀಲಿಸುವ ಮೂಲಕ ಆರ್ಥಿಕ ಸಮೀಕ್ಷೆ ಈ ತೀರ್ಮಾನಕ್ಕೆ ಬಂದಿದೆ. ಮತ್ತು ಭಾರತೀಯ ರಾಜ್ಯಗಳಲ್ಲಿ ಮಾನಸಿಕ ಆರೋಗ್ಯ. ಆರ್ಥಿಕ ಬೆಳವಣಿಗೆ ಮತ್ತು ಅಸಮಾನತೆ ಎರಡೂ ಸಾಮಾಜಿಕ-ಆರ್ಥಿಕ ಸೂಚಕಗಳೊಂದಿಗೆ ಒಂದೇ ರೀತಿಯ ಸಂಬಂಧವನ್ನು ಹೊಂದಿವೆ ಎಂದು ವಿಶ್ಲೇಷಣೆ ತೋರಿಸುತ್ತದೆ. ವಿಶ್ಲೇಷಣೆಯ ಆಧಾರದ ಮೇಲೆ, 2020-21ರ ಆರ್ಥಿಕ ಸಮೀಕ್ಷೆಯು ಭಾರತದಲ್ಲಿ, “ಆರ್ಥಿಕ ಬೆಳವಣಿಗೆಯು ಅಸಮಾನತೆಗಿಂತ ಬಡತನ ನಿವಾರಣೆಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ”ಎಂದು ತಿಳಿಸಿದೆ. ಆರ್ಥಿಕ ಬೆಳವಣಿಗೆಯನ್ನು ರಾಜ್ಯ ಮಟ್ಟದಲ್ಲಿ ತಲಾ ಆದಾಯದಿಂದ ಪ್ರತಿನಿಧಿಸಲಾಗಿದೆ.
ಕಾಲಾನಂತರದಲ್ಲಿ, ಜಾಗತಿಕ ವ್ಯಾಖ್ಯಾನಗಳು ಆರ್ಥಿಕ ಬೆಳವಣಿಗೆ ಮತ್ತು ಅಸಮಾನತೆಯ ನಡುವಿನ ನಡೆಯಬಹುದಾದ ಸಂಘರ್ಷವನ್ನು ಎತ್ತಿ ತೋರಿಸುತ್ತವೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ. ಕೋವಿಡ್-19 ಸಾಂಕ್ರಾಮಿಕ ರೋಗದ ನಂತರದ ಅಸಮಾನತೆಯ ಮೇಲೆ ಅನಿವಾರ್ಯವಾಗಿ ಗಮನಹರಿಸುವುದರಿಂದ ಆರ್ಥಿಕ ಬೆಳವಣಿಗೆ ಮತ್ತು ಅಸಮಾನತೆಯ ನಡುವಿನ ಸಂಘರ್ಷವು ಮತ್ತೊಮ್ಮೆ ಯಥೋಚಿತವಾಗುತ್ತವೆ ಎಂದು 2020-21ರ ಆರ್ಥಿಕ ಸಮೀಕ್ಷೆ ಅಭಿಪ್ರಾಯ ಪಟ್ಟಿವೆ.
ಆದಾಗ್ಯೂ, ಆರ್ಥಿಕ ಸಮೀಕ್ಷೆ 2020-21ರ ಪ್ರಕಾರ, ಅಭಿವೃದ್ಧಿಯ ಹಂತದಲ್ಲಿನ ವ್ಯತ್ಯಾಸಗಳು, ಭಾರತದ ಆರ್ಥಿಕ ಬೆಳವಣಿಗೆಯ ಹೆಚ್ಚಿನ ಸಾಮರ್ಥ್ಯದ ಪ್ರಮಾಣ ಮತ್ತು ಬಡತನದ ಹೆಚ್ಚಿನ ಮಟ್ಟವನ್ನು ಗಮನದಲ್ಲಿಟ್ಟುಕೊಂಡು ಅಸಮಾನತೆಯನ್ನು ಕೇಂದ್ರೀಕರಿಸುವ ನೀತಿ ಉದ್ದೇಶವು ಭಾರತೀಯ ಪರಿಸ್ಥಿತಿಗೆ ಅನ್ವಯಿಸದೇ ಇರಬಹುದು. ಹಾಗೂ, ಭಾರತ ಮತ್ತು ಚೀನಾದ ಉದಾಹರಣೆಗಳು ಈ ಸಂಘರ್ಷಕ್ಕೆ ಗಮನಾರ್ಹ ಸವಾಲನ್ನು ಒಡ್ಡಿದೆ. ಭಾರತ ಮತ್ತು ಚೀನಾದ ಬೆಳವಣಿಗೆಯು ಹೆಚ್ಚಿನ ಆರ್ಥಿಕ ಬೆಳವಣಿಗೆಯಿಂದಾಗಿ ಬಡತನದಲ್ಲಿ ಗಮನಾರ್ಹ ಇಳಿಕೆಯಾಗಿರುವುದನ್ನು ತೋರಿಸಿದೆ ಎಂದು ಸಮೀಕ್ಷೆ ಹೇಳಿದೆ.
ಆರ್ಥಿಕ ಸಮೀಕ್ಷೆ 2020-21 ಹೀಗೆ ತೀರ್ಮಾನಿಸುತ್ತದೆ, ಬೆಳವಣಿಗೆಯ ನೀತಿಯ ಮೇಲೆ ಕೇಂದ್ರೀಕರಿಸುವುದು ಪುನರ್ವಿತರಣೆಯ ಉದ್ದೇಶಗಳು ಮುಖ್ಯವಲ್ಲ ಎಂದು ಸೂಚಿಸುವುದಿಲ್ಲ, ಆದರೆ ಆರ್ಥಿಕ ಸಾಮರ್ಥ್ಯದ ಗಾತ್ರವು ಬೆಳೆದರೆ ಅಭಿವೃದ್ಧಿಶೀಲ ಆರ್ಥಿಕತೆಯಲ್ಲಿ ಮಾತ್ರ ಪುನರ್ವಿತರಣೆ ಸಾಧ್ಯ.
ಕಡೆಗೆ ಒಟ್ಟಾರೆಯಾಗಿ ಹೇಳುವುದಾದರೆ, ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಕ್ಕೆ ಆರ್ಥಿಕ ಸಮೀಕ್ಷೆ 2020-21ರ ನೀತಿ ಶಿಫಾರಸು ಏನೆಂದರೆ, ಬೆಳವಣಿಗೆಯ ಸಾಮರ್ಥ್ಯವು ಹೆಚ್ಚಿರುವಂತೆಯೇ ಬಡತನ ನಿವಾರಣೆಯೂ ಸಹ ಮಹತ್ವದ್ದಾಗಿದೆ, ಆದುದರಿಂದ ಸದ್ಯ ಭವಿಷ್ಯಕ್ಕಾಗಿ ಆರ್ಥಿಕ ಸೌಲಭ್ಯಗಳನ್ನು ಶೀಘ್ರವಾಗಿ ಹೆಚ್ಚಿಸುವ ಕಡೆಗೆ ಗಮನ ಕೊಡಬೇಕು.
***
(Release ID: 1693484)
Visitor Counter : 1316