ಹಣಕಾಸು ಸಚಿವಾಲಯ

ಆರ್ಥಿಕ ಸಮೀಕ್ಷೆ 2020-21ರ ಸಾರಾಂಶ


ಬೃಹತ್ ಲಸಿಕಾ ಅಭಿಯಾನ: ಸೇವಾ ವಲಯದಲ್ಲಿ ದೃಢ ಚೇತರಿಕೆ, ಬಳಕೆ ಮತ್ತು ಹೂಡಿಕೆಯಲ್ಲಿ ಸದೃಢ ಬೆಳವಣಿಗೆಯಿಂದಾಗಿ “ವಿ“ ಆಕಾರದಲ್ಲಿ ಆರ್ಥಿಕ ಚೇತರಿಕೆ

ಹೆಚ್ಚಿನ ಅವರ್ತಕ ಸೂಚಕಗಳಾದ ಪುನರುತ್ಥಾನದಿಂದ ವಿದ್ಯುತ್ ಬೇಡಿಕೆ, ರೈಲ್ವೆ ಸರಕು, ಇ-ವೇ ಬಿಲ್ ಗಳು, ಜಿ.ಎಸ್.ಟಿ ಸಂಗ್ರಹ ಉಕ್ಕಿನ ಬಳಕೆ ಹೆಚ್ಚಳದಿಂದ “ವಿ” ಆಕಾರದ ಚೇತರಿಕೆ

ಅಂತಾರಾಷ್ಟ್ರೀಯ ಹಣಕಾಸು ನಿಧಿ – ಐಎಂಎಫ್ ಪ್ರಕಾರ ಮುಂದಿನ ಎರಡು ವರ್ಷಗಳಲ್ಲಿ ಭಾರತ ತ್ವರಿತ ಆರ್ಥಿಕ ಬೆಳವಣಿಗೆ ರಾಷ್ಟ್ರವಾಗಿ ಹೊರ ಹೊಮ್ಮಲಿರುವ ಭಾರತ

2020-21 ರ ಹಣಕಾಸು ವರ್ಷದಲ್ಲಿ ದೇಶದ ಜಿ.ಡಿ.ಪಿ ಬೆಳವಣಿಗೆ ಶೇ 7.7 ರಷ್ಟು ತಲುಪುವ ಅಂದಾಜು

ಪ್ರಸಕ್ತ ಸಾಲಿನ ಹಣಕಾಸು ವರ್ಷದಲ್ಲಿ ಕೃಷಿ ಶೇ 3.4 ರಷ್ಟು ಬೆಳವಣಿಗೆ, ಕೃಗಾರಿಕೆ ಮತ್ತು ಸೇವಾ ವಲಯ ಕ್ರಮವಾಗಿ 9.6 ರಷ್ಟು ಮತ್ತು 8.8 ರಷ್ಟು ಬೆಳವಣಿಗೆ ಅಂದಾಜು

2021 ನೇ ಸಾಲಿನ ಹಣಕಾಸು ವರ್ಷದಲ್ಲಿ ಜಿಡಿಯ ಶೇ 2 ರಷ್ಟು ಹೆಚ್ಚುವರಿ ಚಾಲ್ತಿ ಖಾತೆ, 17 ವರ್ಷಗಳಲ್ಲಿ ಗರಿಷ್ಠ

2020 ರಲ್ಲಿ 9.8 ಶತಕೋಟಿ ಡಾಲರ್ ನಿವ್ವಳ ಎಫ್.ಪಿ.ಐ, ಸರ್ವಕಾಲಿಕ ದಾಖಲೆ

“ವಿ” ಆಕಾರದ ಆರ್ಥಿಕ ಚೇತರಿಕೆಗಾಗಿ ದೀರ್ಘಕಾಲೀನ ಲಾಭಕ್ಕಾಗಿ ಅಲ್ಪ ಕಾಲೀನ ನೋವನ್ನು ತೆಗೆದುಕೊಳ್ಳಲಾಗಿದೆ: ಜೀವಗಳನ್ನು ಉಳಿಸಲಾಗಿದೆ

Posted On: 29 JAN 2021 3:48PM by PIB Bengaluru

2021-22 ನೇ ಸಾಲಿನ ದೇಶದ ವಾಸ್ತವಿಕ ಜಿ.ಡಿ.ಪಿ ದರ ಶೇ 11 ರಷ್ಟು ಮತ್ತು ಸ್ವಾತಂತ್ರ್ಯನಂತರ ದಾಖಲೆಯ ಜಿಡಿಪಿ ಶೇ 15.4 ರಷ್ಟಿದೆ.  ಬೃಹತ್ ಲಸಿಕಾ ಅಭಿಯಾನದಿಂದ ಸೇವಾ ವಲಯದಲ್ಲಿ ದೃಢವಾದ ಚೇತರಿಕೆ ಕಾಣಲಿದ್ದು, ಬಳಕೆ ಮತ್ತು ಹೂಡಿಕೆಯಲ್ಲಿನ ಸದೃಢ ಬೆಳವಣಿಗೆಯಿಂದಾಗಿ “ ವಿ “ ಆಕಾರದಲ್ಲಿ ಆರ್ಥಿಕ ಚೇತರಿಕೆಯಾಗಲಿದೆ.

ಕೇಂದ್ರ ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಖಾತೆ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ 2020-21 ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಸಂಸತ್ತಿನಲ್ಲಿಂದು ಮಂಡಿಸಿದ್ದಾರೆ.  ಈ ಸಮೀಕ್ಷಾ ವರದಿಯಲ್ಲಿ ಕೋವಿಡ್-19 ಲಸಿಕೆ ಚಾಲ್ತಿಯಲ್ಲಿದ್ದು, ಇದೀಗ ಕಡಿಮೆ ನೆಲೆಯಿಂದ ಆರ್ಥಿಕ ಚಟುವಟಿಕೆ ಮರುಕಳಿಸುತ್ತದೆ ಮತ್ತು ಆರ್ಥಿಕ ಚಟುವಟಿಕೆ ಸಾಮಾನ್ಯೀಕರಣದಲ್ಲಿ ಮುಂದುವರೆಯುತ್ತದೆ ಹಣಕಾಸು ಚಟುವಟಿಕೆಯ ಆಧಾರ ಸ್ಥಂಭ ಬಲಿಷ್ಠವಾಗಿಯೇ ಇದ್ದು,  ಆತ್ಮನಿರ್ಭರ್ ಭಾರತ್ ಅಭಿಯಾನ ಚುರುಕಾದ ನಂತರ ಲಾಕ್ ಡೌನ್ ಗಳನ್ನು ಕ್ರಮೇಣವಾಗಿ ಹಿಮ್ಮೆಟ್ಟಿಸಲಾಗಿದೆ. ಇದರ ಪರಿಣಾಮ ಆರ್ಥಿಕತೆ ಪುನಶ‍್ಚೇತನದ ಹಾದಿಯಲ್ಲಿದೆ.  ಈ ಹಾದಿ 2019-20ರ ಸಾಲಿನ ವಾಸ್ತವಿಕ ಜಿಡಿಪಿಗಿಂತ ಶೇ 2.4 ರಷ್ಟು ಬೆಳವಣಿಗೆ ಕಾಣಲಿದ್ದು, ಇದು ಸಾಂಕ್ರಾಮಿಕದ ಪೂರ್ವಹಂತ ತಲುಪಲು ಮತ್ತು ಮತ್ತು ಸಾಂಕ್ರಾಮಿಕ ಪೂರ್ವ ಹಂತದಲ್ಲಿದ್ದಂತೆ ವೇಗವಾಗಿ ಬೆಳವಣಿಗೆ ಕಾಣಲು ಎರಡು ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಐಎಂಎಫ್  ಅಂದಾಜಿನಂತೆ ವಾಸ್ತವಿಕ ಜಿಡಿಪಿ ಬೆಳವಣಿಗೆ 2021-22 ರಲ್ಲಿ ಶೇ 11.5 ರಷ್ಟು ಮತ್ತು 2021-22 ರಲ್ಲಿ ಶೇ 6.8 ರಷ್ಟಿರಲಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ ಮಾಡಿರುವ ಅಂದಾಜಿನಂತೆ ಮುಂದಿನ ಎರಡು ವರ್ಷಗಳಲ್ಲಿ ಭಾರತ ಅತ್ಯಂತ ತ್ವರಿತವಾಗಿ ಬೆಳವಣಿಗೆ ಸಾಧಿಸಲಿರುವ ರಾಷ್ಟ್ರವಾಗಿ ಹೊರಹೊಮ್ಮಲಿದೆ.

State of the Indian Economy- Eng.jpg

ಆರ್ಥಿಕ ಸಮೀಕ್ಷೆ ಹೇಳುವಂತೆ “ಶತಮಾನದಲ್ಲಿ ಒಮ್ಮೆ” ,ಎದುರಾಗುವ ಬಿಕ್ಕಟ್ಟು ಇದಾಗಿದೆ. ಭಾರತದ ಪ್ರಬುದ್ಧ ನೀತಿಯ ಪ್ರತಿಕ್ರಿಯೆಯು ಪ್ರಜಾಪ್ರಭುತ್ವ ರಾಷ್ಟ್ರಗಳಿಗೆ ಸಮೀಪ ದೃಷ್ಟಿ ಮತ್ತು ನೀತಿ ನಿರೂಪಣೆಗಳನ್ನು ತಪ್ಪಿಸಲು ಪ್ರಮುಖ ಪಾಠಗಳನ್ನು ಒದಗಿಸುತ್ತದೆ. ದೀರ್ಘಕಾಲೀನ ಲಾಭಗಳ ಮೇಲೆ ಕೇಂದ್ರೀಕರಿಸುವ ಮಹತ್ವದ ಪ್ರಯೋಜನಗಳನ್ನು ತೋರಿಸುತ್ತದೆ. ಭಾರತ ನಾಲ್ಕು ಅಸಾಧಾರಣ ಕಾರ್ಯತಂತ್ರವನ್ನು ಅಳವಡಿಸಿಕೊಂಡಿದ್ದು ಧಾರಕ, ವಿತ್ತೀಯ, ಹಣಕಾಸು [ಕಂಟೈನ್ಮೆಂಟ್, ಫಿಸಿಕಲ್, ಫೈನಾನ್ಷಿಯಲ್]  ಮತ್ತು ದೀರ್ಘಕಾಲೀನ ರಚನಾರತ್ಮಕ ಸುಧಾರಣೆಗಳನ್ನು ಅಳವಡಿಸಿಕೊಂಡಿದೆ.  ವಿಕಸನಗೊಳ್ಳುತ್ತಿರುವ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮಾಪನಾಂಕ ಒದಗಿಸಿದ ಹಣಕಾಸು ಮತ್ತು ವಿತ್ತೀಯ ಬೆಂಬಲ ನೀಡಲಾಯಿತು. ಲಾಕ್ ಡೌನ್ ಸಂದರ್ಭದಲ್ಲಿ ದುರ್ಬಲರಿಗೆ ನೆರವು, ಬಳಕೆಯನ್ನು  ಉತ್ತೇಜಿಸಲು, ಅನ್‌ಲಾಕ್ ಸಂದರ್ಭದಲ್ಲಿ ಹೂಡಿಕೆ ಹೆಚ್ಚಿಸಲು ವಿಶೇಷ ಗಮನಹರಿಸಲಾಯಿತು. ಹಣಕಾಸಿನ ಪರಿಣಾಮಗಳನ್ನು ಗಮದಲ್ಲಿಟ್ಟುಕೊಂಡು ಸಾಲದ ಸುಸ್ಥಿರತೆ ಪಡೆಯಲಾಗಿದೆ. ಅನುಕೂಲಕರವಾದ ವಿತ್ತೀಯ ನೀತಿ, ತಾತ್ಕಾಲಿಕ ನಿಷೇಧದ ನಂತರ ಹಣದ ಹರಿವು ಹೆಚ್ಚಿಸಿ ಸಾಲಗಾರರಿಗೆ ತಕ್ಷಣದ ಪರಿಹಾರಗಳನ್ನು ಖಾತರಿಪಡಿಸಿ, ವಿತ್ತೀಯ ನೀತಿಯನ್ನು ನಿಯಂತ್ರಿಸಲಾಗಿದೆ. 

2020-21 ನೇ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಶೇ 7.7ರಷ್ಟು ಇರಲಿದೆ ಎಂದು ಹಣಕಾಸು ಸಮೀಕ್ಷೆ ಹೇಳಿದ್ದು, ಮೊದಲಾರ್ದದಲ್ಲಿ ಶೇ 15.7 ರಷ್ಟು ಕುಸಿತ ಕಂಡಿದ್ದು, ಎರಡನೇ ಅರ್ದವಾರ್ಷಿಕದಲ್ಲಿ ಶೇ 0.1  ಸಾಧಾರಣ ಚೇತರಿಕೆ ಕಂಡಿದೆ. ವಲಯವಾರು ನೋಡಿದರೆ ಕೃಷಿ ಕ್ಷೇತ್ರ ಬೆಳ್ಳಿ ಗೆರೆ ಮೂಡಿಸಿದೆ. ಸಂಪರ್ಕ ಆಧಾರಿತ ಸೇವಾ ವಲಯ, ಉತ್ಪಾದನಾಕ್ಷೇತ್ರ, ನಿರ್ಮಾಣ ವಲಯಗಳಿಗೆ ಹೊಡೆತ ಬಿದ್ದಿದ್ದು, ಇದೀಗ ಚೇತರಿಸಿಕೊಂಡಿದೆ. ಸರ್ಕಾರದ ಬಳಕೆ ಮತ್ತು ನಿವ್ವಳ ರಫ್ತು ಚಟುವಟಿಕೆ ಮತ್ತಷ್ಟು ಕುಸಿತ ಕಾಣುವುದನ್ನು ತಡೆಯಲು ಸಹಕಾರಿಯಾಗಿದೆ. 

GDP Growth- Eng.jpg

ಮೊದಲಾರ್ದದ ಆರ್ಥಿಕ ವರ್ಷದಲ್ಲಿ ಲಾಕ್ ಡೌನ್ ನಿಂದಾಗಿ ಆರ್ಥಿಕ ಸೂಚಕಗಳ ಅನುಸಾರ ನಿರ್ಮಾಣ ವಲಯದಲ್ಲಿ ಶೇ 23.9 ರಷ್ಟು ಕುಸಿತಕಾಣಬಹುದು ಎಂದು  ಅಂದಾಜು ಮಾಡಲಾಗಿತ್ತು. “ವಿ” ಆಕಾರದ ಚೇತರಿಕೆಯಿಂದಾಗಿ ಎರಡನೇ ಅರ್ದವಾ್ಷಿಕ ಆರ್ಥಿಕ ಅವಧಿಯಲ್ಲಿ ಶೇ 7.5 ರಷ್ಟು ಪ್ರಗತಿ ಸಾಧಿಸಿತು. ಜುಲೈ ನಂತರ ವಿ ಆಕಾರದ ಚೇತರಿಕೆ ಪ್ರಮಾಣ ಪ್ರಗತಿಯಲ್ಲಿದೆ. ಮೊದಲಾರ್ದಲ್ಲಿ ಕುಸಿದ್ದಿದ್ದ ಆರ್ಥಿಕ ಚಟುವಟಿಕೆ ನಂತರ ಎರಡನೇ ಅರ್ಧವಾರ್ಷಿಕದಲ್ಲಿ ಚೇತರಿಕೆ ಕಾಣುವಂತಾಗಿದೆ. ಭಾರತದ ಸಂಚಾರ ವ್ಯವಸ್ಥೆ ಮತ್ತು ಸಾಂಕ್ರಾಮಿಕದ ಸುಧಾರಣೆಯಿಂದಾಗಿ ವೆ ಬಿಲ್ಸ್, ರೈಲುಗಳ ಸರಕು ಸಾಗಾಣೆ, ಜಿ.ಎಸ್..ಟಿ ಸಂಗ್ರಹ ಮತ್ತು ವಿದ್ಯುತ್ ಬಳಕೆ ಹೆಚ್ಚಾಗಿದ್ದು, ಇವುಗಳು ಸಾಂಕ್ರಾಮಿಕ ಪೂರ್ವ ಹಂತದಲ್ಲಿದ್ದಂತೆ ಪುನರ್ ಸ್ಥಾಪನೆಯಾಗಿವೆಯಷ್ಟೇ ಅಲ್ಲದೇ ಹಿಂದಿನ ವರ್ಷಕ್ಕೆ  ಹೋಲಿಕೆ ಮಾಡಿದರೆ ಚಟುವಟಿಕೆಗಳು ಹೆಚ್ಚಾಗಿವೆ.

ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆ ವಲಯದಲ್ಲಿ ಅನ್ ಲಾಕ್ ನಿಯಮಗಳನ್ನು ಅಳವಡಿಸಿದ ನಂತರ ಅಂತರರಾಜ್ಯ ಮತ್ತು ಅಂತಾರಾಜ್ಯ ಸಂಚಾರ ಮತ್ತು ಮಾಸಿಕವಾಗಿ ಅತಿ ಹೆಚ್ಚು ಸರಕು ಮತ್ತು ಸೇವಾ ತೆರಿಗೆ ಜಿ.ಎಸ್.ಟಿ. ಸಂಗ್ರಹವಾಗಿದೆ. ವಾಣಿಜ್ಯ ಕಾಗದಗಳ ವಿತರಣೆಯಲ್ಲಿ ವೃದ್ಧಿ, ಇಳುವರಿಯನ್ನು ಸರಾಗಗೊಳಿಸಲಾಗಿದ್ದು, ಸಣ್ಣ ಮತ್ತು ಮದ್ಯಮ ಉದ್ಯಮ ವಲಯಗಳು - ಎಂ.ಎಸ್.ಎಂ.ಸಿಗಳು ಬದುಕುಳಿಯಲು ಮತ್ತು ಬೆಳೆಯಲು ಸಾಲದ ಹರಿವು ಹೆಚ್ಚಿಸಲಾಯಿತು.

ವಲಯ ಪ್ರವೃತ್ತಿಗಳ ಮೇಲೆ ನೆಲೆಸಿರುವ ಆರ್ಥಿಕ ಸಮೀಕ್ಷೆ ವರದಿಯಂತೆ ಉತ್ಪಾದನಾ ಕ್ಷೇತ್ರದ ಸ್ಥಿತಿ ಸ್ಥಾಪಕತ್ವ, ಗ್ರಾಮೀಣ ಬೇಡಿಕೆಯಿಂದಾಗಿ ಒಟ್ಟಾರೆ ಆರ್ಥಿಕ ಚಟುವಟಿಕೆ ಚೇತರಿಸಿದೆ ಮತ್ತು ಹೆಚ್ಚುತ್ತಿರುವ ಡಿಜಿಟಲ್ ವಹಿವಾಟಿನ ರಚನಾತ್ಮಕ ಬಳಕೆಯಿಂದಾಗಿ ಬದಲಾವಣೆಗಳನ್ನು ಕಾಣುವಂತಾಗಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. ಕೋವಿಡ್-19 ಸಾಂಕ್ರಾಮಿಕದಿಂದಾಗಿ 2021 -21 ರಲ್ಲಿ ಕೃಷಿ ವಲಯ ದೇಶದ ಆರ್ಥಿಕ ವಲಯಕ್ಕೆ ಗಮನಾರ್ಹ ಕೊಡುಗೆ ನೀಡಿದ್ದು, ಮೊದಲ ಮತ್ತು ನಂತರದ ಆರ್ಥಿಕ ಅರ್ಧವಾರ್ಷಿಕದಲ್ಲಿ ಒಟ್ಟಾರೆ ಶೇ 3.4 ರಷ್ಟು ಬೆಳವಣಿಗೆ ದಾಖಲಿಸಿದೆ. ಸರ್ಕಾರ ಕೈಗೊಂಡ ಪ್ರಗತಿಪರ ಸುಧಾರಣೆಗಳ ಸರಣಿ ಕೃಷಿ ಕ್ಷೇತ್ರವನ್ನು ಪೋಷಿಸಲು ರೋಮಾಂಚಕ ಕೊಡುಗೆ ನೀಡಿದೆ.  ಈ ಪ್ರಗತಿಯ ಯಶೋಗಾಥೆ 2020-21  ನೇ ಸಾಲಿನ ಬೆಳವಣಿಗೆಯ ಬೆಳ್ಳಿ ರೇಖೆಯಾಗಿ ಉಳಿದಿದೆ. 

ಕಳೆದ ವರ್ಷ ವಿ ಆಕಾರದಲ್ಲಿ ಕೈಗಾರಿಕೆ ಬೆಳವಣಿಗೆಯನ್ನು ದೇಶ ಕಂಡಿದೆ. ಕೈಗಾರಿಕಾ ಉತ್ಪಾದನೆ ಪುಟಿದೆದ್ದಿದೆ ಮತ್ತು ಕೈಗಾರಿಕಾ ವಲಯದ ಮೌಲ್ಯ ಸಾಮಾನ್ಯ ಸ್ಥಿತಿಯತ್ತ ಸಾಗಿದೆ. ಸಾಂಕ್ರಾಮಿಕದ ನಂತರ ಸೇವಾ ವಲಯ ಪಿಎಂಐ ಸೇವೆಗಳ ಉತ್ಪಾದನೆ ಮತ್ತು ಹೊಸ ವ್ಯವಹಾರಗಳು ಡಿಸೆಂಬರ್ ನಲ್ಲಿ ಸತತ ಮೂರನೇ ತಿಂಗಳು ಏರಿಕೆ ದಾಖಲಿಸಿದೆ.

2020-21 ನೇ ಸಾಲಿನಲ್ಲಿ ಬ್ಯಾಂಕ್ ಗಳ ಸಾಲ ಸೌಲಭ್ಯ ಕ್ರಮಗಳು ಸಕಾತ್ಮಕವಾಗಿದ್ದವು. 2019 ರ ಅಕ್ಟೋಬರ್ ನಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿತ ವಲಯಗಳ ಸಾಲದ ಬೆಳವಣಿಗೆ ಶೇ 7.1 ರಷ್ಟಿತ್ತು. ಇದು 2020 ರ ಅಕ್ಟೋಬರ್ ನಲ್ಲಿ ಶೇ 7.4 ಕ್ಕೆ ಏರಿಕೆ ಕಂಡಿತು. ಸಾಲದ ಹರಿವಿನಲ್ಲಿ 2020 ರ ಅಕ್ಟೋಬರ್ ನಲ್ಲಿ ನಿರ್ಮಾಣ, ವ್ಯಾಪಾರ ಮತ್ತು ಆತಿಥ್ಯ ವಲಯದಲ್ಲಿ 2019ರ ಅಕ್ಟೋಬರ್ ಗೆ ಹೋಲಿಕೆ ಮಾಡಿದರೆ 2020ರ ಅಕ್ಟೋಬರ್ ನಲ್ಲಿ ಶೇ 6.5 ರಿಂದ ಶೇ 9.5ಕ್ಕೆ ಬೆಳವಣಿಗೆ ಕಂಡಿದೆ.

2020ರ ವರ್ಷ ಆಹಾರ ವಸ್ತುಗಳ ದರ ಹೆಚ್ಚಳದಿಂದಾಗಿ ಹಣದುಬ್ಬರ ದರಕ್ಕೆ ಕಾರಣವಾಗಿತ್ತು.  ಭಾರತೀಯ ರಿಸರ್ವ್ ಬ್ಯಾಂಕ್ ಆರ್.ಬಿ.ಐ  ಗುರಿಯಂತೆ ಶೇ 4+/-2 ನಿಂದ 4.6ಕ್ಕೆ ತಲುಪಿತು. ವರ್ಷದಿಂದ ವರ್ಷದ ಲೆಕ್ಕಾಚಾರದಂತೆ ಹಣದುಬ್ಬರ ದರ ನವೆಂಬರ್ ವೇಳೆಗೆ 4.6 ರಿಂದ 6.9ಕ್ಕೆ ತಲುಪಿತು. ಇದಕ್ಕೆ ಆಹಾರ ದರ ಇಳಿಕೆ ಕಾರಣವಾಗಿದೆ. ನಿರ್ದಿಷ್ಟವಾಗಿ ತರಕಾರಿ, ಸಿರಿಧಾನ್ಯಗಳು ಮತ್ತು ಪ್ರೋಟಿನ್ ಉತ್ಪನ್ನಗಳು ಮತ್ತು ಅನುಕೂಲಕರ ಮೂಲ ಪರಿಣಾಮಗಳಿಂದಾಗಿ ಹಣದುಬ್ಬರದಲ್ಲಿ ಇಳಿಕೆಯಾಗುವಂತಾಗಿದೆ.

ವರ್ಷದ ಮೊದಲಾರ್ದದಲ್ಲಿ ದೇಶದ ಜಿಡಿಪಿಯ ಶೇ 3.1 ರಷ್ಟು ಚಾಲ್ತಿ ಖಾತೆಯ ಹೆಚ್ಚುವರಿಯನ್ನು ದಾಖಲಿಸುವುದರೊಂದಿಗೆ ಬಾಹ್ಯ ವಲಯದ ಬೆಳವಣಿಗೆಗೆ ಸಹಕಾರಿಯಾಗಿದೆ. ಇದಕ್ಕೆ ಬಲವಾದ ರಫ್ತು ಚಟುವಟಿಕೆ ಬೆಂಬಲ ಲಭಿಸಿದೆ. ದುರ್ಬಲ ಬೇಡಿಕೆಯು ರಫ್ತಿಗಿಂತ ಆಮದಿನಲ್ಲಿ [ ಆಮದು ಸುಂಕ ಶೇ 39.7 ರಷ್ಟು ] ತೀಕ್ಷ್ಣವಾದ ಇಳಿಕೆಗೆ ಕಾರಣವಾಗಿದೆ. [ ಸರಕು ರಫ್ತು ಶೇ 21.2 ರಷ್ಟು ]  ಇದರ ಪರಿಣಾಮ 2020 ರ ಡಿಸೆಂಬರ್ ನಲ್ಲಿ ವಿದೇಶಿ ವಿನಿಮಯ ಸಂಗ್ರಹ 18 ತಿಂಗಳುಗಳಲ್ಲಿ ಏರಿಕೆ ದಾಖಲಿಸಿತು.

ಜಿಡಿಪಿಯ ಬಾಹ್ಯ ಸಾಲ ಪ್ರಮಾಣ 2020ರ ಸೆಪ್ಟೆಂಬರ್ ಅಂತ್ಯಕ್ಕೆ ಶೇ 21.6 ರಷ್ಟು ಏರಿಕೆ ಕಂಡಿತು. ಈ ಪ್ರಮಾಣ ಮಾರ್ಚ್ 2020 ರಲ್ಲಿ ಶೇ 20.6 ರಷ್ಟಿತ್ತು. ಆದಾಗ್ಯೂ ವಿದೇಶಿ ವಿನಿಯಮ ಮೀಸಲುಗಳ ಅನುಪಾತ ಒಟ್ಟು ಮತ್ತು ಅಲ್ಪಾವಧಿ ಸಾಲಕ್ಕೆ [ಮೂಲ ಮತ್ತು ಉಳಿಕೆ] ಸುಧಾರಿಸಿದೆ. ಇದಕ್ಕೆ ಕಾರಣ ಮೀಸಲು ಸಂಗ್ರಹದಲ್ಲಿ ಗಣನೀಯ ಏರಿಕೆ ಕಂಡಿರುವುದೇ ಆಗಿದೆ.

2020-21 ನೇ ವರ್ಷದಲ್ಲಿ ಭಾರತ ಆದ್ಯತೆಯ ಹೂಡಿಕೆಯ ತಾಣವಾಗಿ ಉಳಿದಿದೆ. ಜಾಗತಿಕ ಆಸ್ತಿ ಬದಲಾವಣೆ ಈಕ್ವಿಟಿಗಳತ್ತ ಸಾಗಿದ್ದು, ಇದರ ನಡುವೆ ಎಫ್.ಡಿ.ಐ ಹೆಚ್ಚಾಗಿದ್ದು, ಬೆಳವಣಿಗೆ ಕಾಣುತ್ತಿರುವ ಆರ್ಥಿಕತೆ ಶೀಘ್ರ ಚೇತರಿಕೆ ನಿರೀಕ್ಷೆ ಹೊಂದಲಾಗಿದೆ. 2020 ರ ನವೆಂಬರ್ ನಲ್ಲಿ 9.8 ಶತಕೋಟಿ ಡಾಲರ್ ನಿವ್ವಳ ಎಫ್.ಪಿ.ಐ, ಸರ್ವಕಾಲಿಕ ದಾಖಲೆ ಕಂಡಿದೆ. ಆರ್ಥಿಕ ಉತ್ತೇಜನ ಪ್ಯಾಕೇಜ್ ಮತ್ತು ಜಾಗತಿಕ ಆರ್ಥಿಕ ಪರಿಸ್ಥಿತಿ ಪರಿಣಾಮ ಅಮೆರಿಕ ಡಾಲರ್ ದುರ್ಬಲಗೊಂಡಿದೆ. 2020ರಲ್ಲಿ ಭಾರತ ಏಕ ಮಾತ್ರ ದೇಶ ಎಫ್ಐಐನ ಹರಿವಿನಲ್ಲಿ ಉತ್ತಮ  ಸಾಧನೆ ಮಾಡಿದ ದೇಶವಾಗಿದೆ.

ಸೆನ್ಸೆಕ್ಸ್ ಮತ್ತು ನಿಫ್ಟಿ 2010 ರ ನಂತರ ಮೊದಲ ಬಾರಿಗೆ ಮಾರುಕಟ್ಟೆಯ ಬಂಡವಾಳೀಕರಣವನ್ನು ಒಟ್ಟು ದೇಶೀಯ ಉತ್ಪನ್ನ [ಜಿಡಿಪಿ] ಅನುಪಾತಕ್ಕೆ ಶೇ 100ರಷ್ಟು ದಾಟಿಸಿದೆ. ಇಷ್ಟಾದರೂ ಹಣಕಾಸು ಮಾರುಕಟ್ಟೆ ಮತ್ತು ನೈಜ ವಲಯದ ನಡುವಿನ ಸಂಪರ್ಕ ಕಡಿತದ ಬಗ್ಗೆ ಕಳವಳ ಮೂಡಿಸುತ್ತದೆ. 

ಆರ್ಥಿಕ ವರ್ಷದ ಎರಡನೇ ಹಂತದಲ್ಲಿ ಆಮದು ಪ್ರಮಾಣ ಶೇ 5.8 ರಷ್ಟು ಮತ್ತು ರಫ್ತು ಪ್ರಮಾಣ ಶೇ 11.3 ರಷ್ಟು ಇಳಿಕೆ ಕಂಡಿದೆ. ಇದರಿಂದ 2021 ನೇ ಸಾಲಿನ ಹಣಕಾಸು ವರ್ಷದಲ್ಲಿ ಜಿಡಿಯ ಶೇ 2 ರಷ್ಟು ಹೆಚ್ಚುವರಿ ಚಾಲ್ತಿ ಖಾತೆ, 17 ವರ್ಷಗಳಲ್ಲಿ ಗರಿಷ್ಠ ಮಟ್ಟಕ್ಕೆ ತಲುಪುವಂತಾಗಿದೆ.

2020 – 21 ನೇ ಸಾಲಿನಲ್ಲಿ ನಿವ್ಳಳ ಮೌಲ್ಯ ವರ್ಧನೆ [ಜಿವಿಎ] ನಲ್ಲಿ ಶೇ 7.2 ರಷ್ಟು ಪ್ರಗತಿ ದಾಖಲಿಸಿದ್ದು, ಇದು 2019-20 ನೇ ಸಾಲಿನಲ್ಲಿ ಶೇ 3.9 ರಷ್ಟಿತ್ತು. ಈ ವರ್ಷದ ಹಣಕಾಸು ವರ್ಷದಲ್ಲಿ ಕೃಷಿ ಶೇ 3.4 ರಷ್ಟು ಬೆಳವಣಿಗೆ, ಕೃಗಾರಿಕೆ ಮತ್ತು ಸೇವಾ ವಲಯ ಕ್ರಮವಾಗಿ 9.6 ರಷ್ಟು ಮತ್ತು 8.8 ರಷ್ಟು ಬೆಳವಣಿಗೆಯಾಗುವ ಅಂದಾಜು ಮಾಡಲಾಗಿದೆ.

2020 ನೇ ವರ್ಷದಲ್ಲಿ ಕೋವಿಡ್-19 ಸಾಂಕ್ರಾಮಿಕದಿಂದಾಗಿ ಜಾಗತಿಕ ಆರ್ಥಿಕ  ಪರಿಸ್ಥಿತಿ ಹಿನ್ನೆಲೆಯಲ್ಲಿ ಆರ್ಥಿಕ ಹಿಂಜರಿತವಾಗಲಿದೆ ಎಂದು ಸಮೀಕ್ಷೆ ಒತ್ತಿ ಹೇಳಿದೆ. ಲಾಕ್ ಡೌನ್ ಮತ್ತು ಸಾಮಾಜಿಕ ಅಂತರದಂತಹ ನಿಯಮಗಳು ಮಂದಗತಿಯಲ್ಲಿ ಸಾಗುತ್ತಿರುವ ಆರ್ಥಿಕ ಪರಿಸ್ಥಿತಿಯನ್ನು ನಿಲ್ಲುವಂತೆ ಮಾಡಿದೆ.  2020ರ ಸಾಲಿನಲ್ಲಿ ಶೇ 3,5 ರಷ್ಟು [ಐಎಂಎಫ್ ಜನವರಿ 2021 ರಲ್ಲಿ ಮಾಡಿರುವ ಅಂದಾಜು] ಕುಸಿತವಾಗಲಿದೆ ಎಂದು ಅಂದಾಜಿಸಿದೆ. ಇದಕ್ಕೆ ಪೂರಕವಾಗಿ ಸರ್ಕಾರ  ಮತ್ತು ಜಾಗತಿಕ ಕೇಂದ್ರೀಯ ಬ್ಯಾಂಕ್ ಗಳು ಸಾಲದ ದರದಲ್ಲಿ ಇಳಿಕೆ, ಸಾಲ ಖಾತರಿ ಯೋಜನೆಗಳು, ಹಣಕಾಸು ವಹಿವಾಟು ಆರ್ಥಿಕ ಉತ್ತೇಜನ ಪ್ಯಾಕೇಜ್ ಗಳನ್ನು ಘೋಷಿಸಲಾಗಿದೆ.  ವಿಶೇಷವಾಗಿ ಭಾರತದಲ್ಲಿ ಹೆಚ್ಚು ಜನಸಂಖ್ಯೆ, ಜನ ಸಾಂದ್ರತೆ ಮತ್ತು ಒಟ್ಟಾರೆ ಆರೋಗ್ಯ ಮೂಲ ಸೌಕರ್ಯ ಒದಗಿಸಲು ಹೆಚ್ಚಿನ ಒತ್ತು ನೀಡಲಾಗಿದೆ.

ಭಾರತದಲ್ಲಿ ಕೇವಲ 100 ಕೊರೋನಾ ಸೋಂಕು ಪ್ರಕರಣಗಳಿದ್ದ ಸಂದರ್ಭದಲ್ಲಿ ಲಾಕ್ ಡೌನ್ ಘೋಷಿಸಲಾಯಿತು. ಇದರಿಂದ ಹಲವಾರು ವಿಧದಲ್ಲಿ ಉತ್ತಮ ಬೆಂಬಲ ವ್ಯಕ್ತವಾಯಿತು. ಮೊದಲನೆಯದಾಗಿ ಸಾಂಕ್ರಾಮಿಕ ಮತ್ತು ಆರ್ಥಿಕ ಸಂಶೋಧನೆಗಳ ಮೂಲಕ ನೀತಿ ಪ್ರಕ್ರಿಯೆ ನಡೆಸಲಾಗಿದೆ. ನಿರ್ದಿಷ್ಟವಾಗಿ ಸಾಂಕ್ರಾಮಿಕ ಅನಿಶ್ಚಿತವಾಗಿ ಹರಡಿರುವ, ಮತ್ತು ನೊಬೆಲ್ ಪ್ರಶಸ್ತಿ ಪುರಸ್ಕೃತ ಹಸೆನ್ ಮತ್ತು ಸರ್ಗೆಂಟ್ [2001] ರ ಸಂಶೋಧನೆಗಳನ್ನು ಆಧರಿಸಿದ ಶಿಫಾರಸ್ಸುಗಳನ್ನು ಕೇಂದ್ರೀಕರಿಸಿ, ಗಂಭೀರ ಪರಿಸ್ಥಿತಿಯಲ್ಲಿ ಜೀವ ಹಾನಿಯನ್ನು ಕಡಿಮೆ ಮಾಡಲು ಆದ್ಯತೆ ನೀಡಲಾಯಿತು. ಸಾಂಕ್ರಾಮಿಕ ಸಂಶೋಧನೆಗಳ ಪ್ರಕಾರ ಮೊದಲಿಗೆ ಕಠಿಣ ಲಾಕ್ ಡೌನ್ ಜಾರಿ.  ಹೆಚ್ಚು ಜನಸಂದಣಿ ಇರುವ ಕಡೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕ್ರಮಗಳಿಗೆ ಒತ್ತು ನೀಡಲಾಯಿತು. ಆದ್ದರಿಂದ ಭಾರತದ ನೀತಿ ಮಾನವ ಪ್ರತಿಕ್ರಿಯೆಯನ್ನು ಅವಲಂಬಿಸಿತ್ತು.  “ವಿ” ಆಕಾರದ ಆರ್ಥಿಕ ಚೇತರಿಕೆಗಾಗಿ ದೀರ್ಘಕಾಲೀನ ಲಾಭಕ್ಕಾಗಿ ಅಲ್ಪ ಕಾಲೀನ ನೋವನ್ನು ತೆಗೆದುಕೊಳ್ಳಲಾಗಿದೆ: ಜೀವಗಳನ್ನು ಉಳಿಸಲಾಗಿದೆ.

ಎರಡನೇಯದಾಗಿ ಸಾಂಕ್ರಾಮಿಕದಿಂದಾಗಿ ಆರ್ಥಿಕತೆಯನ್ನು ಅವಲಂಬಿಸಿರುವ ಬೇಡಿಕೆ ಮತ್ತು ಪೂರೈಕೆಯನ್ನು ಗುರುತಿಸಿತು. ಸಣ್ಣ ಪ್ರಮಾಣದ ಸುಧಾರಣೆಗಳಿಂದ ಮಹತ್ವದ ಸುಧಾರಣೆಗೆ ನಾಂದಿಯಾಗುತ್ತದೆ. ಪೂರೈಕೆ ವಲಯದಲ್ಲಿ ಅಡೆತಡೆಗಳನ್ನು ಲಾಕ್ ಡೌನ್ ಸಂದರ್ಭದಲ್ಲಿ ನಿವಾರಿಸಲಾಯಿತು.

ತೀವ್ರ ಅನಿಶ್ಚತೆತೆ ಇದ್ದ ಸಾಂಕ್ರಾಮಿಕದ ಆರಂಭಿಕ ಹಂತದಲ್ಲಿ ಆರ್ಥಿಕ ನಿರ್ಬಂಧಗಳ ನಡುವೆ ಕಠಿಣ ಲಾಕ್ ಡೌನ್ ವಿಧಿಸಲಾಯಿತು. ಈ ಸಂದರ್ಭದಲ್ಲಿ ವಿವೇಚನೆಯಿಂದ ಆರ್ಥಿಕ ಸಂಪನ್ಮೂಲ ಬಳಕೆ ಮಾಡಲಾಯಿತು.  ಅವಕಾಶ ವಂಚಿತರಿಗೆ ನೇರ ನಗದು ವರ್ಗಾವಣೆಯಡಿ ಸೌಲಭ್ಯಗಳ ವರ್ಗವಣೆ, 80.96 ಕೋಟಿ ಜನರಿಗೆ ಆಹಾರ ಸಬ್ಸಿಡಿ ಕಾರ್ಯಕ್ರಮದಡಿ ಸೌಲಭ್ಯ ವಿತರಿಸಲಾಗಿದೆ. ಉದ್ಯೋಗ ಉಳಿಸಿಕೊಳ್ಳಲು ಮತ್ತು ಹೊಣೆಗಾರಿಕೆ ಪೂರೈಸಲು ಘಟಕಗಳಿಗೆ ಸಹಾಯ ಮಾಡುವ ಮೂಲಕ ಒತ್ತಡಕ್ಕೆ ಒಳಗಾದ ಕ್ಷೇತ್ರಗಳಿಗೆ ಅಗತ್ಯ ಪರಿಹಾರ ಒದಗಿಸಲು ತುರ್ತು ಕ್ರೆಡಿಟ್ ಲೈನ್ ಗ್ಯಾರೆಂಟಿ ಕಾರ್ಯಕ್ರಮ ಜಾರಿಗೆ ತರಲಾಗಿದೆ.

ಲಾಕ್ ಡೌನ್ ಹಂತದಲ್ಲಿ ಅನಿಶ್ಚಿತತೆ ಕಡಿಮೆಯಾಯಿತು. ಆರ್ಥಿಕ ಚಲನಶೀಲತೆ ಹೆಚ್ಚಾಯಿತು. ಮತ್ತೊಂದೆಡೆ ದೇಶದಲ್ಲಿ ತನ್ನ ಖರ್ಚನ್ನು ಹೆಚ್ಚು ಮಾಡಿತು.  ಅನುಕೂಲಕರ ವಿತ್ತೀಯ ನೀತಿಯು ತಾತ್ಕಾಲಿಕ ನಿಷೇಧದ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಹಣದ ಹರಿವು, ಸಾಲಗಾರರಿಗೆ ತಕ್ಷಣದ ಪರಿಹಾರವನ್ನು ಖಾತರಿಪಡಿಸುತ್ತದೆ.

2020ರ ವರ್ಷ ಕೋವಿಡ್-19 ವೈರಾಣು ಜಗತ್ತಿಗೆ ಸವಾಲಾಗಿದ್ದು, ಚಲನಶೀಲತೆ, ಸುರಕ್ಷತೆ ಮತ್ತು ಸಾಮಾನ್ಯ ಜೀವನದ ಮೇಲೆ ಪರಿಣಾಮ ಬೀರಿದೆ. ಇದು ಒಂದು ಶತಮಾನದಲ್ಲಿ ಭಾರತ ಮತ್ತು ಜಗತ್ತಿಗೆ ಅತ್ಯಂತ ಭೀಕರವಾದ ಆರ್ಥಿಕ ಸವಾಲು ಒಡ್ಡಿತ್ತು. ಲಸಿಕೆ ಮತ್ತು ಚಿಕಿತ್ಸೆ ಇಲ್ಲದೇ ಈ ಎಲ್ಲಾ ವ್ಯಾಪಕವಾದ ಬಿಕ್ಕಟ್ಟನ್ನು ನಿಭಾಯಿಸಲು ಸಾರ್ವಜನಿಕ ಆರೋಗ್ಯ ನೀತಿ ಕೇಂದ್ರೀಕೃತ ಸ್ಥಾನದಲ್ಲಿದೆ. ಆರ್ಥಿಕ ಹಿಂಜರಿತದ ಜತೆಗೆ ಜೀವನೋಪಾಯಗಳ ನೀತಿ, ಜೀವನದ ಸಂದಿಗ್ದತೆಗೆ ಕಾರಣವಾಗಿದೆ.

***



(Release ID: 1693403) Visitor Counter : 1207